ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, June 30, 2016

ಜಾತಿವಾದಿ ಕೋಮುವಾದಿ ಅರೆಪಾಕಿಸ್ತಾನಿ ಸೆಕ್ಯೂಲರಿಸ್ಟರು



 ತನ್ನನ್ನು ತಾನು ಸೆಕ್ಯೂಲರಿಸ್ಟ್ ಎಂದು ಬಣ್ಣಿಸಿಕೊಳ್ಳುವ, ಮೂಲಕ ತಾನು ಸಮಾನತಾವಾದಿ, ಮಾನವತಾವಾದಿ, ಪ್ರಗತಿಪರ, ದೇಶದ ಅಂತಃಸಾಕ್ಷಿ ಎಂದು ಬೀಗುವ ಗುಂಪೊಂದು ಸ್ವಾತಂತ್ರೋತ್ತರ ಭಾರತದಲ್ಲಿ ಹುಟ್ಟಿಕೊಂಡಿದೆ.  ಗುಂಪಿನಲ್ಲಿ ಇಡಿಇಡೀ ರಾಜಕೀಯ ಪಕ್ಷಗಳು, ಸಾಹಿತಿಗಳು, ಲೇಖಕರು, ಬುದ್ಧಿಜೀವಿಗಳು, ಪತ್ರಕರ್ತರು ಹಾಗೂ ಇವರೆಲ್ಲರಿಂದಾಗಿ ಹಾದಿತಪ್ಪಿದ ಅಗಾಧ ಸಂಖ್ಯೆಯ ಸಾಮಾನ್ಯ ಜನರೂ ಇದ್ದಾರೆ.  ಇವರ ಚಟುವಟಿಕೆಗಳನ್ನು ಗಮನಿಸಿದರೆ ಗೋಚರವಾಗುವ ದಾರುಣ ಸತ್ಯವೆಂದರೆ ತಾವು ಗಟ್ಟಿಗಂಟಲಿನಲ್ಲಿ ಘೋಷಿಸುವ ಯಾವ ಮೌಲ್ಯವನ್ನೂ ಇವರು ಪಾಲಿಸುತ್ತಿಲ್ಲ!  ಅವೆಲ್ಲಾ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾದ ನಿಲುವು ನಡೆ ಇವರದು!  ತಾತ್ವಿಕವಾಗಿ ಸೆಕ್ಯೂಲರಿಸಂ ಬೋಧಿಸುವುದು ಧರ್ಮಗಳ ನಡುವೆ ತಾರತಮ್ಯ ಎಣಿಸದ ನೀತಿಯನ್ನು.  ಆದರೆ ನಮ್ಮ ಸೆಕ್ಯೂಲರಿಸ್ಟರು ಧಾರ್ಮಿಕ ತಾರತಮ್ಯವನ್ನು ಯಾವ ಎಗ್ಗಾಗಲೀ, ಸಿಗ್ಗಾಗಲೀ ಇಲ್ಲದೇ ಬಹಿರಂಗವಾಗಿಯೇ ಆಚರಿಸುವುದಷ್ಟೇ ಅಲ್ಲ, ವಿವಿಧ ಧರ್ಮಗಳ ಒಳಪಂಗಡಗಳ ನಡುವೆಯೂ ತಾರತಮ್ಯ ಎಸಗುತ್ತಾರೆ.  ಅರ್ಥದಲ್ಲಿ ಇವರು ಅಪ್ಪಟ ಜಾತಿವಾದಿಗಳು ಹಾಗೂ ಕೋಮುವಾದಿಗಳು.  ಇದರ ಜತೆಗೇ, ಇವರ ನೀತಿನಿಲುವುಗಳು ದೇಶವಿರೋಧಿಯಾಗಿ, ಶತ್ರುರಾಷ್ಟ್ರ ಪಾಕಿಸ್ತಾನದ ಪರವಾಗಿಯೂ ಇರುತ್ತವೆ.  ಕರಾಳ ವಾಸ್ತವದ ಅವಲೋಕನ ಇಂದಿನಜಗದಗಲ”ದ ವಸ್ತುವಿಷಯ.

