ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, November 8, 2017

ಅನಾಣ್ಯೀಕರಣ


ಭಾಗ - ಒಂದು
ಕಪ್ಪುಗಟ್ಟಿದ, ಬೆಳಗಲಿರುವ ಮುಖಗಳು

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ೫೦೦ ಮತ್ತು ೧೦೦೦ ರೂಪಾಯಿ ಮೌಲ್ಯದ ಕರೆನ್ಸಿ ನೋಟ್‌‍ಗಳ ಅನಾಣ್ಯೀಕರಣದ ಘೋಷಣೆಯಾಗಿ ಇಂದಿಗೆ ಸರಿಯಾಗಿ ೫೦ ದಿನಗಳು.   ಮೊದಲ ಒಂದು ವಾರದಲ್ಲಿ ಎಲ್ಲೆಲ್ಲೂ ಗೊಂದಲ, ಸಣ್ಣ ಮೌಲ್ಯದ ನೋಟುಗಳಿಗಾಗಿ ಹಾಹಾಕಾರ, ಎಟಿಎಂಗಳ ಮುಂದೆ, ಬ್ಯಾಂಕ್‌‍ಗಳಲ್ಲಿ ಉದ್ದೋಉದ್ದದ ಸಾಲುಗಳು.  ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಎಸ್‌‍ಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಮೋದಿಯವರ ಯಾವ ಮಾತನ್ನೂ ಕೇಳಲು ತಯಾರಿಲ್ಲ.  ಅಮುದ್ರೀಕರಣದ ವಿರುದ್ಧ ಅವು ಯುದ್ಧವನ್ನೇ ಸಾರಿವೆ, ತಮ್ಮ ಕೂಗಾಟಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಇಡಿಯಾಗಿ ಬಲಿಗೊಟ್ಟಿವೆ.  ಇದಕ್ಕೆ ಜೆಡಿ(ಯು), ಬಿಜು ಜನತಾದಲ್ ಮುಂತಾದ ಕೆಲ ಪಕ್ಷಗಳು ಪ್ರಧಾನಮಮಂತ್ರಿಯವರ ಕಾರ್ಯಯೋಜನೆಗಳಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿವೆ.  ಸಮಾಜವಾದಿ ಪಕ್ಷದಂತಹ ಮತ್ತೆ ಕೆಲವು ಅಡ್ಡಗೋಡೆಯನ್ನೇರಿ ಕೂತಿವೆ.  ಒಟ್ಟಿನಲ್ಲಿ ದೇಶದ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಗೊಂದಲವೋ ಗೊಂದಲ.  ಆದರೆ ಗೊಂದಲದ ಅಬ್ಬರದ ಹಿಂದೆಯೇ ತೆರೆಮರೆಯಲ್ಲಿ ಹಲವಾರು ಕರಾಳ ಸತ್ಯಗಳು ಬೆತ್ತಲಾಗಿಹೋಗಿವೆ.

ಹಾಗೆ ನೋಡಿದರೆ, ಉನ್ನತ ಮೌಲ್ಯದ ಕರೆನ್ಸಿ ನೋಟ್‌‍ಗಳ ಅಮುದ್ರೀಕರಣ ಮಾಡಿದ್ದರಲ್ಲಿ ಭಾರತ ಮೊದಲಿನದೇನೂ ಅಲ್ಲ, ಭಾರತದಲ್ಲೇ ನರೇಂದ್ರ ಮೋದಿ ಸರ್ಕಾರ ಮೊದಲಿನದೂ ಅಲ್ಲ.  ಎರಡನೆಯ ಮಹಾಯುದ್ಧದಿಂದ ತತ್ತರಿಸಿಹೋಗಿದ್ದ ಬ್ರಿಟಿನ್, ಫ್ರಾನ್ಸ್, ಬೆಲ್ಜಿಯಂನಂತಹ ದೇಶಗಳು ಕ್ರಮಕ್ಕೆ ಮುಂದಾಗಿ ಅದರ ಬಿಸಿ ಭಾರತಕ್ಕೂ ತಟ್ಟಿ ಜನವರಿ ೧೯೪೬ರಲ್ಲಿ ೫೦೦, ೧,೦೦೦, ೫,೦೦೦ ಹಾಗೂ ೧೦,೦೦೦ ರೂಪಾಯಿ ಮೌಲ್ಯದ ನೋಟ್‌‍ಗಳು ಅಮುದ್ರೀಕರಣಗೊಂಡವು.  ೧೯೫೪ರಲ್ಲಿ ಮತ್ತೆ ಚಲಾವಣೆಗೆ ಬಂದ ೫,೦೦೦ ಹಾಗೂ ೧೦,೦೦೦ ರೂಪಾಯಿ ಮೌಲ್ಯದ ನೋಟ್‌‍ಗಳು ಜನವರಿ ೧೯೭೮ರಲ್ಲಿ ಅಮುದ್ರೀಕಣಗೊಂಡವು.

ವಿದೇಶಗಳ ಬಗ್ಗೆ ಹೇಳುವುದಾದರೆ ಅಮೆರಿಕಾದಲ್ಲಿ ೧೯೬೯ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ೧೦೦ ಡಾಲರ್ಗಳಿಗಿಂತ ಹೆಚ್ಚಿನ ಮೌಲ್ಯದ ಎಲ್ಲಾ ನೋಟ್ಗಳನ್ನೂ ಅಮಾನ್ಯಗೊಳಿಸಿಬಿಟ್ಟರು.  ಆಸ್ಟ್ರೇಲಿಯಾ ಸಹಾ ೧೯೯೬ರಲ್ಲಿ ಇಂತಹದೇ ಕ್ರಮಕ್ಕೆ ಮುಂದಾಯಿತು.  ಎರಡೂ ದೇಶಗಳು ಕ್ರಮ ಕೈಗೊಂಡದ್ದು ಕಾಳಧನದ ಹಾವಳಿಯನ್ನು ನಿಗ್ರಹಿಸುವ ಉದ್ದೇಶದಿಂದ.  ನೈಜೀರಿಯಾ, ಝಾಯಿರೆ, ಝಿಂಬಾಬ್ವೆ, ಉತ್ತರ ಕೊರಿಯಾ ಸಹಾ ವಿವಿಧ ಬಗೆಯ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ಅಮುದ್ರೀಕರಣದ ಮೊರೆಹೋಗಿವೆ.  ಕೆಲವು ಯಶಸ್ವಿಯಾದರೆ ಮತ್ತೆ ಕೆಲವು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಯಿಸಿಕೊಂಡವು.  ನೆರೆಯ ಪಾಕಿಸ್ತಾನ ಸಹಾ ಕಾಳಧನದ ಸಂಗ್ರಹ ಮತ್ತು ಜಾಲಿ ನೋಟ್ಗಳ ಹಾವಳಿಯನ್ನು ತಪ್ಪಿಸಲು ಜೂನ್ ೨೦೧೫ರಲ್ಲಿ ೫೦೦ ರೂಪಾಯಿ ಮೌಲ್ಯದ ನೋಟ್‌‍ಗಳನ್ನು ಅಮಾನ್ಯಗೊಳಿಸಿತು.  ಆದರೆ ಅವುಗಳನ್ನು ಹೊಸ ನೋಟ್‌‍ಗಳಿಗೆ ಬದಲಾಯಿಸಿಕೊಳ್ಳಲು ಜನತೆಗೆ ಒಂದೂವರೆ ವರ್ಷಗಳ ಕಾಲಾವಕಾಶ ನೀಡಿ ಅದೀಗ ಇದೇ ಡಿಸೆಂಬರ್ ೧ಕ್ಕೆ ಅಂತ್ಯಗೊಂಡಿದೆ.  ಸರ್ಕಾರದ ಕ್ರಮಕ್ಕೆ ದೀರ್ಘ ಕಾಲಾವಕಾಶವೇ ಮುಳುವಾಗಿ ಕಾಳಧನ ಶ್ವೇತಧನವಾಗಿ ಬದಲಾಗಿಹೋಗಿದೆ ಮತ್ತು ಜಾಲಿ ನೋಟ್ ಮುದ್ರಕರು ಹೊಸ ನೋಟ್‌‍ಗಳನ್ನೂ ಯಶಸ್ವಿಯಾಗಿ ಅನುಕರಿಸಿಬಿಟ್ಟಿದ್ದಾರೆ.  ಹೀಗಾಗಿ ಸರ್ಕಾರದ ಉದ್ದೇಶ ಸಾಧನೆಯಾಗಿಲ್ಲ.

ಪ್ರಸಕ್ತ ಭಾರತ ಸರ್ಕಾರ ಉನ್ನತ ಮೌಲ್ಯದ ನೋಟ್‌‍ಗಳ ಅಮುದ್ರೀಕರಣಕ್ಕೆ ನೀಡಿದ ಕಾರಣಗಳು ಮುಖ್ಯವಾಗಿ ಎರಡು- ಕತ್ತಲಲ್ಲಿ ಅಡಗಿಕೂತ ಅಗಾಧ ಕಾಳಧನವನ್ನು ಹೊರಗೆಳೆದು ಅರ್ಥವ್ಯವಸ್ಥೆಗೆ ತರುವುದು ಅಥವಾ ಕತ್ತಲಲ್ಲೇ ಕೊಳೆತುಹೋಗುವಂತೆ ಮಾಡುವುದು ಹಾಗೂ ಜಾಲಿ ನೋಟ್‌‍ಗಳ ಕಳೆಯನ್ನು ಅರ್ಥವ್ಯವಸ್ಥೆಯ ಹೊಲದಿಂದ ಕಿತ್ತುಹಾಕುವುದು.  ಉದ್ದೇಶಗಳು ಸಾಧಿತವಾಗುತ್ತಿವೆಯೇ ಎಂದು ನೋಡುವುದಕ್ಕೆ ಮೊದಲು ಕಾರಣಗಳು ವಾಸ್ತವವೇ ಎಂದು ಪರಿಶೀಲಿಸೋಣ.

ಹತ್ತು ವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ ಅರ್ಥವ್ಯವಸ್ಥೆಯಲ್ಲಿ ಉನ್ನತ ಮೌಲ್ಯದ ನೋಟ್‌‍ಗಳ ಪ್ರಮಾಣ ಅಗಾಧವಾಗಿ ಏರಿತು.  ೨೦೦೪ರಲ್ಲಿ ಕೇವಲ ೩೪% ಇದ್ದ ಅವುಗಳ ಪ್ರಮಾಣ ಮುಂದಿನ ಆರೇ ವರ್ಷಗಳಲ್ಲಿ ದುಪ್ಪಟ್ಟಿಗಿಂತಲೂ ಅಧಿಕವಾಗಿ ೭೯%ಕ್ಕೇರಿತು!  ಅಷ್ಟೇ ಅಲ್ಲ, ೨೦೧೪ರಲ್ಲಿ ಯುಪಿಎ ಅಧಿಕಾರ ಕಳೆದುಕೊಳ್ಳುವ ಹೊತ್ತಿಗೆ ಅದು ೮೬%ಗೆ ಮುಟ್ಟಿತ್ತು!  ಅಂದರೆ . ಲಕ್ಷ ಕೋಟಿಯಿದ್ದ ೫೦೦ ಹಾಗೂ ೧,೦೦೦ ಮೌಲ್ಯದ ನೋಟ್‌‍ಗಳು ಹತ್ತು ವರ್ಷಗಳಲ್ಲಿ ೧೪. ಲಕ್ಷ ಕೋಟಿಗೇರಿದವು.  ಇದೇ ಆವಧಿಯಲ್ಲಿ ೧೦೦, ೫೦, ೨೦, ೧೦ ಹಾಗೂ ರೂಪಾಯಿ ಮೌಲ್ಯದ ನೋಟ್‌‍ಗಳ ಪ್ರಮಾಣ ವೇಗವಾಗಿ ಕುಗ್ಗಿ ೨೦೦೪ರಲ್ಲಿ ಅರ್ಥವ್ಯವಸ್ಥೆಯ ೬೬%ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದ ಅವು ೨೦೧೪ರ ಹೊತ್ತಿಗೆ ಕೇವಲ ೧೪%ಗೆ ಕುಸಿದವು.  ೫೦೦ ಮತ್ತು ೧,೦೦೦ ರೂಪಾಯಿ ಮೌಲ್ಯದ ನೋಟ್‌‍ಗಳು ಹೆಚ್ಚಾದಂತೆ ಕಡಿಮೆ ಸ್ಥಳದಲ್ಲಿ ಹೆಚ್ಚು ಹಣವನ್ನು ಕೂಡಿಡಬುದಾದ ಅವಕಾಶವೂ ಅಗಾಧವಾಗಿ ವೃದ್ಧಿಸಿ ಅವುಗಳನ್ನು ಅಡಗಿಸಿಡುವುದು ಕಾಳಧನಿಕರಿಗೆ ಸುಲಭವಾಯಿತು.  ರಿಸರ್ವ್ ಬ್ಯಾಂಕ್ ಚಲಾವಣೆಗೆ ತಂದ ೧,೦೦೦ ರೂಪಾಯಿ ಮೌಲ್ಯದ ನೋಟ್‍‍ಗಳಲ್ಲಿ ಮೂರನೇ ಎರಡರಷ್ಟು ಮತ್ತು ೫೦೦ ರೂಪಾಯಿ ನೋಟ್‌ಗಳಲ್ಲಿ ಮೂರನೇ ಒಂದರಷ್ಟು ನೋಟ್‌‍ಗಳು ಅರ್ಥವ್ಯವಸ್ಥೆಗೆ ಹಿಂತಿರುಗಿ ಬರುತ್ತಿಲ್ಲ, ಅಂದರೆ 'ಕಾಣೆಯಾಗುತ್ತಿವೆ' ಎಂದು ರಿಸರ್ವ್ ಬ್ಯಾಂಕ್‌‍ ಮಾಜಿ ಗವರ್ನರ್ ರಘುರಾಮ್ ರಾಜನ್ ಸರ್ಕಾರಕ್ಕೆ ನೀಡಿದ ವರದಿಯೊಂದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು.  ಇದು ಕಳೆದ ಹನ್ನೆರಡು ವರ್ಷಗಳಲ್ಲಿ ದೇಶದಲ್ಲಿ ಕಾಳಧನದ ಪ್ರಮಾಣ ಹೇಗೆ ವೃದ್ಧಿಸಿದೆ ಎನ್ನುವುದರ ಒಂದು ಚಿತ್ರಣವನ್ನು ನೀಡುತ್ತದೆ.  ಯುಪಿಎ ಸರ್ಕಾರ ಮುದ್ರಿಸಿದ ೫೦೦, ೧,೦೦೦ ಮೌಲ್ಯದ ಅಗಾಧ ನೋಟ್‌‍ಗಳು ಎಲ್ಲಿ ಅಡಗಿಹೋದವೆಂಬ ಪ್ರಶ್ನೆಗೆ ಉತ್ತರ ಬೇಕಾದರೆ ವರ್ಷವರ್ಷವೂ ಲಕ್ಷಾಂತರ ರೂಪಾಯಿ ಮೌಲ್ಯದ ಹಗರಣಗಳಲ್ಲಿ ಆಳುವ ಪಕ್ಷಗಳವರೇ ಭಾಗಿಯಾಗಿದ್ದ ದುರಂತ ವಾಸ್ತವದತ್ತ ಒಮ್ಮೆ ತಿರುಗಿ ನೋಡಬಹುದು.

