ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, July 4, 2016

ಸಾಹಿತ್ಯಕ ಕಾಂಗ್ರೆಸ್ ಕಳೆಯೂ, ಅದರ ಅತ್ತೆಯೂ ಮತ್ತು ಕೊತ್ತಿಯೂ



            ನಯತಾರಾ ಸೆಹಗಲ್ ಹಾಗೂ ಉದಯ ಪ್ರಕಾಶ್ ಅವರಿಂದ ಆರಂಭಗೊಂಡು ಕಳೆದೊಂದು ವಾರದಲ್ಲಿ ಸುಮಾರು ಇಪ್ಪತ್ತೈದು ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕೃತರು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ.       ದೇಶದಲ್ಲಿ ಹೆಚ್ಚುತ್ತಿರುವ ಸಾಂಪ್ರದಾಯಿಕತೆ, ಮತೀಯವಾದ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ತಮ್ಮೀ ಕೃತ್ಯದ ಹಿಂದಿರುವ ಕಾರಣಗಳು ಎಂದವರು ಹೇಳುತ್ತಾರೆ.  ತಮ್ಮ ಮಾತುಗಳ ಸಮರ್ಥನೆಗಾಗಿ ಅವರು ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳ ವಿರುದ್ಧ ಅಭಿಯಾನ ಸಾಗಿಸಿದ್ದ ಶ್ರೀ ನರೇಂದ್ರ ಧಾಬೋಲ್ಕರ್ ಹಾಗೂ ಶ್ರೀ ಗೋವಿಂದ್ ಪನ್ಸಾರೆ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಕನ್ನಡ ವಿದ್ವಾಂಸ ಡಾ. ಎಂ. ಎಂ. ಕಲಬುರ್ಗಿ ಅವರುಗಳ ಹತ್ಯೆಗಳನ್ನು ಉದಾಹರಿಸುತ್ತಾರೆ.  ಜತೆಗೇ, ಉತ್ತರ ಪ್ರದೇಶದ ದಾದ್ರಿಯಲ್ಲಿ ಉದ್ರಿಕ್ತ ಹಿಂದೂಗಳ ಗುಂಪೊಂದು ಬಡ ಮುಸ್ಲಿಂ ಕಮ್ಮಾರನೊಬ್ಬನನ್ನು ಗೋಮಾಂಸ ಸೇವಿಸಿದರೆಂಬ ಕಾರಣವೊಡ್ದಿ ಹತ್ಯೆಗೈದದ್ದೂ ತಮ್ಮ ಅಂತಃಸಾಕ್ಷಿಯನ್ನು ಕಲಕಿದೆಯೆಂದು ಅವರು ಹೇಳುತ್ತಾರೆ.   ಅವರು ಉದಾಹರಿಸುವ ದುಷ್ಕೃತ್ಯಗಳು ಘೋರ, ಅಕ್ಷಮ್ಯ.  ಹತ್ಯೆಗಳ ಕಾರಣಕರ್ತರಿಗೆ ಅತಿಶೀಘ್ರವಾಗಿ ಕಾನೂನಿನ ಮೂಲಕ ಶಿಕ್ಷೆಯಾಗಲೇಬೇಕು.  ಇದರಲ್ಲಿ ಎರಡು ಮಾತಿಲ್ಲ.  ಆದರೆ ಪ್ರಕರಣಗಳಿಗೆ ಪ್ರಸಕ್ತ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಿ ಪ್ರಶಸ್ತಿಗಳನ್ನು ಹಿಂತಿರುಗಿಸುವುದು ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಯಲ್ಲಿ ಎಷ್ಟರಮಟ್ಟಿಗೆ ಸಹಕಾರಿಯಾಗಬಲ್ಲುದು?   ಪ್ರಶ್ನೆಯ ಹಿನ್ನೆಲೆಯಲ್ಲಿ ನಮ್ಮ ಸಾಹಿತಿಗಳು ಮತ್ತು ಮಾಧ್ಯಮಗಳು ಕಳೆದ ಕೆಲವು ದಶಕಗಳಲ್ಲಿ ರಾಷ್ಟ್ರೀಯ ಸಮಸ್ಯೆಗಳಿಗೆ ಸ್ಪಂದಿಸಿದ ಬಗೆಯನ್ನು ಅವಲೋಕಿಸುವುದು ಲೇಖನದ ವಸ್ತುವಿಷಯ.