ನವೆಂಬರ್ ಮತ್ತು ೧೦ ಭಾರತದ ಅತ್ಯಂತ ಋಣಾತ್ಮಕ ಸಮಾಜೋ-ರಾಜಕೀಯ ವಾಸ್ತವವೊಂದನ್ನು ಮತ್ತೊಮ್ಮೆ ಜಗತ್ತಿಗೆ ಮನಗಾಣಿಸಿದ ದಿನಗಳು.  ನವೆಂಬರ್ ೮ರಂದು ಹೊರಬಿದ್ದ ಉತ್ತರದ ಬಿಹಾರದ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಮತ್ತು ಎರಡು ದಿನಗಳ ನಂತರ ದಕ್ಷಿಣದ ಕರ್ನಾಟಕದಲ್ಲಿ ಕೆಂಪೇಗೌಡ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಜ್ಞಾನಪೀಠಿ ಗಿರೀಶ್ ಕಾರ್ನಾಡ್ ಆಡಿದ ಮಾತುಗಳ ನಂತರದ ಬೆಳವಣಿಗೆಗಳು ಸೆಕ್ಯೂಲರಿಸ್ಟರು ಅಪ್ಪಟ ಜಾತಿವಾದಿಗಳು ಎಂಬ ದಾರುಣ ಸತ್ಯವನ್ನು ತೆರೆದಿಟ್ಟವು.

ಸ್ವಾತಂತ್ರೋತ್ತರ ಭಾರತದಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ರಾಜಕೀಯ ಪಕ್ಷಗಳು ಸಮಾಜವನ್ನು ಜಾತಿಗಳ ಆಧಾರದ ಮೇಲೆ ತುಂಡರಿಸಿ ಮತಬ್ಯಾಂಕ್ಗಳನ್ನು ಸೃಷ್ಟಿಸಿಕೊಂಡದ್ದು ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಋಣಾತ್ಮಕ ಅಂಶ.  ಇದು ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ, ಒಂದೊಂದು ಜಾತಿಗೆ ಅಥವಾ ಕೆಲವು ಜಾತಿಗಳ ಸಮೂಹಕ್ಕೆ ಒಂದೊಂದು ರಾಜಕೀಯ ಪಕ್ಷ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.  ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾದಲ, ಜೆಡಿ(ಯು), ಜೆಡಿ(ಎಸ್), ಪಾಟಾಳಿ ಮಕ್ಕಳ್ ಕಚ್ಚಿ ಮುಂತಾದ ಅದೆಷ್ಟೋ ಪಕ್ಷಗಳು ಸ್ಥಾಪಕ ಮತ್ತು ಮುಂಚೂಣಿ ನಾಯಕರ ಜಾತಿಯ ಆಧಾರದ ಮೇಲೆ ನಿರ್ಮಾಣವಾದಂತಹವು.  ಇವುಗಳ ಪ್ರಧಾನ ಹಿಂಬಾಲಕರು ಮತ್ತು ಮತದಾರರು ಜಾತಿಯವರೇ.  ಕಾಂಗ್ರೆಸ್ ಮತ್ತು ಎಡಪಕ್ಷಗಳು ಎಲ್ಲ ಭಾರತೀಯರನ್ನು ಪ್ರತಿನಿಧಿಸುವಂತಿದ್ದರೂ ಕೆಲವೊಂದು ಪ್ರದೇಶಗಳಲ್ಲಿ ಅವೂ ಸಹ ಜಾತಿಗಳ ಆಧಾರದ ಮೇಲೆ ಚುನಾವಣಾ ಲೆಕ್ಕಾಚಾರ ನಡೆಸುವುದು ಸಾಮಾನ್ಯವೇ ಆಗಿದೆ.  ದುರಂತೀಯ  ತಮಾಷೆಯೆಂದರೆ ಪಕ್ಷಗಳು ತಮ್ಮನ್ನು ತಾವು ಸೆಕ್ಯೂಲರ್ ಎಂದು ಬಣ್ಣಿಸಿಕೊಳ್ಳುತ್ತವೆ!

