ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, July 16, 2014

"ಬೆಂಗಳೂರು ಮಾಫಿಯಾ" ಬಗ್ಗೆ ಓದುಗ ಮಿತ್ರರೊಬ್ಬರ ಅನಿಸಿಕೆಗಳು


"ಬೆಂಗಳೂರು ಮಾಫಿಯಾ" ಕಥೆಯನ್ನು ಓದುಗ ಮಿತ್ರರೊಬ್ಬರು ಕಂಡ ಬಗೆ ಇದು.  ಹಾಗೆಯೇ ನನ್ನ ಒಟ್ಟಾರೆ ಕಥೆಗಾರಿಕೆಯ ಬಗೆಗೂ ಸೂಕ್ಷ್ಮ ಒಳನೋಟಗಳು ಇಲ್ಲಿವೆ.  ಆ ಸಹೃದಯಿ ಓದುಗ ಮಿತ್ರರ ಪತ್ರದ ಪೂರ್ಣಪಾಠವನ್ನು ಅವರ ಅನುಮತಿಯೊಂದಿಗೆ ಇಲ್ಲಿ ಹಾಕಿದ್ದೇನೆ.  ತಮ್ಮ ಹೆಸರನ್ನು ಉಲ್ಲೇಖಿಸಬಾರದೆಂದು ಅವರ ಕೋರಿಕೆಯಾದ್ದರಿಂದ ಅದನ್ನು ಇಲ್ಲಿ ನಮೂದಿಸಿಲ್ಲ.

ನಿಮ್ಮ ಬ್ಲಾಗಿನಲ್ಲಿ ಪ್ರಕಟವಾದ ನಿಮ್ಮ ಎಲ್ಲ ಕಥೆಗಳನ್ನು ಓದಿದ್ದೇನೆ.  ಹೆಚ್ಚಾಗಿ ನಿಮ್ಮ ನಿಜ ಜೀವನದ ಘಟನೆ/ಅನುಭವಗಳನ್ನೇ ನೀವು ಹೆಚ್ಚಿನ ಕಥೆಗಳಿಗೆ ಬಳಸಿಕೊಳ್ಳುವುದು ಓದುಗನಿಗೆ ಬಹಳ ಆಪ್ತ ಹಾಗು ಪ್ರಾಮಾಣಿಕವೆಂದೆನಿಸುತ್ತದೆ.  ಆದ್ದರಿಂದ ಬಹಳ ಬೇಗ ಕಥೆ ಹತ್ತಿರಾಗಿ ಬಿಡುತ್ತದೆ (ನನಗೂ ಅದೇ ಇಷ್ಟ).  
ಇನ್ನು ನೀವೇ ಹೇಳಿದಂತೆ ಲಿಟರರಿ ಪಾಲಿಟಿಕ್ಸ್ ಬಗ್ಗೆ ಬಸವಣ್ಣನ ಬಾಯಿಂದ ಬೈಸಿರುವುದು ಇವತ್ತಿನ ಸಾಹಿತ್ಯಲೋಕದ ರಾಜಕೀಯಕ್ಕೆ ಚಾಟಿ ಏಟು ಕೊಡುವ ಪ್ರಯತ್ನವೆಂದೆನಿಸಿ ಆಪ್ತವಾಗಿಬಿಡುತ್ತದೆ ಕೆಲವೊಮ್ಮೆ.  ಆದರೆ ಅದು ಲಿಟರರಿ ಪಾಲಿಟಿಕ್ಸ್ನ ಒಂದು ಭಾಗ/ಆಯಾಮವೇ ಹೊರತು ಬರೀ ಅಷ್ಟೇ ಅಲ್ಲ ಎಂಬುದು ನಮಗೆ ಅರ್ಥವಾದಲ್ಲಿ ನಿಮ್ಮ ಕಥೆಯೂ ಸಹ ಕೇವಲ ಲಿಟರರಿ ಪಾಲಿಟಿಕ್ಸ್‍ನಲ್ಲೇ ನಿಲ್ಲದೆ ಇನ್ನೂ ವಿಸ್ತಾರವಾಗಿ ಅರ್ಥವಾಗುತ್ತಾ ಹೋಗುತ್ತದೆ.