ಚಲಾವಣೆಗಿಳಿದ ಹಣ ಮತ್ತೆ ಬ್ಯಾಂಕ್‌‍ಗಳಿಗೆ ಹೋದರೆ ಆಗ ಹಣವನ್ನು ಬ್ಯಾಂಕ್‌‍ಗಳು ಸಾಲ ನೀಡುವ ಮೂಲಕ ಮತ್ತೆ ಚಲಾವಣೆಗೆ ಬಿಡುತ್ತವೆ.  ಮರುಪಾವತಿಯ ಮೂಲಕ ಹಣ ಮತ್ತೆ ಬ್ಯಾಂಕ್‌‍ಗಳಿಗೆ ಬಂದರೆ ಹಣ ಮತ್ತೊಮ್ಮೆ ಸಾಲದ ರೂಪದಲ್ಲಿ ಚಲಾವಣೆಗಿಳಿಯುತ್ತದೆ.  ಸರಪಳಿ ಕ್ರಿಯೆ ಮುಂದುವರೆದು “credit creation” ಎಂಬ ಪ್ರಕ್ರಿಯೆಯ ಮೂಲಕ ನೂರು ರೂಪಾಯಿ ದುಪ್ಪಟ್ಟು, ನಾಲ್ಕು ಪಟ್ಟು ಮೌಲ್ಯ ಗಳಿಸಿಕೊಳ್ಳುತ್ತದೆ. ಗಳಿಸಿಕೊಂಡಷ್ಟೂ ಉದ್ದಿಮೆದಾರರಿಗೆ, ಗ್ರಾಹಕರಿಗೆ ಸಾಲ ದೊರೆಯುತ್ತಾ ಹೋಗುತ್ತದೆ, ಪರಿಣಾಮವಾಗಿ ವಸ್ತುಗಳಿಗೆ ಬೇಡಿಕೆ ಹೆಚ್ಚಿ ಅದಕ್ಕನುಗುಣವಾಗಿ ಉತ್ಪಾದನೆಯೂ ವೃದ್ಧಿಸಿ ಅರ್ಥವ್ಯವಸ್ಥೆ ಬೆಳೆಯುತ್ತದೆ.  ಆದರೆ ಬಹುಪಾಲು ಉನ್ನತ ಮೌಲ್ಯದ ನೋಟ್‌‍ಗಳು ಮತ್ತೆ ಬ್ಯಾಂಕ್‌‍ಗಳಿಗೆ ಹಿಂತಿರುಗದೇ ದೇಶದಲ್ಲೋ, ಹೊರಗೋ ಅಡಗಿಕೂತ ಪರಿಣಾಮವಾಗಿ ಬ್ಯಾಂಕ್‌‍ಗಳಲ್ಲಿ credit creation ಪ್ರಕ್ರಿಯೆ ಕ್ಷೀಣಿಸುತ್ತಾ ಹೋಯಿತು.   ಬಿಕ್ಕಟ್ಟು ಯಾವ ಮಟ್ಟಕ್ಕೆ ಹೋಯಿತೆಂದರೆ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ ಬ್ಯಾಂಕ್ ಸಾಲ ಸುಲಭವಾಗಿ ದೊರೆಯುವಂತೆ ಮಾಡಲು ಮೋದಿ ಸರ್ಕಾರಮುದ್ರಾ ಯೋಜನೆ” ರೂಪಿಸಿದಾದ ಅದಕ್ಕೆ ಬೇಕಾದಷ್ಟು ಹಣ ಬ್ಯಾಂಕ್‌‍ಗಳಲ್ಲಿ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಗೋಳು ತೋಡಿಕೊಳ್ಳುವಂತಾಯಿತು.

ಹಾಗಿದ್ದರೆ ಹೀಗೆ 'ಕಾಣೆಯಾದ' ಹಣ ಹೋದದ್ದೆಲ್ಲಿ?  ಅದರ ಬಹುಪಾಲು ಎಲ್ಲಿಗೂ ಹೋಗಲಿಲ್ಲ, ದೇಶದೊಳಗೇ ಉಳಿದು ತನ್ನ ರುದ್ರನರ್ತನ ಆರಂಭಿಸಿತು.  ಕಾಳಧನಿಕರು ಚಿನ್ನ, ಭೂಮಿ, ಮನೆಗಳನ್ನು ಕೊಳ್ಳಲು ತಮ್ಮ ಕಾಳಧನವನ್ನು ಬಳಸತೊಡಗಿದ್ದರಿಂದ ಅವುಗಳ ಬೆಲೆ ತಾರಾಮಾರು ಏರಿ ಅವು ಸಾಮಾನ್ಯನ ಕೈಗೆ ಎಟುಕಲಾರದಂತಾಗಿಬಿಟ್ಟವು.  ಆಹಾರವಸ್ತುಗಳು, ಸಾಮಾನ್ಯ ಗ್ರಾಹಕ ವಸ್ತುಗಳಿಗೂ ಬೆಲೆ ಏರಿ ಹಣದುಬ್ಬರ ಹೇಗೆ ಮೇಲಮೇಲಕ್ಕೆ ಏರಿತೆನ್ನುವುದನ್ನು ನಾವೆಲ್ಲಾ ಅನುಭವಿಸಿಯೇ ಇದ್ದೇವೆ.  ಇಷ್ಟಾಗಿಯೂ, ದೇಶದ ರಾಷ್ಟ್ರೀಯ ನಿವ್ವಳ ಉತ್ಪಾದನೆ (ಜಿಡಿಪಿ) ವಿಶ್ವದಲ್ಲೇ ಏಳನೆಯ ದೊಡ್ಡದು, ದೇಶದ ಆರ್ಥಿಕ ಬೆಳವಣಿಗೆಯ ಪ್ರಮಾಣ .%ಗಿಂತಲೂ ಮೇಲೇರಿ ಚೀನಾವನ್ನು ಹಿಂದಿಕ್ಕಿ ನಾವೀಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯ ಒಡೆಯರಾಗಿದ್ದೇವೆ ಎಂಬ ಹೆಮ್ಮೆಯ ಮಾತಿನ ಅರ್ಥವೇನು?  ಅದಕ್ಕೆ ಯಾವ ಅರ್ಥವೂ ಇಲ್ಲ.  ಅರ್ಥವ್ಯವಸ್ಥೆಯಲ್ಲಿ ಕಾಳಧನದ ಪ್ರಮಾಣ ಅಧಿಕವಾದದ್ದರಿಂದ ಶೇರ್, ಚಿನ್ನ, ಭೂಮಿ ಜತೆಗೆ ಸಾಮಾನ್ಯ ವಸ್ತುಗಳ ಬೆಲೆಯೂ ತಾರಾಮಾರು ಏರಿದ ಕಾರಣ ವಸ್ತುಗಳ ಮೌಲ್ಯ ಹಾಗೂ ಅರ್ಥವ್ಯವಸ್ಥೆಯ ಪ್ರಮಾಣ ಅಂಕಿಅಂಶಗಳಲ್ಲಿ ಏರಿತಷ್ಟೇ.  ಸಾಮಾನ್ಯ ಭಾರತೀಯನ ದೈನಂದಿನ ಬದುಕಿನಲ್ಲಿ ಯಾವ ಉನ್ನತಿಯೂ ಕಾಣಲಿಲ್ಲ.  ಆರ್ಥಿಕ ಪ್ರಗತಿ ಎನ್ನುವುದು ನೀರ ಮೇಲಣ ಗುಳ್ಳೆಯಾಗುವುದು ಹೀಗೆ.

ಇನ್ನು ಜಾಲಿ ನೋಟುಗಳತ್ತ ತಿರುಗೋಣ.  ಜಾಲಿ ನೋಟ್ ಮುದ್ರಕರು ತಮ್ಮ ದಂಧೆಗೆ ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುವುದು ಉನ್ನತ ಮೌಲ್ಯದ ನೋಟ್ಗಳ ಮುದ್ರಣವನ್ನೇ ಎನ್ನುವುದು ನಿಮಗೆಲ್ಲಾ ಗೊತ್ತಿರುವಂತಹದ್ದೇ.  ಜಾಲಿ ನೋಟ್‌‍ಗಳು ಹಿಂದೆ ಇರಲಿಲ್ಲವೆಂದಲ್ಲ, ದೇಶದೊಳಗಿನ ದುಷ್ಕರ್ಮಿಗಳು ಅದರಲ್ಲಿ ಹಿಂದಿನಿಂದಲೂ ತೊಡಗಿಯೇ ಇದ್ದರು.  ಯುಪಿಎ ಆಡಳಿತಾವಧಿಯಲ್ಲಿ ಉನ್ನತ ಮೌಲ್ಯದ ನೋಟ್‌‍ಗಳ ಪ್ರಮಾಣ ಅಗಾಧವಾಗಿ ಏರಿದ್ದು ದುಷ್ಕರ್ಮಿಗಳಿಗೆ ಅನುಕೂಲವೇ ಆಯಿತು.  ಗಾಬರಿ ಹುಟ್ಟಿಸುವ ವಿಷಯವೆಂದರೆ ಇದರಲ್ಲಿ ನೆರೆಯ ಪಾಕಿಸ್ತಾನವೂ ಸಕ್ರಿಯವಾಗಿ ತೊಡಗಿಕೊಂಡಿತು.  ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸದಾ ಜಾರಿಯಲ್ಲಿಡುವ ಉದ್ದೇಶದಿಂದ ಅಲ್ಲಿ ನಮ್ಮ ಅಧಿಕೃತ ನೋಟ್‌‍ಗಳನ್ನು ಬಳಸುತ್ತಿದ್ದ ಪಾಕಿಸ್ತಾನ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಜಾಲಿ ನೋಟ್‌‍ಗಳನ್ನು ಬೃಹತ್ ಪ್ರಮಾಣದಲ್ಲಿ ಮುದ್ರಿಸಿ ದೇಶದ ಎಲ್ಲೆಡೆ ಹರಡಿ ನಮ್ಮ ಅರ್ಥವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಲು ಹಂಚಿಕೆ ಹಾಕಿತು.  ನೋಟ್‌‍ಗಳನ್ನು ಮುದ್ರಿಸಲು ನಮ್ಮ ರಿಸರ್ವ್ ಬ್ಯಾಂಕ್ ಬಳಸುವ ಕಾಗದವನ್ನೇ ಉಪಯೋಗಿಸಿ zero error ಅಂದರೆ ನ್ಯೂನತೆಶೂನ್ಯ ಜಾಲಿ ನೋಟ್‌‍ಗಳನ್ನು ಮುದ್ರಿಸುವ ಅತ್ಯಾಧುನಿಕ ಮುದ್ರಣಾಲಯವೇ ಪಾಕಿಸ್ತಾನದಲ್ಲಿದೆ ಎಂದರೆ ನಮ್ಮ ವಿರುದ್ಧ ದೇಶದ ಹಂಚಿಕೆಗಳು ಯಾವ ಮಟ್ಟಿಗಿವೆ ಎಂದು ಸ್ವಲ್ಪ ಯೋಚಿಸಿ.  ಐದಾರು ವರ್ಷಗಳ ಹಿಂದೆ ನವದೆಹಲಿಯಲ್ಲಿದ್ದ ಪಾಕ್ ರಾಯಭಾರ ಕಚೇರಿಯ ಅಧಿಕಾರಿಯೊಬ್ಬ ತನ್ನ ಮಗನ ಶಾಲಾಶುಲ್ಕಕ್ಕಾಗಿ ನೀಡಿದ ಹಣದಲ್ಲಿ ತನ್ನ ದೇಶದಲ್ಲಿ ಮುದ್ರಿತವಾದ ಎರಡು ಜಾಲಿ ನೋಟ್‌‍ಗಳನ್ನು ಸೇರಿಸಿದ್ದ ಎಂದರೆ ದುರುಳರ ಧಾರ್ಷ್ಟ್ಯ ಯಾವ ಮಟ್ಟಿಗಿದೆ ನೋಡಿ!

