(ಇದೊಂದು ತುಂಟ ಕವನ. ಹಲವಾರು ವರ್ಷಗಳ ಹಿಂದೆ ಬರೆದದ್ದು. ಈಗ ಇಂಥವನ್ನು ಬರೆಯಲಾಗುವುದಿಲ್ಲ, ಓದಿ ಒಮ್ಮೆ ನಕ್ಕುಬಿಡಿ.)
ಕರಾವಳಿಯ ಕನ್ಯೆಯರು
ಭಾವನೆಗಳೇ ಇಲ್ಲದ
ಬರಡು ಬೇತಾಳಗಳು.
ಮಲೆನಾಡ ಬೆಡಗಿಯರೋ, ಅಬ್ಬ!
ಕುದಿವ ಹಂಡೆ.
ನವಭಾವಗಳು ಉಕ್ಕಿ ಹರಿವ
ಹುಚ್ಚುಹೊಳೆ ದಂಡೆ.
ಮಹಾರಾಜರ ಮೈ
ಸೂರಿನಲ್ಲಿ ಮಹಾರಾಣಿ
ಯರಾರೂ ಈಗಿಲ್ಲ.
ಹೆಜ್ಜೆಹೆಜ್ಜೆಗೆ ಎದುರು 'ಸಿಕ್ಕು'
ವವರು ಈ ಗಳಿಗೆ ಮುದ್ದುಕೋಳಿಮರಿ,
ಮರುಗಳಿಗೆ ಉರಿಗಣ್ಣ ಹೆಮ್ಮಾರಿ!
ಇವರೊಂದಿಗೆ ಏಗಲು ಆ
ಮಹಿಷಾಸುರನೇ ಸರಿ!
ಒಂದು ಕೇಜಿ ಹೆಣ್ತನ
ಕಸು ಒಂದು ಕಪ್,
ಸಣ್ಣಗೆ ಹೆಚ್ಚಿದ ಎರಡು
ದೊಡ್ಡಸೈಜಿನ ನಗೆಗಳು,
ಚಿಟಿಕೆ ಕೋಪ,
ಮುನಿಸು ರುಚಿಗೆ ತಕ್ಕಷ್ಟು,
ಶುದ್ಧ ರಿಫೈನ್ಡ್ ಲವಲವಿಕೆ
ಯಲ್ಲಿ ಹದಿನಾರುವರ್ಷ ಹದ
ವಾಗಿ ಹುರಿದರೆ
ತುಂಬುತ್ತದೆ ಕಣ್ಣು
ಧಾರವಾಡದ ಹೆಣ್ಣು!
ಧಾರವಾಡದ ಹೆಣ್ಣು
ದಾಳಿಂಬೆ ಹಣ್ಣು
ಜತೆಗಿದ್ದರೆ ಈ ಬದುಕು
ಓಹ್ ಅದೆಷ್ಟು ಚೆನ್ನು!
ಈ ಬ್ಲಾಗ್ ಸಿಕ್ಕಿದ್ದು ಸಂತಸವಾಯ್ತು. ಚೆನ್ನಾಗಿ ಬರೆದಿದ್ದೀರಿ ಸ್ವಾಮಿ. 'ಮೈ ಸೂರಿ ನಲ್ಲಿ' ಶ್ಲೇಷೆ ಚೆನ್ನಾಗಿದೆ.
ReplyDeleteDear Subrahmanya, thank you...
ReplyDeleteವಾವ್ ವಾವ್... ಹೆಣ್ಣನ್ನು ನೋಡೋದಕ್ಕೂ, ನೋಡೋದನ್ನ ಚಿತ್ರಿಸೋದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎನ್ನೋದು ಇವತ್ತೇ ತಿಳಿದದ್ದು. ಮುದಕೊಡುವ ಕವನ.
ReplyDeleteThank you, thank you and THANK YOU!
ReplyDeleteಅಹ ಕನ್ನಡತಿ -
ReplyDeleteಕರುನಾಡಿನ ಸಮಸ್ತ ಭಾಗಗಳ ಹೆಣ್ಣಿನ ದೇಹ ಭಾಷ ಲಕ್ಷಣಗಳನ್ನು ಚೆನ್ನಾಗಿ ಹಿಡಿದಿಟ್ಟು ಬರೆದಿರುವಿರಿ....
ಚೆನ್ನಾಗಿದೆ..
ಇಷ್ಟ ಆಯ್ತು..
ಶುಭವಾಗಲಿ..
\|/