ಋಣಾತ್ಮಕ ಪರಿಸ್ಥಿತಿಯಿಂದ ರಾಷ್ಟ್ರರಾಜಕೀಯ ಹೊರಬರುತ್ತಿದೆಯೆಂದು ಕಳೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಅನಿಸಿತ್ತು.  ಆಗ ಜಾತಿಯಾಧಾರಿತ ಪಕ್ಷಗಳನ್ನು ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದರು.  ಇದಕ್ಕೆ ಪ್ರತಿಯಾಗಿ, ಇದೇ ಸೆಕ್ಯೂಲರಿಸ್ಟರು ಹಿಂದೂ ಉಚ್ಛವರ್ಗಗಳ ಪಕ್ಷ ಎಂದು ಹೀಗಳೆಯುತ್ತಿದ್ದ ಬಿಜೆಪಿಗೆ ಎಲ್ಲ ಜಾತಿಗಳ ಅಷ್ಟೇಕೆ ಎಲ್ಲ ಧರ್ಮಗಳ ಮತಗಳು ದಕ್ಕಿದ್ದವು.  ಹೀಗಾಗಿ ಭಾರತದ ರಾಜಕಾರಣದಲ್ಲಿ ಮಹಾ ಸಮಾಜೋ-ರಾಜಕೀಯ ಸ್ಥಿತ್ಯಂತರವೊಂದು ಘಟಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಬುದ್ಧನಾಗುವ, ಜಾತಿಗಳು ಹಾಗೂ ಧರ್ಮಗಳು ನಗಣ್ಯವಾಗುವ ಸೂಚನೆ ಕಂಡುಬಂದಿತ್ತು.  ಆದರೆ, ಆಶಾಭಾವನೆಯನ್ನು ಮಣ್ಣುಗೂಡಿಸಿದ್ದು ಬಿಹಾರದ ಚುನಾವಣಾ ಫಲಿತಾಂಶಗಳು.  ಜಾತಿವಾದಿ ಆರ್‍‍ಜೆಡಿ ಮತ್ತು ಜೆಡಿಯು ಸಾಧಿಸಿದ ವಿಜಯ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರದಲ್ಲಿ ಜಾತಿವಾದಿಗಳು ಮತ್ತೆ ಯಶಸ್ವಿಯಾಗಿರುವ ಸೂಚನೆ ನೀಡಿವೆ.

ಇದಕ್ಕೆ ಪೂರಕವಾಗಿ ಜಾತಿವಾದಿ ರಾಜಕಾರಣಿಗಳ ಜತೆಗೆ ತಥಾಕಥಿತ ಪ್ರಗತಿಪರರ, ಬುದ್ಧಿಜೀವಿಗಳ ಚಿಂತನೆಯೂ ಸಹ ಜಾತಿಮುಕ್ತವಲ್ಲ ಎನ್ನುವುದಕ್ಕೆ ಎರಡು ದಿನಗಳ ನಂತರದ ಕರ್ನಾಟಕದ ಬೆಳವಣಿಗೆಗಳು ಜ್ವಲಂತ ಉದಾಹರಣೆಗಳಾದವು.  ಅಂದು ಕರ್ನಾಟಕ ಸರ್ಕಾರ ಹಮ್ಮಿಕೊಂಡ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌‍ನಲ್ಲಿ ನಡೆದ ಸಮಾರಂಭದಲ್ಲಿ ಗಿರೀಶ್ ಕಾರ್ನಾಡ್ ಮಾತನಾಡುತ್ತಾ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರನಿರ್ಮಾತೃ ಕೆಂಪೇಗೌಡನ ಬದಲು ಟಿಪ್ಪು ಸುಲ್ತಾನ್ ಹೆಸರಿಡುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.  