ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, April 10, 2014

ಭಾರತೀಪುರದಲ್ಲಿ ತುಘಲಕ್: ಒಂದು ಬೀದಿ ನಾಟಕ


"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ನಿನ್ನೆ ಅಂದರೆ ಬುಧವಾರ, ಏಪ್ರಿಲ್ ೯, ೨೦೧೪ರಂದು ಪ್ರಕಟವಾದ ಲೇಖನದ ಮೂಲಪಾಠ


ಭಾಗ - ೧
            ಜ್ಞಾನಪೀಠ ಪುರಸ್ಕೃತ ಸಾಹಿತಿಗಳಾದ ಯು. ಆರ್. ಅನಂತಮೂರ್ತಿ ಮತ್ತು ಗಿರೀಶ ಕಾರ್ನಾಡ ಪ್ರಸಕ್ತ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.  ಆ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ್ದಾರೆ.  ಈ ಬಗ್ಗೆ ನಾಡಿನ ಮಾಧ್ಯಮಗಳಲ್ಲಿ, ವೇದಿಕೆಗಳ ಮೇಲೆ ಪರ ವಿರೋಧ ಅಭಿಪ್ರಾಯಗಳ ಚಕಮಕಿ ಸಾಗಿದೆ.
            ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ ಮುಂತಾದ ಅಪಮೌಲ್ಯಗಳಿಂದಾಗಿ ಕಲುಷಿತಗೊಂಡಿರುವ ನಮ್ಮ ಸಮಾಜೋ-ರಾಜಕೀಯ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಪ್ರಜ್ಞಾವಂತರ ಸಕ್ರಿಯ ಪಾತ್ರದ ಅಗತ್ಯವಿದೆ.  ಸಮಾಜಕ್ಕೆ, ಈ ದಿನದಲ್ಲಿ ಮುಖ್ಯವಾಗಿ, ಮತದಾರರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರು ಹಣ, ಹೆಂಡ, ಜಾತಿ ಇನ್ನಿತರ ಯಾವುದೇ ಅಮಿಷಕ್ಕೊಳಗಾಗದೇ ದೇಶದ ಹಿತ ಕಾಯುವ ರಾಜಕೀಯ ಪಕ್ಷದ ಪರವಾಗಿ ಮತಚಲಾಯಿಸುವಂತೆ ಪ್ರೇರೇಪಿಸುವುದು ಸಾಂಸ್ಕೃತಿಕ ಮುಂದಾಳುಗಳ ಜವಾಬ್ದಾರಿ.  ಹಿಂದೆ ಹಲವಾರು ವಿಶ್ವಮಾನ್ಯ ಸಾಹಿತಿಗಳು ಸಮಾಜದ ರಾಜಕೀಯ ಬದುಕಿನಲ್ಲಿ ಸಕಾರಾತ್ಮಕವಾಗಿ ಕೈ ಆಡಿಸಿದ ಉದಾಹರಣೆಗಳಿವೆ.  ಮ್ಯಾಕ್ಸಿಂ ಗಾರ್ಕಿ ಮತ್ತು ಲು ಶೂನ್ ಕ್ರಮವಾಗಿ ರಶಿಯಾ ಮತ್ತು ಚೀನಾದಲ್ಲಿ ಸಮತಾವಾದದ ಬೆಳವಣಿಗೆಗೆ ಮತ್ತು ಕಮ್ಯೂನಿಸ್ಟ್ ಸರಕಾರಗಳ ಜನಮಾನ್ಯತೆಗೆ ಶ್ರಮಿಸಿದ್ದರು.  ಬ್ರಿಟನ್‌ನಲ್ಲಿ ಲೇಬರ್ ಪಕ್ಷದ ಸೈದ್ದಾಂತಿಕ ಅಸ್ತಿಭಾರಕ್ಕೆ ಫೇಬಿಯನ್ ಸೋಶಿಯಲಿಸ್ಟ್ ಆಗಿದ್ದ ಜಾರ್ಚ್ ಬರ್ನಾರ್ಡ್ ಶಾ ಮತ್ತು ಬರ್ಟ್‌ರ್‍ಯಾಂಡ್ ರಸೆಲ್‌ರ ಕೊಡುಗೆಗಳು ಅಪಾರ.  ಪಾಕಿಸ್ತಾನದ ಸೃಷ್ಟಿಯಲ್ಲಿ ಕವಿ ಮಹಮದ್ ಇಕ್ಬಾಲ್‌ರ ಪಾತ್ರವನ್ನು ನಿರ್ಲಕ್ಷಿಸಲಾಗುತ್ತದೆಯೇ?
