ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, July 1, 2016

ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ



ಪ್ರಕರಣ : ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ.  ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ!  ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.. ೬೨೨ರಲ್ಲಿ ಓಡಿಹೋದರು.  ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.  ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ.  ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.”  ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.

ಪ್ರಕರಣ : ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.  ವಿವೇಕಾನಂದರ ದೈಹಿಕ ಸಮಸ್ಯೆಗಳು, ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ.  ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.  ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.  ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.  ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.  ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ?  ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!

                ಎರಡೂ ಪ್ರಕರಣಗಳ ವಿಶ್ಲೇಷಣೆ ನಮ್ಮ ಮಾಧ್ಯಮಗಳ ಪಕ್ಷಪಾತಿ ಹಾಗೂ ಆಷಾಡಭೂತಿ ನಡವಳಿಕೆಗೊಂದು ಅತ್ಯುತ್ತಮ ಉದಾಹರಣೆಯಾಗಬಲ್ಲುದು.  ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಪ್ಯಾರನೆಂಬ ಅವಿದ್ಯಾವಂತ ಮುಸ್ಲಿಂ ಹುಡುಗ ತಾನು ಓತಿಕ್ಯಾತವನ್ನು ಅಟ್ಟಾಡಿಸಿಕೊಂಡು ಹೊಡೆಯುವುದಕ್ಕೆ ಕೊಡುವ ವಿವರಣೆಯನ್ನು ಪೂರ್ಣಚಂದ್ರ ತೇಜಸ್ವಿ ತಮ್ಮಪರಿಸರದ ಕಥೆ” ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.  ಪ್ಯಾರ ಹೇಳುವುದು ಹೀಗೆ: “ಪ್ರವಾದಿಯವರು ಮದೀನಾಗೆ ಓಡಿಹೋಗುವಾಗ ಗುಹೆಯೊಂದರಲ್ಲಿ ಅಡಗಿಕೊಂಡರಂತೆ.  ಶತ್ರುಗಳು ಅವರನ್ನು ಹುಡುಕುತ್ತಾ ಬಂದಾಗ ಅಲ್ಲಿದ್ದ ಓತಿಕ್ಯಾತವೊಂದು ತಲೆಯಾಡಿಸಿ ಪ್ರವಾದಿಯವರು ಗುಹೆಯೊಳಗಿರುವ ಸೂಚನೆ ಕೊಟ್ಟಿತಂತೆ.  ಆದರೆ ಜೇಡವೊಂದು ತಕ್ಷಣವೇ ಗುಹೆಯ ಬಾಯಿಯಲ್ಲಿ ಬಲೆಯೊಂದನ್ನು ನೇಯ್ದುಬಿಟ್ಟಿತಂತೆ.  ಆಗ ಗುಹೆಯೊಳಗೆ ಯಾರೂ ಇರುವ ಸಾಧ್ಯತೆಯೇ ಇಲ್ಲ ಎಂದುಕೊಂಡು ಶತ್ರುಗಳು ಹೊರಟುಹೋದರಂತೆ.”   ಕಾರಣಕ್ಕಾಗಿ ತನ್ನ ಜನರಿಗೆ ಜೇಡನ ಬಗ್ಗೆ ಪ್ರೀತಿ, ಓತಿಕ್ಯಾತದ ಬಗ್ಗೆ ದ್ವೇಷ ಎಂದು ಪ್ಯಾರನ ವಿವರಣೆ.  ಇದನ್ನಿಲ್ಲಿ ಯಾಕೆ ಉದಾಹರಿಸುತ್ತಿದ್ದೇನೆಂದರೆ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಗೆ ಓಡಿಹೋದದ್ದು ವಿದ್ಯಾವಂತ ಮುಸ್ಲಿಮರಿಗಷ್ಟೇ ಅಲ್ಲ, ನಿರಕ್ಷರಕುಕ್ಷಿ ಹಳ್ಳಿಗರಿಗೂ ಗೊತ್ತು.  ಇಸ್ಲಾಮಿನ ಇತಿಹಾಸದಲ್ಲಿ ಅಧಿಕೃತವಾಗಿಯೇ ದಾಖಲಾಗಿರುವ ಸತ್ಯಘಟನೆ ಇದು.  ಯಾವ ಘಟನೆಯನ್ನು ವಿಶ್ವಾದ್ಯಂತ ಮುಸ್ಲಿಮರೆಲ್ಲರೂ ತಮ್ಮ ಕಾಲಗಣನೆಯಾದ 'ಹಿಜ್ರಾ' ಶಕೆಯ ಆರಂಭವೆಂದು ಪರಿಗಣಿಸುತ್ತಾರೋ ಘಟನೆಯ ಉಲ್ಲೇಖದಿಂದ ಅವರಲ್ಲಿ ಯಾರೊಬ್ಬರ ಭಾವನೆಗಳಿಗೂ ಧಕ್ಕೆಯಾಗುವ ಸಾಧ್ಯತೆಯೇ ಇರಲಿಲ್ಲ.  ಆದರೆ ಪತ್ರಿಕೆ ತಾನು ಮಾಡದ ತಪ್ಪಿಗೆ ತಾನಾಗಿಯೇ ಕ್ಷಮಾಪಣೆ ಕೇಳಿಕೊಂಡಿತು.  ಇದಕ್ಕೆ ವಿರುದ್ಧವಾಗಿ ಎರಡನೆಯ ಪ್ರಕರಣದಲ್ಲಿ ವಿವೇಕಾನಂದರ ಬಗ್ಗೆ ಬಳಕೆಯಾಗಿದ್ದ ಭಾಷೆಯಿಂದ ಹಲವರ ಭಾವನೆಗಳಿಗೆ ಧಕ್ಕೆಯಾದರೂ, ಅದು ಸಾರ್ವಜನಿಕವಾಗಿ ವ್ಯಕ್ತವಾದರೂ ಪತ್ರಿಕೆ ಕ್ಷಮೆ ಯಾಚಿಸಲಿಲ್ಲ.  ಇದರರ್ಥ ಮುಸ್ಲಿಮರಿಗೆ ಸಂಬಂಧಿಸಿದಂತೆ ಪತ್ರಿಕೆ ಯಾವ ತಪ್ಪನ್ನು ಮಾಡದಿದ್ದರೂ, ಮಾಡಿದ್ದೇನೆಂದು ತಾನೇ ಕಲ್ಪಿಸಿಕೊಂಡು ಎದೆ ಬಡಿದುಕೊಂಡಿತು.  ಆದರೆ ಹಿಂದೂಗಳ ಭಾವನೆಗೆ ತಾನು ನಿಜವಾಗಿಯೂ ಧಕ್ಕೆಯೆಸಗಿದಾಗ, ಅದು ತನ್ನ ಅರಿವಿಗೆ ಬಂದಾಗಲೂ ಕ್ಷಮೆ ಯಾಚಿಸುವ ಮನಸ್ಸು ಪತ್ರಿಕೆಗೆ ಬರಲೆ ಇಲ್ಲ!   ಇದು ಹಿಂದೂ ಹಾಗೂ ಮುಸ್ಲಿಮರಿಗೆ ಸಂಬಂಧಿಸಿದಂತೆ ನಮ್ಮ ಮಾಧ್ಯಮಗಳು ಪ್ರದರ್ಶಿಸುವ ಇಬ್ಬಂದಿ ನಡೆ!