ಅವರು ಹಿಂದೂ-ವಿರೋಧಿ ಹಾಗೂ ಮುಸ್ಲಿಂ-ಪರ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಅವರ ತಿಳುವಳಿಕೆ ಸೀಮಿತ ಎಂಬೆರಡು ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಆಕ್ರೋಶದ ಕಿಡಿ ಹೊತ್ತಿತು.  ಆದರಿಲ್ಲಿ ಬಹುಜನರ ಗಮನಕ್ಕೆ ಬಾರದ ಸಂಗತಿಯೊಂದಿತ್ತು.  ಕೆಂಪೇಗೌಡ ಬೆಂಗಳೂರು ನಗರದ ನಿರ್ಮಾತೃ ಎಂಬ ಐತಿಹಾಸಿಕ ಸತ್ಯ ಗೌಣವಾಗಿ ಆತ ಒಬ್ಬ ಒಕ್ಕಲಿಗ ಎಂಬ ವಿಷಯ ಸದ್ದಿಲ್ಲದೇ ಪ್ರಾಮುಖ್ಯತೆ ಪಡೆದುಕೊಂಡಿತು.  ಕಾರ್ನಾಡ್ ಆಡಿದ ಮಾತುಗಳು ಒಕ್ಕಲಿಗರ ವಿರುದ್ಧ ಎಂಬ ಭಾವನೆ ದಟ್ಟವಾಗಿ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯಕ್ಕೆ ತನ್ಮೂಲಕ ಕಾಂಗ್ರೆಸ್ಸಿಗೆ ಮುಳುವಾಗಬಹುದೆಂಬ ಆತಂಕ ಪಕ್ಷದ ಪ್ರಮುಖರನ್ನು ಕಾಡಿತು.  ಅನಾಹುತ ತಡೆಯುವ ಕಾರ್ಯಯೋಜನೆಗಳನ್ನು ಪಕ್ಷ ತರಾತುರಿಯಲ್ಲಿ ರೂಪಿಸಿತು.  ಇದರ ಅಂಗವಾಗಿ ಗೃಹಮಂತ್ರಿ ಪರಮೇಶ್ವರ್ ಕಾರ್ನಾಡರನ್ನು ಸಂಪರ್ಕಿಸಿ ತಮ್ಮ ಹೇಳಿಕೆಗಾಗಿ ಕ್ಷಮೆ ಯಾಚಿಸುವಂತೆ ಮನವೊಲಿಸಿದರೆಂದು ಲಭ್ಯ ಮಾಹಿತಿಗಳು ಹೇಳುತ್ತವೆ.  ಇದು ವ್ಯಗ್ರಗೊಂಡ ಒಕ್ಕಲಿಗರ ಮನಸ್ಸನ್ನು ಶಾಂತಗೊಳಿಸಿ ಅವರು ಕಾಂಗ್ರೆಸ್‌‍ನಿಂದ ದೂರಸರಿಯುವುದನ್ನು ತಡೆಯುವ ತಂತ್ರವಲ್ಲದೇ ಮತ್ತೇನೂ ಆಗಿರಲಿಲ್ಲ.  ಪ್ರಕರಣ/ಪ್ರಹಸನದಲ್ಲಾದದ್ದು ಒಂದು ಜಾತಿಯ ಮನಪರಿವರ್ತನೆಯ ಪ್ರಯತ್ನ,  ಒಬ್ಬ ಪ್ರಗತಿಪರ ಸಾಹಿತಿಯ ಮನಪರಿವರ್ತನೆಯ ಪ್ರಯತ್ನವಲ್ಲ.