ಹಾಗಿದ್ದರೆ, ೫೦೦ ಹಾಗೂ ೧,೦೦೦ ರೂಪಾಯಿ ಮೌಲ್ಯದ ನೋಟ್‌‍ಗಳನ್ನು ಹೆಚ್ಚು ಚಲಾವಣೆಗೆ ಬಿಟ್ಟದ್ದರಿಂದ ಕಾಳಧನಿಕರಿಗೆ ನೇರವಾಗಿ, ಪಾಕಿಸ್ತಾನದ ಜಾಲಿ ನೋಟ್ ಮುದ್ರಕರಿಗೆ ಪರೋಕ್ಷವಾಗಿ ಅನುಕೂಲವಾಗುತ್ತದೆ ಎಂದು ಯುಪಿಎ ಸರ್ಕಾರಕ್ಕೆ ಅದರ ನೇತಾರ ಅರ್ಥಶಾಸ್ತ್ರಜ್ಞ ಪ್ರಧಾನಮಂತ್ರಿಗೆ ಗೊತ್ತಾಗಲಿಲ್ಲವೇ?   ಅದನ್ನು ಪತ್ತೆ ಮಾಡಲು ಒಬ್ಬ ಚಾಯ್‌‍ವಾಲಾ ಬರಬೇಕಾಯಿತೇ?  ಇದು ಮಿಲಿಯನ್ ಡಾಲರ್, ಅಲ್ಲಲ್ಲ, ೧೪. ಲಕ್ಷ ಕೋಟಿ ರೂಪಾಯಿ ಪ್ರಶ್ನೆ!

ಇದರರ್ಥ, ರಿಸರ್ವ್ ಬ್ಯಾಂಕ್ ಅರ್ಥವ್ಯವಸ್ಥೆಗೆ ಉನ್ನತ ಮೌಲ್ಯದ ನೋಟ್‌ಗಳನ್ನು ಹೆಚ್ಚು ಹೆಚ್ಚು ಬಿಟ್ಟಷ್ಟೂ, ಪಶ್ಚಿಮ ಬಂಗಾಲದ ಮಾಲ್ದಾದ ಮೂಲಕ ಭಾರಿ ಪ್ರಮಾಣದ ಜಾಲಿ ನೋಟ್‌‍ಗಳು ದೇಶದೊಳಗೆ ಹರಿದುಬಂದಷ್ಟೂ ಯಾರಿಗೋ ಅಗಾಧ ಲಾಭವಾಗಿದೆ!  ಅವರು ಯಾರು ಎಂದು ತಿಳಿಯಬೇಕಾದರೆ 'ಗುಂಪಿನಲ್ಲಿ ಮೊದಲು ಮೂಗು ಮುಚ್ಚಿಕೊಳ್ಳುವವರೇ, ಮುಖ ಕಿವಿಚಿಕೊಂಡು ಇತರರನ್ನು ಅಸಹ್ಯವಾಗಿ ನೋಡುವವರೇ ಹೂಸು ಬಿಟ್ಟವರು' ಎಂಬ ಸಾಮಾನ್ಯ ತಿಳುವಳಿಕೆ ಸಾಕು.

ಮೋದಿ ಸರ್ಕಾರದ ಅಮುದ್ರೀಕರಣದಿಂದ ಕಾಶ್ಮೀರದಲ್ಲಿ ಕಲ್ಲುತೂರಾಟ ನಿಂತೇಹೋಗಿದೆ!  ಬೆಂಗಳೂರೂ ಸೇರಿದಂತೆ ದೇಶದ ಇತರೆಡೆ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಬೆನ್ನಿಗೆ ನಿಂತಿದ್ದವರ ಬಾಯಿಗಳೂ ಕಟ್ಟಿಹೋಗಿವೆ.  ಜತೆಗೆ, ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್‌‍ಗಳಲ್ಲಿ ಜಮಾವಣೆಯಾಗಿರುವ ಅಮುದ್ರೀಕರಣಗೊಂಡ ನೋಟ್‌‍ಗಳು ಎಷ್ಟು ಗೊತ್ತೇ?  ದೇಶದಾದ್ಯಂತ ಜಮಾವಣೆಗೊಂಡ ನೋಟ್‌‍‍ಗಳಲ್ಲಿ ನಾಲ್ಕು ಪರ್ಸೆಟ್!  ರಾಜ್ಯದ ಜನಸಂಖ್ಯೆ ದೇಶದ ಒಟ್ಟಾರೆ ಜನಸಂಖೆಂಖ್ಯೆಯ ಒಂದು ಪರ್ಸೆಂಟ್ ಮಾತ್ರ.  ಇನ್ನು ಹೆಚ್ಚಿಗೆ ನಾನು ವಿವರಿಸಬೇಕೆ?

ಅಮುದ್ರೀಕರಣಗೊಂಡ ನೋಟ್ಗಳಲ್ಲಿ ೯೦ ಭಾಗ ಈಗಾಗಲೇ ಬ್ಯಾಂಕ್‌‍ಗಳಿಗೆ ಬಂದಿದೆ.  ನ್ಯಾಯವಾಗಿ ಬಂದದ್ದರ ಜತೆ ಕಳ್ಳರು ತಮ್ಮ ಕಚೇರಿ-ಮನೆಕೆಲಸದವರ, ಇತರ ಬಡಜನರ ಜನಧನ್ ಅಕೌಂಟ್‌‍ಗಳಲ್ಲಿ ಜಮಾವಣೆ ಮಾಡಿಸಿದ ಹಣವೂ ಸೇರಿದೆ.  ಅಂದರೆ ಬಹುಪಾಲು ಕಾಳಧನ ಬ್ಯಾಂಕ್‌‍ಗಳಿಗೆ ಬಂದಿದೆ.  ಉಳಿದದ್ದು ಗಂಗೆಯಲ್ಲಿ ತೇಲಿಹೋಗಿದೆ, ದೆಹಲಿಯ ಬೀದಿಯಲ್ಲಿ ಬೆಳಗಿನ ಚಳಿ ಓಡಿಸಿ ಶಾಖ ಉಂಟುಮಾಡಿದೆ, ನಮ್ಮದೇ ಕರ್ನಾಟಕದ ಸಾಗರ ಪಟ್ಟಣದ ಕಸದ ತೊಟ್ಟಿಯಲ್ಲಿ ನಾಚುತ್ತಾ ಕೂತಿದೆ, ಹಾಸನದ ನಡುಮಧ್ಯೆ ಚೆಲ್ಲಾಪಿಲ್ಲಿಯಾಗಿದೆ.  ಹೋಗಲಿ ಬಿಡಿ, ಈಗಾಗಲೇ ಬ್ಯಾಂಕ್‌‍ಗಳಿಗೆ ಬಂದ ಹದಿಮೂರು ಲಕ್ಷ ಕೋಟಿ ರೂಪಾಯಿಗಳ ದೊಡ್ಡ ಭಾಗ ಇನ್ನು ಮುದ್ರಾ ಯೋಜನೆಯ ಮೂಲಕ ಸಣ್ಣ, ಮಧ್ಯಮ ಉದ್ದಿಮೆದಾರರಿಗೆ, ಸಾಮಾನ್ಯ ನಾಗರಿಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವಾಗಿ ದೊರೆಯಲಿದೆ.  ಅವರು ಉದ್ಧಾರವಾಗಿ ಸಾಲ ಮರುಪಾವತಿ ಮಾಡತೊಡಗಿದಷ್ಟೂ ಅದು ಮತ್ತಷ್ಟು ಜನರಿಗೆ ಸಾಲವಾಗಿ ದೊರೆಯುತ್ತಾ ಹೋಗುತ್ತದೆ.  ಅದು ಬಡ ಭಾರತೀಯನ ಅಭಿವೃದ್ಧಿ.

ಅಮುದ್ರೀಕರಣದಿಂದ ಜನರಿಗೆ ತೊಂದರೆಯಾದದ್ದು ನಿಜ.  ಆದರೆ ಅದನ್ನು ದೊಡ್ಡದಾಗಿ ಹೇಳುತ್ತಿರುವವರು ಯಾವ ತೊಂದರೆಯನ್ನೂ ಅನುಭವಿಸಿರದವರು ಎನ್ನುವುದೂ ಅಷ್ಟೇ ನಿಜ.  ತೊಂದರೆ ಅನುಭವಿಸಿದವರು ತೊಂದರೆಯಾಗಿದೆ ನಿಜ, ಆದರೆ ನಾವದನ್ನು ಸಹಿಸಿಕೊಳ್ಳುತ್ತೇವೆ, ಮೋದಿ ಒಳ್ಳೆಯದು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ, ಮೋದಿ ವಿರುದ್ಧ ತಮ್ಮನ್ನು ಪ್ರಚೋದಿಸಲು ಬಂದ ಪುಢಾರಿಗಳ, ಬಣ್ಣದ ಚಿಟ್ಟೆಗಳ, ಪ್ರೆಸ್ಟಿಟ್ಯೂಟ್‌‍ಗಳ ಮುಖದ ನೀರಿಳಿಸಿ ಕಳಿಸಿದ್ದಾರೆ.

ಭಾಗ - ಎರಡು
ಅನಾಣ್ಯೀಕರಣ ಆನಾವರಣಗೊಳಿಸಿದ ಕಪ್ಪುಮುಖಗಳು

ಮೋದಿ ಸರ್ಕಾರದ ಅನಾಣ್ಯೀಕರಣ ಕ್ರಮವನ್ನು ಜನಸಾಮಾನ್ಯರು ಸ್ವಾಗತಿಸಿದರೆ ಕೆಲ ರಾಜಕೀಯ ಪಕ್ಷಗಳು, ಕೆಲ ಮಾಧ್ಯಮಗಳು ಹಾಗೂ ಎಡಪಂಥೀಯ ವಿಚಾರಧಾರೆಯ ಬಹುತೇಕ ಚಿಂತಕರು ಉಗ್ರವಾಗಿ ಟೀಕಿಸುವುದನ್ನು ನಾವು ನೋಡುತ್ತಲೇ ಇದ್ದೇವೆ.  ಟೀಕೆಗಳಲ್ಲಿ ಧನಾತ್ಮಕ ಹಿನ್ನೆಲೆ ಹಾಗೂ ಪ್ರಾಮಾಣಿಕ ಕಾಳಜಿಗಳನ್ನುಳ್ಳಂತಹವು ಇದ್ದರೂ ಹೆಚ್ಚಿನವು ರಾಜಕೀಯ ಹಾಗೂ ಸೈದ್ಧಾಂತಿಕ ಅಸಹನೆಯಿಂದ ಕೂಡಿದಂತಹವು ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುವ ಅಂಶ.  ವಿವಿಧ ಟೀಕೆಗಳ, ಅವುಗಳ ಔಚಿತ್ಯಗಳ ಬಗೆಗಿನ ವಿಶ್ಲೇಷಣೆ ಇಂದಿನಜಗದಗಲ”ದ ವಸ್ತುವಿಷಯ.

ಅನಾಣ್ಯೀಕರಣದ ಅಗತ್ಯದ ಬಗ್ಗೆ ಸರ್ಕಾರ ಹೇಳಿದ್ದನ್ನು ಪೂರ್ತಿಯಾಗಿ ಅಥವಾ ಭಾಗಶಃ ಒಪ್ಪಿಕೊಂಡವರೂ ಸಹಾ ಅದನ್ನು ಕಾರ್ಯಗತಗೊಳಿಸುವುದರಲ್ಲಿ ಸರ್ಕಾರ ಎಡವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಮೇಲ್ನೋಟಕ್ಕೆ ಅನಿಸಿಕೆ/ಟೀಕೆ ಸಾಧುವಾಗಿಯೇ ಕಾಣುತ್ತದೆ.  ಅರ್ಥವ್ಯವಸ್ಥೆಯಲ್ಲಿದ್ದ ನೋಟ್‌‍ಗಳಲ್ಲಿ ೮೬%ರಷ್ಟನ್ನು ಅಂದರೆ ೧೪. ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟ್‌‍ಗಳನ್ನು ಏಕಾಏಕಿ ಅಮಾನ್ಯಗೊಳಿಸಿ ಅದಕ್ಕೆ ಪ್ರತಿಯಾಗಿ, ಅದೂ ಮೂವತ್ತಾರು ಗಂಟೆಗಳ ನಂತರ, ಕೇವಲ ಕಾಲು ಭಾಗಕ್ಕಿಂತಲೂ ಕಡಿಮೆ ಅಂದರೆ . ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟ್‌‍ಗಳನ್ನಷ್ಟೇ ಲಭ್ಯಗೊಳಿಸಿದರೆ ಜನರಲ್ಲಿ ಹಾಹಾಕಾರವೇಳುವುದು, ಸೀಮಿತ ನೋಟ್‌‍ಗಳಿಗಾಗಿ ಪರದಾಟವಾಗುವುದು ಸಹಜವೇ.  ವಾಸ್ತವದ ಆಧಾರದಲ್ಲಿ, ನೂರು ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ನೋಟ್‌‍ಗಳನ್ನು ಅಗತ್ಯ ಪ್ರಮಾಣದಲ್ಲಿ ಮುದ್ರಿಸಿ ನವೆಂಬರ್ ೮ಕ್ಕೆ ಮೊದಲೇ ಬ್ಯಾಂಕ್ ಶಾಖೆಗಳಲ್ಲಿ ಶೇಖರಿಸಿಟ್ಟಿದ್ದರೆ ಜನರಿಗೆ ತೊಂದರೆಯಾಗುತ್ತಿರಲಿಲ್ಲ ಎಂಬ ವಾದವೂ ಸಹಜ.  ಆದರೆ ಇಂತಹದೊಂದು ಕ್ರಮ ಸಾಧ್ಯವಿತ್ತೇ?

ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಮೊದಲಿಂದಲೂ ಕೆಲ ಪ್ರಭಾವೀ ಮಾಧ್ಯಮಗಳಿಗೆ ಅಪ್ರಿಯರಾಗಿದ್ದದ್ದು ನಿಮಗೆ ಗೊತ್ತೇ ಇದೆ.  ಮೋದಿಯವರ ವಿರುದ್ಧ ಮಾಧ್ಯಮದ ಒಂದು ವರ್ಗ ಹೊರಿಸಿದ ಅಪಾದನೆಗಳು, ಅವುಗಳು ನಿರಾಧಾರವೆಂದು ನಂತರ ನ್ಯಾಯಾಂಗದಿಂದ ಸಾಬೀತಾದರೂ ಅದು ಜನತೆಗೆ ತಲುಪದಂತೆ ಮಾಧ್ಯಮಗಳು ನೋಡಿಕೊಂಡದ್ದು ನಮಗೆ ಗೊತ್ತಿದೆ.  ನಂತರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಗಳಿಗೆಯಿಂದಲೇ ಅದು ಕೆಲ ಮಾಧ್ಯಮಗಳ, ವಿರೋಧಿ ರಾಜಕೀಯ ಪಕ್ಷಗಳ, ಬಿಜೆಪಿಯ ಬಗ್ಗೆ ಸೈದ್ಧಾಂತಿಕ ಅಸಹನೆ ಹೊಂದಿರುವ ವಿಚಾರವಾದಿಗಳ ತೀವ್ರ ಆಕ್ರೋಶಕ್ಕೆ ತುತ್ತಾದುದನ್ನೂ ನಾವು ನೋಡುತ್ತಲೇ ಇದ್ದೇವೆ.  ಹೊಸ ಮಂತ್ರಿಮಂಡಲ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೇ ಅಸಹಿಷ್ಣು ಜನ ದೇಶ ಸತ್ತೇಹೋಯಿತೆಂಬಂತೆRIP India” ಅಂದರೆಭಾರತದ ಅತ್ಮಕ್ಕೆ ಚಿರಶಾಂತಿ ಲಭಿಸಲಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಗೋಳುಗರೆದುಕೊಂಡದ್ದನ್ನು ನಾವ್ಯಾರೂ ಮರೆತಿಲ್ಲ.  ಮೋದಿಯವರ ಒಂದೊಂದು ನಡೆಯಲ್ಲೂ ತಪ್ಪು ಹುಡುಕಲು, ತಪ್ಪು ಸಿಗದಾಗ ತಾವೇ ಸೃಷ್ಟಿಸಿ ಎಲ್ಲ ಲಭ್ಯ ಸಾಧನಗಳ ಮೂಲಕ ಜನತೆಗೆ ಹಂಚಲು ಇವರು ನಡೆಸುತ್ತಿರುವ ಲಜ್ಜಾಹೀನ ಹುಚ್ಚಾಟಗಳನ್ನೂ ನಾವು ನೋಡುತ್ತಿದ್ದೇವೆ.  ಅಂದರೆ ಇವರ ಕಣ್ಣುತಪ್ಪಿಸಿ ಯಾವೊಂದು ಕೆಲಸವನ್ನೂ ಮಾಡುವುದು ಮೋದಿ ಸರ್ಕಾರಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿಯನ್ನು ಇವರು ನಿರ್ಮಾಣ ಮಾಡಿಬಿಟ್ಟಿದ್ದಾರೆ.  ಇಂತಹ ಸನ್ನಿವೇಶದಲ್ಲಿ ಸಣ್ಣ ಮೊತ್ತದ ನೋಟ್‌‍ಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಮುದ್ರಿಸಿ ಬ್ಯಾಂಕ್‌‍ಗಳಿಗೆ ತಲುಪಿಸಿ ಕೂಡಿಡುವ ಕೆಲಸವನ್ನು ಸರ್ಕಾರ ಕೆಲ ದಿನಗಳು ಅಥವಾ ವಾರಗಳ ಮೊದಲೇ ಆರಂಭಿಸಿದ್ದರೆ ಅದರ ವಾಸನೆ ಇವರಿಗೆ ಗೊತ್ತಾಗುತ್ತಿರಲಿಲ್ಲವೇ?  ಹೊಸ ಎರಡು ಸಾವಿರ ರೂಪಾಯಿ ನೋಟ್‌‍ಗಳು ಯಾರ ಕೈಗೆ ತಲುಪಬಾರದೆಂದು ಸರ್ಕಾರ ಬಯಸಿತ್ತೋ ಅವರ ಕೈಗೇ ಕೋಟಿಗಟ್ಟಲೆ ಮೌಲ್ಯದ ನೋಟ್‌‍ಗಳನ್ನು ಇತ್ತ ಕೆಲ ಬ್ಯಾಂಕ್ ಉದ್ಯೋಗಿಗಳಿರುವ ದೇಶದಲ್ಲಿ ಬ್ಯಾಂಕ್‌‍ಗಳಲ್ಲಿ ನೋಟ್‌‍ಗಳು ಅಸಹಜ ಪ್ರಮಾಣದಲ್ಲಿ ಶೇಖರವಾಗುತ್ತಿರುವ ವಿಷಯ ಸುದ್ಧಿಹದ್ದುಗಳಿಗೆ ಕ್ಷಣಾರ್ಧದಲ್ಲಿ ತಲುಪಿಬಿಡುತ್ತಿತ್ತು.  ಇದ್ದದ್ದು ಇಲ್ಲದ್ದು ಎಲ್ಲವನ್ನೂ ಸೇರಿಸಿ 'ಏನೋ ನಡೆಯಲಿದೆ, ಆಗಬಾರದ್ದು ಆಗಲಿದೆ' ಎಂದು ಬ್ರೇಕಿಂಗ್ ನ್ಯೂಸ್ ಅಂತ ದಿನಗಟ್ಟಲೇ ಪ್ರಸಾರ ಮಾಡಿ ಕಾಳಧನಿಕರನ್ನು ಎಚ್ಚರಿಸುವ, ಜನಸಾಮಾನ್ಯರನ್ನೂ ಗಾಬರಿಗೊಳಿಸುವ ಕೆಲಸವನ್ನು ಇವರು ಮಾಡುತ್ತಿರಲಿಲ್ಲ ಎಂಬ ಗ್ಯಾರಂಟಿ ಏನು?  ಅತಿ ಎನ್ನಿಸುವ ಮಟ್ಟದ ಅಭಿವ್ಯಕ್ತಿ ಹಾಗೂ ಪತ್ರಿಕಾ ಸ್ವಾತಂತ್ರ್ಯವಿರುವ, ಅವುಗಳು ಗಾಬರಿಗೊಳಿಸುವ ಪ್ರಮಾಣದಲ್ಲಿ ದುರುಪಯೋಗವಾಗುತ್ತಿರುವ ದೇಶದಲ್ಲಿ ಸರ್ಕಾರ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಅತಿ ಎಚ್ಚರಿಕೆಯಿಂದ ಇಡಬೇಕಾಗಿದೆ.  ಅನಾಣ್ಯೀಕರಣದ ಮುನ್ಸೂಚನೆ ಸುದ್ಧಿಬಾಕ ಮಾಧ್ಯಮಗಳಿಗೆ, ಅವುಗಳಿಂದ ಕಾಳಧನಿಕರಿಗೆ, ಸಿಕ್ಕದಂತೆ, ಮೂಲಕ ಇಡೀ ಕ್ರಮ ನಿರುಪಯುಕ್ತವಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಹಾಗೂ ಪ್ರಜ್ಞೆ ಮೋದಿ ಸರ್ಕಾರಕ್ಕಿತ್ತು.  ಹೀಗಾಗಿಯೇ ಅದು ಜನತೆಗೆ ಕೆಲದಿನ ಅನಾನುಕೂಲವಾದರೂ ಸರಿಯೇ, ಅನಾಣ್ಯೀಕರಣ ಕ್ರಮದಿಂದ ನಿರೀಕ್ಷಿತ ಫಲಗಳನ್ನು ಪಡೆದುಕೊಂಡೇ ತೀರಬೇಕು ಎಂಬ ಕಠಿಣ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ.  ನಿಜ ಹೇಳಬೇಕೆಂದರೆ, ಎರಡು ಸಾವಿರ ರೂಪಾಯಿ ಮೌಲ್ಯದ ನೋಟ್ಗಳನ್ನು ರಿಸರ್ವ್ ಬ್ಯಾಂಕ್ ಜಾರಿಗೆ ತರಲಿದೆಯೆಂಬ ಸುದ್ಧಿ ಸಣ್ಣ ಪ್ರಮಾಣದಲ್ಲಿ ಮೊದಲೇ ಹೊರಬಂದಿತ್ತು.  ಬಗೆಗಿನ ಸುದ್ಧಿಯನ್ನು ಪತ್ರಿಕೆಗಳಲ್ಲಿ ಐದಾರು ತಿಂಗಳುಗಳ ಹಿಂದೆಯೇ ನೋಡಿದ ನೆನಪು ನನಗಿದೆ.  ಸಧ್ಯ, ಸುದ್ಧಿಯ ಜತೆ ಅನಾಣ್ಯೀಕರಣದ ಸುಳಿವೂ ಬಯಲಾಗದಂತೆ ವಹಿಸಿದ ಎಚ್ಚರಿಕೆಗಾಗಿ ಮೋದಿ ಸರ್ಕಾರ ನಿಶ್ಚಿತವಾಗಿಯೂ ಅಭಿನಂದನೆಗೆ ಪಾತ್ರವಾಗುತ್ತದೆ.  ಅನಾಣ್ಯೀಕರಣ ಪ್ರಕ್ರಿಯೆಯನ್ನು ದೃಷ್ಟಿಕೋನದಿಂದ ಅವಕೋಕಿಸಿದರೆ ಅದರಿಂದಾಗಿ ಜನತೆ ಅನುಭವಿಸಿದ ತೊಂದರೆಗಳಿಗೆ ನಿಜವಾಗಿ ಯಾರು ಕಾರಣರು ಎಂದು ಅರ್ಥವಾಗುತ್ತದೆ.