            ಅವಲೋಕನವನ್ನು ನಮಗೆಲ್ಲರಿಗೂ ನೆನಪಿರುವ ತುರ್ತುಪರಿಸ್ಥಿತಿಯಿಂದಲೇ ಅರಂಭಿಸೋಣ.  ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರಲಿಲ್ಲ. ಪತ್ರಿಕಾಸ್ವಾತಂತ್ರ್ಯವಿರಲಿಲ್ಲ, ಇದು ಸಾಲದು ಎಂಬಂತೆ ಸುಮಾರು ಎಂಟೂವರೆ ಕೋಟಿ ಜನರಿಗೆ ಬಲವಂತವಾಗಿ ಸಂತಾನಹರಣ ಶಸ್ತ್ರಕ್ರಿಯೆ ಮಾಡಲಾಯಿತು ಮತ್ತು ಇವರಲ್ಲಿ ಮುಕ್ಕಾಲುಪಾಲಿಗಿಂತಲೂ ಹೆಚ್ಚಿನವರು ಮುಸ್ಲಿಮರಾಗಿದ್ದರು.  ತುರ್ತುಪರಿಸ್ಥಿತಿಯ ಕರಾಳತೆಗೆ ಇಷ್ಟು ಉದಾಹರಣೆಗಳು ಸಾಕು.  ಇದೆಲ್ಲವನ್ನೂ ನಡೆಸಿದ್ದು ಆಗಿನ ಕಾಂಗ್ರೆಸ್ ಸರ್ಕಾರ.  ಇದಕ್ಕೆ ದಿನಗಳ ಸಾಹಿತ್ಯಲೋಕದ ದಿಗ್ಗಜಗಳ ಪ್ರತಿಕ್ರಿಯೆ ಹೇಗಿತ್ತು?  ಪ್ರಶಸ್ತಿಗಳನ್ನು ಹಿಂತಿರುಗಿಸುವುದಿರಲಿ, ಹೆಚ್ಚಿನವರು ರಾತ್ರೋರಾತ್ರಿ ತುರ್ತುಪರಿಸ್ಥಿತಿಯ ಸಮರ್ಥಕರಾಗಿ ಬದಲಾಗಿಹೋದರು.  ಇವರಲ್ಲಿ ಅತಿಮುಖ್ಯರಾದವರೆಂದರೆ ಹರಿವಂಶರಾಯ್ ಬಚ್ಚನ್, ಖುಶ್ವಂತ್ ಸಿಂಗ್ ಮತ್ತು ಅಮೃತಾ ಪ್ರೀತಂ.  ಗಣ್ಯ ಸಾಹಿತಿ ಮುಲ್ಕ್ ರಾಜ್ ಆನಂದ್ ಮೌನವ್ರತ ಆರಂಭಿಸಿದರೆ ರೈಟರ್ಸ್ ಗಿಲ್ಡ್‌‍ ಸೋಹನ್‌‍ಲಾಲ್ ದ್ವಿವೇದಿ ಮತ್ತು ಶ್ರೀಕಾಂತ್ ವರ್ಮಾ ಭಾರತೀಯ ಸಾಹಿತಿಗಳೆಲ್ಲರೂ ತುರ್ತುಪರಿಸ್ಥಿತಿಯನ್ನು ಸಮರ್ಥಿಸುತ್ತಾರೆ ಎಂಬ ಗೊತ್ತುವಳಿಯ ಮಂಡನೆಗೆ ಮುಂದಾದರು!  ತುರ್ತುಪರಿಸ್ಥಿತಿಯ ವಿರುದ್ಧ ದನಿಯೆತ್ತಿದ ಏಕೈಕ ರಾಷ್ಟ್ರಮಟ್ಟದ ಸಾಹಿತಿಯೆಂದರೆ ಬಹುಶಃ ಮರಾಠಿಯ ದುರ್ಗಾ ಭಾಗವತ್.  ೧೯೭೫ರಲ್ಲಿ ಕರಾಡ್ನಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಲನದ ಅಧ್ಯಕ್ಷಸ್ಥಾನದಿಂದ ಭಾಷಣ ಮಾಡಿದ ಅವರು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ತುರ್ತುಪರಿಸ್ಥಿತಿಯ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.  ಅದಕ್ಕಾಗಿ ಅವರನ್ನು ಬಂಧಿಸಲಾಯಿತು.  ಅನಂತರ ಅವರು ಪದ್ಮಶ್ರಿ, ಜ್ಞಾನಪೀಠ ಸೇರಿದಂತೆ ತಮ್ಮನ್ನು ಅರಸಿಬಂದ ಪ್ರಶಸ್ತಿಗಳೆಲ್ಲವನ್ನೂ ತಿರಸ್ಕರಿಸಿದರು.