ರಾಜಕೀಯ ಕಸರತ್ತಿನ ಹಿಂದೆ ಯಾವುದೇ ಹೊರಸೂಚನೆಯೂ ಇಲ್ಲದೇ ಸೆಕ್ಯೂಲರಿಸ್ಟ್ ವಿಚಾರವಾದಿಗಳ ಮನಸ್ಥಿತಿಯ ದಾರುಣ ಚಿತ್ರವೊಂದೂ ಅನಾವರಣಗೊಂಡಿತು.  ಹಿಂದೆಲ್ಲ ಗಿರೀಶ್ ಕಾರ್ನಾಡರ ಹೇಳಿಕೆಗಳಿಗೆ ವಿರೋಧ ಬಂದರೆ ಕಣ್ಣವೆ ಮುಚ್ಚಿ ತೆರೆಯುವುದರೊಳಗೆ ನಾಡಿನ ವಿಚಾರವಾದಿಗಳು ಹಾಗೂ ತಥಾಕಥಿತ ಪ್ರಗತಿಪರರು ಗುಂಪುಗಟ್ಟಿಕೊಂಡು ಸಾಹಿತಿಯ ಬೆನ್ನಿಗೆ ನಿಂತುಬಿಡುತ್ತಿದ್ದರು.  ಕಾರ್ನಾಡರ ಹಿಂದೂ-ವಿರೋಧಿ ಅಥವಾ ಮುಸ್ಲಿಂ-ಪರ ಹೇಳಿಕೆಗಳನ್ನು ಉಗ್ರವಾಗಿ ಸಮರ್ಥಿಸುತ್ತಿದ್ದವರು ಇವರೇ.  ತೀರಾ ಇತ್ತೀಚಿನ ಉದಾಹರಣೆಯೆಂದರೆ ಮೂರು ವರ್ಷಗಳ ಹಿಂದೆ, ಮುಂಬೈ ಲಿಟ್ ಫೆಸ್ಟ್‌‍ನಲ್ಲಿ ನಡೆದ ಪ್ರಕರಣ.  ಅಲ್ಲಿ ವಿ. ಎಸ್. ನೈಪಾರ್‌‍ ಮುಸ್ಲಿಂ-ವಿರೋಧಿ ಚಿಂತನೆಗಳನ್ನು ಖಂಡಿಸಿದ ಕಾರ್ನಾಡ್ ನೊಬೆಲ್ ಪ್ರಶಸ್ತಿವಿಜೇತ ಸಾಹಿತಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡುವುದನ್ನು ವಿರೋಧಿಸಿದ್ದರು.  ಕಾರ್ನಾಡರ ಮಾತುಗಳಿಗೆ ವಿರೋಧ ವ್ಯಕ್ತವಾಗತೊಡಗಿದ ಕೂಡಲೇ ಪ್ರಗತಿಪರರು ಅವರ ಪರವಾಗಿ ನಿಂತು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಸಮರ್ಥನೆ ನೀಡಿದರು.  ಆದರೆ ಅದೇ ವಿಚಾರವಾದಿಗಳು ಮತ್ತು ಪ್ರಗತಿಪರರು ಸಲ ದಿವ್ಯಮೌನ ತಳೆದರು.  ತಮ್ಮ ಹೇಳಿಕೆಗೆ ವಿರೋಧದ ಧಾಳಿ ಭುಗಿಲೇಳುತ್ತಿದ್ದರೆ ಸೆಕ್ಯೂಲರಿಸ್ಟ್ ವಿಚಾರವಾದಿಗಳಿಂದ ತಮಗೆ ಒಂದು ಬಾಯಿಮಾತಿನ ಬೆಂಬಲವೂ ಇಲ್ಲವಾದದ್ದು ಮಹಾನ್ ಸೆಕ್ಯೂಲರಿಸ್ಟ್ ಸಾಹಿತಿಯನ್ನು ಕಂಗೆಡಿಸಿರಲಿಕ್ಕೆ ಸಾಕು.  ಹಿಂದೂ-ವಿರೋಧಿ ಹೇಳಿಕೆಗಳನ್ನು ಸಮರ್ಥಿಸುವ ಸೆಕ್ಯೂಲರಿಸ್ಟರು 'ಒಕ್ಕಲಿಗ-ವಿರೋಧಿ' ಹೇಳಿಕೆಯನ್ನು ಮೌನವಾಗಿಯೇ ತಿರಸ್ಕರಿಸಿದ್ದು ಭಾರತೀಯ ವಿಚಾರವಾದಿಗಳಲ್ಲಿ ಜಾತೀಯತೆ ಮನೆಮಾಡಿಕೊಂಡಿದೆ ಎಂಬುದನ್ನು ಸಾಬೀತುಪಡಿಸಿತು.  ಕಾರ್ನಾಡರ ಕ್ಷಮಾಯಾಚನೆಯ ಹಿಂದಿರುವುದು ಬಹುಶ: ಇದರ ಅರಿವು, ಪರಮೇಶ್ವರರ ಸಂಧಾನವಲ್ಲ. ಇದೆಲ್ಲವೂ ಸೂಚಿಸುವುದು ಬಿಜೆಪಿಯನ್ನು ಕೋಮುವಾದಿ ಎಂದು ಹೀಗಳೆಯುವ ರಾಜಕಾರಣಿಗಳು, ವಿಚಾರವಾದಿಗಳು ಮತ್ತು ಪ್ರಗತಿಪರರು, ಒಟ್ಟಿಗೆ ಸೆಕ್ಯೂಲರಿಸ್ಟರು ನಡೆನುಡಿಯಲ್ಲಿ ಶುದ್ಧ ಜಾತಿವಾದಿಗಳು ಎನ್ನುವುದನ್ನು.