                ವಿರೋಧಾಭಾಸದ ದುರುದ್ದೇಶಪೂರಿತ ನಡೆಯ ಮೂಲವನ್ನು ಜವಾಹರಲಾಲ್ ನೆಹರೂ ಅನುಸರಿಸಿದ ಎರಡು ನೀತಿಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡ ದುರಂತದಲ್ಲಿ ಕಾಣಬಹುದು.  ಆಸಕ್ತಿಕರ ವಿಷಯವೆಂದರೆ ನೆಹರೂರ ಆವೆರಡು ನೀತಿಗಳಲ್ಲೊಂದು ರಾಜಕೀಯ ಸ್ವಾರ್ಥದ ಉದ್ದೇಶವನ್ನು ಹೊಂದಿದ್ದರೆ ಮತ್ತೊಂದು ನೊಂದವರಿಗೆ ಸಾಂತ್ವನ ನೀಡುವ ಉದಾತ್ತ ಉದ್ದೇಶವನ್ನು ಹೊಂದಿತ್ತು.  ಮೊದಲನೆಯದ್ದು ಆರಂಭವಾದದ್ದು ಸ್ವಾತಂತ್ರ್ಯಪೂರ್ವ ದಿನಗಳಲ್ಲಿ.  ಮುಸ್ಲಿಂ ಲೀಗ್ ಬ್ರಿಟಿಷರ ಜತೆಗೂಡಿ ದೇಶ ಒಡೆಯುವ ಹಾದಿಗಿಳಿದಾಗ ಮೊದಮೊದಲು ವಿರೋಧಿಸಿದ ಕಾಂಗ್ರೆಸ್ ಅಂತಿಮವಾಗಿ ದೇಶವಿಭಜನೆಯ ಪರವಾಗಿ ಬದಲಾಯಿತು.  ಇದನ್ನು ಮಾಡಿದ್ದು ನೆಹರೂ,  ಮಹಾತ್ಮಾ ಗಾಂಧಿಯವರ ವಿರೋಧವನ್ನೂ ಲೆಕ್ಕಿಸದೇ.  ಆಗ ದೇಶವಿಭಜನೆಯನ್ನು ಉಗ್ರವಾಗಿ ವಿರೋಧಿಸಿದ ಆರ್ಎಸ್ಎಸ್ ಸಹಜವಾಗಿಯೇ ಭಾರತೀಯ ಹಿಂದೂಗಳಿಗೆ, ದೇಶವಿಭಜನೆಯ ಪರವಾಗಿಲ್ಲದ ಹಿಂದೂಯೇತರಿಗೆ ಪ್ರಿಯವಾಯಿತು.  ಇದು ಕಾಂಗ್ರೆಸ್ ಜನಪ್ರಿಯತೆಗೆ, ಅಂತಿಮವಾಗಿ ತನ್ನ ರಾಜಕೀಯ ಅಧಿಕಾರಕ್ಕೆ ಕುತ್ತಾಗಬಹುದೆಂದು ಹೆದರಿದ ನೆಹರೂ ಆರ್ಎಸ್ಎಸ್ ಅನ್ನು ರಾಜಕೀಯ ವಿರೋಧಿಯಂತೆ ಪರಿಗಣಿಸಿದರು ಮತ್ತು ಸಂಘದ ಜನಪ್ರಿಯತೆಯನ್ನು ಕುಗ್ಗಿಸಲು ಮಾರ್ಗ ಹುಡುಕಿದರು.  ಆಗ ಘಟಿಸಿದ ಮಹಾತ್ಮರ ಹತ್ಯೆ ಆರ್ಎಸ್ಎಸ್ ಅನ್ನು ಹಣಿಯಲು ನೆಹರೂಗೆ ಸುಲಭವಾಗಿ ಸಿಕ್ಕಿದ ಪ್ರಬಲ ಅಸ್ತ್ರವಾಯಿತು.  ಸುವರ್ಣಾವಕಾಶವನ್ನು ಬಳಸಿಕೊಂಡ ನೆಹರೂ ಸಂಘವನ್ನು ರಾಷ್ಟ್ರವಿರೋಧಿ ಎಂದು ಬಣ್ಣಿಸಿ ಕಾನೂನಿನ ಮೂಲಕ ಬಹಿಷ್ಕರಿಸಿದರು.  ಹೀಗೆ ರಾಷ್ಟ್ರದ ಏಕತೆಗೆ ದುಡಿದ ಆರ್ಎಸ್ಎಸ್ಗೆ ನೆಹರೂರ ರಾಜಕೀಯ ಸ್ವಾರ್ಥದ ಹುನ್ನಾರದಿಂದಾಗಿ ಕೇವಲ ಹಿಂದೂಗಳ ಸಂಘಟನೆ ಎಂಬ ಹಣೆಪಟ್ಟಿ ಬಂತು.