ಈ ಹಿನ್ನೆಲೆಯಲ್ಲಿ ಕನ್ನಡದ ಈ ಇಬ್ಬರು ಪ್ರಶಸ್ತಿವಿಜೇತ ಸಾಹಿತಿಗಳು ಒಂದು ಪಕ್ಷದ ಪರವಾಗಿ ಜನತಾಂತ್ರಿಕ ವಿಧಾನದಲ್ಲಿ ಮತಯಾಚನೆ ಮಾಡುತ್ತಿರುವುದು ಸ್ವಾಗತಾರ್ಹವೇ.  ಆದರೆ ಅದಕ್ಕಾಗಿ ಅವರು ಕೊಡುತ್ತಿರುವ ಕಾರಣಗಳು ಮಾತ್ರ ಪೂರ್ವಗ್ರಹಪೀಡಿತ ಏಕಮುಖ ಚಿಂತನೆಗಳು.  ಮೋದಿಯವರನ್ನು ಕೋಮುವಾದಿ, ಕೊಲೆಗಡುಕ ಎಂದೆಲ್ಲಾ ಬಣ್ಣಿಸುವ ಈ ಬುದ್ದಿಜೀವಿಗಳು ಗಿಳಿಪಾಠದಂತೆ ಒಪ್ಪಿಸುತ್ತಿರುವುದು ೨೦೦೨ರಿಂದೀಚಿಗಿನ ಗುಜರಾತ್ ಬಗ್ಗೆ ಮಾಧ್ಯಮದ ಒಂದು ವರ್ಗ ಬಿತ್ತಿದ ಸುಳ್ಳುಗಳು.  ಈ ಸುಳ್ಳುಗಳ ಹಿಂದೆ ಪಶ್ಚಿಮ ಏಶಿಯಾದ ಶ್ರೀಮಂತ ತೈಲಸಂಪನ್ನ ದೇಶವೊಂದರ ಹಣ ಕೆಲಸ ಮಾಡುತ್ತಿರುವುದು ಬಹುಶಃ ಇವರಿಗೆ ತಿಳಿದಿಲ್ಲ.  ಅಥವಾ... ನಿಜವಾಗಿಯೂ ತಿಳಿದಿಲ್ಲವೇ?
೨೦೦೨ರ ಫೆಬ್ರವರಿ ಕೊನೆಯ ವಾರದಲ್ಲಿ ಗುಜರಾತ್‌ನಲ್ಲಿ ನಡೆದ ರಕ್ತಪಾತ ಖಂಡಿತವಾಗಿಯೂ ಅಕ್ಷಮ್ಯ, ನಾಗರಿಕ ಸಮಾಜದ ಒಂದು ಕಪ್ಪುಚುಕ್ಕೆ.  ಆದರೆ ಇದಕ್ಕೆ ಪ್ರೇರಕವಾದದ್ದು ಗೋಧ್ರಾ ಹತ್ಯಾಕಾಂಡ.  ಇಷ್ಟಾಗಿಯೂ ಸ್ವಭಾವತಃ ಶಾಂತಮತಿಗಳಾದ ಸಾಮಾನ್ಯ ಗುಜರಾತಿಗಳು ಮತೀಯವಾಗಿ ಇಷ್ಟೇಕೆ ಉದ್ರಿಕ್ತರಾದರು ಎನ್ನುವುದಕ್ಕೆ ಉತ್ತರ ಇತಿಹಾಸದಲ್ಲಿದೆ.  ನಮ್ಮ ಬುದ್ಧಿಜೀವಿಗಳು ಮತ್ತವರ ಹಿಂಬಾಲಕರು ಅದನ್ನೊಮ್ಮೆ ನೋಡಬೇಕಷ್ಟೇ.