ಸೆಕ್ಯೂಲರಿಸ್ಟರು ಜಾತಿವಾದಿಗಳಾಗಿರುವದರ ಜತೆಗೆ ಕೋಮುವಾದಿಗಳಾಗಿರುವುದೂ ಉಂಟು.  ಗುಂಪಿನ ಹಿರಿಯಣ್ಣ ಕಾಂಗ್ರೆಸ್ ಪಕ್ಷವನ್ನೇ ಮೊದಲ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಅದು ಮೂವತ್ತು ವರ್ಷಗಳ ಹಿಂದೆಯೇ ಶಾ ಬಾನೂ ಮತ್ತು ಸಲ್ಮಾನ್ ರಶ್ದಿಯವರಸೆಟಾನಿಕ್ ವೆರ್ಸಸ್” ಕೃತಿಗೆ ಸಂಬಂಧಿಸಿದಂತೆ ಮುಸ್ಲಿಂ ಮೂಲಭೂತವಾದಿಗಳ ಪರ ನಿಂತದ್ದು ಹಳೆಯ ಕಥೆಯಾಯಿತು.  ಏಪ್ರಿಲ್ , ೨೦೧೪ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಂರನ್ನು ಭೇಟಿಯಾಗಿ ಲೋಕಸಭಾ ಚುನಾವಣೆಗಳಲ್ಲಿ ಮುಸ್ಲಿಂ ಮತಗಳಿಗಾಗಿ ಯಾಚಿಸಿದ್ದು ಭಾರತೀಯರನ್ನು ಧಾರ್ಮಿಕವಾಗಿ ಒಡೆಯುವ ಕಾಂಗ್ರೆಸ್‌‍ ಕೋಮುವಾದಕ್ಕೆ ಇತ್ತೀಚಿನ ಉಧಾಹರಣೆ.  ಇದೇ ಕುಕೃತ್ಯವನ್ನು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಸಹ ಮಾಡಿದ್ದಾರೆ.  ಅವರು ೨೦೧೩ರ ದೆಹಲಿ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಬರೇಲಿಯ ಮುಸ್ಲಿಂ ಧರ್ಮಗುರು ರಾಜ಼ಾ ತೌಖೀರ್ ಅಹ್ಮದ್ರನ್ನು ಭೇಟಿಯಾಗಿ ಮುಸ್ಲಿಂ ಮತಗಳಿಗಾಗಿ ಬೇಡಿಕೊಂಡರು.  ಇದೇ ಉದ್ದೇಶದಿಂದ ಕಳೆದ ಮಾರ್ಚ್ ತಿಂಗಳ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತೆ ಅಲಕಾ ಲಾಂಬಾರನ್ನು ಜಾಮಾ ಮಸೀದಿಯ ಶಾಹಿ ಇಮಾಂರ ಸಹೋದರನ ಭೇಟಿಗೆಂದು ಕಳುಹಿಸಿದ್ದರು.   ಕೋಮುವಾದಿ ರಾಜಕಾರಣಕ್ಕೆ ಸಂಬಂಧಿಸಿದಂತೆ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷದ ರೆಕಾರ್ಡ್ ಭಯಾನಕ.  ೨೦೦೮ರ ದೆಹಲಿ ಸ್ಫೋಟಗಳಿಗೆ ಸಂಬಂಧಿಸಿದಂತೆ ನಡೆದ ಬಾಟ್ಲಾ ಹೌಸ್ ಕಾರ್ಯಾಚರಣೆಯ ಸಂದರ್ಭದಲ್ಲಿ ಶಂಕಿತ ಉಗ್ರರಿಗೆ ೧೦ ಲಕ್ಷ ರೂಪಾಯಿ ನೀಡಿದ್ದು ಮತ್ತವರ ಕೋರ್ಟ್ ಖರ್ಚುವೆಚ್ಚಗಳನ್ನು ಭರಿಸುವ ನಿರ್ಧಾರ ತೆಗೆದುಕೊಂಡದ್ದು ಒಂದು ಉದಾಹರಣಣೆಯಷ್ಟೇ.