ಇನ್ನು ನೆಹರೂರ ಎರಡನೆಯ ಅಂದರೆ ಉದಾತ್ತ ನೀತಿ ಕಾಣಿಸಿಕೊಳ್ಳುವುದು ಸ್ವಾತಂತ್ರ್ಯದ ದಿನಗಳಲ್ಲಿ.  ನೆಹರೂ ಮುಸ್ಲಿಮರ ಪರ ನಿಂತದ್ದಕ್ಕೆ ಕಾರಣ ಅಲ್ಪಸಂಖ್ಯಾತರ ಓಲೈಕೆಯೇ ಸೆಕ್ಯೂಲರಿಸಂ ಎಂದವರು ಭಾವಿಸಿದ್ದಲ್ಲ.  ವಾಸ್ತವವಾಗಿ ಕಾಲಘಟ್ಟದಲ್ಲಿ ಮುಸ್ಲಿಮರ ಪರ ನಿಲ್ಲುವುದು ಒಂದು ಐತಿಹಾಸಿಕ ಅಗತ್ಯವಾಗಿತ್ತು.  ರಕ್ತರಂಜಿತ ದೇಶವಿಭಜನೆಗೆ ಮುಸ್ಲಿಂ ಲೀಗ್ ಕಾರಣವಾದದ್ದು, ಅದರಿಂದಾಗಿ ದೇಶದಲ್ಲಿ ಉದ್ಭವವಾದ ಮುಸ್ಲಿಂ-ವಿರೋಧಿ ಭಾವನೆಗಳು ಇಲ್ಲಿನ ಕೋಟ್ಯಂತರ ಅಮಾಯಕ ಮುಸ್ಲಿಮರ ಬದುಕನ್ನು ಅತಂತ್ರಗೊಳಿಸದಂತೆ ತಡೆಯುವುದು ದಿನಗಳಲ್ಲಿ ಅತ್ಯಗತ್ಯವಾಗಿತ್ತು.  ಹೀಗೆ ಮುಸ್ಲಿಂ-ಪರ ನೀತಿಗಳು ಕಾಲದ ಅಗತ್ಯಕ್ಕಷ್ಟೇ ನೆಹರೂರ ಸೆಕ್ಯೂಲರಿಸಂನ ಭಾಗವಾಗಿದ್ದವು.  ಆದರೆ ನೆಹರೂರ ಆರ್ಎಸ್ಎಸ್-ವಿರೋಧಿ ಮತ್ತು ಮುಸ್ಲಿಂ-ಪರ ನೀತಿಗಳನ್ನು ಒಟ್ಟುಗೂಡಿಸಿ ಅದನ್ನೇ ಪೂರ್ಣ ಹಾಗೂ ನಿಜವಾದ ಸೆಕ್ಯೂಲರಿಸಂ ಎಂದು ತಪ್ಪಾಗಿ ಅರ್ಥೈಸಿದ ಕಾಂಗ್ರೆಸ್ ನಾಯಕರು ಅದೇ ಹಾದಿಯಲ್ಲಿ ಮುಂದುವರೆದು ಮುಸ್ಲಿಂ ಓಲೈಕೆಯನ್ನೂ, ಹಿಂದೂ ಹಣಿಯುವಿಕೆಯನ್ನು ಸರಕಾರಿ ನೀತಿಯನ್ನಾಗಿಸಿಬಿಟ್ಟರು.  ಇದಕ್ಕೆ ತಾಳ ಹಾಕಿದ್ದು ಆಡಳಿತಶಾಹಿ ಮತ್ತು ಮಾಧ್ಯಮ.  ಇದರ ಹಿಂದಿದ್ದ ಕಾರಣಗಳು ಅಧಿಕಾರ ಮತ್ತು ಹಣದ ಲಾಲಸೆ.
ಕೇಂದ್ರದಲ್ಲಿ, ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ದಿನಗಳವು.  ಪತ್ರಿಕೆ ಉಳಿಯಬೇಕಾದರೆ, ಉಳಿದು ಬೆಳೆಯಬೇಕಾದರೆ ಸರ್ಕಾರದ ಅಂದರೆ ನೆಹರೂ ಮತ್ತವರ ಹಿಂಬಾಲಕರ ಕೃಪಾಕಟಾಕ್ಷ ಅತ್ಯಗತ್ಯವಾಗಿ ಬೇಕಾಗಿದ್ದ ವಾಸ್ತವವನ್ನು ಅರಿತಿದ್ದ ಪತ್ರಕರ್ತರು ಸಂದರ್ಭಕ್ಕನುಗುಣವಾಗಿ ತಮ್ಮ ನೀತಿನಿಲುವುಗಳನ್ನು ರೂಪಿಸಿಕೊಂಡರು.  ಆಡಳಿತಶಾಹಿ ಮಾಡಿದ್ದೂ ಇದನ್ನೇ.  