ದುರ್ಗಾ ಭಾಗವತರ ಮೇಲ್ಪಂಕ್ತಿಯನ್ನು ಮತ್ತಾರೂ ಅನುಸರಿಸಿದಂತೆ ಕಾಣುವುದಿಲ್ಲ.  ಈಗ ಪ್ರಶಸ್ತಿಗಳನ್ನು ಹಿಂತಿರುಗಿಸಿದವರೆಲ್ಲರೂ ಅನಂತರದ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಪ್ರಶಸ್ತಿ ಸ್ವೀಕರಿಸಿದವರೇ.  ಈಗ ಬಹಳ ಸದ್ದು ಮಾಡುತ್ತಿರುವ ನಯನತಾರಾ ಸೆಹಗಲ್‌‍ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ರಕ್ತಸಂಬಂಧಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯನ್ನು ಸಮರ್ಥಿಸುವುದೇ ಅಲ್ಲದೇ ೧೯೮೪ರಲ್ಲಿ ಮೂರುಸಾವಿರಕ್ಕೂ ಮಿಕ್ಕಿದ ಸಿಖ್ಖರ ನರಮೇಧ ನಡೆಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಕಾರವನ್ನೂ ಎತ್ತಲಿಲ್ಲ.  ಎರಡು ವರ್ಷಗಳ ನಂತರ ಯಾವ ಹಿಂಜರಿಕೆಯೂ ಇಲ್ಲದೇ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದರು.  ಮರುವರ್ಷವೇ ಸಲ್ಮಾನ್ ರಶ್ದೀಯ ಅಭಿವ್ಯಕ್ತಿ ಸ್ವಾತಂತ್ರ್ಯವಿರಲಿ ಜೀವವೇ ಅಪಾಯಕ್ಕೀಡಾಗ ಪ್ರಶಸ್ತಿಯನ್ನು ಹಿಂತಿರುಗಿಸುವ ಯೋಚನೆಯೇ ಇವರಿಗೆ ಬರಲಿಲ್ಲ.  ಉಳಿದವರೆಲ್ಲರೂ ಅವರಂತೆಯೇ.  ತುರ್ತುಪರಿಸ್ಥಿತಿಯಾಗಲೀ, ಸಿಖ್ ನರಮೇಧವಾಗಲೀ, ಮುಸ್ಲಿಂ ಉಗ್ರಗಾಮಿಗಳು ನೂರುಗಟ್ಟಲೆಯಲ್ಲಿ ಕಾಶ್ಮೀರಿ ಹಿಂದೂಗಳನ್ನು ಕೊಂದದ್ದಾಗಲೀ, ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿಸಿ ಕಣಿವೆಯಿಂದ ಹೊರಗಟ್ಟಿದ್ದಾಗಲೀ ಇವರ ಅಂತಃಸಾಕ್ಷಿಯನ್ನು ಕಲಕಲೇ ಇಲ್ಲ!  ಅದೆಲ್ಲವನ್ನೂ ನೋಡುತ್ತಾ ಕಣ್ಣುಮುಚ್ಚಿ ಕೂತ, ಕಾಂಗ್ರೆಸ್ ಸರ್ಕಾರವೇ ದಮನಕಾರಿ ನೀತಿಗಳಲ್ಲಿ ತೊಡಗಿದಾಗ ಮುಖ ಅತ್ತ ತಿರುಗಿಸಿದ ಇವರ ಅಂತಃಸಾಕ್ಷಿ ಈಗ ಏಕಾಏಕಿ ಜಾಗೃತವಾಗಿಬಿಟ್ಟಿದೆ.  ಚಮತ್ಕಾರಕ್ಕೆ ಕಾರಣ ಒಂದೇ-  ನರೇಂದ್ರ ಮೋದಿ ಕಾಂಗ್ರೆಸ್ಸಿಗರಲ್ಲದಿರುವುದು ಮತ್ತವರು ಪ್ರಧಾನಿಯಾಗಿಬಿಟ್ಟದ್ದು.

