ಸ್ವಾತಂತ್ರೋತ್ತರ ಭಾರತದ ಅತೀ ವಿವಾದಾಸ್ಪದ ರಾಜಕಾರಣಿ ಶ್ರೀಮತಿ ಇಂದಿರಾ ಗಾಂಧಿ. ಆಂತರಿಕ ಹಾಗೂ ವಿದೇಶೀ ವ್ಯವಹಾರಗಳಲ್ಲಿ ಅವರು ಅನುಸರಿಸಿದ ನೀತಿಗಳು ತೀವ್ರ ಚರ್ಚೆಗೊಳಗಾಗಿವೆ. ಅದರೆ ಈ ಚರ್ಚೆಗಳು ಹೆಚ್ಚಿನ ಸಂದರ್ಭಗಳಲ್ಲಿ ವಸ್ತುನಿಷ್ಟತೆ ಕಳೆದುಕೊಂಡು ಪೂರ್ವಾಗ್ರಹಪೀಡಿತವಾಗಿವೆ ಎಂದು ನನಗನಿಸುತ್ತದೆ. ಮೊದಲಿಗೆ ಅವರ ಕೆಲವು ವಿದೇಶಾಂಗ ನೀತಿಗಳನ್ನು ಚರ್ಚೆಗೆತ್ತಿಕೊಳ್ಳುವಾ.
೧೯೭೧ರ ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಅವರು ತೋರಿದ ಚಾಣಾಕ್ಷತೆ ಮತ್ತು ಕುಟಿಲನೀತಿಗಳು ಭಾರತದ ಹಿಂದಿನ ಇಬ್ಬರು ಪ್ರಧಾನಮಂತ್ರಿಗಳ ಸ್ವಭಾವಕ್ಕೆ ವ್ಯತಿರಿಕ್ತವಾಗಿದ್ದವು. ಸ್ವತಃ ತನ್ನ ತಂದೆ ಜವಹರ್‌ಲಾಲ್ ನೆಹರೂ ಅವರ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿ ಇಂದಿರಾ ಗಾಂಧಿ ನಡೆದುಕೊಂಡರು. ಪೂರ್ವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿದಾಗ ಅದನ್ನು ಭಾರತಕ್ಕೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಲು ಆಕೆ ಹಂಚಿಕೆ ಹಾಕಿದರು. ಅದಕ್ಕೆ ಆಕೆ ಹಂತಹಂತವಾಗಿ ಕಾರ್ಯಯೋಜನೆ ರೂಪಿಸಿದರು. ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನೀ ಸೇನೆಯ ಶಕ್ತಿಯನ್ನು ಕುಂದಿಸುವುದು ಮೊದಲ ಹಂತ. ಅದಕ್ಕಾಗಿ ಆಕೆ ಕೈಗೊಂಡ ಕ್ರಮ ವಿಶ್ವನಾಯಕರನ್ನು ಇಂದಿಗೂ ಬೆಚ್ಚಿಸುತ್ತಿದೆ.
ತನ್ನ ವಾಯುಪ್ರದೇಶದ ಮೂಲಕ ಪಾಕಿಸ್ತಾನ ತನ್ನ ಎರಡೂ ಅಂಗಗಳ ನಡುವೆ ನೇರ ವಿಮಾನಯಾನ ಸಂಪರ್ಕ ಹೊಂದಲು ಭಾರತ ಅಂತರರಾಷ್ಟ್ರೀಯ ವಾಯುಯಾನ ನಿಯಮಗಳಿಗೆ ಅನುಗುಣವಾಗಿ ಅವಕಾಶ ನೀಡಿತ್ತು. ಈ ಅವಕಾಶವನ್ನು ಕೇವಲ ನಾಗರೀಕರ ಹಾಗೂ ನಾಗರೀಕ ವಸ್ತ್ರುಗಳ ಸಾಗಾಣಿಕೆಗಾಗಿ ಮಾತ್ರ ಪಾಕಿಸ್ತಾನ ಉಪಯೋಗಿಸಿಕೊಳ್ಳಬೇಕಾಗಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಾಗ ಪಾಕಿಸ್ತಾನೀ ಸರಕಾರ ನಿಯಮಗಳನ್ನು ಉಲ್ಲಂಘಿಸಿ ಸೇನೆ ಮತ್ತು ಸೇನಾಸಾಮಗ್ರಿಗಳನ್ನೂ ರಹಸ್ಯವಾಗಿ ಭಾರತದ ವಾಯುಪ್ರದೇಶದ ಮೂಲಕ ಸಾಗಿಸತೊಡಗಿತು. ಇದು ಭಾರತ ಸರಕಾರಕ್ಕೆ ತಿಳಿದರೂ ಸ್ಪಷ್ಟ ಆಧಾರಗಳಿಲ್ಲದೇ (ಈಗ ಪ್ರಚಲಿತವಿರುವ ಪರಿಭಾಷೆಯಲ್ಲಿ `ಹಾರ್ಡ್ ಎವಿಡೆನ್ಸ್') ಪಾಕಿಸ್ತಾನಕ್ಕೆ ನೀಡಿದ್ದ ಸೌಲಭ್ಯವನ್ನು ಹಿಂತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಪಾಕಿಸ್ತಾನದ ನಿಯಮೋಲ್ಲಂಘನೆಯನ್ನು ನೋಡಿಯೂ ಸುಮ್ಮನಿರುವ ಪರಿಸ್ಥಿತಿ ಭಾರತದ್ದು.
