ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Saturday, April 5, 2014

ಯಾರು ನಿಜವಾದ ಕೋಮುವಾದಿಗಳು?



"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಅಕ್ಟೋಬರ್ ೧೬, ೨೦೧೩ರಂದು ಪ್ರಕಟವಾದ ಲೇಖನ
 ತನ್ನ ಚುನಾವಣಾ ರಾಜಕಾರಣದ ಅವಿಭಾಜ್ಯ ಅಂಗವಾದ ಆರ್‌ಎಸ್‌ಎಸ್-ವಿರೋಧಿ ನೀತಿಯನ್ನು ಕಾಂಗ್ರೆಸ್ ಲಾಗಾಯ್ತಿನಿಂದಲೂ ಅನುಸರಿಸಿಕೊಂಡೇ ಬಂದಿದೆ.  ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಕಾಂಗ್ರೆಸ್‌ನ ಈ ನೀತಿ ಮತ್ತೂ ತಾರಕಕ್ಕೇರಿ ಬಿಜೆಪಿಯ ಸೈದ್ಧಾಂತಿಕ ಮಾತೆಯನ್ನು ಕೋಮುವಾದಿ, ವಿಚ್ಛಿದ್ರಕಾರಕ ಶಕ್ತಿ ಎಂದೆಲ್ಲಾ ಕರೆದು ಮತದಾರರನ್ನು ಪ್ರಮುಖ ವಿರೋಧ ಪಕ್ಷದಿಂದ ವಿಮುಖಗೊಳಿಸುವ ಪ್ರಯತ್ನಗಳು ತೀವ್ರತೆ ಪಡೆದುಕೊಂಡಿವೆ.  ಕಾಂಗ್ರೆಸ್‌ನ ಈ ಪ್ರಯತ್ನಗಳಿಗೆ ಇತರ ಸಣ್ಣಪುಟ್ಟ ಪಕ್ಷಗಳು ತಂತಮ್ಮ ಚುನಾವಣಾ ಲೆಕ್ಕಾಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದನಿ ಸೇರಿಸತೊಡಗಿವೆ.  ಇದಕ್ಕೆ ಇತ್ತೀಚಿನ ಸೇರ್ಪಡೆ ಎಡಪಂಥೀಯ ನಾಯಕಿಯೊಬ್ಬರ ಹೇಳಿಕೆಗಳು.
ಅಚ್ಚರಿಯೆಂದರೆ ಕಾಂಗ್ರೆಸ್ ಹೊರತಾಗಿ ಬಹುತೇಕ ಎಲ್ಲ ಪಕ್ಷಗಳೂ ಅಧಿಕಾರಕ್ಕಾಗಿ ಒಂದಲ್ಲಾ ಒಂದು ಸಲ ಬಿಜೆಪಿಯ ಅಥವಾ ಅದರ ಹಿಂದಿನ ಅವತಾರ ಭಾರತೀಯ ಜನಸಂಘದ ಸಾಂಗತ್ಯ ಬಯಸಿವೆ.  ಕಮ್ಯೂನಿಸ್ಟ್ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ.  ಇದನ್ನು ಅವಕಾಶವಾದ ಎಂದು ಕರೆದು ನಿರ್ಲಕ್ಷಿಸಬಹುದಾದರೂ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರ ಆರ್‌ಎಸ್‌ಎಸ್-ವಿರೋಧಿ ನೀತಿಯ ಹಿಂದೆ ಇರುವ ತಮ್ಮದೇ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳುವ ಹುನ್ನಾರಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.  ಇದುವರೆಗೆ ಕೋಮುವಾದ ಅಥವಾ ಇನ್ನಾವುದೇ ವಾದದ ಆಧಾರದ ಮೇಲೆ ದೇಶವನ್ನು ಒಡೆದದ್ದರಲ್ಲಿ ಮತ್ತು ಒಡೆಯುವ ಪ್ರಯತ್ನಗಳಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರ ಪಾತ್ರ ಗಣನೀಯವಾಗಿದೆ ಮತ್ತು ರಾಷ್ಟ್ರದ ಛಿದ್ರತೆಯನ್ನು ತಡೆಯುವುದರಲ್ಲಿ ಆರ್‌ಎಸ್‌ಎಸ್ ಪ್ರಮುಖ ಪಾತ್ರ ವಹಿಸುತ್ತಲೇ ಬಂದಿದೆ ಎನ್ನುವುದು ಇತಿಹಾಸ ನಮಗೆ ತಿಳಿಸುವ ಸಂಗತಿ.
