ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, October 2, 2013

ಧರ್ಮಗುರುಗಳೂ ಸೈತಾನನೂ





ಮುನ್ನುಡಿ

ಪ್ರಿಯ ಓದುಗರೇ
            ಇದು ನನ್ನ ಮೂರನೆಯ ಲೇಖನ ಸಂಕಲನ.  ಏಪ್ರಿಲ್ ೨೦೧೨ ಹಾಗೂ ಮೇ ೨೦೧೩ರ ನಡುವಿನ ಆವಧಿಯಲ್ಲಿ ಬರೆದ ಲೇಖನಗಳಲ್ಲಿ ಆಯ್ದ ಮೂವತ್ತೊಂಬತ್ತು ಲೇಖನಗಳು ಇಲ್ಲಿವೆ.  ಒಂದೆರಡರ ಹೊರತಾಗಿ ಉಳಿದೆಲ್ಲವೂ ವಿಜಯವಾಣಿ ಕನ್ನಡ ದೈನಿಕದ ಜಗದಗಲ ಅಂಕಣದಲ್ಲಿ ಪ್ರಕಟವಾಗಿವೆ.  ಏಪ್ರಿಲ್ ೨೦೧೨ರಲ್ಲಿ ಪ್ರಕಟಣೆ ಆರಂಭಿಸಿದ ಈ ಪತ್ರಿಕೆಗೆ ನನ್ನನ್ನು ಪರಿಚಯಿಸಿ, ಜಗದಗಲ ಅಂಕಣಕ್ಕೆ ಕಾರಣರಾದವರು ಪತ್ರಿಕೆಯ ಪುರವಣಿ ಸಂಪಾದಕರಾದ ಶ್ರೀ ಎನ್. ಎಸ್. ಶ್ರೀಧರಮೂರ್ತಿಯವರು.  ವರ್ಷ ದಾಟಿದ ಒಡನಾಟದಲ್ಲಿ ತಮ್ಮ ನಿರಂತರ ಪ್ರೋತ್ಸಾಹದಿಂದ ಬರೆಯುವ ಖುಷಿಯನ್ನು ಹೊಸಹೊಸ ಮಜಲಿಗೇರಿಸಿದವರು ಪತ್ರಿಕೆಯ ಸಂಪಾದಕರಾದ ಶ್ರೀ ತಿಮ್ಮಪ್ಪ ಭಟ್, ಸಹಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ, ಉಪಸಂಪಾದಕರಾದ ಶ್ರೀ ಚಂದ್ರಶೇಖರ ಮಂಡೆಕೋಲು ಹಾಗೂ ಶ್ರೀ ನಾಗರಾಜ ಭಟ್ ಅವರುಗಳು.  ಈ ಸಹೃದಯಿಗಳಿಗೆ ಇಲ್ಲಿ ಕೃತಜ್ಞತೆ ಅರ್ಪಿಸುವುದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ.  ಇಲ್ಲಿನ ಒಂದು ಲೇಖನ ವಾರ್ತಾಭಾರತಿ ದೈನಿಕದಲ್ಲೂ, ಮತ್ತೊಂದು ಕೆಂಡಸಂಪಿಗೆ ಜಾಲತಾಣದಲ್ಲೂ ಪ್ರಕಟವಾಗಿವೆ.  ಅದಕ್ಕಾಗಿ ಶ್ರೀ ಬಿ. ಎಂ. ಬಶೀರ್ ಹಾಗೂ ಶ್ರೀ ಅಬ್ದುಲ್ ರಶೀದ್ ಅವರಿಗೆ ನಾನು ಅಭಾರಿ.
ನನ್ನ ಬರವಣಿಗೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಖ್ಯಾತ ವಿಮರ್ಶಕ ಶ್ರೀ ಎಸ್. ಆರ್. ವಿಜಯಶಂಕರ, ಹೆಸರಾಂತ ಸಾಹಿತಿ ಶ್ರೀ ಕೆ. ಸತ್ಯನಾರಾಯಣ, ಜನಪ್ರಿಯ ಕಾದಂಬರಿಕಾರ್ತಿ ಶ್ರೀಮತಿ ಪಾರ್ವತಿ ಪಿಟಗಿ, ಗೆಳೆಯರಾದ ಶ್ರೀ ಕು. ಗೋ., ಶ್ರೀ ಜಯದೇವ ಪ್ರಸಾದ ಮೊಳೆಯಾರ, ಶ್ರೀ ಶ್ರೀನಿವಾಸ ಉಪಾಧ್ಯ, ಶ್ರೀ ಎಂ. ದೊರೆರಾಜು ಮತ್ತು ಶ್ರೀ ಕೆ. ಎಂ. ಮಾದಪ್ಪ ಅವರುಗನ್ನು ನಾನಿಲ್ಲಿ ಪ್ರೀತಿಯಿಂದ ನೆನೆಯುತ್ತೇನೆ.
ಈ ಕೃತಿಯನ್ನು ಉತ್ಸಾಹದಿಂದ ಪ್ರಕಟಿಸುತ್ತಿರುವ ನಾಡಿನ ಗಣ್ಯ ಪ್ರಕಾಶನ ಸಂಸ್ಥೆ ಹೇಮಂತ ಸಾಹಿತ್ಯದ ರೂವಾರಿ ಶ್ರೀ ಎಂ. ವೆಂಕಟೇಶ್ ಅವರ ಪ್ರೀತಿ ಮತ್ತು ವಿಶ್ವಾಸಗಳನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಇದೇ ಸಮಯದಲ್ಲಿ, ನಿಮ್ಮಿಂದ ಬಂದ ಮೆಚ್ಚುಗೆಯ ಅಸಂಖ್ಯ ದೂರವಾಣಿ ಕರೆಗಳು ಮತ್ತು ಇ-ಮೇಲ್‌ಗಳೂ ನನಗೆ ಗಾಢವಾಗಿ ನೆನಪಾಗುತ್ತಿವೆ.  ಪ್ರೀತಿ, ವಿಶ್ವಾಸ, ಪ್ರೋತ್ಸಾಹಗಳಿಗಾಗಿ ನಿಮಗೆ ಅನಂತ ಕೃತಜ್ಞತೆಗಳು.
ಪ್ರೀತಿಯಿಂದ
ಪ್ರೇಮಶೇಖರ
cherryprem@gmail.com