ಅದು ಮಾರ್ಚ್ ೭೧. ಶ್ರೀನಗರದಿಂದ ಹೊರಟ ಇಂಡಿಯನ್ ಏರ್‌ಲೈನ್ಸ್ ವಿಮಾನವೊಂದನ್ನು ಕಶ್ಮೀರೀ ವಿಭಜನವಾದಿಯೊಬ್ಬ (ಆತನ ಹೆಸರು ತಕ್ಷಣಕ್ಕೆ ನೆನಪಾಗುತ್ತಿಲ್ಲ. ಹಮೀದ್ ಖುರೇಶಿ ಅಂತ ಇರಬೇಕು) ಅಪಹರಿಸಿ ಲಾಹೋರ್‌ಗೆ ಕೊಂಡೊಯ್ದ. ಭಾರತದ ಜೈಲುಗಳಲ್ಲಿರುವ ತನ್ನ ಸಹಚರರನ್ನು ಬಿಡುಗಡೆಗೊಳಿಸದಿದ್ದರೆ ಪ್ರಯಾಣಿಕರನ್ನು ಕೊಲ್ಲುವುದಾಗಿಯೂ, ವಿಮಾನವನ್ನು ಸ್ಪೋಟಿಸುವುದಾಗಿಯೂ ಬೆದರಿಕೆ ಇತ್ತ. ಭಾರತ ಸರಕಾರ ಮಣಿಯಲಿಲ್ಲ. ಕೊನೆಗೆ ಅಪಹರಣಕಾರ ಪ್ರಯಾಣಿಕರನ್ನು ಬಿಡುಗಡೆಗೊಳಿಸಿದ. ಆದರೆ ವಿಮಾನವನ್ನು ನಾಶಪಡಿಸಿದ. ಭಾರತಕ್ಕೆ ಇದು ಮುಖಭಂಗ. ಉಭಯರಾಷ್ಟ್ರಗಳ ನಡುವೆ ವೃದ್ದಿಸುತ್ತಿದ್ದ ವೈಮನಸ್ಯದ ಆ ದಿನಗಳಲ್ಲಿ ಭಾರತಕ್ಕೆ ಹೀಗೆ ಅವಮಾನವಾದದ್ದು ಪಾಕಿಸ್ತಾನೀ ನಾಯಕರಿಗೆ ಸಂತೋಷ ತಂದಿತು. ವಿದೇಶ ಮಂತ್ರಿ ಜುಲ್ಫಿಕರ್ ಆಲಿ ಭುಟ್ಟೋ ಅವರು ಲಾಹೋರ್ ಏರ್‌ಪೋರ್ಟ್‌ಗೆ ಹೋಗಿ ಬಹಿರಂಗವಾಗಿಯೇ ಅಪಹರಣಕಾರನ ಬೆನ್ನುತಟ್ಟಿದರು. ಅಪಹರಣಕಾರ ಪಾಕಿಸ್ತಾನದಲ್ಲಿ ಹೀರೋ ಅನಿಸಿಕೊಂಡ. ಪಾಕಿಸ್ತಾನೀ ಸರಕಾರ ಅವನಿಗೆ ಇರಲು ಮನೆ, ಕೈತುಂಬಾ ಕಾಸು ಎಲ್ಲವನ್ನೂ ಕೊಟ್ಟು ತನ್ನ ಸಂತೋಷ ವ್ಯಕ್ತಪಡಿಸಿತು. ಅಪಹರಣಕಾರನಿಗೆ ಪಾಕಿಸ್ತಾನ ನೀಡಿದ ಈ ಸಹಕಾರ/ಸೌಲಭ್ಯಗಳನ್ನು ಭಾರತವಿರೋಧೀ ಕೃತ್ಯವೆಂದು ಬಣ್ಣಿಸಿದ ಭಾರತ ಸರಕಾರ ಆ ನೆಪವೊಡ್ಡಿ ತನ್ನ ವಾಯುಪ್ರದೇಶವನ್ನು ಉಪಯೋಗಿಸಿಕೊಳ್ಳಲು ಪಾಕಿಸ್ತಾನಕ್ಕೆ ನೀಡಿದ್ದ ಸೌಲಭ್ಯವನ್ನು ಹಿಂತೆಗೆದುಕೊಂಡಿತು. ಪರಿಣಾಮವಾಗಿ ಪೂರ್ವ ಪಾಕಿಸ್ತಾನ ತಲುಪಲು ಪಾಕಿಸ್ತಾನೀ ಸೇನೆ ಇಡೀ ಭಾರತ ಪರ್ಯಾಯದ್ವೀಪವನ್ನು ಸುತ್ತಿ ಶ್ರೀಲಂಕಾ ಮೂಲಕ ಸಾಗುವ ದಾರಿ ಹಿಡಿಯಬೇಕಾಯಿತು. ಈ ಮಾರ್ಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಹಾಗೂ ದುಬಾರಿಯಾಗಿತ್ತು. ಮುಂದೆ ಡಿಸೆಂಬರ್‌ನಲ್ಲಿ ಯುದ್ಧ ಆರಂಭವಾದಾಗ ಇದರ ಪರಿಣಾಮ ಪಾಕಿಸ್ತಾನೀ ಸೇನೆಯನ್ನು ಬಹುವಾಗಿ ತಟ್ಟಿತು.
ಆದರೆ ಇಡೀ ವಿಮಾನಾಪಹರಣ ಪ್ರಕರಣ ಭಾರತೀಯ ಗುಪ್ತಚರ ಇಲಾಖೆ ಖಂW ರಹಸ್ಯವಾಗಿ ರೂಪಿಸಿದ ಷಡ್ಯಂತ್ರವಾಗಿತ್ತು ಮತ್ತು ಅಪಹರಣಕಾರ ಭಾರತದ ಏಜಂಟ್ ಎನ್ನುವುದು ಮೂರುನಾಲ್ಕು ವರ್ಷಗಳ ನಂತರ ಬಹಿರಂಗಗೊಂಡಿತು. ಪಾಕಿಸ್ತಾನಕ್ಕೆ ನೀಡಿದ್ದ ವಾಯುಮಾರ್ಗದ ಉಪಯೋಗದ ಸೌಲಭ್ಯವನ್ನು ಹಿಂತೆಗೆದುಕೊಳ್ಳಲು ನೆಪವೊಂದರ ಸೃಷ್ಟಿಗೋಸ್ಕರ ಇಂದಿರಾ ಗಾಂಧಿ ಸರಕಾರ ಹೂಡಿದ ಹೂಟ ಇದಾಗಿತ್ತು ಹಾಗೂ ಭಾರತ ಹೆಣೆದು ಹರಡಿದ ಜಾಲದಲ್ಲಿ ಪಾಕಿಸ್ತಾನ ಸುಲಭವಾಗಿ ಸಿಕ್ಕಿಕೊಂಡಿತ್ತು. ಮುಂದೆ ಜೂನ್‌ನಲ್ಲಿ ಪಾಕಿಸ್ತಾನದೊಡನೆ ಯುದ್ಧ ಹೂಡಿ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸಲು ಇಂದಿರಾ ಗಾಂಧಿ ಹಂಚಿಕೆ ಹೂಡಿದರು. ಆದರೆ ಸೇನಾ ದಂಡನಾಯಕ ಮಾಣಿಕ್ ಶಾ ಇದನ್ನು ಪುರಸ್ಕರಿಸಲಿಲ್ಲ. ಅವರ ಪ್ರಕಾರ ಬೇಸಗೆಯಲ್ಲಿ ಯುದ್ಧ ಹೂಡುವುದು ಸಾಮರಿಕ ದೃಷ್ಟಿಯಿಂದ ನಮಗೆ ಅನುಕೂಲಕರವಾಗಿರಲಿಲ್ಲ. ಆ ಸಮಯದಲ್ಲಿ ಸಿಕ್ಕಿಂ ಮತ್ತು ಓಇಈಂ (ಓoಡಿಣh ಇಚಿsಣeಡಿಟಿ ಈಡಿoಟಿಣieಡಿ ಂgeಟಿಛಿಥಿ ಅಥವಾ ಈಗಿನ ಅರುಣಾಚಲ ಪ್ರದೇಶ)ಗಳು ಚೈನಾ (ಟಿಬೆಟ್) ಜತೆ ಹೊಂದಿರುವ ಹಿಮಾಲಯದ ಗಡಿಯಲ್ಲಿನ ಪರ್ವತ ಕಣಿವೆಗಳು ಹಿಮರಹಿತವಾಗಿರುವುದರಿಂದ ಪಾಕಿಸ್ತಾನದ ಪರವಾಗಿ ಚೈನಾ ತನ್ನ ಸೇನೆಯನ್ನು ಸುಲಭವಾಗಿ ಈಶಾನ್ಯ ಭಾರತದೊಳಗೆ ನುಗ್ಗಿಸುವ ಅಪಾಯವಿದೆ ಎಂದು ಮಾಣಿಕ್ ಶಾ ತರ್ಕಿಸಿದರು. ಜತೆಗೇ ಸಧ್ಯದಲ್ಲೇ ಮಾನ್ಸೂನ್ ಆರಂಭವಾಗುವುದರಿಂದ ನೂರೊಂದು ನದೀಕವಲುಗಳಿಂದ ಗಿಡಿದಿರುವ ಪೂರ್ವ ಪಾಕಿಸ್ತಾನದಲ್ಲಿ ಸೇನೆ ಮುಂದುವರೆಯಲು ಅತೀವ ತೊಡಕಾಗುತ್ತದೆ ಎಂದೂ ಮಾಣಿಕ್ ಶಾ ವಾದಿಸಿದರು. ಅವರ ವಾದವನ್ನು ಇಂದಿರಾ ಗಾಂಧಿ ತಾಳ್ಮೆಯಿಂದ ಆಲಿಸಿದ್ದಷ್ಟೇ ಅಲ್ಲ, ವಾದದಲ್ಲಿನ ವಾಸ್ತವವನ್ನು ಪುರಸ್ಕರಿಸಿ ಯುದ್ಧವನ್ನು ಚಳಿಗಾಲಕ್ಕೆ ಮುಂದೂಡಲು