ತಾವು ಪ್ರಗತಿಪರರು, ಉದಾರವಾದಿಗಳು, ಸೆಕ್ಯೂಲರ್‍‍ಗಳು ಎಂದು ಹೇಳಿಕೊಳ್ಳುವ ನಮ್ಮ ಬಹುತೇಕ ಸಾಹಿತಿಗಳು ವಾಸ್ತವವಾಗಿ ಕಾಂಗ್ರೆಸ್ ಮತ್ತದು ಪೋಷಿಸಿದ ಎಡಪಂಥದ ಉತ್ಪಾದನೆಗಳು ಎನ್ನುವುದು ಅವರ ನಡೆನುಡಿಗಳಿಂದ ಜಗಜ್ಜಾಹೀರಾಗಿಹೋಗಿದೆ.  ಎಲ್ಲೆಲ್ಲೂ ಹಬ್ಬಿರುವ ಕಾಂಗ್ರೆಸ್ ಗಿಡ ಅಥವಾ ಪಾರ್ಥೇನಿಯಂ ಕಳೆಯಂತೇ ಸಾಹಿತ್ಯಲೋಕದಲ್ಲಿ ಇವರ ಸಂಖ್ಯೆ ಹುಲುಸಾಗಿಯೇ ಬೆಳೆದಿದೆ.  ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗಾಢನಿದ್ರೆಗೊಳಗಾಗುವ ಇವರ ಪ್ರಗತಿಪರತೆ, ಉದಾರವಾದ, ಸೆಕ್ಯೂಲರಿಸಂ ಎಲ್ಲವೂ ಕಾಂಗ್ರೆಸ್ಸೇತರ ಸರ್ಕಾರವೊಂದು ಅಧಿಕಾರಕ್ಕೆ ಬಂದಕೂಡಲೇ ಜಾಗೃತವಾಗಿಬಿಡುತ್ತವೆ.  ಎನ್‌‍ಡಿಎ- ಆವಧಿಯಲ್ಲಿ ಸಣ್ಣಗೆ ತಲೆಯೆತ್ತಿದ್ದ ಇವರ ಮಾನವತಾಪ್ರೇಮ ಕಳೆದವರ್ಷ ಬಿಜೆಪಿ ಪೂರ್ಣಬಹುಮತ ಗಳಿಸಿದ ನಂತರ ಉಗ್ರವಾಗಿಬಿಟ್ಟಿದೆ.  ಇದಕ್ಕೆ ಕಾರಣ ಕಳೆದ ವರ್ಷದ ಲೋಕಸಭಾ ಚುನಾವಣೆಗಳ ಸ್ವರೂಪ.

ಚುನಾವಣೆಗಳು ಹಿಂದಿನ ಇತರೆಲ್ಲಾ ಚುನಾವಣೆಗಳಿಗಿಂತಲೂ ಹಲವು ವಿಧದಲ್ಲಿ ಭಿನ್ನವಾಗಿದ್ದವು.  ೧೯೮೪ರ ನಂತರ ಮೊಟ್ಟಮೊದಲ ಬಾರಿಗೆ ಪಕ್ಷವೊಂದು ಪೂರ್ಣ ಬಹುಮತ ಪಡೆದಿತ್ತು ಮತ್ತದು ಬಿಜೆಪಿ ಆಗಿತ್ತು.  ಗುಜರಾತ್, ರಾಜಾಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಎಲ್ಲ ಸ್ಥಾನಗಳನ್ನೂ ಬಾಚಿಕೊಳ್ಳುವುದರ ಜತೆಗೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕಗಳ ಸ್ಥಾನಗಳಲ್ಲಿ ಸಿಂಹಪಾಲು ಗಳಿಸಿತು.  ಅಸ್ಸಾಂ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲೂ ಅದರ ಸಾಧನೆ ಗಮನಾರ್ಹವಾಗಿತ್ತು.  