ಉರಿವ ಸೂರ್ಯ
ಕರಗಿ ನೀರಿಗಿಳಿದ
ಮೇಲೆ
ಮಿಣುಕುಬತ್ತಿಯ ಬದುಕು.
ನಲುಗುತ್ತದೆ, ನರಳುತ್ತದೆ,
ನಸುಗಾಳಿಗೂ ಬೆದರಿ
ಬಾಗುತ್ತದೆ ಉದ್ದೋಉದ್ದಕ್ಕೆ
ಮಲಗಿಬಿಡುತ್ತದೆ
ನಿಸ್ಸಹಾಯಕವಾಗಿ.
ಹಿಂದೆಂದೋ ಕಂಡ ಕನಸುಗಳು
ಚದುರಿಹೋದ ಮುಗಿಲುಗಳು
ಒಡಲು ಬಟಾಬಯಲು.
ಬಾಲಿವುಡ್ ತಾರೆ
ಬಾರ್ ಗರ್ಲ್ ಆಗಿ
ಬದುಕು ನಲುಗಿ
ಪುಪ್ಪುಸ ಅಲುಗಿ
ಅಂಧೇರಿಯ ಕತ್ತಲೆ
ಯಲ್ಲಿ ಮೂರುಕಾಸಿನ...
ಓಹ್ ಬೇಡ ಬಿಡಿ.
ಅಲ್ಲಿ ನೋಡಿ
ಕಣ್ಣು - ಹೆಣ್ಣು
ಹೆಣ್ಣು - ಕಣ್ಣು
ಎಲ್ಲವೂ ಒದ್ದೆ ಒದ್ದೆ.
ಸೂರ್ಯನೇ ನೀರಿಗಿಳಿದ
ಮೇಲೆ
ಇನ್ನೇನು ಬಿಡಿ.
ಮಾರ್ದವ ಅಭಿವ್ಯಕ್ತಿ! ಕವಿತೆ ಇಷ್ಟ ಆಯ್ತು.
ReplyDeleteಪ್ರೀತಿಯಿಂದ,ಸಿಂಧು
Dear Sindhu! I am happy you liked this poem. Thank you so much!
ReplyDeleteನಗರದ ಬದುಕಿನ ಅಸಹಾಯಕ ಹೆಣ್ಣುಗಳ ನೋವಿನ ನಿಜವಾದ ಅಭಿವ್ಯಕ್ತಿ ನಿಮ್ಮ ಕವಿತೆಯಲ್ಲಿದೆ. ವಾಸ್ತವಕ್ಕೆ ಕನ್ನಡಿ ಹಿಡಿಯುವಂತಹ ನಿಮ್ಮ ಕವಿತೆ ನಿಜಕ್ಕೂ ನಗರ ಬದುಕಿಗೆ ಕನ್ನಡಿ !
ReplyDeleteಕಾರಣಿಕರಿಗೆ ಕೃತಜ್ಞತೆಗಳು!
ReplyDelete