ಪೊತ್ತೆಮೀಸೆ ಬೋಡುತಲೆ ಶಂಭಯ್ಯ
ಮೇಷ್ಟ್ರು ಹೆಗ್ಗಡದೇವ
ನ ಕೋಟೆ
ಎಂದು ಮೂರು ಸಲ ಅರಚಿದ
ರೂ.............
ಹೆಗ್ಗಣದೇವ
ಎಂದು ಉತ್ತರದಲ್ಲಿ ಕೆತ್ತಿ
ದ
ಇಲಿಗಣ್ಣ ಬೆಕ್ಕಿನ ದನಿಯ
ಗೆಳೆಯ.
ಶಂಭಯ್ಯ ಮೇಷ್ಟರಿಗೆ ಭಾರಿ ಕೋಪ ಬಂದಿತ್ತು.
ಈ
ಗವನು
ಉತ್ತರದಲ್ಲೆಲ್ಲೋ
ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ
ದ ಗೋಧಿ ಗೋದಾಮು ಮ್ಯಾನೇಜರು.
ಹಗಲಲ್ಲೇ ಮೇಯುತ್ತಾನಂತೆ.
ಯಾರಿಗಾದರೂ ಕೋಪ ಬಂದ ಹಾಗೆ
ಕಾಣುತ್ತಿಲ್ಲ.
ಪ್ರೇಮಶೇಖರ
*** *** ***
ಭಾನುವಾರ, ಮೇ ೬, ೨೦೧೨ರಂದು ಮೈಸೂರಿನ "ಆಂದೋಳನ" ದಿನಪತ್ರಿಕೆಯಲ್ಲಿ ಪ್ರಕಟವಾದ ಕವನ
ಭಾನುವಾರ, ಮೇ ೬, ೨೦೧೨ರಂದು ಮೈಸೂರಿನ "ಆಂದೋಳನ" ದಿನಪತ್ರಿಕೆಯಲ್ಲಿ ಪ್ರಕಟವಾದ ಕವನ
No comments:
Post a Comment