ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, June 30, 2016

ಕರುನಾಡಿನಲ್ಲೊಂದು ಬೀದಿ ನಾಟಕ


ರಶಿಯಾ, ಚೀನಾ ಮುಂತಾದ ದೇಶಗಳಲ್ಲಿ ಧನಾತ್ಮಕವಾದ ಸಮಾಜೋ-ರಾಜಕೀಯ ಬದಲಾವಣೆಗಳಿಗೆ ಅಲ್ಲಿನ ಸಾಂಸ್ಕೃತಿಕ ನಾಯಕರು ಅಗಾಧ ಕೊಡುಗೆ ನೀಡಿದ್ದಾರೆ.  ನಮ್ಮಲ್ಲಿ ಸಾಂಸ್ಕೃತಿಕ ನಾಯಕರೇನೋ ಇದ್ದಾರೆ, ಆದರೆ ನಾಡಿಗೆ ಆವರ ಕೊಡುಗೆ ಏನು?  ಮ್ಮೀ ದುರಷ್ಟ ಬಗ್ಗೆ ಎರಡು ವರ್ಷಗಳ ಹಿಂದೆ ಬರೆದಿದ್ದ ಲೇಖನ.
 
ಭಾಗ -
ಭಾರತೀಪುರದಲ್ಲಿ ತುಘಲಕ್

            ಜ್ಞಾನಪೀಠ ಪುರಸ್ಕೃತ ಸಾಹಿತಿಗಳಾದ ಯು. ಆರ್. ಅನಂತಮೂರ್ತಿ ಮತ್ತು ಗಿರೀಶ ಕಾರ್ನಾಡ ಪ್ರಸಕ್ತ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.  ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ್ದಾರೆ.  ಬಗ್ಗೆ ನಾಡಿನ ಮಾಧ್ಯಮಗಳಲ್ಲಿ, ವೇದಿಕೆಗಳ ಮೇಲೆ ಪರ ವಿರೋಧ ಅಭಿಪ್ರಾಯಗಳ ಚಕಮಕಿ ಸಾಗಿದೆ.

            ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ ಮುಂತಾದ ಅಪಮೌಲ್ಯಗಳಿಂದಾಗಿ ಕಲುಷಿತಗೊಂಡಿರುವ ನಮ್ಮ ಸಮಾಜೋ-ರಾಜಕೀಯ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಪ್ರಜ್ಞಾವಂತರ ಸಕ್ರಿಯ ಪಾತ್ರದ ಅಗತ್ಯವಿದೆ.  ಸಮಾಜಕ್ಕೆ, ದಿನದಲ್ಲಿ ಮುಖ್ಯವಾಗಿ, ಮತದಾರರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರು ಹಣ, ಹೆಂಡ, ಜಾತಿ ಇನ್ನಿತರ ಯಾವುದೇ ಅಮಿಷಕ್ಕೊಳಗಾಗದೇ ದೇಶದ ಹಿತ ಕಾಯುವ ರಾಜಕೀಯ ಪಕ್ಷದ ಪರವಾಗಿ ಮತಚಲಾಯಿಸುವಂತೆ ಪ್ರೇರೇಪಿಸುವುದು ಸಾಂಸ್ಕೃತಿಕ ಮುಂದಾಳುಗಳ ಜವಾಬ್ದಾರಿ.  ಹಿಂದೆ ಹಲವಾರು ವಿಶ್ವಮಾನ್ಯ ಸಾಹಿತಿಗಳು ಸಮಾಜದ ರಾಜಕೀಯ ಬದುಕಿನಲ್ಲಿ ಸಕಾರಾತ್ಮಕವಾಗಿ ಕೈ ಆಡಿಸಿದ ಉದಾಹರಣೆಗಳಿವೆ.  ಮ್ಯಾಕ್ಸಿಂ ಗಾರ್ಕಿ ಮತ್ತು ಲು ಶೂನ್ ಕ್ರಮವಾಗಿ ರಶಿಯಾ ಮತ್ತು ಚೀನಾದಲ್ಲಿ ಸಮತಾವಾದದ ಬೆಳವಣಿಗೆಗೆ ಮತ್ತು ಕಮ್ಯೂನಿಸ್ಟ್ ಸರಕಾರಗಳ ಜನಮಾನ್ಯತೆಗೆ ಶ್ರಮಿಸಿದ್ದರು.  ಬ್ರಿಟನ್ನಲ್ಲಿ ಲೇಬರ್ ಪಕ್ಷದ ಸೈದ್ದಾಂತಿಕ ಅಸ್ತಿಭಾರಕ್ಕೆ ಫೇಬಿಯನ್ ಸೋಶಿಯಲಿಸ್ಟ್ ಆಗಿದ್ದ ಜಾರ್ಚ್ ಬರ್ನಾರ್ಡ್ ಶಾ ಮತ್ತು ಬರ್ಟ್ರ್ಯಾಂಡ್ ರಸೆಲ್ ಕೊಡುಗೆಗಳು ಅಪಾರ.  ಪಾಕಿಸ್ತಾನದ ಸೃಷ್ಟಿಯಲ್ಲಿ ಕವಿ ಮಹಮದ್ ಇಕ್ಬಾಲ್‌‍ ಪಾತ್ರವನ್ನು ನಿರ್ಲಕ್ಷಿಸಲಾಗುತ್ತದೆಯೇ?

ಹಿನ್ನೆಲೆಯಲ್ಲಿ ಕನ್ನಡದ ಇಬ್ಬರು ಪ್ರಶಸ್ತಿವಿಜೇತ ಸಾಹಿತಿಗಳು ಒಂದು ಪಕ್ಷದ ಪರವಾಗಿ ಜನತಾಂತ್ರಿಕ ವಿಧಾನದಲ್ಲಿ ಮತಯಾಚನೆ ಮಾಡುತ್ತಿರುವುದು ಸ್ವಾಗತಾರ್ಹವೇ.  ಆದರೆ ಅದಕ್ಕಾಗಿ ಅವರು ಕೊಡುತ್ತಿರುವ ಕಾರಣಗಳು ಮಾತ್ರ ಪೂರ್ವಗ್ರಹಪೀಡಿತ ಏಕಮುಖ ಚಿಂತನೆಗಳು.  ಮೋದಿಯವರನ್ನು ಕೋಮುವಾದಿ, ಕೊಲೆಗಡುಕ ಎಂದೆಲ್ಲಾ ಬಣ್ಣಿಸುವ ಬುದ್ದಿಜೀವಿಗಳು ಗಿಳಿಪಾಠದಂತೆ ಒಪ್ಪಿಸುತ್ತಿರುವುದು ೨೦೦೨ರಿಂದೀಚಿಗಿನ ಗುಜರಾತ್ ಬಗ್ಗೆ ಮಾಧ್ಯಮದ ಒಂದು ವರ್ಗ ಬಿತ್ತಿದ ಸುಳ್ಳುಗಳು.  ಸುಳ್ಳುಗಳ ಹಿಂದೆ ಪಶ್ಚಿಮ ಏಶಿಯಾದ ಶ್ರೀಮಂತ ತೈಲಸಂಪನ್ನ ದೇಶವೊಂದರ ಹಣ ಕೆಲಸ ಮಾಡುತ್ತಿರುವುದು ಬಹುಶಃ ಇವರಿಗೆ ತಿಳಿದಿಲ್ಲ.  ಅಥವಾ... ನಿಜವಾಗಿಯೂ ತಿಳಿದಿಲ್ಲವೇ?
೨೦೦೨ರ ಫೆಬ್ರವರಿ ಕೊನೆಯ ವಾರದಲ್ಲಿ ಗುಜರಾತ್ನಲ್ಲಿ ನಡೆದ ರಕ್ತಪಾತ ಖಂಡಿತವಾಗಿಯೂ ಅಕ್ಷಮ್ಯ, ನಾಗರಿಕ ಸಮಾಜದ ಒಂದು ಕಪ್ಪುಚುಕ್ಕೆ.  ಆದರೆ ಇದಕ್ಕೆ ಪ್ರೇರಕವಾದದ್ದು ಗೋಧ್ರಾ ಹತ್ಯಾಕಾಂಡ.  ಇಷ್ಟಾಗಿಯೂ ಸ್ವಭಾವತಃ ಶಾಂತಮತಿಗಳಾದ ಸಾಮಾನ್ಯ ಗುಜರಾತಿಗಳು ಮತೀಯವಾಗಿ ಇಷ್ಟೇಕೆ ಉದ್ರಿಕ್ತರಾದರು ಎನ್ನುವುದಕ್ಕೆ ಉತ್ತರ ಇತಿಹಾಸದಲ್ಲಿದೆ.  ನಮ್ಮ ಬುದ್ಧಿಜೀವಿಗಳು ಮತ್ತವರ ಹಿಂಬಾಲಕರು ಅದನ್ನೊಮ್ಮೆ ನೋಡಬೇಕಷ್ಟೇ.