ಮತೀಯ ಹಿಂಸೆಯಲ್ಲಿ ನೊಂದವರು ಮುಸ್ಲಿಮರಾದರೆ ಮಾತ್ರ ಸೆಕ್ಯೂಲರಿಸ್ಟರ ಅಂತಃಸಾಕ್ಷಿ ಕಲಕಿಬಿಡುತ್ತದೆ.  ಇವರ ಪ್ರಕಾರ ಹಿಂದೂಗಳ ಜೀವಕ್ಕೆ ಯಾವ ಬೆಲೆಯೂ ಇಲ್ಲ.  ದಾದ್ರಿ ಘಟನೆಯ ಬಗ್ಗೆ ಪುಂಖಾನುಪುಂಖವಾಗಿ ಹೇಳಿಕೆ ನೀಡಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕೂಗುವ ಸೆಕ್ಯೂಲರಿಸ್ಟರು ಮೂಡಬಿದರೆಯಲ್ಲಿ ಘಟಿಸಿದ ಪ್ರಶಾಂತ್ ಪೂಜಾರಿಯ ಹತ್ಯೆಯ ಬಗ್ಗೆ ಬಾಯಿ ತೆರೆಯುವುದೇ ಇಲ್ಲ.  ಹಾಗೆಯೇ ಕಳೆದ ಮಾರ್ಚ್‌‍ನಲ್ಲಿ ಮುಸ್ಲಿಂ ಯುವತಿಯೊಬ್ಬಳನ್ನು ವಿವಾಹವಾದದ್ದಕ್ಕಾಗಿ ಹಿಂದೂವೊಬ್ಬನನ್ನು ಬಿಹಾರದ ಹಾಜಿಪುರ್‍‍ನಲ್ಲಿ ಮುಸ್ಲಿಮರು ಕೊಂದದ್ದು, ಜೂನ್‌‍ನಲ್ಲಿ ಮುಂಬೈ ಸಮೀಪದ ಭಿವಂಡಿಯಲ್ಲಿ ಮುಸ್ಲಿಂ ಗುಂಪೊಂದು ಹಿಂದೂವೊಬ್ಬನನ್ನು ಹತ್ಯೆಗೈದದ್ದು ಇವರ ಅಂತಃಸಾಕ್ಷಿಯನ್ನು ಕಿಂಚಿತ್ತೂ ಘಾಸಿಗೊಳಿಸುವುದಿಲ್ಲ.  ಅಷ್ಟೇಕೆ, ಸೆಕ್ಯೂಲರಿಸ್ಟ್ ಪತ್ರಕರ್ತರಿಗೆ ಇವು ಸುದ್ಧಿಗಳೇ ಆಗಲಿಲ್ಲ.  ಅಂದರೆ ಇವರಿಗೆ ಬೇಕಾಗಿರುವುದು ಮುಸ್ಲಿಂ ರಕ್ತ ಮಾತ್ರ.