ತೀರ್ಮಾನಿಸಿದರು. ಇಂದಿರಾ ಗಾಂಧಿಯವರ ಈ ವರ್ತನೆ ಅವರ ತಂದೆ ನೆಹರೂ ಅವರ ವರ್ತನೆಗೆ ತೀರಾ ವಿರುದ್ಧವಾಗಿತ್ತು. ಎಲ್ಲ ವಿಷಯಗಳಲ್ಲೂ ತಾನು ಸರ್ವಜ್ಞ ಎಂಬಂತೆ ವರ್ತಿಸುತ್ತಿದ್ದ ಅವರು ಸೇನಾಧಿಕಾರಿಗಳ ಮಾತನ್ನು ಕೇಳುತ್ತಲೇ ಇರಲಿಲ್ಲ. ನೆಹರೂ ಅವರೊಡನೆ ಹೆಣಗಾಡುವುದು ಮಾನಸಿಕವಾಗಿ ಅತೀವ ಕ್ಲೇಶಕರ ಎಂದು ಜನರಲ್ ತಿಮ್ಮಯ್ಯ ಪರಿತಪಿಸಿದ್ದು ನಮಗೆ ತಿಳಿದೇ ಇದೆ. ನೆಹರೂ ಅವರ ಸ್ವಭಾವಕ್ಕೆ ವಿರುದ್ಧವಾಗಿ ಇಂದಿರಾ ಅವರು ತಮಗೆ ತಿಳಿಯದ ವಿಷಯಗಳಲ್ಲಿ `ತಿಳಿದವರ' ಸಲಹೆ ಪಡೆಯುವುದು ಸೂಕ್ತ ಎಂದು ಭಾವಿಸಿ ಅದರಂತೆ ನಡೆದುಕೊಳ್ಳುವ ವಿವೇಕವನ್ನು ಪ್ರದರ್ಶಿಸಿದರು. ಮುಂದಿನ ತಿಂಗಳು ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್ ಚೈನಾಗೆ ರಹಸ್ಯವಾಗಿ ಭೇಟಿ ನೀಡಿ ಅಮೆರಿಕಾ - ಚೈನಾ ಸೌಹಾರ್ದಕ್ಕೆ ನಾಂದಿ ಹಾಡಿದರು. ಈ ಬೆಳವಣಿಗೆಯಿಂದಾಗಿ ಭಾರತದ ವಿರುದ್ಧ `ವಾಷಿಂಗ್‌ಟನ್ - ಬೀಜಿಂಗ್ - ಇಸ್ಲಾಮಾಬಾದ್'ಗಳು ಸೇರಿದ ಒಂದು ಂxis ರೂಪುಗೊಂಡಿತು. ಭಾರತವೇನಾದರೂ ಪಾಕಿಸ್ತಾನದ ಮೇಲೆ ಯುದ್ಧ ಸಾರಿದರೆ ಅಮೆರಿಕಾ ಮತ್ತು ಚೈನಾಗಳು ಪಾಕಿಸ್ತಾನದ ಪರ ನಿಲ್ಲುವ ಸಾಧ್ಯತೆ ಕಂಡುಬಂದಿತು. ಈ ಅಪಾಯವನ್ನು ಮನಗಂಡ ಇಂದಿರಾ ಗಾಂಧಿ ಮರುತಿಂಗಳೇ ಸೋವಿಯೆತ್ ಯೂನಿಯನ್ ಜತೆ ಒಂದು ಸ್ನೇಹ ಮತ್ತು ಸೌಹಾರ್ದಗಳ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದ ಮೆಲ್ನೋಟಕ್ಕೆ ಒಂದು ಸಾಮಾನ್ಯ ನಾಗರೀಕ ಒಪ್ಪಂದದಂತೆ ಕಂಡುಬಂದರೂ ವಾಸ್ತವವಾಗಿ ಇದು ಸೈನಿಕ ಒಪ್ಪಂದವೊಂದಕ್ಕೆ ಸಮಾನವಾಗಿತ್ತು. ಈ ಒಪ್ಪಂದದ ಹನ್ನೆರಡನೇ ಕಲಮಿನ ಪ್ರಕಾರ ಅಗತ್ಯ ಬಿದ್ದರೆ ಭಾರತಕ್ಕೆ ಸೇನಾ ಸಹಾಯ ನೀಡಲು ಸೋವಿಯೆತ್ ಯೂನಿಯನ್ ಬದ್ಧವಾಗಿತ್ತು. ಪಾಕಿಸ್ತಾನದ ಜತೆಗಿನ ತನ್ನ ಯುದ್ಧದಲ್ಲಿ ಅಮೆರಿಕಾ ಮತ್ತು ಚೈನಾಗಳು ಪ್ರವೇಶಿಸದಂತೆ ತಡೆಯಲು ಇಂದಿರಾ ಗಾಂಧಿ ರೂಪಿಸಿದ ತಂತ್ರ ಇದಾಗಿತ್ತು.
ಇದೆಲ್ಲದರ ಪರಿಣಾಮವಾಗಿ ಭಾರತ ೧೯೭೧ರಲ್ಲಿ ಅಭೂತಪೂರ್ವ ಜಯ ಗಳಿಸಿತು. ನಿಜ ಹೇಳಬೇಕೆಂದರೆ ಅದು ಸ್ವತಂತ್ರ ಭಾರತ ಗಳಿಸಿದ ಏಕೈಕ ನಿರ್ಣಾಯಕ ವಿಜಯ. ೧೯೪೭-೪೮ರಲ್ಲಿ ನೆಹರೂ ಅವಸರವಸರವಾಗಿ ಕದನವಿರಾಮ ಘೋಷಿಸಿ ಕಾಶ್ಮೀರದ ಮೂರನೆಯ ಒಂದು ಭಾಗ ಪಾಕಿಸ್ತಾನದ ಅಧೀನದಲ್ಲಿ ಉಳಿಯಲು ಕಾರಣರಾದರು. ಅವರದೇ ಅವಾಸ್ತವಿಕ ನಿಲುವುಗಳಿಂದಾಗಿ ೧೯೬೨ರಲ್ಲಿ ಚೈನಾದ ಜತೆಗಿನ ಯುದ್ಧದಲ್ಲಿ ನಾವು ಸೋಲು ಅನುಭವಿಸಿದೆವು. ೧೯೬೫ರಲ್ಲಿ ಲಾಲ್ ಬಹಾದುರ್ ಶಾಸ್ತ್ರಿಯವರ ದಿಟ್ಟ ಹಾಗೂ ವಸ್ತುನಿಷ್ಟ ನಿಲುವುಗಳಿಂದಾಗಿ ಕಾಶ್ಮೀರದ ಮೇಲಿನ ಪಾಕಿಸ್ತಾನೀ ದುರಾಕ್ರಮಣವನ್ನು ನಾವು ಯಶಸ್ವಿಯಾಗಿ ತಡೆಗಟ್ಟಿದರೂ ಅದು ಒಂದು ನಿರ್ಣಾಯಕ ಗೆಲುವಾಗಿರಲಿಲ್ಲ. ಆದರೆ ೭೧ರ ಈ ವಿಜಯ, ಪಾಕಿಸ್ತಾನದ ಸಂಪೂರ್ಣ ಸೋಲು ಮತ್ತದರ ವಿಭಜನೆಯಿಂದಾಗಿ ಸ್ವತಂತ್ರ ಭಾರತದ ಮೊದಲ ಹಾಗೂ ಏಕೈಕ ನಿರ್ಣಾಯಕ ಗೆಲುವೆಂದು ಪರಿಗಣಿತವಾಗಿದೆ. ಪಾಕಿಸ್ತಾನೀ ಸೇನಾಧಿಕಾರಿಯೊಬ್ಬನ ಮಾತುಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮೂರು ಯುದ್ಧಗಳನ್ನು ಮೂರು ಟೆಸ್ಟ್‌ಗಳ ಒಂದು ಕ್ರಿಕೆಟ್ ಸರಣಿಗೆ ಹೋಲಿಸಬಹುದು. ೪೭-೪೮ರ ಪಂದ್ಯದಲ್ಲಿ ಪಾಕಿಸ್ತಾನ ವಿಜಯಿಯಾಯಿತು. ೬೫ರ ಪಂದ್ಯ ಡ್ರಾ ಆಯಿತು. ೭೧ರ ಪಂದ್ಯದಲ್ಲಿ ಭಾರತ ಭಾರೀ ಗೆಲುವು ಸಾಧಿಸಿತು. ಭಾರತ ಇನ್ನಿಂಗ್ಸ್ ವಿಜಯ ಸಾಧಿಸಿತು ಎಂದು ಹೇಳುವುದನ್ನು ಅವನ ಸ್ವಾಭಿಮಾನವೇ ತಡೆದಿರಬೇಕು. ಈ ಇನ್ನಿಂಗ್ಸ್ ವಿಜಯ ಸಾಧ್ಯವಾದದ್ದು ಇಂದಿರಾ ಗಾಂಧಿಯವರ ಚಾಣಾಕ್ಷತನದಿಂದ. ಈ ವಿಜಯದಿಂದಾಗಿ ವಿಶ್ವ ಭಾರತವನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಯಿತು. ಚೈನಾ ಮತ್ತು ಪಾಕಿಸ್ತಾನಗಳೆರಡೂ ಜತೆಯಾಗಿ ಸೇರಿಕೊಂಡು ನಮ್ಮ ಪೂರ್ವೋತ್ತರ ರಾಜ್ಯಗಳ ಮೇಲೆ ಒತ್ತಡ ಹೇರುವ ಅಪಾಯ ದೂರವಾಯಿತು.