ಇಸ್ಲಾಂ ಒಂದು ಸಾಮ್ರಾಜ್ಯಶಾಹಿ ಧರ್ಮ.  ಮಹಮದ್ ಪೈಗಂಬರರು ಇಸ್ಲಾಂ ಧರ್ಮದ ಸ್ಥಾಪಕರಲ್ಲದೇ ಅರಬ್ ಸಾಮ್ರಾಜ್ಯದ ಸಂಸ್ಥಾಪಕರೂ ಸಹಾ ಎಂಬುದು ಐತಿಹಾಸಿಕ ಸತ್ಯ.  ಇತರ ಧರ್ಮಸಂಸ್ಥಾಪಕರಾದ ಬುದ್ಧ, ಮಹಾವೀರ, ಜೀಸಸ್ ಕ್ರೈಸ್ಟ್, ಬಹಾವುಲ್ಲಾ ಮತ್ತು ಅಬ್ದುಲ್ ಬಹಾ ಮುಂತಾದವರಿಗೂ ಪೈಗಂಬರರಿಗೂ ಇರುವ ಪ್ರಮುಖ ವ್ಯತ್ಯಾಸ ಇದು.  ತಮ್ಮ ಖೊರೇಶ್ ಬುಡಕಟ್ಟು ಇಡೀ ಅರೇಬಿಯಾದ ಮೇಲೆ ರಾಜಕೀಯ ಪ್ರಭುತ್ವ ಸ್ಥಾಪಿಸಲು ತನ್ಮೂಲಕ ಇಸ್ಲಾಂ ಧರ್ಮವನ್ನು ಅರೇಬಿಯಾದ ಸಾರ್ವತ್ರಿಕ ಹಾಗೂ ಏಕೈಕ ಧರ್ಮವನ್ನಾಗಿ ಬೆಳೆಸಲು ಅಗತ್ಯವಾದ ಸೈನ್ಯವನ್ನು ಕಟ್ಟಬೇಕಾದರೆ ಸೈನಿಕರಿಗೆ ಧನ ಹಾಗೂ ಸ್ತ್ರೀಯರ ಪ್ರಲೋಭನೆಗಳನ್ನೊಡ್ಡುವ ಅಗತ್ಯವನ್ನು ಪೈಗಂಬರರು ಮನಗಂಡಿದ್ದರು.  ಆಗಿನ ಅರೇಬಿಯಾದಲ್ಲಿದ್ದ ಅರೆನಾಗರಿಕ ಪುರುಷವರ್ಗದ ಮೃಗೀಯ ಸ್ತ್ರೀವ್ಯಾಮೋಹ ಹಾಗೂ ಧನಲಾಲಸೆಯ ಸ್ಪಷ್ಟ ಅರಿವಿದ್ದ ಅವರು ಜನರಿಗೆ ಜಿಹಾದ್‌‍ಗೆ ಪ್ರತಿಯಾಗಿ ಜನ್ಮದಲ್ಲಿ ಸಿಗುವ ಧನಲಾಭ, ಸ್ತ್ರೀಸುಖ ಹಾಗೂ ಸತ್ತನಂತರ ಸ್ವರ್ಗದಲ್ಲಿ ಸಿಗುವ ಇಂದ್ರಿಯ ಸುಖಗಳ ಆಮಿಷವನ್ನೊಡ್ಡದಿದ್ದರೆ ಬಲಶಾಲೀ ಸೈನ್ಯವನ್ನು ಕಟ್ಟುವುದು ಸಾಧ್ಯವೇ ಇಲ್ಲ ಎಂದು ಅರಿತಿದ್ದರು.  ಅಷ್ಟೇ ಅಲ್ಲ, ಅದನ್ನು ಆಚರಣೆಗೆ ತಂದರೂ ಕೂಡಾ.  ತಾವು ಕೈಗೊಂಡ ಹಲವಾರು ಯುದ್ಧಗಳಲ್ಲಿ ಸೋತ ಬುಡಕಟ್ಟುಗಳ ಹೆಂಗಸರನ್ನು ತಮ್ಮ ಸೈನಿಕರಿಗೆ ಹಂಚುತ್ತಿದ್ದರು.  ಒಂದು ಸಂದರ್ಭದಲ್ಲಂತೂ ಸೆರೆಸಿಕ್ಕಿದ ಮೂವರು ಸುಂದರಿಯರನ್ನು ತಮ್ಮ ಅಳಿಯಂದಿರಾದ ಆಲಿ ಮತ್ತು ಉಸ್ಮಾನ್ ಹಾಗೂ ತಮ್ಮ ಮಾವ ಒಮ‍‍ರ್‍‍ಗೆ ಒಪ್ಪಿಸಿದರು.  ಪೈಗಂಬರರ ಕೃತ್ಯಗಳನ್ನು ನಮ್ಮ ಕಾಲದ ಮೌಲ್ಯಗಳ ಮೂಲಕ ವಿಶ್ಲೇಷಿಸಿ ನಾವು ಅಸಹ್ಯ ಪಡಬೇಕಾಗಿಲ್ಲ.  ಪ್ರಾಚೀನ ಪಶ್ಚಿಮ ಹಾಗೂ ಮಧ್ಯ ಏಶಿಯಾಗಳಲ್ಲಿ ಇದು ತೀರಾ ಸಾಮಾನ್ಯವಾದ ಆಚರಣೆಯಾಗಿತ್ತು.  ಪೈಗಂಬರರು ಅದನ್ನು ಮುಂದುವರೆಸಿ ಅರೇಬಿಯಾದಲ್ಲಿ ತಮ್ಮ ರಾಜಕೀಯ ಅಧಿಕಾರವನ್ನು ಸ್ಥಾಪಿಸಿದರಷ್ಟೇ.  ಆದರೆ ಇದೇ ಮನೋಭಾವ ಸಾವಿರದ ಮುನ್ನೂರು ವರ್ಷಗಳ ನಂತರ ಭಾರತೀಯ ಉಪಖಂಡದಲ್ಲಿ ಹೆಡೆಯೆತ್ತಿದ್ದು ಅಚ್ಚರಿ ಹಾಗೂ ಅಸಹ್ಯವನ್ನುಂಟುಮಾಡುವಂಥದ್ದು.  ಅಕ್ಟೋಬರ್ ೨೨, ೧೯೪೭ರ ರಾತ್ರಿ ಕಾಶ್ಮೀರದ ಮೇಲೆ ಅಘೋಷಿತ ಹಟಾತ್ ಧಾಳಿಗೆ ಸಿದ್ದರಾಗಿ ನಿಂತಿದ್ದ ಐದು ಸಾವಿರ ಶಸ್ತ್ರಸಚ್ಚಿತ ಪಠಾಣರಿಗೆ ಧಾಳಿಯ ರೂವಾರಿ 'ಜನರಲ್ ತಾರಿಖ್' (ಮೇಜರ್ ಜನರಲ್, ನಂತರ ಲೆಫ್ಟಿನೆಂಟ್ ಜನರಲ್, ಅಕ್ಬರ್ ಖಾನ್) ಒಡ್ಡಿದ ಅಮಿಷ ಹೀಗಿತ್ತು:  ಶ್ರೀನಗರ ತಲುಪಿ ಅಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವವರೆಗೆ ಎಲ್ಲೂ ನಿಲ್ಲಬೇಡಿ.  ಶ್ರೀನಗರ ವಶವಾದ ನಂತರ ಕಾಶ್ಮೀರದ ನೆಲ ನಮಗೆ, ಅಲ್ಲಿನ ಹೆಂಗಸರು ಮತ್ತು ಐಶ್ವರ್ಯ ನಿಮಗೆ.”

ಇಸ್ಲಾಮನ್ನು ಮೊದಲು ಅರೇಬಿಯಾದಲ್ಲಿ ನಂತರ ಇಡೀ ಜಗತ್ತಿಗೆ ಹರಡುವ ಉದ್ದೇಶದಿಂದಾಗಿ ಐಶ್ವರ್ಯ ಹಾಗೂ ಲೈಂಗಿಕ ಅಮಿಷಗಳ ಜತೆಗೇ ಜಿಹಾದ್ ಪರಿಕಲ್ಪನೆಯನ್ನೂ ಸಹಾ ಪೈಗಂಬರರು ರೂಪಿಸಿದರು.  ಒಂದು ಸಾವಿರ ವರ್ಷಗಳವರೆಗೆ ಪ್ರಾರ್ಥನೆ ಮಾಡುವುದಕ್ಕಿಂತ ಕೇವಲ ಒಂದುದಿನ ಅಲ್ಲಾನ ಸೈನಿಕನಾಗುವುದು ಶ್ರೇಷ್ಟ ಎಂದವರು ಹೇಳಿದರು.  ಧರ್ಮಕ್ಕಾಗಿ ಪ್ರಾಣ ಕೊಡಬಲ್ಲಂತಹ ಸೈನಿಕರನ್ನು ತಯಾರು ಮಾಡಲು ಸ್ವರ್ಗ ಮತ್ತಲ್ಲಿ ದೊರೆಯುವ ವೈಭೋಗಗಳ ಚಿತ್ರಣ ನೀಡಿದರು.  ಅದೆಲ್ಲವೂ ಕಾಲದ ಅಗತ್ಯವಾಗಿತ್ತು.  ಹಾಗೆ ಮಾಡದಿದ್ದರೆ ಇಸ್ಲಾಂ ಅರೇಬಿಯಾದಲ್ಲೂ ಗಟ್ಟಿಯಾಗಿ ನೆಲೆಯೂರುತ್ತಿರಲಿಲ್ಲ.

ಬಗೆಯ ಅಸ್ತಿಭಾರದ ಮೇಲೆ ಬೆಳೆದುಬಂದ ಇಸ್ಲಾಂ ಪ್ರವಾದಿಯವರ ನಿಧನಾನಂತರ ಒಂದೇ ತಲೆಮಾರಿನಲ್ಲಿ ಇಡೀ ಪಶ್ಚಿಮ ಏಶಿಯಾಗೆ ಹರಡಿಹೋದದ್ದರಲ್ಲಿ ಅಚ್ಚರಿಯೇನಿಲ್ಲ.  ಒಂಬೈನೂರು ವರ್ಷಗಳ ಇತಿಹಾಸವಿದ್ದ ಪರ್ಶಿಯಾದ ಸಸಾನಿದ್ ಸಾಮ್ರಾಜ್ಯವನ್ನು ಧೂಳೀಪಟಗೊಳಿಸಿ ಅಗ್ನಿ ಆರಾಧಕರ ಮೇಲೆ ಅರಬ್ಬರು ಇಸ್ಲಾಮನ್ನು ಹೇರಿದ್ದು ಕ್ರೂರ ವಿಧಾನಗಳ ಮೂಲಕ.  ಅದರಿಂದ ತಪ್ಪಿಸಿಕೊಂಡು ಓಡಿಬಂದ ಪಾರ್ಸಿಗಳಿಂದ ಇಸ್ಲಾಂನ ಕ್ರೌರ್ಯದ ಮೊದಲ ಪರಿಚಯ ಏಳನೆಯ ಶತಮಾನದಲ್ಲೇ ಗುಜರಾತಿಗಾಯಿತು.  ಮುಂದಿನ ಐದಾರು ದಶಕಗಳಲ್ಲಿ ನೆರೆಯ ಸಿಂಧ್ ಅರಬ್ಬರ ವಶವಾದಾಗ ತಾನು ಹಿಂದೂಧರ್ಮದ ಗಡಿ ಎಂಬ ಅರಿವು ನಾಡಿಗಾಯಿತು.  ನಂತರ ಇಸ್ಲಾಂನ ಹಿಂಸಾತ್ಮಕ ಮುಖದ ಸ್ವಾನುಭವ ಗುಜರಾತಿಗಾದದ್ದು ೧೦೧೭ರಲ್ಲಿ.  ವರ್ಷ ಘಜನಿಯ ಸುಲ್ತಾನ ಮಹಮದ್ ಸೋಮನಾಥ ದೇವಾಲಯದ ಮೇಲೆ ನಡೆಸಿದ ಧಾಳಿಯ ಹಿಂದಿದ್ದ ಪ್ರಮುಖ ಉದ್ದೇಶ ಲೂಟಿಯೇ ಆದರೂ ಆತ ಹಿಂದೂಧರ್ಮದ ಸಂಕೇತಗಳನ್ನು ಅವಮಾನಿಸುವ ಕೃತ್ಯಗಳನ್ನೂ ಎಸಗಿದ ಮತ್ತು ಅವನ ಜತೆಗಿದ್ದ ಲೂಟಿಗಾರರು ಆ ಮುಸ್ಲಿಂ ಅರಸನಿಗೆ ನಿಷ್ಟರಾಗಿದ್ದರು ಎಂಬುದೇ ಇಸ್ಲಾಂನಿಂದ ಒದಗಬಹುದಾದ ಹಾನಿಯ ನೇರ ಪರಿಚಯವನ್ನು ಗುಜರಾತಿಗಳಿಗೆ ಮಾಡಿಕೊಟ್ಟಿತು.  ಇದು ಗುಜರಾತಿಗಳ ಇಸ್ಲಾಂ-ವಿರೋಧಿ ಮನೋಭಾವ ಬೆಳೆದುಬಂದ ಬಗೆ.  ಜತೆಗೇ ಹಿಂದೂಧರ್ಮದ ಬಗ್ಗೆ ತೀವ್ರ ಸಂವೇದನಾಶೀಲತೆಯನ್ನೂ ಅವರು ರೂಢಿಸಿಕೊಂಡರು.  ಹೀಗಾಗಿಯೇ ಇತಿಹಾಸದಲ್ಲಿ ದಾಖಲಾಗಿರುವಂತೆಯೇ ಸ್ವಭಾವತಃ ಶಾಂತಮತಿಗಳಾದ ಗುಜರಾತಿಗಳು ಪ್ರಚೋದನೆಗೊಂಡಾಗ ತೀವ್ರವಾಗಿ ಉದ್ರೇಕಿತರಾಗಿ ಹಿಂಸೆಯಲ್ಲಿ ತೊಡಗುವುದು ಆಗಾಗ್ಗೆ ನಡೆದುಕೊಂಡೇ ಬಂದಿದೆ.  ಸ್ವಾತಂತ್ರ್ಯಾನಂತರ ಪಾಕಿಸ್ತಾನದ ಭೂದಾಹದಿಂದಾಗಿ ತನ್ನ ಒಂದಷ್ಟು ನೆಲವನ್ನು ಕಳೆದುಕೊಂಡ ಭಾರತದ ಏಕೈಕ ಅಧಿಕೃತ ರಾಜ್ಯ ಗುಜರಾತ್.  (ಕಾಶ್ಮೀರದ ವಿಷಯ ಬೇರೆ).  ಸಿಂಧ್ ಪ್ರಾಂತ್ಯಕ್ಕೆ ಹೊಂದಿಕೊಂಡ ಗುಜರಾತಿನ ಕಛ್ಛ್‌‍ ರಣ್ ಪ್ರದೇಶದಲ್ಲಿ ಅರ್ಧದಷ್ಟನ್ನು ತನ್ನದೆಂದು ಪಾಕಿಸ್ತಾನ ೧೯೬೫ರಲ್ಲಿ ತಗಾದೆ ತೆಗೆಯಿತು.  ಅಷ್ಟೇ ಅಲ್ಲ, ಅಮೆರಿಕಾದಿಂದ ಪಡೆದುಕೊಂಡಿದ್ದ ( ಕಾಲದ) ಅತ್ಯಾಧುನಿಕ ಪ್ಯಾಟನ್ ಟ್ಯಾಂಕ್‍‍ಗಳ ಸಹಾಯದಿಂದ ಪಾಕಿಸ್ತಾನಿ ಸೇನೆ ಭಾರತೀಯ ಪ್ರದೇಶದೊಳಗೆ ನುಗ್ಗಿಬಂತು.  ಆಗ ನಡೆದ ಹಲವು ಚಕಮುಕಿಗಳಲ್ಲಿ ಭಾರತೀಯ ಸೇನೆ ಹಿಮ್ಮೆಟ್ಟಿತು.  ಕೊನೆಗೆ ಅಂತರರಾಷ್ಟ್ರೀಯ ಮಧ್ಯಪ್ರವೇಶದಿಂದ ಘರ್ಷಣೆ ನಿಂತು ಟ್ರಿಬ್ಯೂನಲ್ ಒಂದಕ್ಕೆ ಸಮಸ್ಯೆಯನ್ನೊಪ್ಪಿಸಲಾಯಿತು.  ಸುಮಾರು ಎಂಟುನೂರು ಚದರ ಕಿಲೋಮೀಟರ್ ಪ್ರದೇಶವನ್ನು ಪಾಕಿಸ್ತಾನಕ್ಕೆ ನೀಡುವಂತೆ ಟ್ರಿಬ್ಯೂನಲ್ ೧೯೬೮ರಲ್ಲಿ ಭಾರತಕ್ಕೆ ಆದೇಶಿಸಿತು.  ಅದನ್ನು ನಿರಾಕರಿಸದೇ ಪಾಲಿಸಿದ ಭಾರತ ಅಷ್ಟೂ ಪ್ರದೇಶವನ್ನು ಪಾಕಿಸ್ತಾನಕ್ಕೆ ವರ್ಗಾಯಿಸಿತು.  ಇದು ಗುಜರಾತಿಗಳಿಗೆ ಮತ್ತೊಂದು ಆಘಾತ.  ತಮ್ಮ ನೆಲವನ್ನು ಕಬಳಿಸಿದ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರ ಎನ್ನುವುದು ಬಹುತೇಕ ಗುಜರಾತಿ ಹಿಂದೂಗಳಲ್ಲಿ ಮತ್ತಷ್ಟು ಅಸಹನೆಯನ್ನುಂಟುಮಾಡಿತು.

ಇಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆಯೊಂದಿಗೆ ಗೋಧ್ರಾ ರೈಲು ಹತ್ಯಾಕಾಂಡ ಸೃಷ್ಟಿಸಿದ ಪ್ರಚೋದನೆಯಿಂದಾಗಿ ಭುಗಿಲೆದ್ದ ಉಗ್ರ ಮುಸ್ಲಿಂ-ವಿರೋಧಿ ಭಾವನೆಯನ್ನು ಶಮನಗೊಳಿಸಲು ಮೋದಿಯವರ ಬಿಜೆಪಿ ಸರಕಾರವಿರಲಿ, ಕಾಂಗ್ರೆಸ್ ಸರಕಾರಕ್ಕೂ ಸಾಧ್ಯವಾಗುತ್ತಿರಲಿಲ್ಲ.  ಹೀಗಾಗಿ ಗಲಭೆಗಳಿಗೆ, ರಕ್ತಪಾತಕ್ಕೆ ಮೋದಿಯವರನ್ನು ನೇರವಾಗಿ ಹೊಣೆಯಾಗಿಸುವುದು ಹೊಣೆಗೇಡಿತನವಾಗುತ್ತದೆ.  ನ್ಯಾಯಾಂಗ ಹೇಳಿರುವುದು ಇದನ್ನೇ  ಆದರೆ ಗಲಭೆಗಳು ಬಿಜೆಪಿ ಆಡಳಿತವಿದ್ದ ರಾಜ್ಯದಲ್ಲಿ ಘಟಿಸಿದ್ದು ಆಗ ರಾಜ್ಯದಲ್ಲೂ, ಕೇಂದ್ರದಲ್ಲೂ ಅಧಿಕಾರದಿಂದ ವಂಚಿತವಾಗಿದ್ದ ಕಾಂಗ್ರೆಸ್‌‍ಗೆ ವರದಾನವಾಗಿ ಪರಿಣಮಿಸಿತು.  ಇಡೀ ಘಟನೆಗಳನ್ನು ಇನ್ನೆರಡು ವರ್ಷಗಳಲ್ಲಿ ನಡೆಯಲಿದ್ದ ಲೋಕಸಭಾ ಚುನಾವಣೆಗಳಿಗೆ ಬಳಸಿಕೊಳ್ಳಲು ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಿದ್ಧತೆ ನಡೆಸಿತು.  ಇದಕ್ಕೆ ಕೈಗೂಡಿಸಿದವರು ಲಾಗಾಯ್ತಿನಿಂದಲೂ ಕಾಂಗ್ರೆಸ್‌‍‍ ಸಮರ್ಥಕರಾಗಿದ್ದ, ತಲೆಮಾರುಗಳಿಂದಲೂ ಆಂಗ್ಲ ಶಿಕ್ಷಣದ ಹಿನ್ನೆಲೆಯಿದ್ದ, ಪಾಶ್ಚಾತ್ಯ ಮೌಲ್ಯಗಳ ಅನುಕರಣೆಯಲ್ಲಿ ಸಿದ್ಧಹಸ್ತರಾಗಿದ್ದ ಹಿಂದೂ ಉಚ್ಚವರ್ಗಗಳ ಪತ್ರಕರ್ತರ ತಂಡ.  ಇದಕ್ಕೆ ಹಣ ಬಂದದ್ದು ಪಶ್ಚಿಮ ಏಶಿಯಾದ ದೇಶವೊಂದರಿಂದ.  ಹಣ ಅಂದರೆ ಹಣ ಅಷ್ಟೇ.  ಅದಕ್ಕೆ ಧರ್ಮ ಅಥವಾ ಸಿದ್ಧಾಂತದ ಹಂಗಿರುವುದಿಲ್ಲ.  ಒಬ್ಬ ಪತ್ರಕರ್ತೆಗೇ ಅರ್ಧ ಮಿಲಿಯನ್ ಡಾಲರ್ ಸಂದಿದೆಯೆಂಬ ಮಾತಿದೆ.

ಪತ್ರಕರ್ತರ ಪಕ್ಷಪಾತಿ ವರದಿಗಳ ಒಂದು ಉದಾಹರಣೆ:  ೧೯೮೯ರಲ್ಲಿ ಉತ್ತರ ಪ್ರದೇಶದ ಮಲಿಯಾನಾದಲ್ಲಿ ನಡೆದ ಗಲಭೆ ನಂತರದ ಸುರಕ್ಷಾ ಪಡೆಗಳ ಕಾರ್ಯಾಚರಣೆಯಲ್ಲಿ ನೂರಕ್ಕೂ ಮಿಕ್ಕಿ ಮುಸ್ಲಿಮರು ಪ್ರೊವಿನ್ಷಿಯಲ್ ಆರ್ಮ್ಡ್ ಕಾನ್ಸ್‌‍ಟೇಬ್ಯುಲರಿಯಿಂದ ಹತರಾದರೆಂದು ಕೆಲವು ಆಂಗ್ಲ ಪತ್ರಿಕೆಗಳು ಬರೆದವು (ಕೇಬಲ್ ಟಿವಿ ಇಲ್ಲದ ಕಾಲ ಅದು).  ಕೆಲವೇ ದಿನಗಳಲ್ಲಿ 'ಮೃತ' ಮುಸ್ಲಿಮರಲ್ಲಿ ಬಹುತೇಕರು ಜೀವಂತವಾಗಿ ತಂತಮ್ಮ ಮನೆಗಳಿಗೆ ಸದ್ದಿಲ್ಲದೇ ಹಿಂತಿರುಗಿದರು!  ವರ್ಷಾಂತ್ಯಕ್ಕೆ ಕಾಶ್ಮೀರಿ ಕಣಿವೆಯಲ್ಲಿ ಆರಂಭವಾದ ಭಯೋತ್ಪಾದನೆ ಹಿಂದೂ ಪಂಡಿತರನ್ನು ಒಕ್ಕಲೆಬ್ಬಿಸತೊಡಗಿದಾಗ ಇದೇ ಪತ್ರಿಕೆಗಳಿಗೆ ಅದು ಸುದ್ಧಿಯಾಗಲಿಲ್ಲ.  ಅವು ಕತ್ತಿ ಬೀಸತೊಡಗಿದ್ದು ರಾಜ್ಯಪಾಲ ಜಗ್‌‍‍ಮೋಹನ್ ಮತ್ತು ದೆಹಲಿಯಲ್ಲಿದ್ದ ವಿ. ಪಿ. ಸಿಂಗ್ ನೇತೃತ್ವದ ಜನತಾ ದಳ (ಕಾಂಗ್ರೆಸ್ಸೇತರ !) ಸರಕಾರದ ವಿರುದ್ಧ.  ಅದೇ ಸುಮಾರಿಗೆ ಅದ್ವಾನಿ ನೇತೃತ್ವದ ಬಿಜೆಪಿ ತನ್ನ ತಾತ್ಕಾಲಿಕ ರಾಜಕೀಯ ಹಂಚಿಕೆಗನುಗುಣವಾಗಿ ರಾಮಜನ್ಮಭೂಮಿ ವಿಷಯವನ್ನೆತ್ತಿಕೊಂಡು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡತೊಡಗಿದಾಗ ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ.  ಅವುಗಳ ಕೈಗೆ ಧ್ವನಿವರ್ಧಕಗಳು ಬಂದವು.  ಅವುಗಳಲ್ಲಿ ಕೆಲವು ಬುದ್ಧಿಜೀವಿಗಳ ಕೈಗೂ ಬಂದುಬಿಟ್ಟವು.  ಬುದ್ಧಿಜೀವಿಗಳಲ್ಲಿ ಇಬ್ಬರು ನಮ್ಮ ಅನಂತಮೂರ್ತಿಗಳು ಮತ್ತು ಕಾರ್ನಾಡರು.

