ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, May 2, 2012

ಕವನ- "ರೂಪಾಂತರ"



ಇವ
ರೇ
ಎಂದು ಮಾತಿಗೆ ಮೊದಲು
ಮಾಡಿದಳು.

          ಆಗವಳು ಹೆಣ್ಣು.


ಏನ್
ರೀ
ಎಂದವಳು ಈಗ ಬರೆವ ಪತ್ರ
ದ ಸಾಲುಸಾಲು ಗುರುತು
ಪರಿಚಯ ಏಳೇಳು ಜನ್ಮ
ದ ಬಾಂಧವ್ಯ.
ಅವಳ ಹಸ್ತ
ರೇಖೆಗಳಲ್ಲಿ ನನ್ನ
ಬದುಕು ಬು
ಗುರಿ

          ಈಗವಳು ಮಾಯೆ.

1 comment:

  1. ನಮಸ್ತೇ ಸರ್,
    how interesting!
    ನಾನು ಇದೇ ರೂಪಕದಲ್ಲಿ ಇನ್ನೊಂದೇ ವಿಷಯದ ಮೇಲೆ ಬರೆದೆ! (http://nenapu-nevarike.blogspot.in/2012/10/blog-post.html)
    ಇವತ್ತು ನಿಮ್ಮ ಬ್ಲಾಗು ಓದುವಾಗ ಶೀರ್ಷಿಕೆ ನೋಡಿ ಓದಿದರೆ ಅಹ್ ಹೌದಲ್ಲ ಎನ್ನಿಸುವ ಹಾಗೆ, ಹೀಗಲ್ಲದೆ ಇನ್ ಹ್ಯಾಗೆ ಅನ್ನಿಸುವ ಹಾಗೆ ಮನವರಿಕೆಯ ನಿಮ್ಮ ಶೈಲಿಯಲ್ಲಿ ವಿಶಿಷ್ಟ ಸಾಲುಗಳು.
    ಸೂ ಕಿ ಲೇಖನ ಓದಿದೆ. ರಾಜತಾಂತ್ರಿಕತೆಯ ವಿಷಯಗಳು ನೀವು ಬರೆದಿದ್ದು ಸರಿಯೆನ್ಸುತ್ತೆ.
    ಮಾಯನ್ಮಾರಿಗಳೇ ಆಗಿ ಅದರ ಪ್ರಜಾಪ್ರಭುತ್ವಕ್ಕೆ ಬದುಕು ಸಲ್ಲಿಸಿರುವ ಸೂ-ಕಿ ಯ ಬಗ್ಗೆ ಬರೆದ ಕಡೆಯ ಸಾಲುಗಳ ಬಗ್ಗೆ ನೀವು ಮತ್ತೊಂದ್ಸಲ ಯೋಚಿಸಬೇಕು ಅನ್ಸತ್ತೆ. ಯಾಕಂದ್ರೆ ನೀವೇ ಬರೆದಿರುವ ಹಾಗೆ ಭಾರತ ಮಾಯನ್ಮಾರಿಗೆ ಅನಾಕ್ರಮಣಕಾರಿ ಸ್ನೇಹಿತ. ಹಾಗಾಗಿ ಭಾರತದ ಬಗ್ಗೆ ಅವರ ನಿರೀಕ್ಷೆಗಳು ದೊಡ್ಡದಿರಬಹುದು. ಇದು ನನ್ನ ಅನಿಸಿಕೆ. ಭಾವನೆಗಳು ಯಾವತ್ತೂ ವಾಸ್ತವ ಮತ್ತು ರಾಜತಂತ್ರದ ಹಿಂದು ಹಿಂದಿನ ಸಾಲಿಗೇ ಸಲ್ಲುವುದು ಅನ್ನುವುದೂ ನಿಜ.
    ಮಿಲಿಯಗಟ್ಟಲೆ ಸುರಿಯುತ್ತಿರುವ ಚೀನಾದ ಸುರಿಬುಟ್ಟಿಯಾಗುವ ಮಾಯನ್ಮಾರಿನ ಬಗ್ಗೆ ನನಗೆ ನಿಜಕ್ಕೂ ಆತಂಕವಿದೆ. ಒಳ್ಳೆಯ ಲೇಖನ.

    ನಿಮ್ಮ ಕತೆಗಳನ್ನೆಲ್ಲ ಓದುವ ಆಶೆಯಿದೆ. ಸದ್ಯಕ್ಕೆ ನನ್ನದು ಗಡಿಯಾರದ ಮುಳ್ಳುಗಳಿಗೆ ಜೋತುಬಿದ್ದಿರುವ ದಿನಚರಿ. ಇಷ್ಟರಲ್ಲೇ ಬದಲಾಗಲಿದೆ. ನಂತರ ನನ್ನ ಓದು-ನದಿಯಲ್ಲಿ ಕದ್ದು ಈಜು ಬೀಳುವುದೊಂದೇ ಬಾಕಿ.

    ಪ್ರೀತಿಯಿಂದ,
    ಸಿಂಧು

    ReplyDelete