ಆಗ ಅಡಳಿತಶಾಹಿ ಮತ್ತು ಮಾಧ್ಯಮದ ಮುಂಚೂಣಿಯಲ್ಲಿದ್ದವರು ಹಿಂದೂ ಉಚ್ಛವರ್ಗದವರೇ.  ಉಳಿವಿಗಾಗಿ ಆಳರಸರ ಮರ್ಜಿ ಹಿಡಿಯುವುದನ್ನು ಪರಂಪರಾಗತವಾಗಿ ರಕ್ತಗತವಾಗಿಸಿಕೊಂಡು ಬಂದಿದ್ದ ಹಾಗೂ ಭಾರತೀಯ ಸಂಸ್ಕೃತಿಯನ್ನು ಪುರಸ್ಕರಿಸದ ಪಾಶ್ಚಿಮಾತ್ಯ ಶಿಕ್ಷಣವನ್ನು ತಲೆಮಾರುಗಳಿಂದಲೂ ಪಡೆಯುತ್ತಾ ಬಂದಿದ್ದ, ಕಾರಣದಿಂದಲೇ ಭಾರತೀಯ ಮೌಲ್ಯಗಳು ಹಾಗೂ ಸಂಪ್ರದಾಯಗಳ ಬಗ್ಗೆ ಕೀಳರಿಮೆ ಮತ್ತು ತಿರಸ್ಕಾರ ಬೆಳೆಸಿಕೊಂಡಿದ್ದ ಇವರಿಗೆ ನೆಹರೂಗೆ ಪ್ರಿಯರಾಗಿ ನಡೆದುಕೊಳ್ಳುವುದನ್ನೂ, ಮೂಲಕ ಉಳಿದು ಬೆಳೆಯುವ ಕಲೆಯನ್ನೂ ಯಾರೂ ಕಲಿಸಿಕೊಡಬೇಕಾಗಿರಲಿಲ್ಲ.  ಮೀನು ನೀರಿನಲ್ಲಿ ಈಜುವುದನ್ನು ಕಲಿಯುವಷ್ಟೇ ಸುಲಭವಾಗಿ ಅದೆಲ್ಲವನ್ನೂ ಕಲಿತ ಇವರು ಆರ್ಎಸ್ಎಸ್-ವಿರೋಧಿ ನೀತಿಯನ್ನು ಬೆಳೆಸಿಕೊಂಡು ಮೊದಲಿಗೆ ಜನಸಂಘವನ್ನೂ, ನಂತರ ಬಿಜೆಪಿಯನ್ನು ಆರ್ಎಸ್ಎಸ್ ರಾಜಕೀಯ ಮುಖವೆಂದು ಪರಿಗಣಿಸಿದರು, ತಮ್ಮ ಆರ್ಎಸ್ಎಸ್-ವಿರೋಧಿ ನೀತಿಯನ್ನು ಬಿಜೆಪಿಗೂ ಅನ್ವಯಿಸಿದರು.  ದುರಂತೀಯ ನಡವಳಿಕೆಯ ಮೂಲಕ ಅವರೇನೋ ಉಳಿದರು, ಬೆಳೆದರು.  ಆದರೆ ತಮ್ಮೀ ಸ್ವಾರ್ಥಪರ ಲಾಲಸೆಗಳಿಂದಾಗಿ ರಾಷ್ಟ್ರದ ಭವಿಷ್ಯಕ್ಕೆ ಕೊಡಲಿಯೇಟು ಹಾಕುತ್ತಿದ್ದೇವೆನ್ನುವುದನ್ನು ಮುಂಗಾಣುವುದರಲ್ಲಿ ಹೀನಾಯವಾಗಿ ಸೋತರು.  ಇದು ಇಲ್ಲಿಗೇ ನಿಲ್ಲಲಿಲ್ಲ.  ನಂತರದ ದಿನಗಳಲ್ಲಿ ವಿದ್ಯಾವಂತರಾಗತೊಡಗಿದ ಮಧ್ಯಮ ಮತ್ತು ಕೆಳವರ್ಗದ ಹಿಂದೂಗಳಿಗೂ ಇವರೇ ಮಾರ್ಗದರ್ಶಕರಾದರು.  ನವಸಾಕ್ಷರರಿಗೆ ಹಿಂದೂಧರ್ಮವನ್ನು ತಿರಸ್ಕಾರದಿಂದ ನೋಡಲು ತಮ್ಮದೇ ಕಾರಣಗಳಿದ್ದವು.  ಎಲ್ಲಾ ಬೆಳವಣಿಗೆಗಳಿಂದ ದಕ್ಕಿದ ಲಾಭವನ್ನು ಮುಸ್ಲಿಂ ಸಮುದಾಯ ಸದ್ದಿಲ್ಲದೇ ಅನುಭವಿಸತೊಡಗಿತು.    ಮುಸ್ಲಿಂ ಭಾವನೆಗಳಿಗೆ ಅತಿಯಾದ ಸಂವೇದನೆ, ಹಿಂದೂ ಭಾವನೆಗಳಿಗೆ ಅತಿಯಾದ ನಿರ್ಲಕ್ಷ್ಯ ಮೊಳೆತು ಬೆಳೆದದ್ದು ಹೀಗೆ.