ಭಾಗ -
ಸುಳ್ಳು ಸಂಸ್ಕಾರ, ಸತ್ಯದ ತಲೆದಂಡ: ಎಂಥ ಅವಸ್ಥೆ!

ಬಿಜೆಪಿ, ಆರ್‍‍ಎಸ್‌‍ಎಸ್ ಮತ್ತು ಈಗ ನರೇಂದ್ರ ಮೋದಿಯವರನ್ನು ಕೋಮುವಾದಿ, ವಿಚ್ಛಿದ್ರಕಾರಕ ಶಕ್ತಿಗಳೆಂದು ನಮ್ಮ ಬುದ್ಧಿಜೀವಿಗಳು ಬಣ್ಣಿಸುತ್ತಾರೆ.  ಅದರಲ್ಲೂ ಮೋದಿಯವರ ಬಗ್ಗೆ ಮಾತಾಡುವಾಗಂತೂ ಅವರ ಬಾಯಿಗಳಿಂದ ಕೇವಲ ನಕಾರಾತ್ಮಕ ಪದಗಳೇ ಹೊರಬರುತ್ತವೆ.  ಮೋದಿ ಪ್ರಧಾನಿಯಾದರೆ ದೇಶದಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದು ಕೂಗುತ್ತಾರೆ.  ಇವರ 'ಭವಿಷ್ಯ' ನಿಜವಾಗುತ್ತದೆಯೇ?  ಇವರ ಮಾತುಗಳನ್ನೂ, ಭವಿಷ್ಯವಾಣಿಗಳನ್ನೂ ಇತಿಹಾಸ ಮತ್ತು ವರ್ತಮಾನದ ಆಧಾರದ ಮೇಲೆ ವಿಶ್ಲೇಷಿಸೋಣ.

ಕಳೆದ ಶತಮಾನದ ಆದಿಯಲ್ಲಿ ಶಿಮ್ಲಾ ಡೆಪ್ಯುಟೇಷನ್ ಎಂಬ ಹೆಸರಿನಲ್ಲಿ ಒಂದುಗೂಡಿದ್ದ ಉತ್ತರ ಭಾರತದ ಮುಸ್ಲಿಂ ಸಮುದಾಯದ ಉಚ್ಛವರ್ಗದ ರಾಜಕೀಯ, ಆರ್ಥಿಕ ಲಾಲಸೆಗಳು ಬ್ರಿಟಿಷ್ ಆಳರಸರ ಸಾಮ್ರಾಜ್ಯಶಾಹೀ ಹಂಚಿಕೆ ಹಾಗೂ ಅಗತ್ಯಗಳೊಂದಿಗೆ ಮೇಳೈಸಿದ್ದು ಆಧುನಿಕ ಭಾರತದ ಚರಿತ್ರೆಯ ಒಂದು ದುರಂತ ಅಧ್ಯಾಯ.  ಅದರ ದುರದೃಷ್ಟಕರ ಮುಂದುವರಿಕೆಯಾಗಿ ಉಪಖಂಡದಲ್ಲಿ ತಮ್ಮ ರಾಜಕೀಯ ಅಧಿಕಾರವನ್ನು ಕೊನೆಗೊಳಿಸಿದ್ದ ಬ್ರಿಟಿಷರ ಜತೆಗೇ ಮುಸ್ಲಿಂ ಸಮುದಾಯ ಕೈಜೋಡಿಸಿ, ಶತಮಾನಗಳ ಕಾಲ ತಮ್ಮ ಅಧಿಕಾರವನ್ನು ಮಾನ್ಯಮಾಡಿ ಸಹಕರಿಸಿದ್ದ ಹಿಂದೂಗಳ ವಿರುದ್ಧವೇ ಘರ್ಷಣೆಗಿಳಿಯಿತು.  ಈಗ ಮಹಾಮಹಾ ವಿಚಾರವಾದಿಗಳಿಂದ ಹಿಡಿದು ಒಬ್ಬ ಬೀದಿಯಲ್ಲಿ ಹೋಗುವ ದಾಸಯ್ಯನೂ ಅಗತ್ಯವಿರಲೀ ಇಲ್ಲದಿರಲೀ ಎಗ್ಗಿಲ್ಲದೇ ಉದುರಿಸುವ "ಕೋಮುವಾದ" ಎಂಬ ನುಡಿಮುತ್ತು ಸಂಕೇತಿಸುವ ಬಹುತೇಕ ಅನಾಚಾರಗಳೂ ದೇಶದಲ್ಲಿ ಜನ್ಮ ತಾಳಿದ್ದು ಆಗ.

ಅನಂತರ ಬ್ರಿಟಿಷ್ ವಸಾಹತುಶಾಹಿ ಆಳರಸರ ಕೈಗೊಂಬೆಯಾಗಿ, ಅವರ ಸಕ್ರಿಯ ಸಹಕಾರದಿಂದ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಹಮ್ಮಿಕೊಂಡ ಕಾರ್ಯಯೋಜನೆಗಳು ದೇಶದ ಐಕ್ಯತೆಗೆ ಮಾರಣಾಂತಿಕ ಹೊಡೆತ ನೀಡಿ ಭಾರತ ಇಬ್ಬಾಗವಾಗಲು ಕಾರಣವಾದವು.  ಜಿನ್ನಾರ ನೀತಿಗಳನ್ನು ಇಸ್ಲಾಮಿಕ್ ವಿದ್ವಾಂಸ ಅಲ್ಲಮಾ ಮುಷ್ರಾಖಿ ಉಗ್ರವಾಗಿ ವಿರೋಧಿಸಿದ್ದರು.  ಆದರೆ ಬ್ರಿಟಿಷರ ಬೆಂಬಲ ಸಂಪೂರ್ಣವಾಗಿ ಜಿನ್ನಾರಿಗಿತ್ತು ಮತ್ತು ಮುಷ್ರಾಖಿಯವರನ್ನು ಬ್ರಿಟಿಷ್ ಸರಕಾರ ತನ್ನ ಶತ್ರುವಿನಂತೆ ಪರಿಗಣಿಸಿತ್ತು ಎಂಬ ಐತಿಹಾಸಿಕ ಸತ್ಯ ಜಿನ್ನಾ ಹಾಗೂ ಬ್ರಿಟಿಷರ ನಡುವಿನ ಸಹಕಾರಕ್ಕೊಂದು ಉದಾಹರಣೆ.
ಬ್ರಿಟಿಷರೊಂದಿಗೆ ಹೊಂದಾಣಿಕೆಗಿಳಿದ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌‍‍ ಮೂರ್ಖತನದಿಂದಾಗಿ ಭಾರತವಷ್ಟೇ ಇಬ್ಬಾಗವಾಗಲಿಲ್ಲ, ಉಪಖಂಡದ ಬಲಿಷ್ಟ ಮುಸ್ಲಿಂ ಸಮುದಾಯವೂ ಇಬ್ಬಾಗವಾಯಿತು.  ೧೯೭೧ರಲ್ಲಿ ಅದು ಮೂರು ಭಾಗಗಳಾಗಿ ಹೋಳಾಗಿ ಮತ್ತಷ್ಟು ಕೃಶವಾಯಿತು.  ಒಡೆಯುವಿಕೆಗೆ ಬಿಜೆಪಿಯಾಗಲೀ, ಆರ್‍‍ಎಸ್‌‍ಎಸ್ ಆಗಲೀ ಕಾರಣವಾಗಿರಲಿಲ್ಲ.