ಇಂದಿರಾ ಗಾಂಧಿ ಸರಕಾರ ೭೪ರಲ್ಲಿ ಅಣುಬಾಂಬ್ ಪರೀಕ್ಷಣೆ ನಡೆಸಿದ್ದರಿಂದಾಗಿ ಪಾಕಿಸ್ತಾನ ಸಹಾ ಬಾಂಬ್ ತಯಾರಿಕೆಯಲ್ಲಿ ತೊಡಗಿತು ಎಂದು ಕೆಲವರು ವಾದಿಸುತ್ತಾರೆ. ಆದರೆ ಇದು ಸತ್ಯದೂರ. ಪಾಕಿಸ್ತಾನಕ್ಕೆ ಅಣ್ವಸ್ತ್ರದ ಅಗತ್ಯವಿದೆಯೆಂದೂ, ಹುಲ್ಲು ತಿಂದಾದರೂ ಪಾಕಿಸ್ತಾನೀಯರು ಅದನ್ನು ಪಡೆದುಕೊಳ್ಳುವುದಾಗಿಯೂ ವಿದೇಶ ಮಂತ್ರಿ ಜುಲ್ಪಿಕರ್ ಆಲಿ ಭುಟ್ಟೋ ೧೯೬೭ರಲ್ಲೇ ಘೋಷಿಸಿದ್ದ. ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಆತ ಅಸ್ತಿಭಾರ ಹಾಕಿದ್ದು ತಾನು ಅಧ್ಯಕ್ಷನಾದ ಒಂದು ತಿಂಗಳ ಒಳಗೆ, ೨೦ ಜನವರಿ ೧೯೭೨ರಲ್ಲಿ. ಅಂದರೆ ಭಾರತ ಅಣ್ವಸ್ತ್ರ ಪರೀಕ್ಷಣೆ ನಡೆಸುವುದಕ್ಕೆ ಎರಡು ವರ್ಷಗಳಿಗೂ ಹಿಂದೆ. ಇದರರ್ಥ, ಭಾರತ ಅಣ್ವಸ್ತ್ರ ಹೊಂದಿರಲಿ ಇಲ್ಲದಿರಲಿ, ಪಾಕಿಸ್ತಾನ ಮಾತ್ರ ಅದನ್ನು ಹೊಂದಲು ಉತ್ಕಟವಾಗಿ ಬಯಸಿತ್ತು. ನಮ್ಮ ಅಣುಕಾರ್ಯಕ್ರಮಗಳು ಶಾಂತಿಯುತ ಎಂದು ಹೇಳುಹೇಳುತ್ತಲೇ ಇಂದಿರಾ ಗಾಂಧಿ ರಹಸ್ಯವಾಗಿ ಅಣ್ವಸ್ತಗಳನ್ನು ಉತ್ಪಾದಿಸಿ ಸಿದ್ಧವಾಗಿರಿಸಿದ್ದರು. ಇದರ ಪರಿಣಾಮವಾಗಿಯೇ ೧೯೯೦ರ ಜುಲೈನಲ್ಲಿ ಪಾಕಿಸ್ತಾನ ನಮ್ಮ ಮೇಲೆ ಅಣ್ವಸ್ತ್ರ ದಾಳಿ ನಡೆಸುವ ಬೆದರಿಕೆ ಒಡ್ಡಿದಾಗ ವಿ ಪಿ ಸಿಂಗ್ ಸರಕಾರ ಅದೇ ಭಾಷೆಯಲ್ಲಿ ಇಸ್ಲಾಮಾಬಾದ್‌ಗೆ ಪ್ರತ್ಯುತ್ತರ ನೀಡಿ ಪಾಕ್ ಯುದ್ದೋತ್ಸಾಹಿಗಳನ್ನು ತಣ್ಣಗಾಗಿಸಿದ್ದು ಈಗ ಇತಿಹಾಸ. ಒಂದುವೇಳೆ ಭಾರತದ ಬಳಿ ಆಗ ಅಣ್ವಸ್ತ್ರಗಳು ಇಲ್ಲದೇ ಹೋಗಿದ್ದರೆ...!