ಹೋಗಲಿ, ಅಗತ್ಯ ನೋಟ್‌‍ಗಳನ್ನು ಅವಶ್ಯಕ ಪ್ರಮಾಣದಲ್ಲಿ ಮುದ್ರಿಸಿಯೂ ಅವುಗಳನ್ನು ಬ್ಯಾಂಕ್‌‍ಗಳಿಗೆ ಪೂರೈಸದೇ ರಿಸರ್ವ್ ಬ್ಯಾಂಕ್ ತನ್ನಲ್ಲೇ ಅಥವಾ ಟಿಂಕಶಾಲೆಗಳಲ್ಲೇ ಇಟ್ಟುಕೊಳ್ಳಬಹುದಾಗಿತ್ತಲ್ಲ, ಅನಾಣ್ಯೀಕರಣ ಘೋಷಣೆಯಾದ ಮರುಗಳಿಗೆಯೇ ಅವುಗಳನ್ನು ದೇಶದ ಎಲ್ಲೆಡೆ ಬ್ಯಾಂಕ್ ಶಾಖೆಗಳಿಗೆ ತುರ್ತಾಗಿ ತಲುಪಿಸಬಹುದಾಗಿತ್ತಲ್ಲ ಎಂಬ ವಾದವೂ ಇದೆ. ಅನಾಣ್ಯೀಕರಣದ ಬಗ್ಗೆ ವರ್ಷಕ್ಕೂ ಹಿಂದೆಯೇ ನಿರ್ಧಾರ ತೆಗೆದುಕೊಂಡ, ಹೊಸ ಎರಡು ಸಾವಿರ ರೂಪಾಯಿ ನೋಟ್‌ಗಳ ಮುದ್ರಣಕ್ಕೆ ಜೂನ್ ತಿಂಗಳಲ್ಲೇ ಕಾರ್ಯಪ್ರವೃತ್ತವಾರ ಮೋದಿ ಸರ್ಕಾರ ಬಗ್ಗೆ ಯೋಚಿಸಿಲ್ಲ ಎಂದು ಹೇಳಲಾಗದು.  ಲಭ್ಯ ಮಾಹಿತಿಗಳ ಪ್ರಕಾರ ರಿಸರ್ವ್ ಬ್ಯಾಂಕ್‌‍ ಹಿಂದಿನ ಗವರ್ನರ್ ರಘುರಾಮ್ ರಾಜನ್ ಕ್ರಮದ ಪರವಾಗಿರಲ್ಲ.  ಅವರ, ಅಥವಾ ಸ್ಥಾನದಲ್ಲಿರುವವರ ಪೂರ್ಣ ಸಹಕಾರವಿಲ್ಲದೇ ಅನಾಣ್ಯೀಕರಣದಂತಹ ದೊಡ್ಡ ಆರ್ಥಿಕ ನಿರ್ಧಾರ ಕಾರ್ಯರೂಪಕ್ಕಿಳಿಯುವುದು ಸಾಧ್ಯವೇ ಇಲ್ಲ.  ರಾಜನ್‌‍ ನಕಾರಾತ್ಮಕ ಅಭಿಪ್ರಾಯ ಮೋದಿ ಸರ್ಕಾರಕ್ಕೆ ತಡವಾಗಿ ತಿಳಿದ ಸಾಧ್ಯತೆ ಇದೆ.  ಇದರ ಸುಳಿವು ನಮಗೆ ದೊರೆಯುವುದು ರಾಜನ್‌‍ ಬಗ್ಗೆ ಸರ್ಕಾರ ಪ್ರದರ್ಶಿಸಿದ ದ್ವಂದ್ವ ನಿಲುವುಗಳೀಂದ.  ರಾಜನ್‌‍ ಐದು ವರ್ಷಗಳ ಅಧಿಕಾರಾವಧಿಯ ಮುಕ್ತಾಯ ಸನ್ನಿಹಿತವಾಗುತ್ತಿದ್ದಂತೆ ಅವರಿಗೆ ವಿಸ್ತರಣೆ ದೊರೆಯುತ್ತದೆಯೇ ಇಲ್ಲವೇ, ಅವರ ಉತ್ತರಾಧಿಕಾರಿ ಯಾರಾಗಬಹುದು ಎಂಬ ಪ್ರಶ್ನೆಗಳು ಉದ್ಭವಿಸಿದಾಗ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ರಾಜನ್‌‍ ಅಧಿಕಾರಾವಧಿ ವಿಸ್ತರಣೆಗೊಳ್ಳುತ್ತದೆಂದು ಘೋಷಿಸಿದ್ದರು.  ಇದಾದದ್ದು ಜೂನ್ ತಿಂಗಳಲ್ಲಿ ಅಂದರೆ ೨,೦೦೦ ರೂಪಾಯಿ ಮೌಲ್ಯದ ನೋಟ್‌ಗಳ ಮುದ್ರಣಕ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತಹ ಸಮಯದಲ್ಲಿ.   ಆದರೆ ಅದಾದ ಕೆಲವೇ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಹೊಸ ಗವರ್ನರ್ ಅನ್ನು ಪಡೆದುಕೊಳ್ಳಬಹುದೆಂಬ ಸೂಚನೆ ಬರತೊಡಗಿತು.  ನಿವೃತ್ತರಾಗಬೇಕಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರಿಗೆ ಮತ್ತೊಂದು ವರ್ಷದ ವಿಸ್ತರಣೆ ದೊರೆತಾಗ ಕ್ರಮ ಸೆಪ್ಟೆಂಬರ್‌‍ನಲ್ಲಿ ಅವರನ್ನು ರಿಸರ್ವ್ ಬ್ಯಾಂಕ್‌‍ ಉನ್ನತ ಪೀಠದಲ್ಲಿ ಕುಳ್ಳಿರಿಸುವ ಯೋಜನೆಯ ಮೊದಲ ಹಂತ ಎಂದು ವ್ಯಾಖ್ಯಾನಿಸಲಾಯಿತು.  ಆನಂತರ ಎಲ್ಲ ಊಹೆಗಳನ್ನೂ ಮೀರಿ ಊರ್ಜಿತ್ ಪಟೇಲ್ ಸ್ಥಾನವನ್ನು ಪಡೆದುಕೊಂಡರು.  ರಿಸರ್ವೇಷನ್ ಕೇಳಿದ ಪಟೇಲರಿಗೆ ರಿಸರ್ವ್ ಬ್ಯಾಂಕೇ ಸಿಕ್ಕಿಬಿಟ್ಟಿತು ಎಂಬ ನಗೆಚಟಾಕಿಗೆ ಕಾರಣವಾದ ಬೆಳವಣಿಗೆ ಭಾರತದ ಅಧಿಕೃತ ಹಣಕಾಸು ಆಡಳಿತದಲ್ಲಿ ತೆರೆಯ ಮರೆಯಲ್ಲೇ ಏನೇನು ನಡೆದಿರಬಹುದೆಂಬ ಸಂಶಯವನ್ನುಂಟು ಮಾಡುತ್ತವೆ.  ಅಂತೂ ತನ್ನ ಅನಾಣ್ಯೀಕರಣ ಕ್ರಮಕ್ಕೆ, ಹೊಸ ನೋಟ್‌‍ಗಳ ಮುದ್ರಣಕ್ಕೆ ಮೋದಿ ಸರ್ಕಾರಕ್ಕೆ ನಂಬಿಗಸ್ತ ಸಹಯೋಗಿ ದೊರೆತದ್ದು ಸೆಪ್ಟೆಂಬರ್‌‍ನಲ್ಲಿ!  ಅಂದರೆ ಅದಕ್ಕನುಗುಣವಾಗಿ ನೋಟ್ ಮುದ್ರಣ ಸಹಾ ತಡವಾಗಿ ಆರಂಭವಾಗಿದೆ!  ಆದಾಗ್ಯೂ, ಅನಾಣ್ಯೀಕರಣದ ಘೋಷಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೇ ಮೋದಿ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಅಲ್ಲಿಯವರೆಗೆ ಮುದ್ರಣಗೊಂಡಿದ್ದ ಹೊಸ ನೋಟ್‌‍ಗಳನ್ನು ದೇಶದ ವಿವಿಧೆಡೆ ಬ್ಯಾಂಕ್ ಶಾಖೆಗಳಿಗೆ ಸಾಗಿಸಲು ಸಮರೋತ್ಸಾಹದಲ್ಲಿ ಕಾರ್ಯಪ್ರವೃತ್ತವಾದದ್ದು ತನ್ನ ನೀತಿಯಿಂದಾಗಿ ಜನಸಾಮಾನ್ಯರಿಗೆ ಒದಗಬಹುದಾದ ಅನಾನುಕೂಲಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವ ಬಗ್ಗೆ ಸರ್ಕಾರಕ್ಕಿದ್ದ ಕಾಳಜಿಯನ್ನು ತೋರಿಸುತ್ತದೆ.  ಅಷ್ಟೇ ಅಲ್ಲ, ನೋಟ್‌‍ಗಳ ಸಾಗಾಟಕ್ಕಾಗಿ ವಿದೇಶಿ ವಿಮಾನಗಳನ್ನು ಬಾಡಿಗೆಗೆ ಪಡೆದುಕೊಂಡದ್ದು ತನ್ನ ಮುಂದಿನ ಕ್ರಮದ ರಹಸ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಸರ್ಕಾರಕ್ಕಿದ್ದ ನಿಷ್ಟೆಯನ್ನು ತೋರಿಸುತ್ತದೆ.  ಸರ್ಕಾರದ ಯೋಜನೆಗಳಿಗೆ ರಿಸರ್ವ್ ಬ್ಯಾಂಕ್‌‍ನಿಂದ ಅಗತ್ಯ ಸಹಮತ, ಸಹಕಾರ ಸೂಕ್ತ ಸಮಯದಲ್ಲೇ ದೊರೆತಿದ್ದರೆ ಅನಾಣ್ಯೀಕರಣದಿಂದಾಗಿ ಜನರಿಗಾದ ಅನಾನುಕೂಲ ಅದೆಷ್ಟೋ ಪಟ್ಟು ಕಡಿಮೆಯಾಗುತ್ತಿತ್ತು.

ಅನಾಣ್ಯೀಕರಣದಿಂದಾಗಿ ಜನತೆಗಾದ ಅನಾನುಕೂಲದ ಬಗ್ಗೆ ಪ್ರಾಮಾಣಿಕ ಆದರೆ ಮುಗ್ಧ ಕಳಕಳಿಗಳ ಬಗ್ಗೆ ಹೀಗೆ ಸಮಾಧಾನ ಹೇಳಿದ ನಂತರ, ಸರ್ಕಾರದ ಕ್ರಮಕ್ಕೆ ವಿರೋಧಿಗಳ ದುರುದ್ದೇಶಪೂರಿತ ಪ್ರತಿಕ್ರಿಯೆಗಳನ್ನು ಚರ್ಚೆಗೆತ್ತಿಕೊಳ್ಳುತ್ತೇನೆ.  ಕಾಂಗ್ರೆಸ್ ಸರ್ಕಾರ ಅನಾಣ್ಯೀಕರಣದಂತಹ ಕ್ರಮವನ್ನು ಎಂದೂ ಕೈಗೊಳ್ಳುತ್ತಿರಲಿಲ್ಲ.  ಆದಾಗ್ಯೂ, ಪಕ್ಷ ಅಥವಾ ಇನ್ನಾವುದೇ ಬಿಜೆಪಿಯೇತರ ಪಕ್ಷದ ಸರ್ಕಾರ ಕ್ರಮವನ್ನು ಕೈಗೊಂದಿದ್ದರೆ ಬಗೆಯ ಅಸಹನೆ ಖಂಡಿತವಾಗಿಯೂ ಕಾಣಬರುತ್ತಿರಲಿಲ್ಲ.  ಅನಾಣ್ಯೀಕರಣಕ್ಕೆ ವಿರೋಧ ಬಂದದ್ದಕ್ಕೆ ಬಹುಮುಖ್ಯ ಕಾರಣ ಅದು ಬಿಜೆಪಿ ಸರ್ಕಾರದ ಕ್ರಮ ಎನ್ನುವುದೇ ಆಗಿದೆ.  ಮೇ ೨೬, ೨೦೧೪ರಂದು ಭಾರತದ ಆತ್ಮಕ್ಕೆ ಚಿರಶಾಂತಿ ಕೋರಿದ ಕ್ಷುದ್ರ, ಸಂಕುಚಿತ, ಅಸಹಿಷ್ಣು ಮನಸ್ಸುಗಳು ಮೋದಿ ಸರ್ಕಾರವನ್ನು ಕೆಳಗುರುಳಿಸಲು ಅನಾಣ್ಯೀಕರಣವನ್ನು ಒಂದು ಸಾಧನವನ್ನಾಗಿ ಉಪಯೋಗಿಸಿಕೊಳ್ಳಲು ನೋಡಿದವು.  ವರ್ಷದ ಹಿಂದಿನ ಅಸಹಿಷ್ಟುತೆ ಹುಯಿಲು, ಅವಾರ್ಡ್ ವಾಪ್ಸಿ ನೌಟಂಕಿಗಳಿಂದಾಗದ್ದನ್ನು ಅನಾಣ್ಯೀಕರಣದಿಂದ ಸಾಧ್ಯವಾಗಿಸಿಕೊಳ್ಳಬಹುದೆಂಬುದು ಅವುಗಳ ಇರಾದೆಯಾಗಿತ್ತು.  ತೊಂದರೆಗೀಡಾದ ಜನತೆ ಸರ್ಕಾರದ ವಿರುದ್ಧ ದಂಗೆಯೇಳಬಹುದೆಂದು ಬಾಯಿ ಬಿಟ್ಟುಕೊಂಡು ಕಾದ ಇವು ಅಂತಹದೇನೂ ಆಗದಿದ್ದಾಗ ಸುಳ್ಳುಗಳಿಂದ, ವದಂತಿಗಳಿಂದ ಜನತೆಯನ್ನು ಮೋದಿ ಸರ್ಕಾರದ ವಿರುದ್ಧ ಪ್ರಚೋದಿಸಿ ನಂತರ ಉರಿಯುವ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳಬಹುದೆಂಬ ಹಂಚಿಕೆ ಹಾಕಿದವು.

ಜನ ಹಿಡಿದ, ಹಿಡಿಯುತ್ತಿರುವ ಮಾರ್ಗ ಭಾರತೀಯರು ಹೆಮ್ಮೆ ಪಟ್ಟುಕೊಳ್ಳುವಂತಹದ್ದೂ ಅಲ್ಲ, ಹೊರಜಗತ್ತಿನಲ್ಲಿ ಭಾರತೀಯರಿಗೆ ಗೌರವ ತರುವಂತಹದ್ದೂ ಅಲ್ಲ.  ವಿರೋಧಿ ರಾಜಕಾರಣಿಗಳು ಸಂಸತ್ತಿನ ಒಳಗೆ ಹೊರಗೆ ದಿನಬೆಳಗಾದರೆ ಮೋದಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಾ, ಮೋದಿಯವರನ್ನು  ಕೆಳಗಿಳಿಸುವ ಪ್ರತಿಜ್ಞೆ ಮಾಡುತ್ತಾ, ಮೂಲಕ ತಮ್ಮ ಮನಸ್ಸನ್ನು ಜಾಣ ಜನತೆಯ ಮುಂದೆ ಬೆತ್ತಲೆಗೊಳಿಸುತ್ತಾ ದಿನಗಳೆದರು.  ಕೆಲ ಪತ್ರಕರ್ತರು ಜನತೆಯನ್ನು ಮೋದಿ ವಿರುದ್ಧ ಪ್ರಚೋದಿಸಲು ಇನ್ನಿಲ್ಲದ ಆಟ ಆಡಿದರು.  ಇವರ ಎಲ್ಲಾ ಪ್ರಹಸನಗಳಿಗೆ ಉತ್ಸಾಹದಿಂದ ಸಾಥ್ ನೀಡಿದ್ದು ಎಡಪಂಥೀಯ ಚಿಂತನೆಯ ವಿಚಾರವಾದಿಗಳು.  ತಮ್ಮ ಹುನ್ನಾರಕ್ಕೆ ಇವರು ಆಯ್ದುಕೊಂಡದ್ದು ಗಾಬರಿ ಹುಟ್ಟಿಸುವ ವದಂತಿಗಳನ್ನು ಪುಂಖಾನುಪುಂಖವಾಗಿ ಹಬ್ಬಿಸಿ ಜನರಲ್ಲಿ ಅಶಾಂತಿ ಹಬ್ಬಿಸುಚ ಹೀನ ಮಾರ್ಗ.  ಮೊದಲಿಗೆ ಅನಾಣ್ಯೀಕರಣ ಬಿಜೆಪಿಯ ಪ್ರಮುಖರಿಗೆ ಹಾಗೂ ಬಿಜೆಪಿ ಬಗ್ಗೆ ಒಲವಿರುವ ಉದ್ಯಮಿಗಳಿಗೆ ಮೊದಲೇ ತಿಳಿದಿತ್ತೆಂದೂ ಪುಕಾರು ಹಬ್ಬಿಸಿದರು.  ಬ್ಯಾಂಕ್ ಅಧಿಕಾರಿಣಿಯೊಬ್ಬರು ಹೊಸ ೨,೦೦೦ ರೂಪಾಯಿ ನೋಟ್‌ಗಳನ್ನು ಹಿಡಿದಿರುವ ಚಿತ್ರವನ್ನು ದುರುಪಯೋಗ ಮಾಡಿಕೊಂಡುಬಿಜೆಪಿ ಸಂಸತ್ ಸದಸ್ಯನ ಮಗಳ ಕೈಯಲ್ಲಿ ಹೊಸ ನೋಟ್‌‍ಗಳು” ಎಂದು ಪ್ರಚಾರ ಮಾಡಿದರು.  ಮುಖೇಶ್ ಅಂಬಾನಿ ಆರಂಭಿಸಿದ ರಿಲಯನ್ಸ್ ಜಿಯೋ ಬಗ್ಗೆ ಇವರು ಹಬ್ಬಿಸಿದ ವದಂತಿಯೂ ಇಲ್ಲಿ ಉಲ್ಲೇಖಾರ್ಹ.  ಅನಾಣ್ಯೀಕರಣದ ಬಗ್ಗೆ ಅಂಬಾನಿಗೆ ಮೋದಿಯವರಿಂದಲೇ ಮೊದಲೇ ತಿಳಿದಿತ್ತೆಂದೂ ಅದರಿಂದಾಗಿಯೇ ಆತ ತನ್ನ ಅಗಾಧ ಕಪ್ಪುಹಣವನ್ನು ಬಿಳಿಹಣವನ್ನಾಗಿಸಿಕೊಳ್ಳಲು ಜಿಯೋ ಸಿಮ್ ಸಂಪರ್ಕ ಯೋಜನೆಯನ್ನು ಆರಂಭಿಸಿದರೆಂದು ಕುಹಕಿಗಳು ವದಂತಿ ಹಬ್ಬಿಸಿದರು.  ಆದರೆ ವಾಸ್ತವವೇನೆಂದರೆ, ಜಿಯೋ ಯೋಜನೆಯನ್ನು ಮುಖೇಶ್ ಅಂಬಾನಿ ರೂಪಿಸಿದ್ದು ಆರು ವರ್ಷಗಳ ಹಿಂದೆ, ತನ್ನಿಬ್ಬರು ಜಗಳಗಂಟ ಗಂಡುಮಕ್ಕಳ ನಡುವೆ ಯಶಸ್ವಿ ಸಂಧಾನ ನಡೆಸಿದ ಕೋಮಲಾ ಬೆನ್ ಅಂಬಾನಿ ಪರಸ್ಪರ ಸ್ಪರ್ಧೆಗಳಲ್ಲಿ ತೊಡಗಕೂಡದೆಂಬ ಕಟ್ಟುಪಾಡಿಗೆ ಅವರಿಬ್ಬರನ್ನೂ ಒಪ್ಪಿಸಿದಾಗ.