ಆರ್‍‍ಎಸ್‌‍‍ಎಸ್ ಅನ್ನು ತನ್ನ ರಾಜಕೀಯ ನೆಲೆಯನ್ನು ಅಲುಗಿಸಬಲ್ಲ ಶಕ್ತಿಯೆಂದು ಪರಿಗಣಿಸಿದ ನೆಹರೂ ನಾಯಕತ್ವದ ಕಾಂಗ್ರೆಸ್ ಅಂತಿಮವಾಗಿ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್‌‍ ಹುನ್ನಾರಗಳನ್ನು ಬೆಂಬಲಿಸಿದ್ದೂ ಸಹಾ ದೇಶವಿಭಜನೆಯನ್ನು ಸರಾಗವಾಗಿಸಿತು.  ಇದಾದದ್ದು ಮಹಾತ್ಮಾ ಗಾಂಧಿಯವರ ವಿರೋಧದ ಮಧ್ಯೆಯೇ ಎನ್ನುವುದನ್ನು ನಾವು ಮರೆಯಬಾರದು.  ದೇಶವಿಭಜನೆಯನ್ನು ಆರಂಭದಿಂದಲೂ ವಿರೋಧಿಸಿದ್ದ ಆರ್‍‍ಎಸ್‌‍‍ಎಸ್ ಮತ್ತು ೧೯೪೭ರ ಆದಿಯವರೆಗೂ ವಿರೋಧಿಸಿದ್ದ ಕಾಂಗ್ರೆಸ್‌‍‍ಗಳ ನಡುವೆ ಮೈತ್ರಿಯೇರ್ಪಟ್ಟು ಎರಡೂ ಸಂಘಟನೆಗಳು ಮುಸ್ಲಿಂ ಲೀಗ್ ವಿರುದ್ಧ ದನಿಯೆತ್ತಿದ್ದರೂ ದೇಶವಿಭಜನೆಯನ್ನು ತಡೆಯಲಾಗುತ್ತಿರಲಿಲ್ಲ.  ಯಾಕೆಂದರೆ ದೇಶವನ್ನು ಒಡೆಯುವುದು ತಮ್ಮ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳ ಅಗತ್ಯಕ್ಕನುಗುಣವಾಗಿ ಬ್ರಿಟಿಷ್ ಆಳರಸರ 'ಹಿಡನ್ ಅಜೆಂಡಾ' ಆಗಿತ್ತು ಮತ್ತು ಅವರ ಪರವಾಗಿ ಹಿಂದೂಗಳ ರಕ್ತಹರಿಸಲು ಮುಸ್ಲಿಂ ಲೀಗ್ ಟೊಂಕಕಟ್ಟಿ ನಿಂತಿತ್ತು.  ಇದು ಜಗತ್ತಿಗೇ ಮನವರಿಕೆಯಾದದ್ದು ಆಗಸ್ಟ್ ೧೬, ೧೯೪೬ರಂದು.  ಬಂಗಾಲದಲ್ಲಿ ಅಧಿಕಾರದಲ್ಲಿದ್ದ ಮುಸ್ಲಿಂ ಲೀಗ್ ಆಯೋಜಿಸಿದಡೈರೆಕ್ಟ್ ಆಕ್ಷನ್ ಡೇ” ಎಂಬ ಕೋಮುವಾದಿ ರ್ಯಾಲಿ ಮತ್ತದರ ಪರಿಣಾಮವಾದ, ಇತಿಹಾಸದಲ್ಲಿ ಕುಪ್ರಸಿದ್ಧವಾಗಿರುವ ಗ್ರೇಟ್ ಕಲ್ಕತ್ತಾ ಕಿಲ್ಲಿಂಗ್ಸ್” ದೇಶವಿಭಜನೆಯನ್ನು ಅನಿವಾರ್ಯವಾಗಿಸಿದವು.  ರ್ಯಾಲಿಯ ಪರಿಣಾಮವಾಗಿ ಕಲ್ಕತ್ತಾದಲ್ಲಿ ಮುಸ್ಲಿಮರಿಂದ ನಡೆದ ಸುಮಾರು ನಾಲ್ಕು ಸಾವಿರ ಹಿಂದೂಗಳ ಹತ್ಯೆಗೆ ಪ್ರತೀಕಾರವಾಗಿ ನೆರೆಯ ಬಿಹಾರದಲ್ಲಿ ಹಿಂದೂಗಳು ಎಂಟು ಸಾವಿರಕ್ಕೂ ಅಧಿಕ ಮುಸ್ಲಿಮರನ್ನು ಹತ್ಯೆಗೈದರು.  ಆಗ ಬಿಹಾರದಲ್ಲಿ ಇದ್ದದ್ದು ಕಾಂಗ್ರೆಸ್ ಸರಕಾರ ಮತ್ತು ಉದ್ರಿಕ್ತ ಹಿಂದೂಗಳನ್ನು ತಡೆಯಲು ಅದರಿಂದಾಗಲಿಲ್ಲ ಎನ್ನುವ ಐತಿಹಾಸಿಕ ಸತ್ಯವನ್ನು ಗಮನಿಸಿ.

ಕಲ್ಕತ್ತಾದಲ್ಲಿ ನಡೆದ ಹಿಂದೂಗಳ ಹತ್ಯೆಯನ್ನೂ, ಅದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದಲ್ಲಿ ನಡೆದ ಮುಸ್ಲಿಮರ ಹತ್ಯೆಯನ್ನೂ ಗೋಧ್ರಾ ಹತ್ಯಾಕಾಂಡ ಮತ್ತು ತದನಂತರದ ಗುಜರಾತ್ ಹಿಂಸಾಚಾರಕ್ಕೆ ಹೋಲಿಸಿ.  ಎರಡರ ನಡುವಿನ ಸಾಮ್ಯತೆಯನ್ನೂ, ಕಾರ್ಯಾಕಾರಣ ಸಂಬಂಧಗಳನ್ನು ಗುರುತಿಸಿ.  ಆಧುನಿಕ ಭಾರತದ ಬಗ್ಗೆ ನನ್ನದೊಂದು ಖಚಿತ ಅಭಿಪ್ರಾಯವನ್ನು ಸಂದರ್ಭದಲ್ಲಿ ಅನಂತಮೂರ್ತಿ ಹಾಗೂ ಗಿರೀಶ ಕಾರ್ನಾಡರಿಗೆ ನಾನು ಹೇಳಲೇಬೇಕು.  ಅದೆಂದರೆ- “೧೯೪೭ನ್ನು 'ಸ್ವಾತಂತ್ರದ ವರ್ಷ' ಎನ್ನುವುದಕ್ಕಿಂತಲೂ 'ದೇಶವಿಭಜನೆಯ ವರ್ಷ' ಎಂದು ಕರೆದು ಅದರಾಚೆಯ ಕಾಲವನ್ನು 'ವಿಭಜನಾಪೂರ್ವ ಕಾಲ', ಅದರೀಚೆಯ ಕಾಲವನ್ನು 'ವಿಭಜನೋತ್ತರ ಕಾಲ' ಎಂದು ಪರಿಗಣಿಸಿದರೆ ದಕ್ಷಿಣ ಏಶಿಯಾವನ್ನು ದಿನಗಳಲ್ಲಿ ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ.  ಉತ್ತರಗಳಲ್ಲಿ ಅತ್ಯಂತ ಪ್ರಮುಖವಾದುವು 'ಕೋಮುವಾದಿಗಳು ಯಾರು?', ಮತ್ತು 'ತಮ್ಮ ಕೋಮುವಾದದಿಂದ ದೇಶವನ್ನು ಛಿದ್ರಗೊಳಿಸಿದವರು ಯಾರು?' ಎಂಬ ಪ್ರಶ್ನೆಗಳಿಗೆ ದೊರೆಯುವ ಉತ್ತರಗಳು.