ಇನ್ನು ಒಬ್ಬ ವಿಮರ್ಶಕನ ಬದುಕಿನ ಚಿತ್ರಣ ಕಟ್ಟಿಕೊಟ್ಟ ಪರಿ ಬಹಳ ಇಷ್ಟವಾಯ್ತು.  ಬಸವಣ್ಣನನ್ನು ವಾಚಾಳಿಯನ್ನಾಗಿಸಿ ಅವನ ಬಾಯಿಂದಲೇ ಅವನ ಬದುಕಿನ ಪೂರ್ಣ ಚಿತ್ರಣವನ್ನು ಕಟ್ಟಿಕೊಡುವ ಪರಿ, ಅವನ ಸಾಮಾಜಿಕ ಸ್ಥಾನಮಾನಗಳು ಹಾಗು ಅದನ್ನು ಉಳಿಸಿಕೊಳ್ಳಲು ಅವನ ಹೆಣಗಾಟ ಇದನ್ನು ಹೇಳಲು ನೀವು ಅವನನ್ನು ವಾಚಾಳಿ ಮಾತ್ರವಲ್ಲದೆ ಇತರರನ್ನು ದೂಷಿಸುವವನನ್ನಾಗಿ ಮಾಡಿ ಅದರ ಮೂಲಕ ಅವನಿಗೆ ಶತ್ರುಗಳನ್ನು ಹೆಚ್ಚಿಸಿ ಅಲ್ಲಿಂದ ಮುಂದೆ ಅವನನ್ನು ಹುನ್ನಾರ ಮಾಡಿ ಬೀಳಿಸುವವರೆಗೂ ಬಸವಣ್ಣ ಎನ್ನುವ ಪಾತ್ರ ಓದುಗನ ಮನದಲ್ಲಿ ಘಟ್ಟಿಯಾಗುತ್ತಾ ಹೋಗುತ್ತದೆ.  ಹಾಗೆಯೆ ಅವನ ಸಂಕಟ ಅರ್ಥವಾಗುತ್ತಾ ಹೋಗುತ್ತದೆ.
ಇನ್ನು ಕಥೆಯಲ್ಲಿ ನೀವು ಬಳಸಿರುವ ಮುಖ್ಯ ವಸ್ತು ಸಾಂಪ್ರದಾಯಿಕ ವಿಮರ್ಶಕ ಹಾಗು ಯುವ-ವಿಮರ್ಶಕರ/ಲೇಖಕರ ನಡುವಿನ ಸಂಘರ್ಷ.  ಅದನ್ನು ತಿಳಿಸಲು ಬಳಸಿರುವ ಸೈಕಲ್-ಅಜ್ಜ ಹಾಗು ಯುವರೋಗಿಯ ರೂಪಕ ಇಡಿಯ ಕಥೆ ಸಾರಾಂಶ ಅಡಗಿದೆ ಎಂದೆನಿಸುತ್ತದೆ ನನಗೆ.  ರೀತಿಯ ರೂಪಕಗಳು ನಿಮ್ಮ ಕಥೆಗಳಲ್ಲಿ ನಾನು ಅನೇಕ ಬಾರಿ ನೋಡಿದ್ದೇನೆ.
