ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, June 4, 2012

ಕವನ- "ಹೀಗೇ ಬಿಟ್ಟರೆ..."


ಕಮಲದ ಹೂವಿಂದಾ
ಕೆನ್ನೆಯ ಮಾಡಿದನೋ...

ಯಾರವನು?
ಅವನಿಗೇನು ಬೇರೆ ಕೆಲಸ ಇಲ್ಲವೇ?

ಉತ್ತು ಬಿತ್ತಿ ಗೋಧಿ ಬತ್ತ
ಬೆಳೆಯಲು ಹೇಳಿ ಅವನಿಗೆ.
ಹಸು ಮೇಯಿಸಿಕೊಂಡು ಬಾ ಎನ್ನಿ.
ನೊರೆಹಾಲು ಕರೆಯೋ ಎನ್ನಿ.
ಚಾಯ್ ಮಾಡೋ ಎನ್ನಿ.

ದೇವಲ ಮಹರ್ಷಿ
ಗಳ ಬಳಿ ಹೋಗಲು ಹೇಳಿ,
ನೇಯಲು ಕಲಿಸುತ್ತಾರೆ.
ರಾಜಕಾರಣಿಗಳೆಡೆ ಕಳಿಸಬೇಡಿ,
ಮೇಯಲು ಕಲಿಸಿಬಿಡುತ್ತಾರೆ.

ವಿ
ಜ್ಞಾನಿಗಳನ್ನು ಜ್ಞಾನಿ
ಗಳನ್ನಾಗಿ ಮಾಡಲು ಹೇಳಿ.
ಹೊಸ ಬಾಂಬು ಮಿಸೈಲು ಬುದ್ಧಿ
ಯನ್ನು ಅವರೆದೆಯಿಂದ ಕಿತ್ತೊಗೆದು
ಬಿಡು ಮಾರಾಯಾ ಎನ್ನಿ.

ಈಗಿರುವ ಬಾಂಬು ಎಕೆ ೪೭
ಗಳನ್ನೆಲ್ಲಾ ಗುಜರಿಗೆ ಸಾಗಿಸಿಬಿಡು ಅನ್ನಿ.
ಕಂಪ್ಯೂಟರು ಕಾರು ಬೈಕು ಹಡಗು ಪುಷ್ಪಕ
ಮಾಡಿ ನಮಗೆಲ್ಲರಿಗೂ ಒಂದೊಂದು ಕೊಡಲು ಹೇಳಿ.
ಪೆಟ್ರೋಲು ಡೀಸೆಲ್ ಬ್ಯಾಡ ಕಣಪ್ಪಾ
ಕಣ್ಣಪ್ಪಾ
ಉಸಿರಾಡುವುದಕ್ಕೇ ಆಗುವುದಿಲ್ಲ
ಬೇರೇನಾದರೂ ಮಾಡಪ್ಪಾ ಅನ್ನಿ.
ಮೈತುಂಬಾ ಕೆಲಸ ಹಚ್ಚಿ.
ಅಪ್ಪಿತಪ್ಪಿಯೂ ಕಮಲದ ಹೂವನ್ನು ಕೈ
ಗೆ ಕೊಡಬೇಡಿ.

ಇಲ್ಲದಿದ್ದರೆ... ಹೀಗೆ ಬಿಟ್ಟರೆ...
ಕಮಲದ ಹೂವಿಂದ ಕೆನ್ನೆ
ಕಬ್ಬಿನಿಂದ ಹುಬ್ಬು
ಮಣೆಯಿಂದ ಹಣೆ
ಜೇಡರಬಲೆಯಿಂದ ಕರಿಗೂದಲ ತಲೆ
ಗನ್ನಿನಿಂದ ಬೆನ್ನು- ಹೀಗೆ
ಯಾವುಯಾವುದರಿಂದಲೋ ಏನೇನನ್ನೋ
ಮಾ
            ಡು
                        ತ್ತಾ... ತ್ತಾ... ತ್ತಾ...
ಒಂದುದಿನ
ತಂಬೂರಿಯಿಂದ ತಿಕ ಮಾಡಿಬಿಡುತ್ತಾನೆ.
ಎಲ್ಲೆಲ್ಲೂ ಸದ್ದು ನಾತ
ಶಬ್ಧಮಾಲಿನ್ಯ ಪರಿಸರಮಾಲಿನ್ಯ
ಥುಥುಥೂ
ಈ ಭೂಮಿಯೂ ಬೇಡ
ಬದುಕೂ ಬೇಡ ಅನಿಸಿಬಿಡುತ್ತದೆ ಅಷ್ಟೇ.

***       ***       ***
 ಮೈಸೂರಿನ "ಆಂದೋಳನ" ದಿನಪತ್ರಿಕೆಯಲ್ಲಿ ನಿನ್ನೆ, ಭಾನುವಾರ, ಜೂನ್ ೩, ೨೦೧೨ರಂದು ಪ್ರಕಟವಾದ ಕವನ