(೪ - ೧೨ - ೨೦೧೧ರಂದು ಮೈಸೂರಿನ "ಆಂದೋಳನ" ಪತ್ರಿಕೆಯಲ್ಲಿ ಪ್ರಕಟವಾದ ಕವನಗುಚ್ಚ)
- ೧ -
ಮೂವತ್ತು ನಲವತ್ತು ಮುಡಾ
ಸೈಟು ಕೇಳಿದೆ.
ಹೋಗ್ಹೋಗು ಮೂಢಾ
ಅಂದರು.
ಆರಡಿ ಮೂರಡಿ...
ರಾಗ ಎಳೆದೆ.
ಈಗಲೇ ತೆಗೆದುಕೋ
ಅಂದರು.
- ೨ -
ಬೆಂಗಳೂರಿನಿಂದ ಮೈ
ಸೂರಿಗೆ ಬಸ್ಸಿನಲ್ಲಿ ಮೂರೂವರೆ
ಗಂಟೆಗಳ ಪಯಣ.
ಹಿಂದೆ ಮೂರು
ಗಂಟೆಯೊಳಗೇ ತಲುಪುತ್ತಿದ್ದ
ನೆನಪು.
ಈಗಲೂ ಹೋಗಬಹುದು ಹಾಗೆ
ಮೂರು ಎರಡೂ ಮುಕ್ಕಾಲು
ಒಂದೂಕಾಲು ಕಾಲು
ಗಂಟೆಗೇ
ಜೀವ.
- ೩ -
ಮೈ
ಸೂರು
ಹೀಗಿರಲಿಲ್ಲ ಹಿಂದೆಲ್ಲಾ
ಸೂರು ನಾಕು
ಹನಿ ಕಂಡರೆ ಸಾಕು
ಮೈ
ಎಲ್ಲಾ ತಂಪಾಗಿಬಿಡುತ್ತಿತ್ತು.
ಈಗ ಮೈ
ನಸು ಬಿಸಿ
ಆದರೆ ಸಾಕು
ಸೂರು ಹೊತ್ತಿ
ಉರಿಯುತ್ತದೆ.
ಸೂಪರ್ ಪ್ರೇಂ ಅವ್ರೆ...
ReplyDeleteಇದು ಕವನದಂತೆ ಅಲ್ಲದಿದ್ದರೂ ಅದರಲ್ಲಿನ ನೈಜ ಅಂಶಗಳ ಮೂಲಕ ಇಷ್ಟ ಆಗುತ್ತೆ...
ಶುಭವಾಗಲಿ..
\|/