ಇಸ್ಲಾಂ ಒಂದು ಸಾಮ್ರಾಜ್ಯಶಾಹಿ ಧರ್ಮ.  ಮಹಮದ್ ಪೈಗಂಬರರು ಇಸ್ಲಾಂ ಧರ್ಮದ ಸ್ಥಾಪಕರಲ್ಲದೇ ಅರಬ್ ಸಾಮ್ರಾಜ್ಯದ ಸಂಸ್ಥಾಪಕರೂ ಸಹಾ ಎಂಬುದು ಐತಿಹಾಸಿಕ ಸತ್ಯ.  ಇತರ ಧರ್ಮಸಂಸ್ಥಾಪಕರಾದ ಬುದ್ಧ, ಮಹಾವೀರ, ಜೀಸಸ್ ಕ್ರೈಸ್ಟ್, ಬಹಾವುಲ್ಲಾ ಮತ್ತು ಅಬ್ದುಲ್ ಬಹಾ ಮುಂತಾದವರಿಗೂ ಪೈಗಂಬರರಿಗೂ ಇರುವ ಪ್ರಮುಖ ವ್ಯತ್ಯಾಸ ಇದು.  ತಮ್ಮ ಖೊರೇಶ್ ಬುಡಕಟ್ಟು ಇಡೀ ಅರೇಬಿಯಾದ ಮೇಲೆ ರಾಜಕೀಯ ಪ್ರಭುತ್ವ ಸ್ಥಾಪಿಸಲು ತನ್ಮೂಲಕ ಇಸ್ಲಾಂ ಧರ್ಮವನ್ನು ಅರೇಬಿಯಾದ ಸಾರ್ವತ್ರಿಕ ಹಾಗೂ ಏಕೈಕ ಧರ್ಮವನ್ನಾಗಿ ಬೆಳೆಸಲು ಅಗತ್ಯವಾದ ಸೈನ್ಯವನ್ನು ಕಟ್ಟಬೇಕಾದರೆ ಸೈನಿಕರಿಗೆ ಧನ ಹಾಗೂ ಸ್ತ್ರೀಯರ ಪ್ರಲೋಭನೆಗಳನ್ನೊಡ್ಡುವ ಅಗತ್ಯವನ್ನು ಪೈಗಂಬರರು ಮನಗಂಡಿದ್ದರು.  ಆಗಿನ ಅರೇಬಿಯಾದಲ್ಲಿದ್ದ ಅರೆನಾಗರಿಕ ಪುರುಷವರ್ಗದ ಮೃಗೀಯ ಸ್ತ್ರೀವ್ಯಾಮೋಹ ಹಾಗೂ ಧನಲಾಲಸೆಯ ಸ್ಪಷ್ಟ ಅರಿವಿದ್ದ ಅವರು ಆ ಜನರಿಗೆ ಜಿಹಾದ್‌ಗೆ ಪ್ರತಿಯಾಗಿ ಈ ಜನ್ಮದಲ್ಲಿ ಸಿಗುವ ಧನಲಾಭ, ಸ್ತ್ರೀಸುಖ ಹಾಗೂ ಸತ್ತನಂತರ ಸ್ವರ್ಗದಲ್ಲಿ ಸಿಗುವ ಇಂದ್ರಿಯ ಸುಖಗಳ ಆಮಿಷವನ್ನೊಡ್ಡದಿದ್ದರೆ ಬಲಶಾಲೀ ಸೈನ್ಯವನ್ನು ಕಟ್ಟುವುದು ಸಾಧ್ಯವೇ ಇಲ್ಲ ಎಂದು ಅರಿತಿದ್ದರು.  ಅಷ್ಟೇ ಅಲ್ಲ, ಅದನ್ನು ಆಚರಣೆಗೆ ತಂದರೂ ಕೂಡಾ.  ತಾವು ಕೈಗೊಂಡ ಹಲವಾರು ಯುದ್ಧಗಳಲ್ಲಿ ಸೋತ ಬುಡಕಟ್ಟುಗಳ ಹೆಂಗಸರನ್ನು ತಮ್ಮ ಸೈನಿಕರಿಗೆ ಹಂಚುತ್ತಿದ್ದರು.  ಒಂದು ಸಂದರ್ಭದಲ್ಲಂತೂ ಸೆರೆಸಿಕ್ಕಿದ ಮೂವರು ಸುಂದರಿಯರನ್ನು ತಮ್ಮ ಅಳಿಯಂದಿರಾದ ಆಲಿ ಮತ್ತು ಉಸ್ಮಾನ್ ಹಾಗೂ ತಮ್ಮ ಮಾವ ಒಮರ್‌ಗೆ ಒಪ್ಪಿಸಿದರು.  ಪೈಗಂಬರರ ಈ ಕೃತ್ಯಗಳನ್ನು ನಮ್ಮ ಈ ಕಾಲದ ಮೌಲ್ಯಗಳ ಮೂಲಕ ವಿಶ್ಲೇಷಿಸಿ ನಾವು ಅಸಹ್ಯ ಪಡಬೇಕಾಗಿಲ್ಲ.  