ಇದು ಇಷ್ಟಕ್ಕೇ ನಿಲ್ಲುವುದಿಲ್ಲ.  ಹೃದಯಾಘಾತಕ್ಕೆ, ಅಫಘಾತಕ್ಕೆ ಒಳಗಾದವರು, ಆತ್ಮಹತ್ಯೆಗೆ ಶರಣಾದವರು-ಎಲ್ಲರ ಸಾವಿಗೂ ಅನಾಣ್ಯೀಕರಣವೇ ಕಾರಣ ಎಂದು ಇವರು ಹಬ್ಬಿಸಿದ ವದಂತಿಗಳಂತೂ ಅಕ್ಷಮ್ಯ.  ಅನಾಣ್ಯೀಕರಣಕ್ಕೂ ಮೃತ್ಯುಗಳಿಗೂ ಸಂಬಂಧವೇ ಇಲ್ಲವೆಂದು ಮೃತರ ಸಂಬಂಧಿಗಳು ಹೇಳಿದ್ದು ಕುಹಕಿಗಳ ಅಬ್ಬರದಲ್ಲಿ ಕರಗಿಹೋಯಿತು.  ಹಿಂದೆ ಯಾವಾಗಲೋ, ಎಲ್ಲಿಯೋ, ಯಾವ ಕಾರಣಕ್ಕೋ ನಡೆದಿರಬಹುದಾಗ ಗೊಂದಲ, ಗಲಭೆಗಳ ವಿಡಿಯೋಗಳನ್ನೆಲ್ಲಾ ಹೊರತಂದು ಅವೆಲ್ಲವೂ ಅನಾಣ್ಯೀಕರಣದಿಂದಾಗಿ ನವೆಂಬರ್ ೮ರ ನಂತರ ಆದಂತಹವು ಎಂದು ಪ್ರಚಾರ ಮಾಡಿದ್ದಂತೂ ವದಂತಿ ಸೃಷ್ಟಿಯಲ್ಲಿ ಇವರು ನಾಝೀ ಸುಳ್ಳುಗಾರ ಗೊಬೆಲ್ಸ್‌‍ನನ್ನು ಮೀರಿಸುವಂತಹ ಸುಳ್ಳುಗಾರರು ಎಂದು ಸಾಬೀತುಪಡಿಸಿತು.  ಇಂತಹ ಸುಳ್ಳು ಪ್ರಚಾರಗಳಲ್ಲಿ ತೊಡಗಿದವರು ಕೇವಲ ರಾಜಕಾರಣಿಗಷ್ಟೇ ಅಲ್ಲ, ಅವರಲ್ಲಿ ಪತ್ರಕರ್ತರು, ವಿಚಾರವಾದಿಗಳೂ ಸಾಕಷ್ಟಿದ್ದರು.  ವಿಷಯದಲ್ಲಿ ನನ್ನನ್ನು ಅತಿಯಾಗಿ ಗಾಬರಿಗೊಳಿಸಿದ್ದೆಂದರೆ ಇಂತಹ ಸುಳ್ಳುಪ್ರಚಾರದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಹೇಳುವ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಹಿರಿಯ ಪ್ರಾಧ್ಯಾಪಕರೂ ತೊಡಗಿದ್ದದ್ದು.  ಇಂತಹ ಒಂದೊಂದು ಪ್ರಕರಣವನ್ನೂ ನೋಡಿದಾಗೆಲ್ಲಾ ನಮ್ಮ ಯುವಜನಾಂಗ ಎಂತಹ ದುರುಳ ಜನರ ಕೈಯಲ್ಲಿದೆ ಎಂದು ನಾನು ಚಿಂತೆಗೀಡಾಗಿದ್ದೇನೆ.  ಅಂತೂ, ಅನಾಣ್ಯೀಕರಣ ಎಷ್ಟೆಲ್ಲಾ ಕಪ್ಪುಮನಸ್ಸುಗಳನ್ನು ಬೆತ್ತಲೆಗೊಳಿಸಿತು!

ಭಾಗ - ಮೂರು
ಕಾಕ ಆದ್ಮಿಗಳ ಕೈ ತುಂಬಾ ನಕಲಿ ನೋಟ್ಗಳು!

ನವೆಂಬರ್ , ೨೦೧೬ರಂದು ಜಾರಿಗೆ ಬಂದ ಅನಾಣ್ಯೀಕರಣ ಕ್ರಮ ಒಂದರ್ಥದಲ್ಲಿ ಹಣದ ಅಲ್ಪಕಾಲಿಕ ರಾಷ್ಟ್ರೀಕರಣವೆಂದೇ ಹೇಳಬೇಕು.  ಹಾಗೆಯೇ, ತೆರಿಗೆವಂಚನೆ ಹಾಗೂ ರುಷುವತ್ತುಗಳಂತಹ ವಾಮಮಾರ್ಗಗಳ ಮೂಲಕ ಹಣ ಸಂಗ್ರಹಿಸಿಕೊಂಡು ಅದನ್ನು ತಮ್ಮ ಹಿತಾಸಕ್ತಿಗಳಿಗಾಗಷ್ಟೇ, ಅದೂ ಬಹುಸಂಖ್ಯಾತ ಸಾಮಾನ್ಯ ಜನತೆಯ ಹಿತವನ್ನು ಬಲಿಗೊಟ್ಟು, ಬಳಸಿಕೊಳ್ಳುತ್ತಿದ್ದ ಭ್ರಷ್ಟಾಚಾರಿಗಳ ವಿರುದ್ಧ ಕೈಗೊಂಡ ತೀವ್ರತರದ ಕ್ರಮ ಇದಾಗಿತ್ತು.  ದೇಶದ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ಹಣದ ಒಂದು ದೊಡ್ಡ ಅಂಶ ಕೆಲವೇ ಕೈಗಳಲ್ಲಿ ಶೇಖರಣೆಯಾಗುವುದನ್ನು ತಡೆಯುವ, ತೆರಿಗೆಗಳ್ಳ ಭ್ರಷ್ಟಾಚಾರಿಗಳ ಕೈಯಲ್ಲಿರುವ ಕಪ್ಪುಹಣ ಅವರಿಗೆ ಉಪಯೋಗಕ್ಕೆ ಬಾರದಂತೆ ಮಾಡುವ ಅನಾಣ್ಯೀಕರಣ ಪ್ರಕ್ರಿಯೆ ಸಮತಾವಾದಿ ಎಡಪಂಥೀಯ ಪಕ್ಷಗಳಿಂದ, ಸಮಾಜವಾದಿ ಕಾಂಗ್ರೆಸ್ ಪಕ್ಷದಿಂದ ಹಾಗೂ ಭ್ರಷ್ಟಾಚಾರ-ವಿರೋಧಿ ಆಮ್ ಆದ್ಮಿ ಪಕ್ಷಗಳಿಂದ ಮುಕ್ತ ಪ್ರಶಂಸೆಗೆ ಹಾಗೂ ಸಂಪೂರ್ಣ ಸಮರ್ಥನೆಗೆ ಒಳಗಾಗಬೇಕಾಗಿತ್ತು.  ದುರಂತವೆಂದರೆ ಮೂರೂ ಪಕ್ಷಗಳು ಅನಾಣ್ಯೀಕರಣವನ್ನು ಉಗ್ರವಾಗಿ ವಿರೋಧಿಸುವ ಗುಂಪಿನ ಮುಂಚೂಣಿಯಲ್ಲಿವೆ.  ಪಕ್ಷಗಳ ರಾಜಕೀಯ ನೇತಾರರು ಶಾಸಕಾಂಗಗಳ ಒಳಗೆ ಹೊರಗೆ, ಬೆಂಬಲಿಗ ವಿಚಾರವಾದಿಗಳು ಮತ್ತು ವಿದ್ವಾಂಸರು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಅನಾಣ್ಯೀಕರಣದ ವಿರುದ್ಧ ಉಗ್ರವಾಗಿ ದನಿಯೆತ್ತಲು ತಮ್ಮ ದಿನದ ಬಹುಭಾಗವನ್ನು ವ್ಯಯಿಸುತ್ತಿದ್ದಾರೆ.  ತಮ್ಮ ಬದುಕಿನ ಅತಿದೊಡ್ಡ ಗುರಿಯೇ ಅನಾಣ್ಯೀಕರಣವನ್ನು ವಿರೋಧಿಸುವುದು ಎಂಬರ್ಥದಲ್ಲಿ ಇವರ ವರ್ತನೆ ಇದೆ.  ಬರವಣಿಗೆಯ ಅನುಕೂಲಕ್ಕಾಗಿ ಕಾಂಗ್ರೆಸ್-ಕಮ್ಯೂನಿಸ್ಟ್-ಆಮ್ ಆದ್ಮಿಗಳನ್ನು ಚಿಕ್ಕದಾಗಿಕಾಕ ಆದ್ಮಿಗಳು” ಎಂದು ಕರೆಯುತ್ತೇನೆ.

ಪ್ರಧಾನಿ ಮೋದಿಯವರ ವಿರುದ್ಧ ಕಾಕ ಆದ್ಮಿಗಳ ತೆರನಾದ ವರ್ತನೆಗೆ ಇರುವ ಕಾರಣ ಅನಾಣ್ಯೀಕರಣ ಕ್ರಮವನ್ನು ಕೈಗೊಂಡದ್ದು ಬಿಜೆಪಿ ನೇತೃತ್ವದ ಎನ್‌‍ಡಿಎ ಸರ್ಕಾರ ಎನ್ನುವುದರ ಹೊರತಾಗಿ ಬೇರೇನೂ ಇರುವಂತೆ ಕಾಣುತ್ತಿಲ್ಲ.   ಹಾಗಿಲ್ಲದಲ್ಲಿ, ನಲವತ್ತೇಳು ವರ್ಷಗಳ ಹಿಂದೆ ಇಂದಿರಾ ಗಾಂಧಿ ಕೈಗೊಂಡ ಬ್ಯಾಂಕ್ ರಾಷ್ಟ್ರೀಕರಣವನ್ನು ಸಂಪೂರ್ಣವಾಗಿ ಬೆಂಬಲಿಸಿದ ಕಾಂಗ್ರೆಸ್ಸಿಗರು ಮತ್ತು ಎಡಪಂಥೀಯರು ಅಂತಹದೇ ಮಹತ್ವಪೂರ್ಣವಾದ, ವ್ಯಾಪಕ ಪರಿಣಾಮಕಾರಿ ಕ್ರಮವಾದ ಅನಾಣ್ಯೀಕರಣವನ್ನು ವಿರೋಧಿಸಲು ಇರುವ ಕಾರಣವಾದರೂ ಏನು?  ಭ್ರಷ್ಟಾಚಾರದ ವಿರುದ್ಧ ಕೂಗುತ್ತಾ ರಾಜಕೀಯಕ್ಕಿಳಿದ ಆಮ್ ಆದ್ಮಿ ಪಕ್ಷ ಅನಾಣ್ಯೀಕರಣವನ್ನೇ ಅತ್ಯಂತ ಭ್ರಷ್ಟಾಚಾರಿ ಕೃತ್ಯವೆಂದು ಕರೆಯಲು ಹೊರಟಿದ್ದಾದರೂ ಹೇಗೆ?