ನಂತರದ ದಿನಗಳಲ್ಲಿ ಇದಕ್ಕೆ ಪೂರಕವಾಗಿ ಮತ್ತೆರಡು ಬೆಳವಣಿಗೆಗಳು ಘಟಿಸಿದವು.  ಅವೆಂದರೆ ಭಾರತೀಯ ಮಾಧ್ಯಮಗಳ ಮೇಲಿನ ಸೀಮಿತವಾಗಿದ್ದ ವಿದೇಶೀ ಕ್ರಿಶ್ಚಿಯನ್ ಸಂಸ್ಥೆಗಳ ಹಿಡಿತ ಕಳೆದೆರಡು ದಶಕಗಳಲ್ಲಿ ಅಪಾಯಕಾರಿ ಎನ್ನುವಷ್ಟು ಮಟ್ಟಿಗೆ ವಿಸ್ತಾರಗೊಂಡಿತು.  ಹಾಗೆಯೇ ಎಡಪಂಥೀಯ ಸಂಘಟನೆಗಳೂ ತಮ್ಮ ಹಿಡಿತವನ್ನು ಬಲಗೊಳಿಸತೊಡಗಿದವು.  ಹೀಗೆ ಕ್ರಿಶ್ಚಿಯನ್ ಮತ್ತು ಎಡಪಂಥದ ಅನೈತಿಕ ಸಂಬಂಧದ ಸಂತಾನವೆಂದರೆ ಹಿಂದೂ ಹಣಿಯುವಿಕೆ ಎಲ್ಲ ಮಿತಿಗಳನ್ನೂ ದಾಟಿದ್ದು.  ಇದರ ಕೆಲವು ಸ್ಯಾಂಪಲ್ಗಳು-