ಇಷ್ಟಾಗಿಯೂ ಪಾಕಿಸ್ತಾನ ಅಣ್ವಸ್ತ್ರ ಗಳಿಸಿಕೊಳ್ಳಲು ಭಾರತ ಅವಕಾಶ ನೀಡಬಾರದಾಗಿತ್ತು ಎಂಬುದು ನನ್ನ ಅಭಿಪ್ರಾಯ. ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಕಳೆದ ಎರಡು ದಶಕಗಳಿಂದ ಅವ್ಯಾಹತವಾಗಿ ಸಾಗುತ್ತಿರುವುದಕ್ಕೆ ಇಸ್ಲಾಮಾಬಾದ್ ಅಣ್ವಸ್ತ್ರಗಳನ್ನು ಹೊಂದಿರುವುದು ಪ್ರಬಲ ಕಾರಣವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಾಶಪಡಿಸಲು ಭಾರತೀಯ ಸೇನೆ ಯಾವಾಗ ಪ್ರಯತ್ನಿಸಿದರೂ ಪಾಕಿಸ್ತಾನ ಅಣ್ವಸ್ತ್ರಗಳನ್ನು ಝಳಪಿಸಿ ಹಿಮ್ಮೆಟ್ಟಿಸುತ್ತಿದೆ. (ಇದರ ಬಗ್ಗೆ ಹಿಂದೆಯೇ ಬರೆದಿದ್ದೇನೆ.) ಪಾಕಿಸ್ತಾನದ ರಿಯಾಕ್ಟರ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ನಮ್ಮ ವಾಯುಪಡೆಗಿದ್ದರೂ ಇಂದಿರಾ ಗಾಂಧಿ ಆ ದಿಕ್ಕಿನಲ್ಲಿ ಯಾಕೆ ಯೋಚಿಸಲಿಲ್ಲ ಎಂದು ನನಗೆ ಅಚ್ಚರಿಯಾಗುತ್ತದೆ. ಕೊನೇಪಕ್ಷ ಇಸ್ರೇಲೀಯರು ಅಂತಹ ಯೋಜನೆ ರೂಪಿಸಿ ನಮ್ಮ ಸಹಕಾರ ಕೇಳಿದಾಗಲಾದರೂ ನಾವು ಮುಂದುವರಿಯಬೇಕಾಗಿತ್ತು. ಇಂದಿರಾ ಗಾಂಧಿ ಹಾಗೇಕೆ ಮಾಡಲಿಲ್ಲ ಎಂಬುದು ಒಂದು ಉತ್ತರಿಸಲಾಗದ ಪ್ರಶ್ನೆ. ಇಂದಿರಾ ಗಾಂಧಿಯವರ ಹತ್ಯೆಗೆ ನಾಲ್ಕು ತಿಂಗಳು ಮೊದಲು ಅವರನ್ನು ಭೇಟಿ ಮಾಡಿದ ಪತ್ರಕರ್ತ ತಾರಿಖ್ ಆಲಿ ತಮ್ಮ ಇತ್ತೀಚಿನ ಕೃತಿ ಆUಇಐ ನಲ್ಲಿ ಈ ಬಗ್ಗೆ ಕೆಲವು ಕುತೂಹಲಕರ ಮಾಹಿತಿ ನೀಡುತ್ತಾರೆ. ಸಂಭಾಷಣೆಯ ನಡುವೆ ಶ್ರೀಮತಿ ಗಾಂಧಿಯವರು ...ಪಾಕ್ ರಿಯಾಕ್ಟರ್‌ಗಳನ್ನು ನಾಶಪಡಿಸಲು ನಮಗೆ ಇಸ್ರೇಲೀಯರ ಸಹಕಾರ ಬೇಕಿಲ್ಲ. ನಮಗೆ ಅಗತ್ಯವೆನಿಸಿದಾಗ ನಾವೇ ಅದನ್ನು ಮಾಡುತ್ತೇವೆ ಎಂದು ಹೇಳಿದರಂತೆ. ಅವರ ಮನದಲ್ಲೇನಿತ್ತೋ, ಅವರೇನು ಮಾಡಬೇಕೆಂದು ಬಯಸಿದ್ದರೋ ಅದು ಯಾರಿಗೂ ಗೊತ್ತಿಲ್ಲ. ಹಂತಕರ ಗುಂಡಿಗೆ ಬಲಿಯಾಗದಿದ್ದರೆ ಅವರೇನಾದರೂ ಮಾಡುತ್ತಿದ್ದರೋ ಏನೋ, ಗೊತ್ತಿಲ್ಲ.
ಈ ಹಂತಕರ ಗುಂಡುಗಳನ್ನೇ ಚರ್ಚೆಗೆತ್ತಿಕೊಳ್ಳುವಾ. ಭಿಂದ್ರಾಂವಾಲೇಯನ್ನು ಎತ್ತಿಕಟ್ಟಿದ್ದೇ ಇಂದಿರಾ ಗಾಂದಿ, ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದರು ಎಂದು ಕೆಲವರು ಕ್ಲೀಶೆಯಾಗುವ ಮಟ್ಟಿಗೆ ಹೇಳುತ್ತಾ ಬಂದಿದ್ದಾರೆ. ಖeಚಿಟಠಿoಟiಣiಞ ಅನುಸರಿಸಿದ ಇಂದಿರಾ ಗಾಂಧಿ ಅದಕ್ಕೇ ಬಲಿಯಾದರು ಎಂಬ ಮಾತಿನ ಹಿಂದಿನ ತರ್ಕ ಇದೇ ಇರಬಹುದೇನೋ. ಆದರೆ ಈ ಆಪಾದನೆ ವಸ್ತುನಿಷ್ಟ ತರ್ಕಕ್ಕೆ ವಿರುದ್ಧವಾದುದು ಎಂಬುದು ನನ್ನ ಅಭಿಪ್ರಾಯ. ವಾಸ್ತವದಲ್ಲಿ ಖಲಿಸ್ತಾನ್ ಸಮಸ್ಯೆಯ ವಿಷಯದಲ್ಲಿ ಇಂದಿರಾ ಗಾಂಧಿ ಪೂರ್ಣವಾಗಿ ಡಿeಚಿಟಠಿoಟiಣiಞ ಅನುಸರಿಸಲಿಲ್ಲ, ಅನುಸರಿಸಿದ್ದರೆ ಆಕೆ `ಬಲಿ'ಯಾಗುತ್ತಿರಲಿಲ್ಲ ಎಂಬುದು ಇಡೀ ಪ್ರಕರಣವನ್ನು ಯಾವುದೇ ಪೂರ್ವಾಗ್ರಹವೂ ಇಲ್ಲದೇ ವಿಶ್ಲೇಶಿಸಿದರೆ ಅರಿವಾಗುತ್ತದೆ.
ಪಂಜಾಬಿನಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದು ನಿಂತಿದ್ದ ಅಕಾಲಿದಲದ ಶಕ್ತಿಯನ್ನು ಕುಂದಿಸುವ ಪ್ರಯತ್ನ ಮಾಡುವುದು ಕಾಂಗ್ರೆಸ್ ನಾಯಕಿಯಾಗಿ ಇಂದಿರಾ ಗಾಂಧಿಯವರಿಗೆ ಅಗತ್ಯವಾಗಿತ್ತು. ಅಕಾಲಿ ನಾಯಕತ್ವಕ್ಕೆ ತಲೆಬಾಗದೇ ಇದ್ದ ಜರ್ನೈಲ್ ಸಿಂಗ್ ಭಿಂದ್ರಾಂವಾಲೇ ಎಂಬ ಯುವ ಅಕಾಲಿಯನ್ನು ಈ ವಿಷಯದಲ್ಲಿ ಉಪಯೋಗಿಸಿಕೊಳ್ಳಲು ಶ್ರೀಮತಿ ಗಾಂಧಿ ಬಯಸಿದ್ದರಲ್ಲಿ ಅಸಹಜತೆಯೇನೂ ಇಲ್ಲ. ರಾಜಕೀಯದಲ್ಲಿ ಇದು ಹೊಸದೇನಲ್ಲ. ಅಕಾಲಿಗಳ ವಿರುದ್ಧ ಭಿಂದ್ರಾಂವಾಲೇಯನ್ನು ಇಂದಿರಾ ಗಾಂಧಿ ಎತ್ತಿಕಟ್ಟುವಾಗ ಈತ ಮುಂದೊಮ್ಮೆ ರಾಷ್ಟ್ರ ವಿರೋಧಿಯಾಗಿ ಬೆಳೆದು ನಿಲ್ಲುತ್ತಾನೆಂದು ಯಾರೂ ಊಹಿಸಿರಲಿಲ್ಲ. ಆ ಆತಂಕ ಸಹಜವಾಗಿಯೇ ಇಂದಿರಾ ಗಾಂಧಿಯವರಿಗೂ ಇರಲಿಲ್ಲ. ಎಲ್ಲರ ಊಹೆಗಳನ್ನೂ ಮೀರಿ ಆತ ಉಗ್ರ ರಾಷ್ಟ್ರವಿರೊಧಿಯಾದ. ಪವಿತ್ರ ಸ್ಥಳವಾದ ಸ್ವರ್ಣಮಂದಿರ ಭಯೋತ್ಪಾದಕರ ಅಡಗುದಾಣವಾಗಿ ಬದಲಾಯಿತು. ಯಾವಾಗ ಅವನು ರಾಷ್ಟ್ರವಿರೋಧಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದನೋ ಆಗ ಅವನನ್ನು ನಿರ್ವೀರ್ಯಗೊಳಿಸುವ ಪ್ರಯತ್ನಗಳನ್ನು ಇಂದಿರಾ ಗಾಂಧಿ ಸರಕಾರ ಕೈಗೊಂಡಿತು. ಭಿಂದ್ರಾಂವಾಲೆ ಅಕಾಲಿಗಳ ವಿರುದ್ಧದ ಶಕ್ತಿಯಾಗಿ ಬೆಳೆಯಬೇಕೆಂದು ಶ್ರೀಮತಿ ಗಾಂಧಿ ಬಯಸಿದ್ದರು, ರಾಷ್ಟ್ರವಿರೋಧಿ ಶಕ್ತಿಯಾಗಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭಯೋತ್ಪಾದಕರನ್ನು ಮಣಿಸುವ ಸೀಮಿತ ಕಾರ್ಯತಂತ್ರಗಳು ವಿಫಲವಾದಾಗ ಅವರನ್ನು ನೇರವಾಗಿ ಎದುರಿಸುವ ಯೋಜನೆಯನ್ನು ಇಂದಿರಾ ಗಾಂಧಿ ಸರಕಾರ ರೂಪಿಸಿತು. ಸ್ವರ್ಣಮಂದಿರದಲ್ಲಿನ ಭಯೋತ್ಪಾದಕರ ಅಡಗುದಾಣವನ್ನು ನಾಶಪಡಿಸದೇ ಖಲಿಸ್ತಾನೀ ಭಯೋತ್ಪಾದಕರನ್ನು ಅಡಗಿಸಲು ಸಾಧ್ಯವಿಲ್ಲ ಎಂದರಿತ ಭಾರತೀಯ ಸೇನೆ, ಜೂನ್ ೩ - ೪, ೧೯೮೪ರಂದು ಕಾರ್ಯಾಚರಣೆ ಕೈಗೊಂಡಿತು. ಈ ಆಪರೇಶನ್ ಬ್ಲೂಸ್ಟಾರ್ ರಾಷ್ಟ್ರವಿರೋಧಿ ಶಕ್ತಿಗಳನ್ನು ಮಣಿಸುವುದರಲ್ಲಿ ಇಂದಿರಾ ಗಾಂಧಿ ಸರಕಾರದ ದೃಡಸಂಕಲ್ಪದ ದ್ಯೋತಕ. ಸೇನೆ ಕಳುಹಿಸಿ ಇಂದಿರಾ ಗಾಂಧಿ ಮಂದಿರವನ್ನು ಅಪವಿತ್ರಗೊಳಿಸಿದರು ಎಂಬ ವಾದ ಹುರುಳಿಲ್ಲದ್ದು. ಸ್ವರ್ಣಮಂದಿರದ ಪವಿತ್ರತೆ ಹಾಳಾಗಿದ್ದರೆ ಅದು ಮಂದಿರವನ್ನು ಯಾವಾಗ ಕೊಲೆಗಡುಕರು, ಭಯೋತ್ಪಾದಕರು ತಮ್ಮ ಅಡಗುದಾಣವನ್ನಾಗಿ ಪರಿವರ್ತಿಸಿದರೋ ಆವಾಗಲೇ ಆಯಿತು. ಸೇನೆ ಪ್ರವೇಶಿಸಿದಾಗಲ್ಲ. ಈ ಕಾರ್ಯಾಚರಣೆಯ ಸಮಯದಲ್ಲಿ ಸೇನೆ ವರ್ತಿಸಿದ ರೀತಿಯನ್ನೂ ನಾವು ಗಮನಿಸಬೇಕು. ಸೈನಿಕರು ಏಕಾಏಕಿ ಮಂದಿರದೊಳಗೆ ಪ್ರವೇಶಿಸಲಿಲ್ಲ. ಶರಣಾಗತರಾಗಲು ಮಾಡಿಕೊಂಡ ಹಲವಾರು ಮನವಿಗಳಿಗೆ ಭಯೋತ್ಪಾದಕರು ಸೊಪ್ಪು ಹಾಕದಿದ್ದಾಗ, ಸೈನಿಕರ ವಿರುದ್ಧ ಮಂದಿರದ ಒಳಗಿನಿಂದ ನಿರಂತರವಾಗಿ ಗುಂಡುಗಳನ್ನು ಹಾರಿಸತೊಡಗಿದಾಗ ಅಂತಿಮ ಮಾರ್ಗವಾಗಿ ಸೇನೆ ಮಂದಿರದೊಳಗೆ ಪ್ರವೇಶಿಸಿತು. ಬೂಟುಗಳನ್ನು ಕಳಚಿಟ್ಟು, ಮಂದಿರದ ಹೊಸ್ತಿಲಿಗೆ ತಲೆಬಾಗಿ ವಂದಿಸಿ ಸೈನಿಕರು ಒಳಪ್ರವೇಶಿಸಿದರು. ಹಾಗೆ ಮಾಡುವಾಗ ಸೈನಿಕರು ಭಯೋತ್ಪಾದಕರ ಗುಂಡುಗಳಿಗೆ ನೇರವಾಗಿ ನಿಲ್ಲುವಂತಹ ಪ್ರತಿಕೂಲ ಪರಿಸ್ಥಿತಿಗೊಳಗಾದರು. ಇದರಿಂದಾಗಿ ಮುನ್ನೂರರಷ್ಟು ಸೈನಿಕರು ಜೀವತೆರುವಂತಾಯಿತು. ಪ್ರಪಂಚದ ಯಾವ ಸೇನೆಯೂ ತನ್ನ ಕಾರ್ಯಾಚರಣೆಯನ್ನು ಈ ಪರಿಯಾಗಿ ಅರಂಭಿಸಿದ ಮತ್ತೊಂದು ಉದಾಹರಣೆ ಇಲ್ಲ. ಪವಿತ್ರ ಸ್ಥಳವೊಂದನ್ನು ಭಯೋತ್ಪಾದಕ ಕೃತ್ಯಗಳಿಗೆ ಇಷ್ಟು ಧೀರ್ಘಕಾಲ ಉಪಯೋಗಿಸಿಕೊಳ್ಳಲು ರಾಷ್ಟ್ರವೊಂದು ಅವಕಾಶ ನೀಡಿದ ಉದಾಹರಣೆ ಸಹಾ ಮತ್ತೊಂದಿಲ್ಲ. ೧೯೭೯ರ ನವೆಂಬರ್‌ನಲ್ಲಿ ಮೆಕ್ಕಾದ ಪವಿತ್ರ ಮಸೀದಿಯಲ್ಲಿ ನಡೆದ ಘಟನಾವಳಿಗಳನ್ನು ನೆನಪಿಸಿಕೊಳ್ಳಿ. ಸೌದಿ ಅರೇಬಿಯಾ ಸರಕಾರ ಕೈಗೊಂಡ ಕ್ರಮಗಳನ್ನೇ ಇಂದಿರಾ ಗಾಂಧಿ ಸರಕಾರ ಕೈಗೊಂಡಿದ್ದರೆ ಖಲಿಸ್ತಾನೀ ಭಯೊತ್ಪಾದನೆ ೧೯೮೧ರಲ್ಲೇ ಅಂದರೆ ಮೊಳಕೆಯಲ್ಲೇ ಇತಿಶ್ರೀಯಾಗುತ್ತಿತ್ತು.