ಆರ್‌ಎಸ್‌ಎಸ್ ಅನ್ನು ಕೋಮುವಾದಿ ಎಂದು ಮೊದಲು ಕರೆದದ್ದು ಮುಸ್ಲಿಂ ಲೀಗ್.  ಅದರ ತುತ್ತೂರಿ ಡಾನ್ ಪತ್ರಿಕೆ ಮೇ ೧೩, ೧೯೪೬ರಂದು, ಆರ್‌ಎಸ್‌ಎಸ್ ಸ್ಥಾಪನೆಯಾಗಿ ಇಪ್ಪತ್ತೊಂದು ವರ್ಷಗಳ ನಂತರ, ತನ್ನ ಸಂಪಾದಕೀಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿತ್ತು.  ಆದರೆ ಇತಿಹಾಸ ನಮಗೆ ತಿಳಿಸುವ ಪ್ರಕಾರ ಕೋಮುವಾದವನ್ನು ಈ ದೇಶದಲ್ಲಿ ಹುಟ್ಟುಹಾಕಿದ್ದೇ ಮುಸ್ಲಿಂ ಲೀಗ್.  ಒಂದು ಶತಮಾನದ ಹಿಂದೆ ಅದಾದದ್ದು ಹೀಗೆ- ಉಪಖಂಡಕ್ಕೆ ಯೂರೋಪಿಯನ್ನರ ಆಗಮನದೊಂದಿಗೆ ರಾಜಕೀಯ ಅಧಿಕಾರ ಕಳೆದುಕೊಂಡು, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲಾರದೇ, ಪಾಶ್ಚಿಮಾತ್ಯ ವಿದ್ಯಾಭ್ಯಾಸವನ್ನು ದೂರವಿಟ್ಟು, ಹಲವು ದಶಕಗಳವರೆಗೆ ಸ್ವನಿರ್ಮಿತ ಚಿಪ್ಪಿನೊಳಗೆ ಅಡಗಿಕೊಂಡ ಭಾರತೀಯ ಮುಸ್ಲಿಂ ಸಮುದಾಯ ಅಲ್ಲಿಂದ ಹೊರಬಂದದ್ದು ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಸರ್ ಸೈಯದ್ ಅಹಮದ್ ಖಾನ್‌ರು ಮಹಮ್ಮಡನ್ ಎಜುಕೇಶನ್ ಮೂವ್‌ಮೆಂಟ್ ಚಾಲನೆಗೊಳಿಸಿದಾಗ.  ಇದರ ಅನುಗುಣವಾಗಿ ಅಲಿಘರ್ ಮುಸ್ಲಿಂ ಕಾಲೇಜ್‌ನಂತಹ (ಮುಂದೆ ವಿಶ್ವವಿದ್ಯಾಲಯವಾಯಿತು) ಮುಸ್ಲಿಮರಿಗೇ ಪ್ರಾಶಸ್ತ್ಯ ನೀಡುವ ವಿದ್ಯಾಸಂಸ್ಥೆಗಳ ಸ್ಥಾಪನೆಯಾಗಿ ಆ ಮೂಲಕ ಪಾಶ್ಮಿಮಾತ್ಯ ಶಿಕ್ಷಣವನ್ನು ಗಳಿಸಿಕೊಳ್ಳತೊಡಗಿದ ಮುಸ್ಲಿಂ ಸಮುದಾಯ ಮೊದಲು ಬೇಡಿಕೆಯಿತ್ತದ್ದು ಬ್ರಿಟಿಷ್ ಭಾರತೀಯ ಆಡಳಿತಾಂಗದಲ್ಲಿ ತನಗೆ ಮೀಸಲಾತಿಗಾಗಿ.  