ಅಸಾಮಾನ್ಯ ಬೆಳವಣಿಗೆ ಬಯಲು ಮಾಡಿರುವ ರಾಜಕೀಯ ಸತ್ಯಗಳು ಹಲವಾರು.  ಚುನಾವಣೆಗಳಲ್ಲಿ ಜಾತಿಯಾಧಾರಿತ ಮತಚಲಾವಣೆ ಹಾಗೂ ಐಡೆಂಟಿಟಿ ಪಾಲಿಟಿಕ್ಸ್‌‍ಗಳಂತಹ ಋಣಾತ್ಮಕ ರಾಜಕೀಯ ನಡೆಗಳು ಹಿಂದೆ ಸರಿದವು ಹಾಗೂ ಅವುಗಳನ್ನೇ ತಮ್ಮ  ಬಂಡವಾಳವಾಗಿಸಿಕೊಂಡಿದ್ದ ರಾಜಕೀಯ ಪಕ್ಷಗಳು ಮತದಾರರಿಂದ ನಿರ್ಣಾಯಕವಾಗಿ ತಿರಸ್ಕೃತಗೊಂಡವು.  ಬಿಜೆಪಿಯನ್ನು ಕೋಮುವಾದಿ ಎಂದು ಹೀಗಳೆಯುತ್ತಿದ್ದ ಪಕ್ಷಗಳೆಲ್ಲಾ ಸಮಾಜವನ್ನು ಜಾತಿಗಳ ಆಧಾರದ ಮೇಲೆ ವಿಭಜಿಸಿ ಮೂಲಕ ಮತಬ್ಯಾಂಕ್‌‍ಗಳನ್ನು ಸೃಷ್ಟಿಸಿಕೊಂಡಿದ್ದದ್ದು ಇದುವರೆಗಿನ ರಾಜಕೀಯದಲ್ಲಿನ ದುರಂತವಾಸ್ತವ.   ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾದಲ ಮುಂತಾದ ಪಕ್ಷಗಳು ಕೇವಲ ಜಾತಿಯಾಧಾರಿತ, ಧರ್ಮಾಧಾರಿತ ಮತಗಳಿಂದಲೇ ಇದುವರೆಗೆ ಜೀವ ಹಿಡಿದುಕೊಂಡಿದ್ದದ್ದು.  ಕಾಂಗ್ರೆಸ್ ಸಹಾ ಇದೇ ಅನಾಚಾರವನ್ನು ಹಲಬಾರಿ ಹಲವೆಡೆ ಮಾಡಿತ್ತು.  ವಾಸ್ತವವಾಗಿ ಕಾಂಗ್ರೆಸ್‌‍ಗೂ ಪಕ್ಷಗಳಿಗೂ ನೀತಿನಡವಳಿಕೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.  ಮತಗಳನ್ನು ಜಾತಿಯ, ಧರ್ಮದ ಆಧಾರದ ಮೇಲೆ ವಿಘಟಿಸುವ ಇವರೆಲ್ಲರ ತಂತ್ರಗಳು ಬಾರಿ ವಿಫಲವಾದವು.  ಇದುವರೆಗೂ ಅಂಥ ಪ್ರಯತ್ನಗಳಲ್ಲಿ ತೊಡಗಿದ್ದ ಪಕ್ಷಗಳು ಧೂಳೀಪಟವಾದವು ಮತ್ತು ಪಕ್ಷಗಳೀಗ ಕುಸಿದುಬಿದ್ದಿರುವ ತಮ್ಮ ಏಕೈಕ ಅಧಾರಸ್ಥಂಭದ ಮುಂದೆ ಕಣ್ಣುಕಣ್ಣುಬಿಡುತ್ತಾ ನಿಂತಿವೆ.  ಇದು ಅತ್ಯಂತ ಧನಾತ್ಮಕ ಬೆಳವಣಿಗೆ.  ಇದರ ಪರಿಣಾಮವಾಗಿ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‌‍ಡಿಎಗೆ ಸಮಾಜದ ಎಲ್ಲ ವರ್ಗಗಳ, ಜಾತಿಗಳ ಹಾಗೂ ಧರ್ಮಗಳ ಮತದಾರರ ಮತಗಳು ಸಂದವು.  