.           ಗುಜರಾತ್ ಡಾಂಗ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಆದಿವಾಸಿಗಳನ್ನು ಮತಾಂತರಿಸಿದ್ದು ಸುದ್ದಿಯಾಗುವುದಿಲ್ಲ.  ಅದೇ ಆದಿವಾಸಿಗಳನ್ನು ಹಿಂದೂ ಸಂಘಟನೆಗಳು ಮರುಮತಾಂತರಿಸಿದ್ದು ಸುದ್ದಿಯಾಗುತ್ತದೆ.

.           ಒಡಿಶಾದಲ್ಲಿ ಆಸ್ಟ್ರೇಲಿಯನ್ ಮಿಷನರಿ ಗ್ರಹಾಂ ಸ್ಟೈನ್ ಮತ್ತವನ ಮಕ್ಕಳ ಸಜೀವ ದಹನ (ಇದು ಅಕ್ಷಮ್ಯ ಅಪರಾಧ) ಅಂತರರಾಷ್ಟ್ರೀಯ ಸುದ್ಧಿಯಾಗುತ್ತದೆ.  ಆದರೆ ಕರಾಳ ಕೃತ್ಯಕ್ಕೆ ಪ್ರೇರಣೆಯಾದ ಮತಾಂತರ ಕಾರ್ಯಯೋಜನೆಗಳು ಸುದ್ದಿಯಾಗುವುದಿಲ್ಲ.  ಅಷ್ಟೇ ಅಲ್ಲ, ಸ್ಟೈನ್ಸ್ ಹತ್ಯೆಯಲ್ಲಿ ಪ್ರಮುಖನೆಂದು ಹೇಳಲಾಗುವ ದಾರಾ ಸಿಂಗ್ನನ್ನು ಏಳು ವರ್ಷಗಳ ನಂತರ ಕ್ರಿಶ್ಚಿಯನ್ ಮಿಷನರಿಗಳು ಮತಾಂತರಿಸಿದ್ದು ಸುದ್ದಿಯಾಗುವುದೇ ಇಲ್ಲ.