ಪ್ರಾಚೀನ ಪಶ್ಚಿಮ ಹಾಗೂ ಮಧ್ಯ ಏಶಿಯಾಗಳಲ್ಲಿ ಇದು ತೀರಾ ಸಾಮಾನ್ಯವಾದ ಆಚರಣೆಯಾಗಿತ್ತು.  ಪೈಗಂಬರರು ಅದನ್ನು ಮುಂದುವರೆಸಿ ಅರೇಬಿಯಾದಲ್ಲಿ ತಮ್ಮ ರಾಜಕೀಯ ಅಧಿಕಾರವನ್ನು ಸ್ಥಾಪಿಸಿದರಷ್ಟೇ.  ಆದರೆ ಇದೇ ಮನೋಭಾವ ಸಾವಿರದ ಮುನ್ನೂರು ವರ್ಷಗಳ ನಂತರ ಭಾರತೀಯ ಉಪಖಂಡದಲ್ಲಿ ಹೆಡೆಯೆತ್ತಿದ್ದು ಅಚ್ಚರಿ ಹಾಗೂ ಅಸಹ್ಯವನ್ನುಂಟುಮಾಡುವಂಥದ್ದು.  ಅಕ್ಟೋಬರ್ ೨೨, ೧೯೪೭ರ ರಾತ್ರಿ ಕಾಶ್ಮೀರದ ಮೇಲೆ ಅಘೋಷಿತ ಹಟಾತ್ ಧಾಳಿಗೆ ಸಿದ್ದರಾಗಿ ನಿಂತಿದ್ದ ಐದು ಸಾವಿರ ಶಸ್ತ್ರಸಚ್ಚಿತ ಪಠಾಣರಿಗೆ ಧಾಳಿಯ ರೂವಾರಿ 'ಜನರಲ್ ತಾರಿಖ್' (ಮೇಜರ್ ಜನರಲ್ ಅಕ್ಬರ್ ಖಾನ್) ಒಡ್ಡಿದ ಅಮಿಷ ಹೀಗಿತ್ತು:  "ಶ್ರೀನಗರ ತಲುಪಿ ಅಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವವರೆಗೆ ಎಲ್ಲೂ ನಿಲ್ಲಬೇಡಿ.  ಶ್ರೀನಗರ ವಶವಾದ ನಂತರ ಕಾಶ್ಮೀರದ ನೆಲ ನಮಗೆ, ಅಲ್ಲಿನ ಹೆಂಗಸರು ಮತ್ತು ಐಶ್ವರ್ಯ ನಿಮಗೆ."
ಇಸ್ಲಾಮನ್ನು ಮೊದಲು ಅರೇಬಿಯಾದಲ್ಲಿ ನಂತರ ಇಡೀ ಜಗತ್ತಿಗೆ ಹರಡುವ ಉದ್ದೇಶದಿಂದಾಗಿ ಐಶ್ವರ್ಯ ಹಾಗೂ ಲೈಂಗಿಕ ಅಮಿಷಗಳ ಜತೆಗೇ ಜಿಹಾದ್ ಪರಿಕಲ್ಪನೆಯನ್ನೂ ಸಹಾ ಪೈಗಂಬರರು ರೂಪಿಸಿದರು.  ಒಂದು ಸಾವಿರ ವರ್ಷಗಳವರೆಗೆ ಪ್ರಾರ್ಥನೆ ಮಾಡುವುದಕ್ಕಿಂತ ಕೇವಲ ಒಂದುದಿನ ಅಲ್ಲಾನ ಸೈನಿಕನಾಗುವುದು ಶ್ರೇಷ್ಟ ಎಂದವರು ಹೇಳಿದರು.  ಧರ್ಮಕ್ಕಾಗಿ ಪ್ರಾಣ ಕೊಡಬಲ್ಲಂತಹ ಸೈನಿಕರನ್ನು ತಯಾರು ಮಾಡಲು ಸ್ವರ್ಗ ಮತ್ತಲ್ಲಿ ದೊರೆಯುವ ವೈಭೋಗಗಳ ಚಿತ್ರಣ ನೀಡಿದರು.  ಅದೆಲ್ಲವೂ ಆ ಕಾಲದ ಅಗತ್ಯವಾಗಿತ್ತು.  ಹಾಗೆ ಮಾಡದಿದ್ದರೆ ಇಸ್ಲಾಂ ಅರೇಬಿಯಾದಲ್ಲೂ ಗಟ್ಟಿಯಾಗಿ ನೆಲೆಯೂರುತ್ತಿರಲಿಲ್ಲ.