ಉತ್ತರ ಭಾರತದ ಶ್ರೀಮಂತ ನವಸಾಕ್ಷರ ಮುಸ್ಲಿಮರನ್ನೊಳಗೊಂಡ ಶಿಮ್ಲಾ ಡೆಪ್ಯುಟೇಷನ್ ಈ ಬೇಡಿಕೆಯನ್ನು ವೈಸ್‌ರಾಯ್ ಲಾರ್ಡ್ ಮಿಂಟೋ ಮುಂದಿಟ್ಟದ್ದು ೧೯೦೬ರಲ್ಲಿ.  ಹಿಂದೂಮಹಾಸಾಗರದತ್ತ ರಶಿಯನ್ನರ ಮುನ್ನಡೆಯನ್ನು ತಡೆಗಟ್ಟಲು ಮುಸ್ಲಿಂ ಬಹುಸಂಖ್ಯಾತ ಪಶ್ಚಿಮ ಭಾರತದಲ್ಲಿ ಪ್ರತ್ಯೇಕ ರಾಜಕೀಯ ವ್ಯವಸ್ಥೆಯೊಂದರ ನಿರ್ಮಾಣಕ್ಕಾಗಿ ಆಗಷ್ಟೇ ಹಂಚಿಕೆ ಹಾಕಿದ್ದ ಬ್ರಿಟಿಷರು ಶಿಮ್ಲಾ ಡೆಪ್ಯುಟೇಷನ್‌ನ ಬೇಡಿಕೆಯನ್ನು ತಮ್ಮ ಉದ್ದೇಶ ಸಾಧನೆಗಾಗಿ ಉಪಯೋಗಿಸಿಕೊಂಡರು.  ಇದರ ಪರಿಣಾಮವಾಗಿ ಆರಂಭವಾದ ಮುಸ್ಲಿಂ-ಬ್ರಿಟಿಶ್ ಸಹಕಾರದ ಕೂಸು ೧೯೦೬ರ ಡಿಸೆಂಬರ್‌ನಲ್ಲಿ ಜನ್ಮತಾಳಿದ ಮುಸ್ಲಿಂ ಲೀಗ್.
ವಾಸ್ತವವಾಗಿ ಪ್ರಾರಂಭದಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಅಜೆಂಡಾ ಲೀಗ್‌ಗಿರಲಿಲ್ಲ.  ಅದರ ಉದ್ದೇಶ ಮೇಲೆ ಹೇಳಿದಂತೆ ಮುಸ್ಲಿಂ ಸಮುದಾಯಕ್ಕೆ ಬ್ರಿಟಿಷ್ ಭಾರತೀಯ ಆಡಳಿತಾಂಗದಲ್ಲಿ ಮೀಸಲಾತಿ ದೊರಕಿಸಿಕೊಡುವುದಷ್ಟೇ ಆಗಿತ್ತು.  ಆದರೆ ತನ್ನ ಉದ್ದೇಶಸಾಧನೆಗಾಗಿ ಬ್ರಿಟನ್ ಲೀಗ್‌ನ ಪ್ರಮುಖರನ್ನು ಓಲೈಸತೊಡಗಿದಾಗ ಪರಿಸ್ಥಿತಿ ಬದಲಾಯಿತು.  ಆಗಿನ ಮುಸ್ಲಿಂ ಲೀಗ್ ದೆಹಲಿ, ಉತ್ತರ ಪ್ರದೇಶ, ಬಾಂಬೆಗಳ ಮೇಲುವರ್ಗದ ಮುಸ್ಲಿಮರಿಂದಲೇ ತುಂಬಿತ್ತು.  ಪಾರಂಪರಿಕವಾಗಿ ಶ್ರೀಮಂತರಾಗಿದ್ದ, ಜತೆಗೇ ಆಗಷ್ಟೇ ಪಾಶ್ಚಿಮಾತ್ಯ ವಿದ್ಯಾಭ್ಯಾಸಕ್ಕೆ ತೆರೆದುಕೊಂಡಿದ್ದ ಅವರಿಗೆ ಪ್ರತ್ಯೇಕ ರಾಷ್ಟ್ರದ ಕಲ್ಪನೆ, ಅದರ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಬ್ರಿಟನ್ನಿನ ಸಹಕಾರದ ಪೂರ್ಣ ಆಶ್ವಾಸನೆ, ಮುಸ್ಲಿಂ ರಾಷ್ಟ್ರದಲ್ಲಿ ತಮ್ಮ ಶ್ರೀಮಂತಿಕೆ ಹಾಗೂ ವಿದ್ಯಾಭ್ಯಾಸಗಳಿಂದಾಗಿ ತಾವು ಗಳಿಸಿಕೊಳ್ಳಬಹುದಾದ ಸ್ಥಾನಮಾನಗಳು- ಎಲ್ಲವೂ ಆಪ್ಯಾಯಮಾನವಾಗಿ ಕಂಡವು.  ಸರಕಾರೀ ಸಂಬಳ ಗಳಿಸುತ್ತಿದ್ದ, ಅಲ್ಪಸಂಖ್ಯಾತತೆಯ ಹಾಗೂ ಕಡಿಮೆ ಶಿಕ್ಷಣದ ಕಾರಣದಿಂದಾಗಿ ಆಡಳಿತವ್ಯವಸ್ಥೆಯಲ್ಲಿ ತಮ್ಮ ಪಾಲಿಗೆ ಬಹುಸಂಖ್ಯಾತ ಹಾಗೂ ಹೆಚ್ಚು ಶಿಕ್ಷಿತ ಹಿಂದೂಗಳಿಂದ ತಟ್ಟಬಹುದಾದ ಅಪಾಯದ ಕೊರಗಿನಲ್ಲಿ ಸದಾ ತೊಳಲುತ್ತಿದ್ದ ಈ ವರ್ಗಕ್ಕೆ ಮುಸ್ಲಿಮರಿಗಾಗಿಯೇ ಮೀಸಲಾದ ಪ್ರತ್ಯೇಕ ರಾಜಕೀಯ, ಆಡಳಿತ ಹಾಗೂ ಆರ್ಥಿಕ ವ್ಯವಸ್ಥೆ ಅಂದರೆ ಪ್ರತ್ಯೇಕ ದೇಶ ಸ್ವರ್ಗಸಮಾನವಾಗಿ ಕಂಡದ್ದು ಅತ್ಯಂತ ಸಹಜ.  ಈಗ ಭಾರತವಾಗಿರುವ ಪ್ರದೇಶಗಳಲ್ಲಿ ನಲವತ್ತೇಳಕ್ಕೆ ಮೊದಲು ಮುಸ್ಲಿಂ ಲೀಗ್‌ನ ಬೆನ್ನುಲುಬಾಗಿದ್ದವರು ಇವರೇ.   ಈ ವರ್ಗವನ್ನು Sಚಿಟಚಿಡಿiಥಿಚಿಣ (ಪಗಾರವರ್ಗ) ಎಂದು ಹೆಸರಿಸುವ ಪಾಕಿಸ್ತಾನದ ರಾಜಕೀಯ ಚಿಂತಕ ಹಂಝಾ ಅಲಾವಿ ಪಾಕಿಸ್ತಾನದ ಸೃಷ್ಟಿಗೆ ಈ ವರ್ಗದ ಕೊಡುಗೆ ಗಮನಾರ್ಹವಾದುದು ಎಂದು ಅಭಿಪ್ರಾಯ ಪಡುತ್ತಾರೆ.  ಮುಂದೆ ಪಾಕಿಸ್ತಾನ ಸ್ಥಾಪನೆಯಾದ ಮೇಲೂ ತನಗೆ ಬೆಂಬಲಿಗ ನೆಲೆಯೇ ಇಲ್ಲದ ಪ್ರದೇಶಗಳಲ್ಲಿ ಅಧಿಕಾರ ನಡೆಸಬೇಕಾದ ಪ್ರತಿಕೂಲ ಪರಿಸ್ಥಿತಿಯನ್ನು ಜಿನ್ನಾ ನಿಭಾಯಿಸಿದ್ದು ಭಾರತದಿಂದ ಲಕ್ಷಲಕ್ಷ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಸರಕಾರೀ ನೌಕರವರ್ಗದ ಸಹಕಾರದಿಂದ. 