ಸೆಕ್ಯೂಲರಿಸ್ಟರು ಜಾತಿವಾದಿಗಳು, ಕೋಮುವಾದಿಗಳಷ್ಟೇ ಅಲ್ಲ, ಪಾಕಿಸ್ತಾನದ ಪರ ಸಹಾ.  ಮಾಜಿ ವಿದೇಶ ಮಂತ್ರಿ ಕಾಂಗ್ರೆಸ್‌‍ ಸಲ್ಮಾನ್ ಖುರ್ಶೀದ್ ಪಾಕ್ ನೆಲದಲ್ಲಿ ನಿಂತು ನಮ್ಮ ಪ್ರಧಾನಮಂತ್ರಿಯ ಜತೆ ಹೋಲಿಸಿ ಅಲ್ಲಿನ ಪ್ರಧಾನಿಯನ್ನು ಹೊಗಳುತ್ತಾರೆ.  ಹಿಂದೆ ಕರಾಚಿಯಲ್ಲಿ ಭಾರತದ ಉಪರಾಯಭಾರಿಯಾಗಿದ್ದ ಮಣಿಶಂಕರ್ ಅಯ್ಯರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಗಿಲ್ ಯುದ್ಧದ ರೂವಾರಿ ಪರ್ವೆಜ್ ಮುಷರ್ರಫ್‌‍ನನ್ನು ಶಾಂತಿದೂತನಂತೆ ಚಿತ್ರಿಸುತ್ತಾರೆ!  ಮುಂಬಯಿಯಲ್ಲಿ ಪಾಕಿಸ್ತಾನಿ ಗಜ಼ಲ್ ಗಾಯಕ ಗುಲಾಮ್ ಆಲಿಯವರ ಗಾಯನ ಶಿವಸೇನೆಯ ವಿರೋಧದಿಂದ ರದ್ದಾಯಿತಷ್ಟೇ.  ಇದಕ್ಕಾಗಿ ಮರುಗಿದ ಕೇಜ್ರಿವಾಲ್ ಆಲಿಯವರ ಜತೆ ದೂರವಾಣಿಯಲ್ಲಿ ಮಾತಾಡಿ ಸಂತೈಸಿ ಗಾಯನವನ್ನು ದೆಹಲಿಯಲ್ಲಿ ಏರ್ಪಡಿಸುವುದಾಗಿ ಆಶ್ವಾಸನೆ ನೀಡಿದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವರಂತೂ ಆಲಿಯವರ ಗಾಯನವನ್ನು ಲಖನೌದಲ್ಲಿ ಏರ್ಪಡಿಸಿಯೇಬಿಟ್ಟರು.   ಆದರೆ ಸೆಪ್ಟೆಂಬರ್ ೧೩ರಂದು ದೆಹಲಿಯಲ್ಲಿ ಆಯೋಜಿತವಾಗಬೇಕಿದ್ದ ಆಸ್ಕರ್ ವಿಜೇತ ಭಾರತೀಯ ಸಂಗೀತಗಾರ ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮ ಬರೇಲಿಯ ಮುಸ್ಲಿಂ ಸಂಸ್ಥೆ ರಾಜ಼ಾ ಅಕ್ಯಾಡೆಮಿಯ ಫತ್ವಾದಿಂದಾಗಿ ರದ್ದಾದಾಗ ಸಂಗೀತಪ್ರೇಮಿ ರಾಜಕಾರಣಿಗಳು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.  ಮಾಧ್ಯಮಗಳಿಗೂ ಅದು ದೊಡ್ಡ ಸುದ್ದಿಯಾಗಲೇ ಇಲ್ಲ!  ಅಂದರೆ ಸೆಕ್ಯೂಲರಿಸ್ಟರ ಸಂಗೀತಪ್ರೇಮ ಪಾಕಿಸ್ತಾನಿ ಸಂಗೀತಕ್ಕಷ್ಟೇ ಸೀಮಿತವೆ?  ಪಾಕ್ ನಾಯಕರನ್ನು ಹೊಗಳುವ, ಪಾಕ್ ಸಂಗೀತಗಾರರನ್ನು ಓಲೈಸುವ ನಮ್ಮ ಸೆಕ್ಯೂಲರಿಸ್ಟರು ಅರೆಪಾಕಿಸ್ತಾನಿಗಳೆ?

ಡಿಸೆಂಬರ್ ೧, ೨೦೧೫

No comments:

Post a Comment