ಹಿಂದೂ ಸಮಾಜದ ಉಚ್ಚವರ್ಗಗಳ ಪಕ್ಷ ಎಂಬ ಹಣೆಪಟ್ಟಿ ಬಿಜೆಪಿಯಿಂದ ದೂರವಾಯಿತು.  ರಾಷ್ಟ್ರ ರಾಜಕಾರಣದಲ್ಲಿ ಕಂಡುಬಂದ ಅತ್ಯಂತ ಧನಾತ್ಮತ ಹಾಗೂ ಸ್ವಾಗತಾರ್ಹ ಬೆಳವಣಿಗೆಯೇ ನಮ್ಮ ಕಾಂಗ್ರೆಸ್ ಸಾಹಿತಿಗಳ ನಿದ್ದೆಗೆಡಿಸಿರುವುದು.  ಬಿಜೆಪಿ ಕೇವಲ ಹಿಂದೂ ಉಚ್ಛವರ್ಗದ ಹಿತಾಸಕ್ತಿಯನ್ನಷ್ಟೇ ಕಾಯುವ ಪಕ್ಷ ಎಂದು ಇದುವರೆಗೆ ಇವರು ಗಟ್ಟಿಗಂಟಲಿನಲ್ಲಿ ಸಾರಿಕೊಂಡು ಬಂದಿದ್ದ ಸುಳ್ಳನ್ನು ಮೊತ್ತಮೊದಲ ಬಾರಿಗೆ ಮತದಾರರು ತಿರಸ್ಕರಿಸಿದ್ದು ಇವರನ್ನು ದಿಕ್ಕೆಡಿಸಿಬಿಟ್ಟಿದೆ.   ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಗಳು ಇವರ ಭವಿಷ್ಯವನ್ನು ಮಂಕಾಗಿಸಿಬಿಟ್ಟಿವೆ.  ಇವರು ಹೇಳಿದ್ದನ್ನು ನಂಬದಿರುವ ಸ್ಥಿತಿಯಲ್ಲಿ ಹಿಂದೆ ಜನತೆ ಇರಲಿಲ್ಲ.  ಆದರೀಗ ಮಾಹಿತಿ ತಂತ್ರಜ್ಞಾನದಿಂದಾದ ಬೆಳವಣಿಗೆಗಳಿಂದಾಗಿ ಬಹುತೇಕ ವಿದ್ಯಾವಂತರ ಕೈಬೆರಳ ತುದಿಗೆ ಮಾಹಿತಿ ದಕ್ಕಿಬಿಡುತ್ತಿದೆ.  ಮಾಹಿತಿಗಳಿಗಾಗಿ ಅವರೀಗ ವಿದೇಶೀ ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಎಡಪಂಥೀಯರ ಹಿಡಿತದಲ್ಲಿರುವ ಆಂಗ್ಲ ಸುದ್ಧಿಮಾಧ್ಯಮಗಳನ್ನು ಅವಲಂಬಿಸಬೇಕಾಗಿಲ್ಲ.  ಸಾಹಿತಿಗಳ ಉವಾಚಗಳಲ್ಲಿ ಹುರುಳಿದೆಯೋ, ಜಾಳುಂಟೋ ಎನ್ನುವುದನ್ನು ಕ್ಷಣಾರ್ಧದಲ್ಲಿ ಜನ ತಿಳಿದುಕೊಳ್ಳುತ್ತಿದ್ದಾರೆ ಮತ್ತು ಹಾಗೆ ತಿಳಿದುಕೊಂಡದ್ದನ್ನು ಅಷ್ಟೇ ತ್ವರಿತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.  ಕರ್ನಾಟಕದ ಸಂದರ್ಭದಲ್ಲೇ ಹೇಳುವುದಾದರೆ ಹಿಂದೆ ಗಿರೀಶ್ ಕಾರ್ನಾಡ್, ಅನಂತಮೂರ್ತಿ ಮತ್ತಿತರರ ಮಾತುಗಳನ್ನು ವೇದವಾಕ್ಯಗಳೆಂದೇ ನಂಬುತ್ತಿದ್ದ ಜನ ಕಳೆದ ಮೂರುನಾಲ್ಕು