  ಹೀಗೆ ಬ್ರಿಟಿಷ್ ಆಳರಸರ ಸಾಮ್ರಾಜ್ಯಶಾಹೀ ಹಂಚಿಕೆ ಹಾಗೂ ಅಗತ್ಯಗಳೊಂದಿಗೆ ಉತ್ತರ ಭಾರತದ ಮುಸ್ಲಿಂ ಸಮುದಾಯದ ಉಚ್ಛವರ್ಗದ ರಾಜಕೀಯ, ಆರ್ಥಿಕ ಲಾಲಸೆಗಳು ಮೇಳೈಸಿದಾಗ ದೇಶವಿಭಜನೆಗೆ ರಂಗ ಸಜ್ಜಾಯಿತು.  ಇಡೀ ದೇಶದ ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಹೋರಾಡತೊಡಗಿದರೆ ಮುಸ್ಲಿಂ ಲೀಗ್ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಸ್ಥಾಪನೆಗಾಗಿ ಕಾಂಗ್ರೆಸ್ ವಿರುದ್ಧ ಘರ್ಷಣೆಗಿಳಿಯಿತು.  ದೇಶವಿಭಜನೆಯೆಂಬ ದುರಂತ ನಾಟಕದ ಪ್ರಮುಖ ಪಾತ್ರಧಾರಿಗಳಾದ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ತಮ್ಮ ಸ್ವಾರ್ಥಪರ ಉದ್ದೇಶಗಳನ್ನು ಮರೆಮಾಚಿ ಇಡೀ ಬೆಳವಣಿಗೆಗಳಿಗೆ ಧಾರ್ಮಿಕ ಆಯಾಮ ಕೊಟ್ಟು ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಈ ಎರಡು ರಾಷ್ಟ್ರಗಳು ಒಂದೇ ರಾಜ್ಯದಲ್ಲಿ ಸಹಬಾಳ್ವೆ ನಡೆಸಲಾಗದು ಎಂದು ಹೇಳುವ "ದ್ವಿರಾಷ್ಟ್ರ ಸಿದ್ಧಾಂತ"ವನ್ನು ಮುಂದೊಡ್ಡಿ ಭಾರತೀಯರನ್ನಷ್ಟೇ ಅಲ್ಲ ಇಡೀ ವಿಶ್ವವನ್ನೇ ಅಡ್ಡದಾರಿಗೆಳೆದವು.  ಕೋಮುವಾದದ ಅನಾಚಾರಗಳು ಈ ದೇಶದಲ್ಲಿ ಜನ್ಮ ತಾಳಿದ್ದು ಹೀಗೆ.  ವಿರೋಧಾಭಾಸವೆಂದರೆ ಕೋಮುವಾದವನ್ನು ದೇಶದಲ್ಲಿ ಹುಟ್ಟುಹಾಕಿ ಅದರ ಆಧಾರದ ಮೇಲೆ ಉಪಖಂಡವನ್ನು ಒಡೆಯುವ ಅಜೆಂಡಾ ಹಾಕಿಕೊಂಡ ಮುಸ್ಲಿಂ ಲೀಗ್ ಆರ್‌ಎಸ್‌ಎಸ್ ಅನ್ನು ಕೋಮುವಾದಿ ಎಂದು ಕರೆಯಿತು!  Pot calling kettle black!