ಒಂದು ದೃಶ್ಯ ಕಟ್ಟಿಕೊಡುವಾಗ ನಿಮ್ಮ ತಾಳ್ಮೆ ಬಹಳ ಅದ್ಭುತ.  ಏಕೆಂದರೆ ಅಲ್ಲಿನ ಸಣ್ಣ ಸಣ್ಣ ವಿಷಯಗಳನ್ನೂ ನೊಂದಾಯಿಸುವುದರಿಂದ ಇಡಿಯ ದೃಶ್ಯ ತಲೆಯಲ್ಲಿ ರೆಜಿಸ್ಟರ್ ಆಗಿ ಕಣ್ಣ ಮುಂದೆಯೆ ನಡೆಯುವಂತಾಗುತ್ತದೆ.  ಇದು ಕೇವಲ ಕಥೆಯಲ್ಲದೇ ನಿಮ್ಮ ಅನೇಕ ಕಥೆಗಳಲ್ಲಿ ನೋಡಿದ್ದೇನೆ.
ಕೊನೆಯದಾಗಿ ನಿಮ್ಮ ಅನೇಕ ಕಥೆಗಳಲ್ಲಿಯೂ ಕಂಡು ಬರುವಂತದ್ದು ಕಥೆಯಲ್ಲು ಇರುವಂತದ್ದೆಂದರೆ ಬರಹಗಾರನೇ ನಿರೂಪಕನಾಗಿದ್ದು ಆತನು ಬಹಳ ಒಳ್ಳೆಯ, ಮುಗ್ದ, ಸಂಕೋಚ ಸ್ವಭಾವದ, ಹೆಚ್ಚಿನ ರಾಜಕೀಯ ಲಾಬಿ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮುಗ್ದ ಹೀರೋ ಆಗಿ ಚಿತ್ರಿಸುವುದು ಹಾಗು ಅದನ್ನು ಓದುಗ ಕಥೆ ಆರಂಭದಲ್ಲೇ ನಂಬಿಕೊಂಡು/ಒಪ್ಪಿಕೊಂಡು ಓದಬೇಕು.  ಇದು ನೀವು ನಿಮ್ಮ ಅನೇಕ ಕಥೆಗಳಲ್ಲಿ ನಿಮ್ಮ ಅಂದರೆ ನಿರೂಪಕನನ್ನು ಚಿತ್ರಿಸುವ ರೀತಿ.
ತಾಂತ್ರಿಕವಾಗಿ ನಿಮ್ಮ ಬೇರೆ ಕಥೆಗಳಿಗಿಂತ ಅಷ್ಟೇನೂ ವಿಶಿಷ್ಟವಾಗಿ ನಿಲ್ಲದೇ ಇದ್ದರೂ ನಿಮ್ಮ ಇತರ ಕಥೆಗಳಂತೆ ಇದೂ ಸಹ ಸುಲಲಿತವಾಗಿ ಓದಿಸಿಕೊಂಡು ಹೋಗುವ ಮತ್ತೊಂದು ನಿಮ್ಮದೇ ಶೈಲಿಯ ಉತ್ತಮ ಕಥೆ ಎಂದು ನನ್ನ ಅನಿಸಿಕೆ.
ಇನ್ನೂ ನಿಮ್ಮ ಅನೇಕ ಕಥೆಗಳನ್ನು ಓದುವುದು ಬಾಕಿ ಇರುವುದರಿಂದ ಇನ್ನೊಮ್ಮೆ ಹೆಚ್ಚಿನ ಬರವಣಿಗೆಗೆ ಪ್ರಯತ್ನಿಸುತ್ತೇನೆ. ನಾನು ನಿಮ್ಮ ಕಥೆಗಳ ಅಭಿಮಾನಿಯಾಗಿ ಇದನ್ನು ಬರೆಯುತ್ತಿದ್ದೇನೆ ಹೊರತು ವಿಮರ್ಶಕನಾಗಿ ಯಾಕೆಂದರೆ ನಾನು ವಿಮರ್ಶಕ ಅಲ್ಲ, ಬರಿಯ ಓದುಗ ಅಷ್ಟೆ.
 ಪ್ರೀತಿಯಿಂದ,

ಕಥೆಗಾಗಿ ಇಲ್ಲಿ ಕ್ಲಿಕ್ ಮಾಡಿ:  ಬೆಂಗಳೂರು ಮಾಫಿಯಾ