ವರ್ಷಗಳಿಂದೀಚೆಗೆ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡದ್ದನ್ನು ಮತ್ತು ಅದಕ್ಕೆ ಕಾರಣವಾದ ತಾವು ಕಂಡುಕೊಂಡ ಸತ್ಯಗಳನ್ನು ಎಲ್ಲರೊಡನೆ ಮುಕ್ತವಾಗಿ ಹಂಚಿಕೊಳ್ಳತೊಡಗಿದ್ದನ್ನೂ, ಅದರ ಪರಿಣಾಮವಾಗಿ ಸಾಹಿತಿಗಳ ವರ್ಚಸ್ಸು ಗಣನೀಯವಾಗಿ ಕುಗ್ಗಿದ್ದನ್ನು ಉದಾಹರಣೆಯಾಗಿ ನೋಡಬಹುದು.  ಕಾಂಗ್ರೆಸ್‌‍ಗೆ ಮತ ನೀಡಿ ಎಂದು ಇಬ್ಬರು ಜ್ಞಾನಪೀಠಿಗಳು ಕಳೆದ ವರ್ಷ ಜನರಲ್ಲಿ ಮೊರೆಯಿಟ್ಟದ್ದು ಅರಣ್ಯರೋಧನವಾಗಷ್ಟೇ ಉಳಿದದ್ದು ನಿಮಗೆ ನೆನಪಿರಬಹುದು.  ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆ ಸುಳ್ಳುಗಾರ ಸಾಹಿತಿಗಳ ಸ್ಥಾನವನ್ನು ಇನ್ನಷ್ಟು ಹೀನಾಯವಾಗಿ ಕುಗ್ಗಿಸಲಿದೆ.  ಇವರ ಒಂದೊಂದು ಮಾತನ್ನೂ ಒರೆಹಚ್ಚಿನೋಡುವ ಸಾಮರ್ಥ್ಯವನ್ನು ಹಳ್ಳಿಗಾಡಿನ ಜನರೂ ಪಡೆದುಕೊಳ್ಳಲಿದ್ದಾರೆ.

ಕಾಂಗ್ರೆಸ್ ಸಾಹಿತಿಗಳು ನಿಂತ ನೆಲ ಹೀಗೆ ಅಲುಗಾಡತೊಡಗಿದಂತೆ ಅವರನ್ನು ಹತಾಷಗೊಳಿಸುವ ಮತ್ತಷ್ಟು ಕ್ರಮಗಳು ಕಳೆದೊಂದು ವರ್ಷದಲ್ಲಿ ಕೇಂದ್ರಸರ್ಕಾರದಿಂದ ಬಂದಿವೆ.  ಸಾಹಿತಿಗಳು ತನ್ನ ವಕ್ತಾರರೆಂದು ನಂಬಿದ್ದ ಕಾಂಗ್ರೆಸ್ ಇವರನ್ನು ಪೋಷಿಸುವುದಕ್ಕಾಗಿಯೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು.  ವಿವಿಧ ಪ್ರಶಸ್ಥಿ ಹಾಗೂ ಸ್ಥಾನಮಾನಗಳು ಇವರಿಗೆ ಮಾತ್ರ ಮೀಸಲಾಗಿರುತ್ತಿದ್ದವು.  ಜತೆಗೆ ಯಾವುಯಾವುದೋ ನೆಪದಲ್ಲಿ ಜಿಮ್‌‍ಖಾನಾ ಕ್ಲಬ್, ಇಂಡಿಯಾ ಇಂಟರ್‍‍ನ್ಯಾಷನಲ್ ಸೆಂಟರ್, ಸಾಹಿತ್ಯ ಅಕ್ಯಾಡೆಮಿ, ಪಾರ್ಲಿಮೆಂಟ್ ಹೌಸ್ ಅನೆಕ್ಸ್ ಮುಂತಾದೆಡೆ ಔತಣಕೂಟಗಳು, ವಿದೇಶಸಂಜಾರ ಎಲ್ಲವೂ ಇವರಿಗೆ ದಕ್ಕುತ್ತಿದ್ದವು.  ಕಳೆದೊಂದು ವರ್ಷದಲ್ಲಿ ಇವೆಲ್ಲಾ ನಿಧಾನವಾಗಿ ನಿಲುಗಡೆಗೆ ಬರುತ್ತಿದೆ.  