ಬೆನ್ನುಡಿ
ಹುಳು ಹಿಡಿದ ಬೀಜದಿಂದ ಮೊಳಕೆಯೊಡೆದ ಸ್ವತಂತ್ರ ಭಾರತ ಬೆಳೆದು ಹೆಮ್ಮರವಾಗುತ್ತದೆಂಬ ನಿರೀಕ್ಷೆ ಹೊರಗಿನ ಯಾರಿಗೂ ಇರಲಿಲ್ಲ.   ಭಾರತ ಅನತಿ ಕಾಲದಲ್ಲಿ ಛಿದ್ರವಾಗುತ್ತದೆ ಎಂಬ ‘ನಂಬಿಕೆ ಐವತ್ತು-ಅರವತ್ತರ ದಶಕದಲ್ಲಿ ಪಶ್ಚಿಮದ ದೇಶಗಳಲ್ಲಿ ವ್ಯಾಪಕವಾಗಿತ್ತು.  ಈ ದೇಶದ ಬಗ್ಗೆ ಇಂತಹ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆಯೂ ಇಲ್ಲದೇ ಹೇಳುವವರಲ್ಲಿ ಗೌರವಾನ್ವಿತ ವಿದ್ವಾಂಸ ಸೆಲಿಗ್ ಹ್ಯಾರಿಸನ್‌ರಿಂದ ಹಿಡಿದು ಭವಿಷ್ಯ ಹೇಳುವುದರಲ್ಲಿ ಬಲು ಪ್ರಸಿದ್ಧಳಾಗಿದ್ದ ಅಮೆರಿಕನ್ ಕೊರವಂಜಿ ಜೀನ್ ಡಿಕ್ಸನ್ ಸಹಾ ಇದ್ದರು.  ಮತ್ತೆ ಕೆಲವು ವಿಶ್ಲೇಷಕರು ಈ ದೇಶ ಒಂದಾಗಿ ಉಳಿದರೂ ಹೆಚ್ಚು ಕಾಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಷರಾ ಬರೆದಿದ್ದರು.  ಅದಾಗಿ ಅರ್ಧ ಶತಮಾನ ಕಳೆದುಹೋಗಿದೆ.  ಕಳೆದ ಮೂರು ದಶಕಗಳಲ್ಲಿ “Land of the Rising Gun” ಎಂಬ ಕಾಳಜಿ ಬೆರೆತ ಅಪಹಾಸ್ಯಕ್ಕೆ ಗುರಿಯಾಗಿದ್ದರೂ ಭಾರತ ಒಂದಾಗಿ ಉಳಿದಿದೆ ಮತ್ತು ಪ್ರಜಾಪ್ರಭುತ್ವವಿಲ್ಲಿ ದಿನೇದಿನೇ ಆಳವಾಗಿ ಬೇರೂರುತ್ತಿದೆ.  ಇನ್ನೊಂದು ವರ್ಷದಲ್ಲಿ ಭಾರತೀಯರು ಪ್ರಜಾಸತ್ತಾತ್ಮಕ ವಿಧಾನದಲ್ಲಿ ಹದಿನಾರನೇ ಲೋಕಸಭೆಯನ್ನು  ಚುನಾಯಿಸುವುದರಲ್ಲಿದ್ದಾರೆ.  ಇದಕ್ಕೆ ವಿರುದ್ಧವಾಗಿ, ಧಾರ್ಮಿಕ ಏಕತೆಯಿಂದಾಗಿ ಸಧೃಡ ರಾಷ್ಟ್ರವಾಗಿ ಬೆಳೆದು ಏಶಿಯಾದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆಂದು ಪಶ್ಚಿಮದ ದೊಡ್ಡಮನುಷ್ಯರುಗಳು ಕೊಂಡಾಡಿದ್ದ ಪಾಕಿಸ್ತಾನ ಹುಟ್ಟಿದ ಕಾಲು ಶತಮಾನ ಪೂರೈಸುವುದರೊಳಗೇ ಎರಡು ತುಂಡಾದ್ದಲ್ಲದೇ ಈಗ ದಕ್ಷಿಣ ಏಶಿಯಾದ ರೋಗಿಷ್ಟನಾಗಿ ನರಳುತ್ತಿದೆ.  ಒಂದು ಅರ್ಥದಲ್ಲಿ ಅದೀಗ ಏಶಿಯಾವಷ್ಟೇ ಏಕೆ ಅಮೆರಿಕಾ ಸೇರಿದಂತೆ ಇಡೀ ಪ್ರಪಂಚದ ಇತಿಹಾಸದಲ್ಲೇ ಬಲು ಮಹತ್ವದ ಪಾತ್ರ ನಿರ್ವಹಿಸುತ್ತಿರುವುದೇನೋ ನಿಜ.  ಆದರೆ ಅದು ನಕಾರಾತ್ಮಕ ಹಾಗೂ ವಿನಾಶಕಾರೀ ಪಾತ್ರ ಎನ್ನುವುದಷ್ಟೇ ದುರಂತ.

2 comments:

  1. Congratulations Sir...

    One thing I could not make out, what this book is all about? I failed make out from your 'Munnudi' and also from your 'Bennudi'... It would be helpful if you can elaborate....

    Regards,
    Srinivasa S S

    ReplyDelete
    Replies
    1. Thank you sir. This a collection of 40 articles that have appeared in the "Jagadagala" column of Vijayavani. Bennudi is an extract from one of the articles.

      Delete