ತಮ್ಮ ವಿರೊಃಧಕ್ಕೆ ನಿಜವಾದ, ಅರ್ಥಪೂರ್ಣ ಹಾಗೂ ತಾರ್ಕಿಕವಾದ ಕಾರಣಗಳನ್ನು ಜನತೆಯ ಮುಂದಿಡುವಲ್ಲಿ ಕಾದ ಆದ್ಮಿಗಳು ಸೋತುಹೋಗಿದ್ದಾರೆ.  ತಮ್ಮ ವಿರೋಧವನ್ನು ಜಾರಿಯಲ್ಲಿಡುವ, ಅದಕ್ಕೆ ಜನಬೆಂಬಲ ಗಳಿಸಿಕೊಳ್ಳುವ ಉದ್ದೇಶದಿಂದ ಇವರು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಹೊರಹಾಕುತ್ತಿದ್ದಾರೆ.  ಅನಾಣ್ಯೀಕರಣ ಕ್ರಮ ಘೋಷಣೆಯಾದ ಗಳಿಗೆಯಿಂದಲೇ ಆರಂಭವಾದ ಇವರ ವದಂತಿ ಕಾರ್ಖಾನೆಗಳು ಇನ್ನೂ ಕಾರ್ಯನಿರತವಾಗಿವೆ.  ಅರ್ಥದಲ್ಲಿ ಪಾಕಿಸ್ತಾನದಲ್ಲಿ ಕಾರ್ಯನಿರತವಾಗಿದ್ದ ನಕಲಿ ನೋಟ್‌ ಮುದ್ರಣಾಲಯಗಳಿಗಿಂತಲೂ ಇವುಗಳ ದುಷ್ಟತನ, ಸಾಮರ್ಥ್ಯ ಹಾಗೂ ಲಜ್ಜಾಹೀನತೆ ಒಂದು ಕೈ ಮಿಗಿಲೇ ಆಗಿವೆ.  ನವೆಂಬರ್ ಎಂಟರ ರಾತ್ರಿಯಿಂದ ಮುಂದಿನ ಒಂದೇ ವಾರದಲ್ಲಿ ಇವರು ಸೃಷ್ಟಿಸಿ ಹರಿಬಿಟ್ಟ ವದಂತಿಗಳ ಪ್ರಮಾಣ ಮತ್ತು ಉದ್ದೇಶ ನಾಗರಿಕ ಸಮಾಜ ಗಾಬರಿಗೊಳ್ಳುವ ಪ್ರಮಾಣದಲ್ಲಿವೆ.  ವದಂತಿಗಳ ಹುರುಳು ಅಂದಂದೇ ಬಯಲಾಗಿದ್ದರೂ ಅವುಗಳನ್ನು ಸತ್ಯವೆಂದು ಮತ್ತಷ್ಟು ಘಟ್ಟಿಸಿ ಹೇಳುವ ಪ್ರಯತ್ನವನ್ನು ಲಜ್ಜಾಹೀನರು ಇನ್ನೂ ಪೂರ್ಣವಾಗಿ ಕೈಬಿಟ್ಟಿಲ್ಲ.  ಇವರು ಸೃಷ್ಟಿಸಿದ ವದಂತಿಗಳನ್ನು ಅವುಗಳ ಸ್ವರೂಪ ಮತ್ತು ಉದ್ಡೇಶಗಳ ಆಧಾರದ ಮೇಲೆ ಮೂರು ಗುಂಪುಗಳಲ್ಲಿ ವಿಂಗಡಿಸಿ ವಿಶ್ಲೇಷಿಸಬಹುದು.  ಅವೆಂದರೆ- . ಜನರಲ್ಲಿ ವ್ಯಾಪಕ ಆತಂಕ ಬಿತ್ತುವ ವದಂತಿಗಳು, . ಅನಾಣ್ಯೀಕರಣದ ನಿರ್ಣಯ ಮತ್ತು ಅನುಷ್ಟಾನದಲ್ಲಿ ಪ್ರಧಾನಿ ಮೋದಿ ಅಪ್ರಾಮಾಣಿಕತೆ ಹಾಗೂ ಸ್ವಜನಪಕ್ಷಪಾತ ಎಸಗಿದ್ದಾರೆಂದು ಆರೋಪಿಸುವ ವದಂತಿಗಳು, . ಜನರ ಸಂಕಷ್ಟದತ್ತ ಮೋದಿ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಹೇಳುವ ವದಂತಿಗಳು.  ಮೂರೂ ಗುಂಪಿನ ವದಂತಿಗಳ ಉದ್ದೇಶ ಒಂದೇ- ಮೋದಿ ಅಪ್ರಾಮಾಣಿಕ, ಸ್ವಜನ ಪಕ್ಷಪಾತಿ ಹಾಗೂ ಜನವಿರೋಧಿ ಎಂಬ ಭಾವನೆಯನ್ನು ಜನರಲ್ಲಿ ಬಿತ್ತಿ ಅವರು ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡುವುದು, ನಂತರ ಜನಾಂದೋಲನವನ್ನು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದು.  ಈಗ ಇವುಗಳನ್ನು ಒಂದೊಂದಾಗಿ ವಿಶ್ಲೇಷಣೆಗೆತ್ತಿಕೊಳ್ಳೋಣ,

. ಜನರಲ್ಲಿ ವ್ಯಾಪಕ ಆತಂಕ ಬಿತ್ತುವ ವದಂತಿಗಳು
ಅನಾಣ್ಯೀಕರಣ ಘೋಷಣೆಯಾಗುತ್ತಿದ್ದಂತೇ ಕೈಲಿದ್ದ ಹಣ ಸೂಕ್ತ ಕಾಲಮಿತಿಯಲ್ಲಿ ಬದಲಾಯಿಸಲ್ಪಡದಿದ್ದರೆ ನಿರುಪಯುಕ್ತ ಕಾಗದದ ಚೂರಾಗಿಬಿಡಬಹುದಾದ ಆತಂಕದಲ್ಲಿ ಸಿಲುಕಿ ಬ್ಯಾಂಕ್‌‍ಗಳ ಮುಂದೆ ಸಾಲುಗಟ್ಟಿ ನೀತ ಕೋಟ್ಯಂತರ ಸಾಮಾನ್ಯ ಜನತೆಯನ್ನು ತಮ್ಮ ಬಲೆಗೆ ಬೀಳಲು ಸಿದ್ಧವಾಗಿ ನಿಂತ ಮೀನುಗಳೆಂದು ಕಾಕ ಆದ್ಮಿಗಳು ಬಗೆದರು.  ಹೆದರಿದವನ ಮೇಲೆ ಕಪ್ಪೆ ಎಸೆಯುವಂತೆ, ಈಗಾಗಲೇ ಆತಂಕಗೊಂಡ ಜನರನ್ನು ಮತ್ತಷ್ಟು ಆತಂಕಗೊಳಿಸಲು ಮೂಲಕ ಅನಾಣ್ಯೀಕರಕ್ಕೆ ಊರೂರುಗಳಲ್ಲಿ, ಬೀದಿಬೀದಿಗಳಲ್ಲಿ ಪ್ರತಿಭಟನೆ ಮೂಡಿಸಿ ಮೋದಿ ವಿರುದ್ಧದ ತಮ್ಮ ರಾಜಕೀಯ ದ್ವೇಷಸಾಧನೆಗಾಗಿ ಇವರು ಹಂಚಿಕೆ ಹಾಕಿದರು.  ನಿಟ್ಟಿನಲ್ಲಿ ಕಾಕ ಆದ್ಮಿಗಳು ಸೃಷ್ಟಿಸಿದ ಅತ್ಯಂತ ದುರುದ್ದೇಶಪೂರಿತ ವದಂತಿಯೆಂದರೆ ಅನಾಣ್ಯೀಕರಣವನ್ನು ವಿರೋಧಿಸಿ ಸರಕುಸಾಗಾಣಿಕೆದಾರರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ತೊಡಗಲಿದ್ದಾರೆಂದೂ, ಅದರಿಂದಾಗಿ ಆಹಾರಸಾಮಗ್ರಿಗಳ ಕೊರತೆಯುಂಟಾಗಲಿದೆಯೆಂದೂ ವದಂತಿ ಹಬ್ಬಿಸಿದ್ದು.  ತಮ್ಮ ಸುಳ್ಳಿನ ಕಂತೆಯನ್ನು ನಿಜವೆಂದು ಬಿಂಬಿಸಲು ದೆಹಲಿಯ ಮಾಲ್ ಒಂದರಲ್ಲಿ ಜನರು ಸಿಕ್ಕದ್ದನ್ನು ಕೈಗೆತ್ತಿಕೊಳ್ಳುವ ವಿಡಿಯೋವನ್ನು ಎಲ್ಲೆಡೆ ಪ್ರಸರಿಸಿದರು.  ಕೈಯಲ್ಲಿ ಹಣವೂ ಸಾಕಷ್ಟಿಲ್ಲ, ಅದರ ಜತೆಗೆ ಅಕ್ಕಿ ಬೇಳೆ, ತರಕಾರಿಗಳೂ ಸಿಗುವುದಿಲ್ಲ ಎಂದರೆ ಜನಕ್ಕೆ ಹೇಗನಿಸಬೇಡ?  ವಾಸ್ತವವೆಂದರೆ ಅಂತಹ ಯಾವುದೇ ಮುಷ್ಕರಕ್ಕೆ ಸರಕು ಸಾಗಾಣಿಕೆದಾರರ ಒಕ್ಕೂಟ ಕರೆನೀಡಿರಲಿಲ್ಲ.  ಇದನ್ನು ಕೇಂದ್ರ ರಸ್ತೆಸಾರಿಗೆ ಮಂತ್ರಾಲಯವೇ ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತಾಗಿ ಘೋಷಿಸಬೇಕೇಕಾಯಿತು.  ಪರಿಣಾಮವಾಗಿ ಜನರಲ್ಲಿ ಆತಂಕ ಮೂಡಿಸುವ ಕಾಕ ಆದ್ಮಿಗಳ ಕುತಂತ್ರವೂ ಬಯಲಾಯಿತು.  ದೆಹಲಿಯ ಮಾಲ್ ಬಗೆಗಿನ ವಿಡಿಯೋದ ಅಸಲಿತನವೂ ಅದೇ ಸಮಯಕ್ಕೆ ಬಯಲಾಯಿತು.  ಅದರ ಪ್ರಕಾರ ಸ್ವಸಹಾಯ ಮಳಿಗೆಯಾದ ಅಲ್ಲಿ ಯಾವುದೋ ಕಾರಣದಿಂಶ್ದ ಸ್ವಲ್ಪ ಗೊಂದಲವಾಗಿತ್ತಷ್ಟೇ.  ಅದಕ್ಕೂ ಅನಾಣ್ಯೀಕರಣಕ್ಕೂ ಯಾವುದೇ ಸಂಬಂಧವಿರಲಿಲ್ಲ.  ತಮ್ಮ ಕುಪ್ರಯತ್ನದಲ್ಲಿ ಸೋಲಾಗುತ್ತಿದ್ದಂತೇ ಉಪ್ಪು ದುರ್ಲಭವಾಗಲಿದೆಯೆಂದೂ ಅದರ ಪರಿಣಾಮದಿಂದಾಗಿ ಉಪ್ಪಿನ ಬೆಲೆ ಕೇಜಿಗೆ ಐನೂರು ದಾಟಬಹುದೆಂಬ ವದಂತಿಯನ್ನು ಕಾಕ ಆದ್ಮಿಗಳು ಹರಡತೊಡಗಿದರು.  ಆದರೆ ಅವರಿಗೆ ಇಲ್ಲೂ ಸಹಾ ಸೋಲು ಕಾದಿತ್ತು.  ಉಪ್ಪಿನ ಕುರಿತಾದ ಆತಂಕ ನಿರಾಧಾರವೆಂದು ಕೇಂದ್ರ ವಾಣಿಜ್ಯ ರಾಜ್ಯ ಮಂತ್ರಿ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆ ವದಂತಿಯ ಬಲೂನಿಗೆ ಸೂಜಿ ಚುಚ್ಚುವುದರಲ್ಲಿ ಯಶಸ್ವಿಯಾಯಿತು.  ಎರಡೂ ಪ್ರಕರಣಗಳಲ್ಲಿ ಕಂಡುಬಂದ ಸಮಾಧಾನದ ವಿಷಯವೆಂದರೆ ವದಂತಿಗಳಿಗೆ ಸೊಪ್ಪುಹಾಕದೇ ಸತ್ಯದ ಬೆನ್ನು ಹತ್ತಿ ಹುಡುಕಿ ಅದನ್ನು ಪುರಸ್ಕರಿಸಿದ ವಿವೇಕವನ್ನು ಸಾಮಾನ್ಯ ಜನತೆ ಪ್ರದರ್ಶಿಸಿದರು.  ಹೀಗೆ, ಜನತೆಯನ್ನು ಗಾಬರಿಗೊಳಿಸುವ ಪ್ರಯತ್ನವೂ ವಿಫಲವಾದಾಗ ಕಾಕ ಆದ್ಮಿಗಳು ತಮ್ಮ ವದಂತಿ ಕಾರ್ಖಾನೆಯಿಂದ ಮತ್ತೊಂದು ವದಂತಿಯನ್ನು ಉತ್ಪಾದಿಸಿ ಹೊರಬಿಟ್ಟರು.  ಇದನ್ನು ಮಾಡಿದ್ದು ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಒಬ್ಬ ಬಾಯಿಬಡುಕ ಕಾಕ ಆದ್ಮಿ.  ಕುತಂತ್ರಿ ಮಾಡಿದ್ದೇನೆಂದರೆ ಅನಾಣ್ಯೀಕರಣವನ್ನು ವಿರೋಧಿಸಿ ರಿಸರ್ವ್ ಬ್ಯಾಂಕ್‌‍ ಉದ್ಯೋಗಿಗಳು ಮುಷ್ಕರ ಹೂಡಲಿರುವುದಾಗಿ ಬೆದರಿಕೆ ಹಾಕಿರುವುದಾಗಿ ವದಂತಿ ಹಬ್ಬಿಸಿದ್ದು.  ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಡುಚೆ ಭಿನ್ನಾಭಿಪ್ರಾಯವಿರುವುದಾಗಿಯೂ, ಸರ್ಕಾರದ ನೀತಿಗಳಿಗೆ ರಿಸರ್ವ್ ಬ್ಯಾಂಕ್‌‍ ಸಮಮತಿ ಇಲ್ಲವೆಂದೂ ಜನರನ್ನು ನಂಬಿಸಿ, ಕಾರಣದಿಂದಾಗಿ ಸಣ್ಣ ಪ್ರಮಾಣದ ನೋಟ್‌‍ಗಳ ಪೂರೈಕೆಯಲ್ಲಿ ಮತ್ತಷ್ಟು ವಿಳಂಬ ಹಾಗೂ ಗೊಂದಲವುಂಟಾಗುತ್ತದೆಂದು ಜನರಲ್ಲಿ ಆತಂಕ ಹುಟ್ಟಿಸುವ ಹುನ್ನಾರ ಕಾಕ ಆದ್ಮಿ ನೇತಾರನದಾಗಿತ್ತು.  ತನ್ನ ಮಾತಿಗೆ ಬೆಂಬಲವಾಗಿ ಆರ್‌‍ಬಿಐ ಉದ್ಯೋಗಿಗಳ ಒಕ್ಕೂಟ ಹೊರಡಿಸಿದ್ದ ಪ್ರಕಟಣೆಯೊಂದನ್ನೂ ಕಾಕ ಆದ್ಮಿ ಜನತೆಯ ಮುಂದೆ ಹಿಡಿದರು.  ಆದರೆ ಕುತಂತ್ರ ಕೆಲವೇ ಗಂಟೆಗಳಲ್ಲಿ ಜನರಿಂದ ತಿರಸ್ಕೃತಗೊಂಡಿತು.  ಹದ್ದುಗಣ್ಣಿನ ಸತ್ಯಶೋಧಕರು ಆರ್‌‍ಬಿಐ ಉದ್ಯೋಗಿಗಳ ಪ್ರಕಟಣೆ ಒಂದು ವರ್ಷ ಹಳೆಯದು ಎಂಬ ನಿಜಾಂಶವನ್ನು ಕುತಂತ್ರಿ ಕಾಕ ಆದ್ಮಿ ನೇತಾರನ ಮುಖಕ್ಕೆ ಹಿಡಿದು ಝಾಡಿಸಿದರು.  ಕಾಕ ಆದ್ಮಿ ನೇತಾರ ನಗೆಪಾಟಲಿಗೀಡಾದರು.