.           ಸ್ಟೈನ್ಸ್ ದುರಂತ ಸಂಭವಿದ ಸಮಯದಲ್ಲೇ ಒಡಿಶಾದಲ್ಲಿ ಕ್ರಿಶ್ಚಿಯನ್ ಯುವತಿಯೊಬ್ಬರು ಅತ್ಯಾದಾರಕ್ಕೀಡಾದ ಪ್ರಕರರಣ ದೊಡ್ಡದಾಗಿ ವರದಿಯಾಯಿತು.  ಸ್ಟೈನ್ಸ್ ಹತ್ಯಾಕಾರಿಗಳೇ ಇದರಲ್ಲೂ ಭಾಗಿಯಾಗಿರಬಹುದೆಂದು ಮಾಧ್ಯಮಗಳು ಪೈಪೋಟಿಯಲ್ಲಿ ಊಹಾಪೋಹ ಹಬ್ಬಿಸತೊಡಗಿದವು.  ಆದರೆ ಅತ್ಯಾಚಾರಿ ಯುವತಿಯ ಸೋದರಮಾವನೇ, ಅವನೂ ಕ್ರಿಶ್ಚಿಯನ್ನನೇ ಎನ್ನುವುದು ಎರಡೇ ದಿನಗಳಲ್ಲಿ ಬಯಲಾಯಿತು.  ಸುದ್ದಿ ಒಳಪುಟದಲ್ಲೆಲ್ಲೋ ಮೂರು ಸಾಲಿನ ಸುದ್ದಿಯಾಯಿತಷ್ಟೇ.

.           ಕರ್ನಾಟಕ ಮತ್ತು ಗೋವಾದಲ್ಲಿ ಚರ್ಚ್ಗಳ ಮೇಲೆ ಧಾಳಿಗಳಾದವು.  ಅವುಗಳನ್ನು ಎಸಗಿದವರು ಹಿಂದೂ ಸಂಘಟನೆಗಳು ಎಂದು ಮಾಧ್ಯಮಗಳು ಹೇಳಿದವು.  ಆದರೆ ಅವುಗಳ ಹಿಂದೆ ಇದ್ದದ್ದು ಪಾಕ್ ಪರ ಮುಸ್ಲಿಂ ಉಗ್ರಗಾಮಿಗಳು ಎಂಬ ಸತ್ಯ ತನಿಖೆಯಿಂದ ಹೊರಬಂತು.  ಅದು ಸುದ್ದಿಯಾಗಲೇ ಇಲ್ಲ.

.           ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೇ ರಾಜಧಾನಿಯ ಹಲವಾರು ಚರ್ಚ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ, ಕಳ್ಳತನವಾಗುತ್ತದೆ.  ಹಿಂದೂ ಸಂಘಟನೆಗಳ ಮೇಲೆ ಅಪವಾದಗಳ ಸುರಿಮಳೆಯಾಗುತ್ತದೆ.  ತನಿಖೆಯ ನಂತರ ತಿಳಿಯುವುದೇನೆಂದರೆ- ಚರ್ಚ್ಗಳಲ್ಲಿನ ದುಷ್ಕೃತ್ಯಗಳ ಹಿಂದಿದ್ದದ್ದು ಒಳಗಿನ ಅತೃಪ್ತ ಆತ್ಮಗಳೇ.  ಅಷ್ಟೇ ಅಲ್ಲ, ಚರ್ಚ್ಗಳೇಕೆ, ಗುರುದ್ವಾರ, ಮಸೀದಿ, ಮಂದಿರಗಳಲ್ಲೂ ಬೆಂಕಿ ಕಾಣಿಸಿಕೊಂಡಿದೆ, ಕಳ್ಳತನಗಳಾಗಿವೆ.  ಅವು ಸುದ್ದಿಯಾಗಲೇ ಇಲ್ಲ.  ಚರ್ಚ್ ರಹಸ್ಯ ಬಯಲಾದದ್ದೂ ಸುದ್ಧಿಯಾಗುವುದಿಲ್ಲ.