ಈ ಬಗೆಯ ಅಸ್ತಿಭಾರದ ಮೇಲೆ ಬೆಳೆದುಬಂದ ಇಸ್ಲಾಂ ಪ್ರವಾದಿಯವರ ನಿಧನಾನಂತರ ಒಂದೇ ತಲೆಮಾರಿನಲ್ಲಿ ಇಡೀ ಪಶ್ಚಿಮ ಏಶಿಯಾಗೆ ಹರಡಿಹೋದದ್ದರಲ್ಲಿ ಅಚ್ಚರಿಯೇನಿಲ್ಲ.  ಒಂಬೈನೂರು ವರ್ಷಗಳ ಇತಿಹಾಸವಿದ್ದ ಪರ್ಶಿಯಾದ ಸಸಾನಿದ್ ಸಾಮ್ರಾಜ್ಯವನ್ನು ಧೂಳೀಪಟಗೊಳಿಸಿ ಅಗ್ನಿ ಆರಾಧಕರ ಮೇಲೆ ಅರಬ್ಬರು ಇಸ್ಲಾಮನ್ನು ಹೇರಿದ್ದು ಕ್ರೂರ ವಿಧಾನಗಳ ಮೂಲಕ.  ಅದರಿಂದ ತಪ್ಪಿಸಿಕೊಂಡು ಓಡಿಬಂದ ಪಾರ್ಸಿಗಳಿಂದ ಇಸ್ಲಾಂನ ಕ್ರೌರ್ಯದ ಮೊದಲ ಪರಿಚಯ ಏಳನೆಯ ಶತಮಾನದಲ್ಲೇ ಗುಜರಾತಿಗಾಯಿತು.  ಮುಂದಿನ ಐದಾರು ದಶಕಗಳಲ್ಲಿ ನೆರೆಯ ಸಿಂಧ್ ಅರಬ್ಬರ ವಶವಾದಾಗ ತಾನು ಹಿಂದೂಧರ್ಮದ ಗಡಿ ಎಂಬ ಅರಿವು ಆ ನಾಡಿಗಾಯಿತು.  ನಂತರ ಇಸ್ಲಾಂನ ಹಿಂಸಾತ್ಮಕ ಮುಖದ ಸ್ವಾನುಭವ ಗುಜರಾತಿಗಾದದ್ದು ೧೦೧೭ರಲ್ಲಿ.  ಆ ವರ್ಷ ಘಜನಿಯ ಸುಲ್ತಾನ ಮಹಮದ್ ಸೋಮನಾಥ ದೇವಾಲಯದ ಮೇಲೆ ನಡೆಸಿದ ಧಾಳಿಯ ಹಿಂದಿದ್ದದ್ದು ಲೂಟಿಯೇ ಆದರೂ ಆ ಲೂಟಿಗಾರರು ಮುಸ್ಲಿಂ ಅರಸನಿಗೆ ನಿಷ್ಟರಾಗಿದ್ದರು ಎಂಬುದೇ ಇಸ್ಲಾಂನಿಂದ ಒದಗಬಹುದಾದ ಹಾನಿಯ ನೇರ ಪರಿಚಯವನ್ನು ಗುಜರಾತಿಗಳಿಗೆ ಮಾಡಿಕೊಟ್ಟಿತು.  ಇದು ಗುಜರಾತಿಗಳ ಇಸ್ಲಾಂ-ವಿರೋಧಿ ಮನೋಭಾವ ಬೆಳೆದುಬಂದ ಬಗೆ.  ಜತೆಗೇ ಹಿಂದೂಧರ್ಮದ ಬಗ್ಗೆ ತೀವ್ರ ಸಂವೇದನಾಶೀಲತೆಯನ್ನೂ ಅವರು ರೂಢಿಸಿಕೊಂಡರು.  ಹೀಗಾಗಿಯೇ ಇತಿಹಾಸದಲ್ಲಿ ದಾಖಲಾಗಿರುವಂತೆಯೇ ಸ್ವಭಾವತಃ ಶಾಂತಮತಿಗಳಾದ ಗುಜರಾತಿಗಳು ಪ್ರಚೋದನೆಗೊಂಡಾಗ ತೀವ್ರವಾಗಿ ಉದ್ರೇಕಿತರಾಗಿ ಹಿಂಸೆಯಲ್ಲಿ ತೊಡಗುವುದು ಆಗಾಗ್ಗೆ ನಡೆದುಕೊಂಡೇ ಬಂದಿದೆ.  