ಕಲ್ಕತ್ತಾ ಹತ್ಯೆಗಳಿಗೆ ಪ್ರತಿಕ್ರಿಯೆಯಾಗಿ ಬಿಹಾದರಲ್ಲಿ ನಡೆದ ಹತ್ಯೆಗಳ ಬಗ್ಗೆ ಅಲ್ಲಿನ ಕಾಂಗ್ರೆಸ್ ಸರಕಾರ ಅನುಸರಿಸಿದ ನೀತಿಗಳನ್ನು ಗುಜರಾತ್ ಘಟನೆಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಸರಕಾರ ತಳೆದ ನಿಲುವುಗಳೊಂದಿಗೆ ಹೋಲಿಸೋಣ.  ಗೋಧ್ರಾ ರೈಲು ಹತ್ಯಾಕಾಂಡಕ್ಕೆ ಪ್ರತಿಯಾಗಿ ಗುಜರಾತ್ ಹೊತ್ತಿ ಉರಿಯತೊಡಗಿದಾಗ ಅದರ ಶಮನಕ್ಕೆ ಅಗತ್ಯವಾದ ಕ್ರಮಗಳನ್ನು ಮೋದಿ ಸರಕಾರ ತಕ್ಷಣವೇ ಕೈಗೊಂಡ ಬಗ್ಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ಆಯೋಗ (ಎಸ್‌‍‍ಐಟಿ) ಸ್ಪಷ್ಟವಾಗಿ ಉಲ್ಲೇಖಿಸಿದೆ.  ಅಷ್ಟೇ ಅಲ್ಲ, ಮೋದಿ ಮತ್ತವರ ಸರಕಾರದ ಮೇಲೆ ಕಾಂಗ್ರೆಸ್, ಸೆಕ್ಯೂಲರ್ ಮಾಧ್ಯಮಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮಾಡಿದ ಆರೋಪಗಳಲ್ಲಿ ಯಾವ ಹುರುಳೂ ಇಲ್ಲ ಎನ್ನುವುದನ್ನೂ ಎಸ್‌‍‍ಐಟಿ ಘಂಟಾಘೋಷವಾಗಿ ಸಾರಿದೆ.  ಸುಳ್ಳು ಆರೋಪಗಳಲ್ಲಿ ಪ್ರಮುಖವಾದುವು ಗಲಭೆಗಳನ್ನು ತಡೆಯಲು ಮೋದಿ ಸರಕಾರ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ ಮತ್ತು ಗೋಧ್ರಾ ರೈಲು ಹತ್ಯಾಕಾಂಡದಲ್ಲಿ ಸುಟ್ಟುಹೋದ ಹಿಂದೂಗಳ ಶವಗಳನ್ನು ಅಹಮದಾಬಾದ್‌‍‍ಗೆ ಕೊಂಡೊಯ್ದು ಹಿಂದೂಗಳನ್ನು ಉದ್ರೇಕಿಸಲಾಯಿತು ಎನ್ನುವುವು.  ಅದೇ ಎಸ್‌‍‍ಐಟಿ ಮತ್ತೊಂದು ಮುಚ್ಚಿಟ್ಟ ಸತ್ಯವನ್ನೂ ಬಯಲಿಗೆಳೆದಿದೆ.  ತನ್ನ ಸುರಕ್ಷಾ ಪಡೆಗಳಿಂದ ಗಲಭೆಯ ಹತೋಟಿ ಸಾಧ್ಯವಿಲ್ಲ ಎಂದು ಅರಿವಾದೊಡನೇ ಮೋದಿ ಸರಕಾರ ಸಹಾಯಕ್ಕಾಗಿ ನೆರೆಯ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಾಸ್ಥಾನ್ ಸರಕಾರಗಳಿಗೆ ಅಧಿಕೃತ ವಿನಂತಿ ಮಾಡಿಕೊಂಡಿತು.  ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳಿದ್ದವು ಎನ್ನುವುದನ್ನು ನೆನಪಿಡಿ.  ಮಹಾರಾಷ್ಟ್ರ ಅಲ್ಪಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಗಳ ಪೂರೈಕೆ ಮಾಡಿದರೆ ಮಧ್ಯಪ್ರದೇಶ ಮತ್ತು ರಾಜಾಸ್ಥಾನ ಯಾವುದೇ ಸಹಕಾರ ನೀಡಲು ನಿರಾಕರಿಸಿದವು!  ೧೯೪೬ರಲ್ಲಿ ಬಿಹಾರದಲ್ಲಿ ಮುಸ್ಲಿಮರ ಹತ್ಯೆಯನ್ನು ತಡೆಯಲಾಗದ ಕಾಂಗ್ರೆಸ್ ೨೦೦೨ರಲ್ಲಿ ಗುಜರಾತಿನಲ್ಲಿ ಮುಸ್ಲಿಮರ ಹತ್ಯೆಯನ್ನು ತಡೆಯಲು ಸಹಕರಿಸಲು ಹಿಂದೆಗೆಯಿತು!  ಇದನ್ನು ಪಕ್ಷದ ನಾಯಕಿ ಸೋನಿಯಾ ಗಾಂಧಿ ಮರೆತಿರುವುದೇಕೆ?  ಅದಕ್ಕೆ ಕಾರಣ ಇಷ್ಟೇ: ಗುಜರಾತಿನಲ್ಲಿ ಕೆಲವು ಸಾವಿರ ಮುಸ್ಲಿಮರ ಜೀವಗಳನ್ನು ಬಲಿಕೊಡುವುದರಿಂದ ದೇಶದಾದ್ಯಂತ ಕೋಟಿಕೋಟಿ ಸಂಖ್ಯೆಯಲ್ಲಿ ಗಳಿಸಬಹುದಾದ ಮುಸ್ಲಿಂ ಮತಗಳ ಲೆಕ್ಕಾಚಾರ ಅವರ ಮನಸ್ಸಿನಲ್ಲಿತ್ತು!  ಲೆಕ್ಕಾಚಾರದ ಪರಿಣಾಮವೇ ಅವರು ಮೋದಿಯವರನ್ನುಸಾವಿನ ವ್ಯಾಪಾರಿ” ಎಂದು ಬಣ್ಣಿಸುತ್ತಾ, ಮೂಲಕ ಮುಸ್ಲಿಮರನ್ನು ಉದ್ರೇಕಿಸುತ್ತಾ ಸಾಗಿದ್ದು.  ಅವರ ಲೆಕ್ಕಾಚಾರಕ್ಕೆ ಇಂದು ಸಿಗುವ ಕರಾಳ ಉದಾಹರಣೆಯೆಂದರೆ ಇದೇ ಏಪ್ರಿಲ್ ಒಂದರಂದು ಅವರು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಂರನ್ನು ಭೇಟಿಯಾದದ್ದು ಮತ್ತು ಮುಸ್ಲಿಂ ಮತಗಳಿಗಾಗಿ ಯಾಚಿಸಿದ್ದು.  ಅವರ ಬೇಡಿಕೆಗೆ ಸಮ್ಮತಿಸಿದ ಶಾಹಿ ಇಮಾಂ ಚುನಾವಣೆಗಳಲ್ಲಿ ಕಾಂಗ್ರೆಸ್‌‍ಗೆ ಮತ ನೀಡುವಂತೆ ದೇಶದ ಮುಸ್ಲಿಮರಿಗೆ ಕರೆ ನೀಡಿದರು.

ಇಷ್ಟೆಲ್ಲಾ ಐತಿಹಾಸಿಕ ಹಾಗೂ ವರ್ತಮಾನದ ಸತ್ಯಗಳ ಹಿನ್ನೆಲೆಯಲ್ಲಿ, ಧರ್ಮದ ಆಧಾರದಲ್ಲಿ ಸಮಾಜವನ್ನು, ದೇಶವನ್ನು ಒಡೆಯುತ್ತಿರುವವರು ಯಾರು, ಕೋಮುವಾದಿಗಳು ಯಾರು ಎಂದು ಅನಂತಮೂರ್ತಿ ಮತ್ತು ಗಿರೀಶ ಕಾರ್ನಾಡರಂಥ ಬುದ್ಧಿಜೀವಿಗಳಿಗೆ ಇನ್ನೂ ಗೊತ್ತಾಗಿಲ್ಲವೆಂದರೆ ಅವರ ಬುದ್ಧಿಯಲ್ಲೇ ಏನೋ ಡೊಂಕಿದೆ.  ಅದಿಲ್ಲವಾದರೆ ಏನೋ ಲೆಕ್ಕಾಚಾರವಿದೆ. ನಾಡಿನ ಹಿತಾಸಕ್ತಿಗಳ  ಬಗ್ಗೆ ಮಾತಾಡುತ್ತಿರುವ ಬುದ್ಧಿಜೀವಿಗಳ ವಿಶ್ವಾಸಾರ್ಹತೆ ಸಹಾ ಸಂದರ್ಭದಲ್ಲಿ ಚರ್ಚಾಯೋಗ್ಯ.