'ಸಾಹಿತಿಯಾಗಿರುವುದು ಲಾಭದಾಯಕವಲ್ಲ' ಎಂದಿವರು 'ಅರಿತು'ಕೊಳ್ಳುತ್ತಿದ್ದಾರೆ.  ದೇಶದ ಸಾಂಸ್ಕೃತಿಕ ಬದುಕಿನಲ್ಲಿ ತಾವು ಹೀಗೆ ನಿಕೃಷ್ಟರಾಗುತ್ತಿರುವುದರಿಂದಾದ ಹತಾಷೆಯನ್ನು ಹೊರಹಾಕಲು ಇವರು ಕಂಡುಕೊಂಡ ಮಾರ್ಗಗಳಲ್ಲಿ ಒಂದು ಪ್ರಶಸ್ತಿ ಹಿಂತಿರುಗಿಸುವಿಕೆ.  ಕಾಲ ಬದಲಾಗಿದೆ, ಸುಳ್ಳುಗಳನ್ನು ಜನರಿಗೆ ಮಾರುವುದು ಇಂದು ಸಾಧ್ಯವಾಗದು ಎಂದರಿತ ಜಾಣಜಾಣೆಯರು ನಾಟಕೀಯ ಕ್ರಮವೊಂದಕ್ಕೆ ಮುಂದಾಗಿದ್ದಾರೆ.  ಇದೆಷ್ಟು ದಿನದ ಆಟ ನೋಡುತ್ತಲೇ ಕಾಂಗ್ರೆಸ್ ಕಳೆಗಳು ತಾವಾಗಿಯೇ ಮಾಯವಾಗುತ್ತಿರುವುದಕ್ಕೆ ನೆಮ್ಮದಿಯ ಉಸಿರ್ಗರೆಯೋಣ.

ಕೊನೆಯ ಮಾತು: ಇಷ್ಟಕ್ಕೂ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಸ್ವಾಯುತ್ತ ಸಂಸ್ಥೆ, ಕೇಂದ್ರಸರ್ಕಾರದ ಆಡಿಯಾಳಲ್ಲ.  ಸರ್ಕಾರದ ಮೇಲಿನ ಹತಾಷೆಯನ್ನು ಅಕ್ಯಾಡೆಮಿ ಮೇಲೆ ತೋರಿಸಿದರೆ ಅತ್ತೆಯ ಮೇಲಿನ ಕೋಪವನ್ನು ಕೊತ್ತಿಯ ಮೇಲೆ ತೋರಿಸಿದಂತಾಗುತ್ತದೆ ಅಷ್ಟೇ.   ಅಥವಾ ಅಕ್ಯಾಡೆಮಿಯ ಮೇಲೆ ಸರ್ಕಾರ ಸವಾರಿ ಮಾಡುತ್ತಿದೆ ಎಂದಿವರು ಹೇಳುವುದಾದರೆ ಆಪಾದನೆಯ ಮೂಲವನ್ನು ಕಾಂಗ್ರೆಸ್ ಸರ್ಕಾರದಲ್ಲೇ ಕಾಣಬಹುದಾಗಿದೆ.  ಪ್ರಧಾನಮಂತ್ರಿಯಾಗಿದ್ದ ಜವಾಹರ್ಲಾಲ್ ನೆಹರೂ ಸಾಹಿತ್ಯ ಅಕ್ಯಾಡೆಮಿಯ ಅಧ್ಯಕ್ಷಸ್ಥಾನವನ್ನೂ ತಮ್ಮಲ್ಲೇ ಇಟ್ಟುಕೊಂಡಿದ್ದರು!  ರಾಷ್ಟ್ರನೀತಿಗಳನ್ನು ರೂಪಿಸುವಾಗ ತಮ್ಮ ವೈಯುಕ್ತಿಕ ನೀತಿನಿಲುವುಗಳಿಗೆ ಪ್ರಾಶಸ್ತ್ಯ ಕೊಟ್ಟಂತೇ ಅಕ್ಯಾಡೆಮಿ ಅಧ್ಯಕ್ಷರಾಗಿಯೂ ನೆಹರೂ ಅದೇ ನೀತಿ ಅನುಸರಿಸಿದರು.  ಸಾಹಿತ್ಯಲೋಕದಲ್ಲಿ ಕಾಂಗ್ರೆಸ್ ಕಳೆ ಹುಲುಸಾಗಿ ಬೆಳೆದದ್ದಕ್ಕೆ ಅದೇ ಕಾರಣ.

ಅಕ್ಟೋಬರ್ 13, 2015

No comments:

Post a Comment