ಸ್ವಾತಂತ್ರ್ಯಾನಂತರ ಪಾಕಿಸ್ತಾನದ ಭೂದಾಹದಿಂದಾಗಿ ತನ್ನ ಒಂದಷ್ಟು ನೆಲವನ್ನು ಕಳೆದುಕೊಂಡ ಭಾರತದ ಏಕೈಕ ಅಧಿಕೃತ ರಾಜ್ಯ ಗುಜರಾತ್.  (ಕಾಶ್ಮೀರದ ವಿಷಯ ಬೇರೆ.  ಅದು ಸಾರ್ವಭೌಮತ್ವ ಇನ್ನೂ ಅಂತಿಮವಾಗಿ ನಿರ್ಣಯವಾಗದ ವಿವಾದಿತ ಪ್ರದೇಶ).  ಸಿಂಧ್ ಪ್ರಾಂತ್ಯಕ್ಕೆ ಹೊಂದಿಕೊಂಡ ಗುಜರಾತಿನ ಕಛ್ಛ್‌ನ ರಣ್ ಪ್ರದೇಶದಲ್ಲಿ ಅರ್ಧದಷ್ಟನ್ನು ತನ್ನದೆಂದು ಪಾಕಿಸ್ತಾನ ೧೯೬೫ರಲ್ಲಿ ತಗಾದೆ ತೆಗೆಯಿತು.  ಅಷ್ಟೇ ಅಲ್ಲ, ಅಮೆರಿಕಾದಿಂದ ಪಡೆದುಕೊಂಡಿದ್ದ (ಅ ಕಾಲದ) ಅತ್ಯಾಧುನಿಕ ಪ್ಯಾಟನ್ ಟ್ಯಾಂಕ್‌ಗಳ ಸಹಾಯದಿಂದ ಪಾಕಿಸ್ತಾನಿ ಸೇನೆ ಭಾರತೀಯ ಪ್ರದೇಶದೊಳಗೆ ನುಗ್ಗಿಬಂತು.  ಆಗ ನಡೆದ ಹಲವು ಚಕಮುಕಿಗಳಲ್ಲಿ ಭಾರತೀಯ ಸೇನೆ ಹಿಮ್ಮೆಟ್ಟಿತು.  ಕೊನೆಗೆ ಅಂತರರಾಷ್ಟ್ರೀಯ ಮಧ್ಯಪ್ರವೇಶದಿಂದ ಘರ್ಷಣೆ ನಿಂತು ಟ್ರಿಬ್ಯೂನಲ್ ಒಂದಕ್ಕೆ ಸಮಸ್ಯೆಯನ್ನೊಪ್ಪಿಸಲಾಯಿತು.  ಸುಮಾರು ಎಂಟುನೂರು ಚದರ ಕಿಲೋಮೀಟರ್ ಪ್ರದೇಶವನ್ನು ಪಾಕಿಸ್ತಾನಕ್ಕೆ ನೀಡುವಂತೆ ಟ್ರಿಬ್ಯೂನಲ್ ೧೯೬೮ರಲ್ಲಿ ಭಾರತಕ್ಕೆ ಆದೇಶಿಸಿತು.  ಅದನ್ನು ನಿರಾಕರಿಸದೇ ಪಾಲಿಸಿದ ಭಾರತ ಅಷ್ಟೂ ಪ್ರದೇಶವನ್ನು ಪಾಕಿಸ್ತಾನಕ್ಕೆ ವರ್ಗಾಯಿಸಿತು.  ಇದು ಗುಜರಾತಿಗಳಿಗೆ ಮತ್ತೊಂದು ಆಘಾತ.  ತಮ್ಮ ನೆಲವನ್ನು ಕಬಳಿಸಿದ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರ ಎನ್ನುವುದು ಬಹುತೇಕ ಗುಜರಾತಿ ಹಿಂದೂಗಳಲ್ಲಿ ಮತ್ತಷ್ಟು ಅಸಹನೆಯನ್ನುಂಟುಮಾಡಿತು.
ಇಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆಯೊಂದಿಗೆ ಗೋಧ್ರಾ ರೈಲು ಹತ್ಯಾಕಾಂಡ ಸೃಷ್ಟಿಸಿದ ಪ್ರಚೋದನೆಯಿಂದಾಗಿ ಭುಗಿಲೆದ್ದ ಉಗ್ರ ಮುಸ್ಲಿಂ-ವಿರೋಧಿ ಭಾವನೆಯನ್ನು ಶಮನಗೊಳಿಸಲು ಮೋದಿಯವರ ಬಿಜೆಪಿ ಸರಕಾರವಿರಲಿ, ಕಾಂಗ್ರೆಸ್ ಸರಕಾರಕ್ಕೂ ಸಾಧ್ಯವಾಗುತ್ತಿರಲಿಲ್ಲ.  ಹೀಗಾಗಿ ಗಲಭೆಗಳಿಗೆ, ರಕ್ತಪಾತಕ್ಕೆ ಮೋದಿಯವರನ್ನು ನೇರವಾಗಿ ಹೊಣೆಯಾಗಿಸುವುದು ಹೊಣೆಗೇಡಿತನವಾಗುತ್ತದೆ.  ನ್ಯಾಯಾಂಗ ಹೇಳಿರುವುದು ಇದನ್ನೇ  ಆದರೆ ಆ ಗಲಭೆಗಳು ಬಿಜೆಪಿ ಆಡಳಿತವಿದ್ದ ರಾಜ್ಯದಲ್ಲಿ ಘಟಿಸಿದ್ದು ಆಗ ರಾಜ್ಯದಲ್ಲೂ, ಕೇಂದ್ರದಲ್ಲೂ ಅಧಿಕಾರದಿಂದ ವಂಚಿತವಾಗಿದ್ದ ಕಾಂಗ್ರೆಸ್‌ಗೆ ವರದಾನವಾಗಿ ಪರಿಣಮಿಸಿತು.  ಇಡೀ ಘಟನೆಗಳನ್ನು ಇನ್ನೆರಡು ವರ್ಷಗಳಲ್ಲಿ ನಡೆಯಲಿದ್ದ ಲೋಕಸಭಾ ಚುನಾವಣೆಗಳಿಗೆ ಬಳಸಿಕೊಳ್ಳಲು ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಿದ್ಧತೆ ನಡೆಸಿತು.  ಇದಕ್ಕೆ ಕೈಗೂಡಿಸಿದವರು ಲಾಗಾಯ್ತಿನಿಂದಲೂ ಕಾಂಗ್ರೆಸ್‌ನ ಸಮರ್ಥಕರಾಗಿದ್ದ, ತಲೆಮಾರುಗಳಿಂದಲೂ ಆಂಗ್ಲ ಶಿಕ್ಷಣದ ಹಿನ್ನೆಲೆಯಿದ್ದ, ಉದಾರವಾದಿ ಮೌಲ್ಯಗಳುಳ್ಳ ಹಿಂದೂ ಉಚ್ಚವರ್ಗಗಳ ಪತ್ರಕರ್ತರ ತಂಡ.  ಇದಕ್ಕೆ ಹಣ ಬಂದದ್ದು ಪಶ್ಚಿಮ ಏಶಿಯಾದ ದೇಶವೊಂದರಿಂದ.  ಹಣ ಅಂದರೆ ಹಣ ಅಷ್ಟೇ.  ಅದಕ್ಕೆ ಧರ್ಮ ಅಥವಾ ಸಿದ್ಧಾಂತದ ಹಂಗಿರುವುದಿಲ್ಲ.