ಮಾಧ್ಯಮಗಳ ಪಕ್ಷಪಾತಿ ಧೋರಣೆ ಸಂಪೂರ್ಣ ಬೆತ್ತಲೆಯಾಗಿ ಕುಣಿಯುವುದು ಗುಜರಾತ್ ಗಲಭೆಗಳಲ್ಲಿ.  ಫೆಬ್ರವರಿ ೨೭, ೨೦೦೨ರ ಬೆಳಿಗ್ಗೆ ಘಟಿಸಿದ ಗೋಧ್ರಾ ರೈಲು ದುರಂತಕ್ಕೆ ಕಾರಣರಾದವರು ಪ್ರದೇಶದ ಘಾಂಚಿ ಮುಸ್ಲಿಮರು.  ಅಯೋಧ್ಯಾದಿಂದ ಕರಸೇವಕರನ್ನು ಕರೆತರುತ್ತಿದ್ದ ಸಬರ್ಮತಿ ಎಕ್ಸ್ಪ್ರೆಸ್ಗೆ ಬೆಂಕಿ ಹಚ್ಚಲು ದುಶ್ಕರ್ಮಿಗಳು ಹಿಂದಿನ ಸಂಜೆಯೇ ೬೦೦ ಲೀಟರ್ ಪೆಟ್ರೋಲ್ನೊಂದಿಗೆ ತಯಾರಾಗಿದ್ದರು ಎಂದು ಜಸ್ಟಿಸ್ ನಾನಾವತಿ ಆಯೋಗ ಹೇಳಿದೆ.  ಇವರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರ ನೇರ ಸಂಪರ್ಕ ಹಾಗೂ ಬೆಂಬಲವಿತ್ತು ಎಂದೂ, ಅವರಲ್ಲಿ ಕೆಲವರು ಘಟನಾನಂತರ ಪಾಕಿಸ್ತಾನಕ್ಕೆ ಓಡಿಹೋಗಿ ತಲೆಮರೆಸಿಕೊಂಡರು ಎಂದೂ ಆಯೋಗ ಬಯಲು ಮಾಡಿದೆ.  ಆದರೆ ದುರಂತವನ್ನು ಅಕಸ್ಮಿಕ ಎಂದು ಮಾಧ್ಯಮಗಳು ಪ್ರಚಾರ ನಡೆಸಿದವು.  ಅಧಿಕ ಪ್ರಸಾರವುಳ್ಳ ಆಂಗ್ಲ ಪತ್ರಿಕೆಯೊಂದು ಗೋಧ್ರಾ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಕೇವಲ miscreants (ಕಿಡಿಗೇಡಿಗಳು) ಎಂದೂ, ನಂತರದ ಕೋಮುಗಲಭೆಯಲ್ಲಿ ತೊಡಗಿದ ಹಿಂದೂಗಳನ್ನು Hindu Fundamentalists  (ಹಿಂದೂ ಮೂಲಭೂತವಾದಿಗಳು) ಎಂದೂ ಕರೆದು ತನ್ನ ಬೇಜವಾಬ್ದಾರಿ ಪಕ್ಷಪಾತಿ ನಿಲುವನ್ನು ಮೆರೆಯಿಸಿತು!

ಗಲಭೆಗಳಲ್ಲಿ ಎರಡು ಧರ್ಮದವರೂ ತೊಡಗಿದ್ದರು ಹಾಗೂ ಮೃತರಾದವರಲ್ಲಿ ಮುಸ್ಲಿಮರಷ್ಟೇ ಅಲ್ಲ, ಹಿಂದೂಗಳೂ ಸಾಕಷ್ಟಿದ್ದರು.  ಆದರೆ ಮುಸ್ಲಿಮರು ಗಲಭೆಯಲ್ಲಿ ತೊಡಗಿದ್ದನ್ನೂ, ಹಿಂದೂಗಳು ಮೃತರಾದದ್ದನ್ನೂ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಲಿಲ್ಲ.

 ಅಕ್ಟೋಬರ್ 27, 2015

No comments:

Post a Comment