ದುರಂತವೆಂದರೆ, ಲೀಗ್‌ನ ಕೋಮುವಾದಿ ಅಜೆಂಡಾವನ್ನು ಒಪ್ಪಿಕೊಂಡು ಪಾಕಿಸ್ತಾನದ ಸೃಷ್ಟಿಗೆ ಅವಕಾಶ ನೀಡಿದ ಕಾಂಗ್ರೆಸ್ ಸಹಾ ಆರ್‌ಎಸ್‌ಎಸ್ ಅನ್ನು ಕೋಮುವಾದಿ ಎಂದು ಹೆಸರಿಸಿತು!  ಇದು ಕಾಂಗ್ರೆಸ್‌ನ suಡಿvivಚಿಟ ಣಚಿಛಿಣiಛಿ.  ಮುಸ್ಲಿಂ ಲೀಗ್‌ನ ಕೋಮುವಾದವನ್ನು ಪ್ರಬಲವಾಗಿ ವಿರೋಧಿಸಿ ದೇಶವಿಭಜನೆಗೆ ಅಡ್ಡಿಯಾಗಿದ್ದ ಆರ್‌ಎಸ್‌ಎಸ್ ಕಾಂಗ್ರೆಸ್‌ನ ಜನಪ್ರಿಯತೆಯ ಬುಡವನ್ನೇ ಅಲುಗಿಸಬಲ್ಲಷ್ಟು ಸಮರ್ಥವಾಗಿತ್ತು.  ಈ ಅಪಾಯದಿಂದ ಪಾರಾಗಲು ಕಾಂಗ್ರೆಸ್ ಆಯ್ದುಕೊಂಡ ಕ್ಷುದ್ರ ಮಾರ್ಗ ಆರ್‌ಎಸ್‌ಎಸ್‌ಗೆ ಮಸಿ ಹಚ್ಚುವುದು.  ಇದನ್ನು ಆರಂಭಿಸಿದ್ದೇ ಜವಾಹರ್‌ಲಾಲ್ ನೆಹರೂ.  ಅಂದಿನಿಂದ ಆರ್‌ಎಸ್‌ಎಸ್-ವಿರೋಧಿ ನೀತಿಗೆ ಕಾಂಗ್ರೆಸ್ ಸರಕಾರಗಳ ಕೃಪಾಪೋಷಣೆ ನಿರಂತರವಾಗಿ ಸಾಗುತ್ತಾ ಬಂದಿದೆ.
ನಲವತ್ತೇಳರಲ್ಲಿ ಸ್ವಾತಂತ್ರ್ಯ ಸನ್ನಿಹಿತವಾದಾಗ ಉಪಖಂಡವನ್ನು ಹದಿನೇಳು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿ ಸ್ವಾತಂತ್ರ ನೀಡಬೇಕೆಂಬ ಅತ್ಯಂತ ಘಾತಕ ಸಲಹೆಯನ್ನು ಭಾರತೀಯ ಕಮ್ಯೂನಿಸ್ಟ್ ಪಕ್ಷ ಬ್ರಿಟಿಷ್ ಸರಕಾರದ ಮುಂದಿಟ್ಟಿತು.  ಸಧ್ಯ, ಬ್ರಿಟಿಷರು ಇದನ್ನು ಒಪ್ಪಿಕೊಳ್ಳಲಿಲ್ಲ.
ವರ್ತಮಾನದ ದೊಡ್ಡ ದುರಂತವೆಂದರೆ ದೇಶವನ್ನು ಒಡೆದ ಮುಸ್ಲಿಂ ಲೀಗ್, ಅದಕ್ಕೆ ಅವಕಾಶ ನೀಡಿದ ಕಾಂಗ್ರೆಸ್‌ಗಳನ್ನು ಕೋಮುವಾದಿ ಎಂದು ಯಾರೂ ಕರೆಯುವುದಿಲ್ಲ.  ದೇಶವನ್ನು ಹದಿನೇಳು ತುಂಡುಗಳನ್ನಾಗಿಸಬಯಸಿದ ಕಮ್ಯೂನಿಸ್ಟರನ್ನು ವಿಚ್ಛಿದ್ರ್ರಕಾರಕ ಶಕ್ತಿಯೆಂದು ಯಾರೂ ಹೇಳುವುದಿಲ್ಲ.  