ಈ ಪತ್ರಕರ್ತರ ಪಕ್ಷಪಾತಿ ವರದಿಗಳ ಒಂದು ಉದಾಹರಣೆ:  ೧೯೮೯ರಲ್ಲಿ ಹರಿಯಾನಾದ ಮಲಿಯಾನಾದಲ್ಲಿ ನಡೆದ ಗಲಭೆ ನಂತರದ ಸುರಕ್ಷಾ ಪಡೆಗಳ ಕಾರ್ಯಾಚರಣೆಯಲ್ಲಿ ನೂರಕ್ಕೂ ಮಿಕ್ಕಿ ಮುಸ್ಲಿಮರು ಪ್ರೊವಿನ್ಷಿಯಲ್ ಆರ್ಮ್ಡ್ ಕಾನ್ಸ್‌ಟೇಬ್ಯುಲರಿಯಿಂದ ಹತರಾದರೆಂದು ಕೆಲವು ಆಂಗ್ಲ ಪತ್ರಿಕೆಗಳು ಬರೆದವು (ಕೇಬಲ್ ಟಿವಿ ಇಲ್ಲದ ಕಾಲ ಅದು).  ಕೆಲವೇ ದಿನಗಳಲ್ಲಿ 'ಮೃತ' ಮುಸ್ಲಿಮರೆಲ್ಲಾ ಜೀವಂತವಾಗಿ ತಂತಮ್ಮ ಮನೆಗಳಿಗೆ ಸದ್ದಿಲ್ಲದೇ ಹಿಂತಿರುಗಿದರು!  ಆ ವರ್ಷಾಂತ್ಯಕ್ಕೆ ಕಾಶ್ಮೀರಿ ಕಣಿವೆಯಲ್ಲಿ ಆರಂಭವಾದ ಭಯೋತ್ಪಾದನೆ ಹಿಂದೂ ಪಂಡಿತರನ್ನು ಒಕ್ಕಲೆಬ್ಬಿಸತೊಡಗಿದಾಗ ಇದೇ ಪತ್ರಿಕೆಗಳಿಗೆ ಅದು ಸುದ್ಧಿಯಾಗಲಿಲ್ಲ.  ಅವು ಕತ್ತಿ ಬೀಸತೊಡಗಿದ್ದು ರಾಜ್ಯಪಾಲ ಜಗ್‌ಮೋಹನ್ ಮತ್ತು ದೆಹಲಿಯಲ್ಲಿದ್ದ ವಿ. ಪಿ. ಸಿಂಗ್ ನೇತೃತ್ವದ ಜನತಾ ದಳ (ಕಾಂಗ್ರೆಸ್ಸೇತರ !) ಸರಕಾರದ ವಿರುದ್ಧ.  ಅದೇ ಸುಮಾರಿಗೆ ಅದ್ವಾನಿ ನೇತೃತ್ವದ ಬಿಜೆಪಿ ತನ್ನ ತಾತ್ಕಾಲಿಕ ರಾಜಕೀಯ ಹಂಚಿಕೆಗನುಗುಣವಾಗಿ ರಾಮಜನ್ಮಭೂಮಿ ವಿಷಯವನ್ನೆತ್ತಿಕೊಂಡು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡತೊಡಗಿದಾಗ ಈ ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ.  ಅವುಗಳ ಕೈಗೆ ಧ್ವನಿವರ್ಧಕಗಳು ಬಂದವು.  ಅವುಗಳಲ್ಲಿ ಕೆಲವು ಬುದ್ಧಿಜೀವಿಗಳ ಕೈಗೂ ಬಂದುಬಿಟ್ಟವು.  ಆ ಬುದ್ಧಿಜೀವಿಗಳಲ್ಲಿ ಇಬ್ಬರು ನಮ್ಮ ಅನಂತಮೂರ್ತಿಗಳು ಮತ್ತು ಕಾರ್ನಾಡರು.  ಯಾವುದೋ ಯಾರದೋ ಹಿಡನ್ ಅಜೆಂಡಾದ ಭಾಗವಾಗಿರಬಹುದಾದ ಇವರ ರಾಜಕೀಯ ನಡೆಗಳ ಚರ್ಚೆ ಮುಂದಿನವಾರ.

ಎರಡನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಸುಳ್ಳು ಸಂಸ್ಕಾರ, ಸತ್ಯದ ತಲೆದಂಡ: ಎಂಧ ಅವಸ್ಥೆ!

2 comments:

  1. Informative article sir, but out so called Jnanapeethis will never try to understand all this. They have turned blind eye on reality. In fact such people only are unnecessarily pampering the muslim communities for their own benefits. They support Congress for their own benefits, and Congress supports minorities for its vote bank. Every thing is an open secret, but everybody pretends. This is the tragedy of Indian democracy. BUt we should be happy that atleast now people are realising the truth.

    ReplyDelete
    Replies
    1. Yes, ma'am. You are right. They will never try to understand. Or, their attitude, I feel, may be deliberate. We can awaken one who is really sleeping, but it is impossible to wake up someone who is pretending to be sleeping.

      Delete