ಇವರ ಅಟಾಟೋಪ ಇಷ್ಟಕ್ಕೇ ನಿಲ್ಲುವುದಿಲ್ಲ.  ವ್ಯಕ್ತಿಯೊಬ್ಬ ತನ್ನ ಖಾತೆಯಲ್ಲಿ ಎರಡೂವರೆ ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತ ಜಮಾವಣೆ ಮಾಡಿದರೆ ಅದಕ್ಕೆ ಯದ್ವಾತದ್ವಾ ತೆರಿಗೆ ವಿಧಿಸಲಾಗುತ್ತದೆಂದೂ ಜನರನ್ನು ಹೆದರಿಸಲಾಯಿತು.  ಕಾಕ ಆದ್ಮಿಗಳ ಸುಳ್ಳಿನ ಕಂತೆಯ ಪ್ರಕಾರ ತೆರಿಗೆ ಜಮಾವಣೆ ಮಾಡಿದ ಮೊತ್ತದ ೯೫%ನಿಂದ ೨೦೦%ನಷ್ಟಿರುತ್ತದೆಂದಿತ್ತು.  ತಾವು ಪ್ರಾಮಾಣಿಕ ವಿಧಾನಗಳಿಂದ ಗಳಿಸಿಟ್ಟುಕೊಂಡಿರುವ ಹಣವನ್ನು ಇಡಿಯಾಗಿ ಕಳೆದುಕೊಳ್ಳುವುದಲ್ಲದೇ, ಅದರ ದುಪ್ಪಟ್ಟು ದಂಡವನ್ನೂ ತೆರಬೇಕಾಗುತ್ತದೆಂದು ಹೆದರಿ ತಮ್ಮಲ್ಲಿನ ನ್ಯಾಯಯುತ ಗಳಿಕೆ ಮಣ್ಣಾಗುವುದರ ಬಗ್ಗೆ ಜನತೆ ಕೊರಗಬೇಕೆಂದೂ, ಕೊರಗೇ ಮೋದಿ ವಿರುದ್ಧ ದಂಗೆಗೆ ಆಜ್ಯವಾಗಬೇಕೆಂದೂ ಕಾಕ ಆದ್ಮಿಗಳ ವದಂತಿಯ ಹಿಂದಿನ ದುರುದ್ದೇಶವಾಗಿತ್ತು.

. ಅನಾಣ್ಯೀಕರಣದ ನಿರ್ಣಯ ಮತ್ತು ಅನುಷ್ಟಾನದಲ್ಲಿ ಪ್ರಧಾನಿ ಮೋದಿ ಅಪ್ರಾಮಾಣಿಕತೆ ಹಾಗೂ ಸ್ವಜನಪಕ್ಷಪಾತ ಎಸಗಿದ್ದಾರೆಂದು ಆರೋಪಿಸುವ ವದಂತಿಗಳು.
ಅನಾಣ್ಯೀಕರಣದ ಬಗ್ಗೆ ಪ್ರಧಾನಿ ಮೋದಿ ತಮ್ಮ ಪಕ್ಷದ ಪ್ರಮುಖರು ಮತ್ತು ಬೆಂಬಲಿಗರಿಗೆ ಮೊದಲೇ ಸೂಚನೆ ನೀಡಿದ್ದಾಗಿಯೂ, ಕಾರಣದಿಂದಲೇ ಅವರು ತಮ್ಮ ಕಪ್ಪಹಣವನ್ನು ನವೆಂಬರ್ ೮ಕ್ಕೆ ಮೊದಲೇ ಬಿಳಿದಾಗಿಸಿಕೊಂಡರೆಂದೂ, ಹಳೆಯ ನೋಟ್‌ಗಳಿಗೆ ಬದಲಾಗಿ ಹೊಸ ,೦೦೦ ರೂಪಾಯಿ ನೋಟ್‌ಗಳನ್ನು ಕೋಟಿಗಟ್ಟಲೆಯಲ್ಲಿ ಅವರಿಗೆ ಗುಪ್ತವಾಗಿ ಲಭ್ಯಗೊಳಿಸಿರುವುದಾಗಿಯೂ ಕಾಕ ಆದ್ಮಿಗಳು ಹುಯಿಲೆಬ್ಬಿಸಿದರು.  ತಮ್ಮ ಮಾತಿನ ಸಮರ್ಥನೆಗೆ ಅವರು ಅನೇಕ ಉದಾಹರಣೆಗಳನ್ನು ಕೊಡಲು ಹವಣಿಸಿದರು.  ಅವುಗಳಲ್ಲಿ ಪ್ರಮುಖವಾದುವು ಎರಡು.  ರಿಸರ್ವ್ ಬ್ಯಾಂಕ್‌‍ ಮಹಿಳಾ ಉದ್ಯೋಗಿಯೊಬ್ಬರು ,೦೦೦ ರೂಪಾಯಿ ನೋಟ್‌ಗಳನ್ನು ಕೈಯಲ್ಲಿ ಎತ್ತಿ ಹಿಡಿದು ಪ್ರದರ್ಶಿಸುತ್ತಿರುವ ಚಿತ್ರವೊಂದನ್ನು ಕಾಕ ಆದ್ಮಿಗಳು ತಿರುಚಿ ಮಹಿಳೆ ಬಿಜೆಪಿ ನಾಯಕರೊಬ್ಬರ ಮಗಳೆಂದೂ ಜನರನ್ನು ನಂಬಿಸಲು ಪ್ರಯತ್ನಿಸಿದರು.  ಎರಡನೆಯ ಉದಾಹರಣೆ ನಮಗೆ ಹತ್ತಿರದ್ದು.  ಮೈತುಂಬಾ ಚಿನ್ನಾಭರಣಗಳನ್ನು ಹೇರಿಕೊಂಡ ಯುವತಿಯೊಬ್ಬಳ ಚಿತ್ರವನ್ನು ಪ್ರಸರಿಸಿ ಆಕೆ ಕರ್ನಾಟಕದ ಬಿಜೆಪಿ ನಾಯಕ ಜನಾರ್ಧನ ರೆಡ್ಡಿಯವರ ಮಗಳೆಂದೂ, ಚಿನ್ನವೆಲ್ಲಾ ಗಣಿಧಣಿ ರೆಡ್ಡಿ ತಮ್ಮ ಕಾಳಧನವನ್ನು ಹಳದೀಲೋಹವಾಗಿ ಪರಿವರ್ತಿಸಿದ ಪರಿಣಾಮವೆಂದೂ ಕಾಕ ಆದ್ಮಿಗಳು ಪ್ರಚಾರ ಮಾಡಿದರು.  ಚಿತ್ರದಲ್ಲಿದ್ದ ಯುವತಿಗೂ, ರೆಡ್ಡಿಯವರ ಮಗಳಿಗೂ ಯಾವ ಹೋಲಿಕೆಯೂ ಇಲ್ಲ ಎನ್ನುವುದನ್ನು ಗಮನಿಸುವ ಗೋಜಿಗೇ ವದಂತಿಉತ್ಸಾಹಿಗಳು ಹೋಗಲಿಲ್ಲ.  ಹೀಗೆ ಯಾರಯಾರದೋ ಚಿತ್ರಗಳನ್ನು ಬಿಜೆಪಿ ನಾಯಕರುಗಳಿಗೆ ಸಂಬಂಧಿಸಿದವರೆಂದು ಕಾಕ ಆದ್ಮಿಗಳ ಐಟಿ ಸೆಲ್‌‍ಗಳು ಪ್ರಚಾರ ಮಾಡಿದವು.  ಬ್ಯಾಂಕ್ ಶಾಖೆಗಳಿಗೆ ಸಾಗಿಸಲಾದ ಹೊಸ ,೦೦೦ ರೂಪಾಯಿ ಮೌಲ್ಯದ ಭಾರಿ ಮೊತ್ತ, ಸಾಗಿಸಲಾದ ವಾಹನ, ಸುರಕ್ಷತೆ ನೀಡಿದ ಪೊಲೀಸರು ಎಲ್ಲವೂ ಇದ್ದ ಚಿತ್ರಗಳನ್ನು ಬಿಜೆಪಿ ನಾಯಕರ ವಾಹನದಲ್ಲಿ ಭಾರಿ ಮೊತ್ತದ ಹೊಸ ನೋಟ್‌‍ಗಳು ಪತ್ತೆ ಎಂಬ ಶಿರ್ಷಿಕೆಯಲ್ಲಿ ಲಜ್ಜೆಗೇಡಿ ಕಾಕ ಆದ್ಮಿಗಳು ಪ್ರಚಾರ ಮಾಡಿದರು.

. ಜನರ ಸಂಕಷ್ಟಗಳತ್ತ ಮೋದಿ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಆಪಾದಿಸುವ ವದಂತಿಗಳು
                ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಸುಪ್ರಸಿದ್ಧ ಘಂಟೇವಾಲ ಮಿಠಾಯಿ ಅಂಗಡಿಯ ಮುಂದೆ, ಇನ್ನಾವುದೋ ಸಂದರ್ಭದಲ್ಲಿ ಇನ್ನಾವುದೋ ಸ್ಥಳದಲ್ಲಿ ಕಂಡ ಜನರ ಸಾಲುಗಳ ಚಿತ್ರಗಳನ್ನು, ಹಿಂದಿನ ಯಾವುದೋ ಗಲಾಟೆಯ ಚಿತ್ರಗಳನ್ನು  ಕಾಕ ಆದ್ಮಿಗಳು ಎಟಿಎಂಗಳ ಮುಂದಿನ ಸಾಲುಗಳೆಂದು ಪ್ರಚಾರ ಮಾಡಿದರು.  ಉದ್ದ ಸಾಲುಗಳೂ, ಎಟಿಎಂಗಳಲ್ಲಿ ಹಣ ಸಾಕಷ್ಟಿಲ್ಲದ್ದು ಎಲ್ಲವೂ ನಿಜವೇ.  ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಮಯಾವಾಕಾಶ ನೀಡಿರೆಂದು ಪ್ರಧಾನಿ ಜನತೆಯಲ್ಲಿ ಮನವಿ ಮಾಡಿಕೊಂಡದ್ದೂ ನಿಜವೇ.  ಆದರೆ ನೋಟ್‌‍ಗಳ ಪೂರೈಕೆಯಲ್ಲಿ ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂವ ಮಾಡುತ್ತಿದೆಯೆಂಬ ಕಾಕ ಆದ್ಮಿಗಳ ಆರೋಪ ಒಂದು ಕಡೆಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಎಟಿಎಂಗಳೇ ಇಲ್ಲ, ಇರುವುದು ಕೇವಲ ,೫೦೦ ಎಟಿಎಂಗಳು ಎಂಬ ಪ್ರಚಾರ ಇನ್ನೊಂದು ಕಡೆ.  ಸತ್ಯಾಂಶವೆಂದರೆ ಡಿಸೆಂಬರ್ ೩೧, ೨೦೧೫ರಂದು ಗ್ರಾಮೀಣ ಪ್ರದೇಶಗಳಲ್ಲಿ ೩೩,೨೫೦ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ೫೧,೯೪೨ ಎಟಿಎಂಗಳಿದ್ದವು.
ಒಟ್ಟಿನಲ್ಲಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಕ ಅದ್ಮಿಗಳು ಹೂಡದ ಹೂಟವಿಲ್ಲ.  ಆದರೆ ಇವರ ಕೈಯಲ್ಲಿರುವುದೆಲ್ಲಾ ನಕಲಿ ನೋಟ್‌‍ಗಳು ಎಂದು ಜನಕ್ಕೆ ಗೊತ್ತಾಗಿದೆ.  ಅವಕಾಶ ಸಿಕ್ಕಿದಾಗೆಲ್ಲಾ ಜನತೆ ಕಾಕ ಆದ್ಮಿಗಳಿಗೆ ಪಾಠ ಕಲಿಸುತ್ತಲೇ ಇದೆ.  ಆದರೆಉಗಿದರೆ ಉಣ್ಣೋಕೆ ಕರೆದರು” ಎನ್ನುವಂತೆ ಮತ್ತೆ ಎದುರು ಬಂದು ನಿಲ್ಲುವುದು ಕಾಕ ಅದ್ಮಿಗಳ ಎಂದಿನ ಜಾಯಮಾನ.

ಡಿಸೆಂಬರ್ ೨೭, ೨೦೧೬ - ಜನವರಿ ೧೦, ೨೦೧೭