ನಾಡಿನ ಹಿತಕ್ಕಾಗಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಅಗತ್ಯ ಎಂದು ಗಿರೀಶ ಕಾರ್ನಾಡ ಹೇಳುತ್ತಾರೆ.  ನಂದನ್ ನೀಲೇಕಣಿಯವರ ಪರವಾಗಿ ಮಾತಾಡುತ್ತಾ ಅವರು ನಾರಾಯಣಮೂರ್ತಿ, ಕಿರಣ್ ಮುಜುಂದಾರ್‍‌ರಂಥವರು ರಾಜಕೀಯಕ್ಕಿಳಿಯಬೇಕೆಂದು ಕರೆ ನೀಡಿದ್ದಾರೆ.  ಸಂದರ್ಭದಲ್ಲಿ ನೆನಪಾಗುವುದು ಬೆಂಗಳೂರನ್ನು ಕರ್ನಾಟಕದಿಂದ ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದು ಸೂಕ್ತವೆಂಬ ಸಲಹೆಯನ್ನು ೨೦೦೬ರ ನವೆಂಬರ್ನಲ್ಲಿ ನಾರಾಯಣಮೂರ್ತಿ ನೀಡಿದ್ದು.  ತಮ್ಮ ಸಂಸ್ಥೆಯ ಹಿತಕ್ಕಾಗಿ ರಾಜ್ಯದ ಹಿತವನ್ನು ಬಲಿಗೊಡಲು ಮುಂದಾಗುವ ನಾರಾಯಣಮೂರ್ತಿಯಂಥವರು ರಾಜಕೀಯಕ್ಕಿಳಿಯಬೇಕೆಂದು ಕಾರ್ನಾಡ್ ಬಯಸುತ್ತಾರೆ.  ಈಗ ನಾಡಿನ ಹಿತದ ಬಗ್ಗೆ ಕಾರ್ನಾಡರ ನಿಷ್ಟೆಯ ಒಂದು ಉದಾಹರಣೆ ನೋಡೋಣ.  ಕಾವೇರಿ ಜಲ ಹಂಚಿಕೆಯ ಬಗ್ಗೆ ರಾಜ್ಯದ ಹಿತಕ್ಕೆ ವಿರುದ್ಧವಾದ ತೀರ್ಪನ್ನು ಕಾವೇರಿ ಟ್ರಿಬ್ಯೂನಲ್ ೨೦೦೭ರ ಫೆಬ್ರವರಿಯಲ್ಲಿ ನೀಡಿದಾಗ, ಅದನ್ನು ಇಡೀ ರಾಜ್ಯವೇ ವಿರೋಧಿಸುತ್ತಿದ್ದಾಗ, ರಾಜ್ಯದ ಹಿತಾಸಕ್ತಿಗಳ ಬಗ್ಗೆ ಅಸಂವೇದನಾಶೀಲವಾದ ಮಾತುಗಳನ್ನು ಕಾರ್ನಾಡರು ಹೇಳಿದ್ದರು.  ಇಂಥಾ ಕಾರ್ನಾಡರು ನಾರಾಯಣಮೂರ್ತಿವರನ್ನಲ್ಲದೇ ಮತ್ಯಾರನ್ನು ಬೆಂಬಲಿಸುತ್ತಾರೆ?

ಅನಂತಮೂರ್ತಿಯವರ ರಾಜಕೀಯ ಬಯಕೆ ಬವಣೆಗಳ ಬಗ್ಗೆ, ವಿವಿಧ ವೈಚಾರಿಕ ಬಣ್ಣಗಳ ರಾಜಕಾರಣಿಗಳ ಜತೆ ಅವರ ಒಡನಾಟಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.  ಅದರ ಪುನರಾವರ್ತನೆ ಇಲ್ಲಿ ಅನಗತ್ಯ.  ನಮ್ಮ ಇಲ್ಲಿನ ಚರ್ಚೆಗೆ ಅನುಕೂಲವಾಗಲು ಒಂದೇಒಂದು ಉದಾಹರಣೆಯನ್ನು ನೀಡಬಯಸುತ್ತೇನೆ.  ಕೆಲವೇ ವರ್ಷಗಳ ಹಿಂದೆ ರಾಜ್ಯಸಭಾ ಸದಸ್ಯತ್ವದ ಕನಸು ಕಂಡ ಅವರು ಬೆಂಬಲಕ್ಕಾಗಿ ಹುಡುಕಾಡುತ್ತಾ ದೇವೇಗೌಡರ ಬಾಗಿಲನ್ನೂ ಬಡಿದಿದ್ದರು.  ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದಾಗಿನಿಂದ ತಮಗೆ ಸಿಗುತ್ತಿರುವ ಪ್ರಾಮುಖ್ಯತೆ ಕಂಡು ತಮ್ಮ ಹಳೆಯ ಕನಸು ಈಗಲಾದರೂ ನನಸಾಗುವ ಕಾಲ ಹತ್ತಿರ ಬಂದಿದೆಯೆಂದು ಅವರು ಎಣಿಸಿರುವ ಸಾಧ್ಯತೆ ಇದೆ.  ತಮ್ಮನ್ನು ತಾವು ಕಾಂಗ್ರೆಸ್ಸಿಗರು ಎಂದವರು ಪರಿಗಣಿಸಿಬಿಟ್ಟಿದ್ದಾರೆ.  ಕಾಂಗ್ರೆಸ್ ಪರವಾಗಿ ಮತ ಯಾಚಿಸುವ ಮೂಲಕ ತಮ್ಮನ್ನು ತಮ್ಮೊಳಗೊಬ್ಬ ಎಂದು ಪರಿಗಣಿಸಬೇಕೆಂದು ಕಾಂಗ್ರೆಸ್ಸಿಗರನ್ನು ಕೇಳುತ್ತಿದ್ದಾರೆ.

ಕೊನೆಯ ಮಾತು: ಮುನಿಗಳೆ ಆಗಲಿ, ಮೌಲ್ವಿಗಳೇ ಆಗಲಿ, ಸಂತರೆ ಆಗಲಿ, ಸಾಹಿತಿಗಳೇ ಆಗಲಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದರೆ ಅದಕ್ಕೆ ಅಗತ್ಯವಾದ ಅರ್ಹತೆಯನ್ನು ಮೊದಲು ಗಳಿಸಿಕೊಂಡಿರಬೇಕು.  ಅರ್ಹತೆಗಳು ಬರುವುದು ಒಳ್ಳೆಯ ಸಂಸ್ಕಾರದಿಂದ, ಬದುಕಿನಲ್ಲಿ ನಂಬಿ ಆಚರಿಸಿದ ಮೌಲ್ಯಗಳಿಂದ ಮಾತ್ರ.  ಗಳಿಸಿದ ಪ್ರಶಸ್ತಿಗಳು ಮತ್ತು ಸ್ಥಾನಮಾನಗಳಿಂದಲ್ಲ.  (ಆಲ್ಬಂಗಳಿಂದಲೂ ಅಲ್ಲ!)  ಮೇಲೇರಲು ನನಗೆ ಯಾರೂ ಸಹಾಯ ಮಾಡಿಲ್ಲ, ಆದ್ದರಿಂದ ನಾನೂ ಯಾರಿಗೂ ಸಹಾಯ ಮಾಡುವುದಿಲ್ಲ” ಎಂದು ಹೇಳುವ, ಅಗ್ನಿಅಕಸ್ಮಿಕದಲ್ಲಿ ಮೈಯನ್ನೆಲ್ಲಾ ಸುಟ್ಟುಕೊಂಡು ನರಳಿದ ಹೆಣ್ಣುಜೀವವೊಂದನ್ನು (ಆಕೆ ನಾಡಿನ ಹೆಮ್ಮೆಯ ಕವಯಿತ್ರಿ ಎನ್ನುವುದು ಇಲ್ಲಿ ಅಮುಖ್ಯ) “ನಿನಗೆ 'ಅಲ್ಲೂ' ಸುಟ್ಟಿದೆಯಾ?” ಎಂದು ಪ್ರಶ್ನಿಸುವಂಥವರು ಸಮಾಜಕ್ಕಿರಲಿ ತಮ್ಮ ಸ್ವಂತ ಮಕ್ಕಳಿಗೂ ಮಾರ್ಗದರ್ಶನ ನೀಡಲು ಅರ್ಹರಲ್ಲ.
, ೧೫ ಏಪ್ರಿಲ್ ೨೦೧೪