ಈ ಆಪರೇಷನ್ ಬ್ಲೂಸ್ಟಾರ್‌ನಿಂದಾಗಿಯೇ ಮನನೊಂದ ಸಿಖ್ ಬಾಂಧವರು ರೊಚ್ಚಿಗೆದ್ದು ಇಂದಿರಾ ಗಾಂಧಿಯವರನ್ನು ಕೊಲೆಗೈದರು ಎಂಬ ವಾದ ಪ್ರಚಲಿತವಿದೆ. ಬ್ಲೂಸ್ಟಾರ್ ಘಟನೆ ಸಿಖ್ಖರ ಮನನೋಯಿಸಿದ್ದೂ ನಿಜ.
ಧರ್ಮವೆಂಬುದು ಅಫೀಮು ಎಂದು ಕಾರ್ಲ್ ಮಾರ್ಕ್ಸ್ ಹೇಳಿರುವುದನ್ನು ನಾವ್ಯಾರೂ ಮರೆತಿಲ್ಲ. ಕೆಲವು ವಸ್ತುನಿಷ್ಟ ಕ್ರಮಗಳಿಂದ ಇಂದಿರಾ ಗಾಂಧಿ ತಮ್ಮ ಜೀವಕ್ಕೆ ಒದಗಿದ್ದ ಅಪಾಯವನ್ನು ದೂರ ಸರಿಸಬಹುದಾಗಿತ್ತು. ಆಪರೇಷನ್ ಬ್ಲೂಸ್ಟಾರ್ ಹಿನ್ನೆಲೆಯಲ್ಲಿ ಸಿಖ್ ಅಂಗರಕ್ಷಕರನ್ನು ಹೊಂದಿರುವುದು ವ್ಯಾವಹಾರಿಕವಾಗಿ ಉಚಿತವಲ್ಲ ಎಂದ ಅಧಿಕಾರಿಗಳ ಮಾತುಗಳನ್ನು ಇಂದಿರಾ ಗಾಂಧಿ ಧಿಕ್ಕರಿಸಿದರು. ಸಿಖ್ ಭಾಂಧವರ ಬಗ್ಗೆ ತಮಗೆ ಯಾವುದೇ ಆತಂಕವಿಲ್ಲ ಎಂದು ಘೋಷಿಸಿದರು. ಆದರೆ ಅಂತಿಮವಾಗಿ ಅವರ ಬಲಿ ತೆಗೆದುಕೊಂಡದ್ದು ಅವರು ವಿಶ್ವಾಸವಿರಿಸಿದ್ದ ಸಿಖ್ ಅಂಗರಕ್ಷಕರೇ. ಅಧಿಕಾರಿಗಳ ಮಾತುಗಳನ್ನು ಪುರಸ್ಕರಿಸಿ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರನ್ನೂ ಅಂಗರಕ್ಷಣ ಪಡೆಯಿಂದ ಬೇರೆಡೆಗೆ ವರ್ಗಾಯಿಸಿದ್ದಿದರೆ ಹಾಗೂ ಕೆಲವು ವರ್ಷಗಳವರೆಗೆ ಅಂಗರಕ್ಷಣ ಪಡೆಯಲ್ಲಿ ಯಾವುದೇ ಸಿಖ್ ಪೇದೆ/ಸೈನಿಕ ಇಲ್ಲದಂತೆ ನೋಡಿಕೊಂಡಿದ್ದರೆ ಹಾಗೂ ಈ ಕ್ರಮಗಳನ್ನು ಪತ್ರಕರ್ತರಿಗೂ ಅರಿವಾಗದಂತೆ ರಹಸ್ಯವಾಗಿ ಜಾರಿಗೊಳಿಸಿದ್ದರೆ ಅಕ್ಟೋಬರ್ ೩೧, ೧೯೮೪ ಶ್ರೀಮತಿ ಇಂದಿರಾ ಗಾಂಧಿಯವರ ಬದುಕಿನ ಕೊನೆಯ ದಿನವಾಗುತ್ತಿರಲಿಲ್ಲ. ಆಕೆ ನಿಜವಾಗಿಯೂ ಪೂರ್ಣಪ್ರಮಾಣದ ಡಿeಚಿಟಠಿoಟiಣiಞ ಅನುಸರಿಸಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.
ಜತೆಗೇ ಇಡೀ ಪ್ರಕರಣದಲ್ಲಿ ಪಾಕಿಸ್ತಾನದ ಜಿಯಾ ಉಲ್ ಹಕ್ ಸರಕಾರದ ಪಾತ್ರದ ಬಗ್ಗೆ ನಮ್ಮಲ್ಲಿ ಹೆಚ್ಚು ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಡೀ ಖಲಿಸ್ತಾನ್ ಚಳುವಳಿ ಪಾಕಿಸ್ತಾನ ಪ್ರೇರಿತ. ಸಿಖ್ಕರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನು ಪಾಕಿಸ್ತಾನ ಅರವತ್ತರ ದಶಕದಲ್ಲೇ ಆರಂಭಿಸಿತು. ೬೫ರ ಯುದ್ಧದ ಆರಂಭದ ದಿನಗಳಲ್ಲಿ ಸಿಖ್ಖರನ್ನು ಹಿಂದೂಗಳ ವಿರುದ್ಧ ಪ್ರಚೋದಿಸುವ ಹಲವಾರು ಕಾರ್ಯಕ್ರಮಗಳನ್ನು ರೇಡಿಯೋ ಪಾಕಿಸ್ತಾನದ ಲಾಹೋರ್ ಕೇಂದ್ರ ಅವಿರತವಾಗಿ ಪ್ರಸಾರ ಮಾಡಿತು. ಅದು ಕೊನೆಗೂ ನಿಂತದ್ದು ಭಾರತೀಯ ಸೇನೆ ರೇಡಿಯೋ ಕೇಂದ್ರವನ್ನು ಧ್ವಂಸಗೊಳಿಸಿದಾಗ. ಮತ್ತೆ, ಇಂದಿರಾ ಗಾಂಧಿಯವರ ಹತ್ಯೆಯಲ್ಲಿ ಜಿಯಾ ಉಲ್ ಹಕ್‌ರ ಕೈವಾಡವಿತ್ತು, ಅದಕ್ಕೆ ಪ್ರತಿಯಾಗಿ ರಾಜೀವ್ ಗಾಂಧಿ ಅವರು ಜಿಯಾ ಅವರ ತಲೆದಂಡ ಕೇಳಿದರು, ಜಿಯಾ ಹತ್ಯೆಗೆ ಇದು ಮೂಲ ಎಂದು ಪಾಕಿಸ್ತಾನದ ಸೇನೆಯ ಉನ್ನತ ವಲಯಗಳಲ್ಲಿ ವದಂತಿ ಈಗಲೂ ಇದೆ. ಇವೆಲ್ಲದರ ಹಿಂದಿನ ಸತ್ಯಗಳು ನಮ್ಮಂತಹ ಸಾಮಾನ್ಯ ನಾಗರೀಕರ ಕೈಗೆ ಬಹುಷಃ ಎಂದಿಗೂ ಸಿಗುವುದಿಲ್ಲ. ಆದರೂ ಇಂದಿರಾ ಗಾಂಧಿಯವರು ಮತ್ತೆ ಮತ್ತೆ ಉಲ್ಲೇಖಿಸುತ್ತಿದ್ದ ಜಿoಡಿeigಟಿ hಚಿಟಿಜ ಯಾವುದು ಎಂದು ಅರಿತರೆ ಸ್ವತಂತ್ರ ಭಾರತ ಅನೇಕ ಸಮಸ್ಯೆಗಳ ಮೂಲಗಳಿಗೆ ನಾವು ತಲುಪಬಹುದು.
ಇತರ ಆಂತರಿಕ ವ್ಯವಹಾರಗಳಲ್ಲಿ ಇಂದಿರಾ ಗಾಂಧಿ ತೋರಿದ ಧೀಮಂತಿಕೆ ಸಹಾ ಗಮನಾರ್ಹ. ರಾಜಧನದ ರದ್ದತಿ, ಕೆಲವೇ ಪರಿವಾರಗಳ ಸೊತ್ತಾಗಿದ್ದ ಬ್ಯಾಂಕುಗಳ ರಾಷ್ಟ್ರೀಕರಣಗಳನ್ನು ಆಕೆ ಕೈಗೊಂಡ ಬಗೆ (ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲೂ ಆಕೆ ಹಿಂಜರಿಯಲಿಲ್ಲ) ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಭೂತಪೂರ್ವ. ಆದರೆ ತುರ್ತುಪರಿಸ್ಥಿತಿಯನ್ನು ಹೇರಿದ್ದು ಮಾತ್ರ ಆಕೆಯ ಆಡಳಿತದ ಒಂದು ಕಪ್ಪುಚುಕ್ಕೆ. ಲೋಕಸಭೆಗೆ ಆಕೆಯ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಆಕೆ ಮನ್ನಿಸಬೇಕಾಗಿತ್ತು.
೭೭ರ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಜನತಾ ಪರಿವಾರದ ಪ್ರಮುಖರು ವರ್ತಿಸಿದ ಬಗೆ ಮಾತ್ರ ಇಂದಿರಾ ಗಾಂಧಿ ಈ imಠಿಚಿಣieಟಿಣ oಟಜ meಟಿ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರು ಎಂಬುದನ್ನು ಎತ್ತಿತೋರಿಸುತ್ತದೆ. ರಾಷ್ಟ್ರದ ಬಗ್ಗೆ ನೈಜ ಕಾಳಜಿ ಹೊಂದಿದ್ದ ಜೆಪಿ ಎಂಬ ಮಹಾನ್ ಚೇತನದ ವಿಶ್ವಾಸವನ್ನು ಕೇವಲ ಅಧಿಕಾರ ಪಡೆಯುವುದಕ್ಕಾಗಿ ಆ ಜನ ದುರುಪಯೋಗಪಡಿಸಿಕೊಂಡರು. ಅವರ ರಾಷ್ಟ್ರನಿಷ್ಟೆಯಾದರೂ ಎಂತಹದು? ೭೧ರ ಯುದ್ಧದ ಸಮಯದಲ್ಲಿ ಮಂತ್ರಿಮಂಡಲದ ರಹಸ್ಯ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳು ತಕ್ಷಣ ಸಿಐಏ ಗೆ ತಲುಪುತ್ತಿದ್ದುದು ಜಗಜೀವನ್ ರಾಂ ಅವರಿಂದ ಎಂಬ ಮಾತಿದೆ. ಇನ್ನು ಮೊರಾರ್ಜಿ ದೇಸಾಯಿ ಸಿಐಏ ಯ ಠಿಚಿಥಿ ಡಿoಟe ನಲ್ಲಿದ್ದರು ಎಂದು ಅಮೆರಿಕಾದ ಪತ್ರಕರ್ತ ಸೇಮರ್ ಹೆರ್ಷ್ ಆಪಾದಿಸಿದ್ದು ನಿಮಗೆ ನೆನಪಿರಬಹುದು. ಹೆರ್ಷ್ ವಿರುದ್ದ ದಾವೆ ಹೂಡಿದ ದೇಸಾಯಿ ತಾವು ಪರಿಶುದ್ಧರು ಎಂದು ನ್ಯಾಯಾಲಯಕ್ಕೆ ಮನಗಾಣಿಸುವಲ್ಲಿ ಸೋತುಹೋದರು. ಇನ್ನು ಆ ಚರಣ್ ಸಿಂಗ್, ಅವರ ಬಗ್ಗೆ ಬರೆಯುವುದೇ ಬೇಡ ಬಿಡಿ. ಇವರೆಲ್ಲರ ಮೈತ್ರಿ ಎರಡೂವರೆ ವರ್ಷಗಳಷ್ಟೂ ಬಾಳಲಿಲ್ಲ. ಮುಂದಿನ ಚುನಾವಣೆಯಲ್ಲಿ ಸಹಜವಾಗಿಯೇ ಜನತೆ ಇಂದಿರಾ ಗಾಂಧಿಯವರ ಪರವಾಗಿ ಮತ ಚಲಾಯಿಸಿದರು. ರಾಷ್ಟ್ರವನ್ನಾಳಲು ಯಾರು ಸಮರ್ಥರು ಎಂದು ಜನತೆ ಅರ್ಥ ಮಾಡಿಕೊಂಡಿದ್ದರು.
ದೇಶವನ್ನಾಳಿದ ಇತರ ಪ್ರಧಾನಮಂತ್ರಿಗಳಿಗಿಂತ ಇಂದಿರಾ ಅವರು ಅನೇಕ ವಿಧಗಳಲ್ಲಿ ಉನ್ನತರಾಗಿದ್ದರೂ ಅವರು ಮಹಿಳೆ ಎಂಬ ಕಾರಣಕ್ಕಷ್ಟೇ ಅವರನ್ನು ನಿಕೃಷ್ಟವಾಗಿ ಕಂಡ ಹಲವಾರು ಉದಾಹರಣೆಗಳು ನಮ್ಮ ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿವೆ. ಅವರು ಪ್ರಧಾನ ಮಂತ್ರಿಯಾದಾಗ ಬೇವಾ ಪ್ರಧಾನ್‌ಮಂತ್ರಿ ಬನ್ ಗಯೀ ಎಂದು ಹಲವಾರು ಸಂಪ್ರದಾಯಸ್ಥರು ಗೋಳಾಡಿದ್ದುಂಟು. ಇನ್ನು ಅವರ ಚಾರಿತ್ರ್ಯವಧೆಗೂ ಪ್ರಯತ್ನಗಳು ನಡೆದದ್ದೂ ಇದೆ. ಸ್ತ್ರೀಯೊಬ್ಬಳನ್ನು ಬೇರಾವುದೇ ರೀತಿಯಲ್ಲೂ ಕೆಳೆಗೆಳೆಯಲಾಗದಾಗ ಆಕೆಯ ಚಾರಿತ್ರ್ಯವಧೆ ಮಾಡುವುದು ಪುರುಷಪ್ರಧಾನ ಸಮಾಜದ ಒಂದು ಚಾಳಿ. ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಕನ್ನಡದಲ್ಲೇ ಒಬ್ಬರು ಎಸ್. ಆರ್. ಭಸ್ಮೆ ಎನ್ನುವವರು ಇಂದಿರಾ ಅವರ ಬಗ್ಗೆ, ಅವರ ಆಡಳಿತದ ಬಗ್ಗೆ ರಂಡೆ ಮುಂಡೆ ರಾಜ್ಯ ಎಂಬ ಪುಸ್ತಕ ಬರೆದು ಪ್ರಕಟಿಸಿದ್ದು ನನಗಿನ್ನೂ ನೆನಪಿದೆ.
ಶೀಮತಿ ಇಂದಿರಾ ಗಾಂಧಿ ಮತ್ತು ಶ್ರೀ ಪಿ. ವಿ. ನರಸಿಂಹರಾವ್ ಅವರುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ imಚಿge ಅನ್ನು ಸಕಾರಾತ್ಮಕವಾಗಿ ಹಾಗೂ ಪರಿಣಾಮಕಾರಿಯಾಗಿ ಬದಲಾಯಿಸಿದ ಇಬ್ಬರು ಪ್ರಧಾನಮಂತ್ರಿಗಳು. ಇವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದರಲ್ಲಿ ಈ ದೇಶ ಮೀನಮೇಷ ಎಣಿಸಬಾರದು.