ದೇಶವಿಭಜನೆಯನ್ನು ತಡೆಯಲು ಶ್ರಮಿಸಿದ ಆರ್‌ಎಸ್‌ಎಸ್‌ಗೆ ಕೋಮುವಾದಿ, ವಿಚ್ಛಿದ್ರಕಾರಕ ಶಕ್ತಿ ಎಂಬ ಹಣೆಪಟ್ಟಿಗಳು!  ಹೀಗೆ ಮಾಡಲು ರಾಜಕೀಯ ಪಕ್ಷಗಳ ನೀತಿಗೆಟ್ಟ ಅವಕಾಶವಾದಿ ರಾಜಕಾರಣ ಕಾರಣವಿರಬಹುದು.  ಆದರೆ ನಮ್ಮ ಬುದ್ಧಿಜೀವಿಗಳಿಗೇನಾಗಿದೆ? ಈಗ ಎಪ್ಪತ್ತು-ಎಂಬತ್ತು ವರ್ಷಗಳಾಗಿರುವ, ಎಲ್ಲವನ್ನೂ ಯೌವನಕಾಲದಿಂದಲೂ ನೋಡುತ್ತಾ ಬಂದಿರುವ ಇವರಿಗೇಕೆ ಮರೆಗುಳಿತನ?  ಇವರದು ಜಾಣಮರೆವೇ?  ಇವರೂ ಅವಕಾಶವಾದಿಗಳೇ?  ಹಾಗಿದ್ದರೆ ಇವರೂ, ಇವರ ಹೇಳಿಕೆಗಳೂ, ಬರಹಗಳೂ ಈಗ ನಮಗೆಷ್ಟು ಪ್ರಸ್ತುತ?
ಆರ್‌ಎಸ್‌ಎಸ್ ಮೇಲಿರುವ ಮತ್ತೊಂದು ಆಪಾದನೆಯೆಂದರೆ ಅದು ಹಿಂದುತ್ವದ ಆಧಾರದ ಮೇಲೆ ಅಖಂಡ ಭಾರತವನ್ನು ನಿರ್ಮಿಸುವ ಅಜೆಂಡಾ ಹೊಂದಿದೆ ಎನ್ನುವುದು.  ಇದುವರೆಗಿನ ಇತಿಹಾಸವನ್ನು ಅವಲೋಕಿಸಿದರೆ ಆರ್‌ಎಸ್‌ಎಸ್‌ನ ಈ ಅಜೆಂಡಾ ಸರಿಯಾಗಿಯೇ ಇದೆ ಎಂದು ಹೇಳಬೇಕಾಗುತ್ತದೆ.  ಹಿಂದೂ ಸಮಾಜದ ಅಂತರಿಕ ನ್ಯೂನತೆಗಳನ್ನು ಗುರುತಿಸಿ ಅದನ್ನು ಸರಿಪಡಿಸಲು ಹೋರಾಡುತ್ತಲೇ ನಾವು ಭಾರತವನ್ನು ಭಾರತವಾಗಿಯೇ ಉಳಿಸಿಕೊಳ್ಳುವ ಇಚ್ಚೆ ಹೊಂದಿರುವವರು ಹಿಂದೂಗಳು ಮಾತ್ರ ಎಂಬ ಸತ್ಯವನ್ನೂ ಒಪ್ಪಿಕೊಳ್ಳಲೇಬೇಕು.
ಜೀಸಸ್ ಕ್ರೈಸ್ಟ್‌ನ ಶಿಷ್ಯರಲ್ಲೊಬ್ಬರಾದ ಸಂತ ಥಾಮಸ್ ಕ್ರಿ.ಶ. ಒಂದನೆಯ ಶತಮಾನದಲ್ಲಿಯೇ ಕೋರಮಂಡಲ ತೀರದಲ್ಲಿ ಕ್ರೈಸ್ತಧರ್ಮವನ್ನು ಪ್ರಚಾರ ಮಾಡಿದರು.  ಅವರ ಧರ್ಮಪ್ರಚಾರಕ್ಕೆ ಹಿಂದೂ ಭಾರತದಲ್ಲಿ ಯಾವ ಅಡ್ದಿಯೂ ಉಂಟಾಗಲಿಲ್ಲ.  ಹಾಗೆಯೇ, ಪ್ರವಾದಿ ಮಹಮದ್ದರ ಜೀವನಕಾಲದಲ್ಲಿಯೇ ಅಂದರೆ ಕ್ರಿ.ಶ. ೬೧೨ರಲ್ಲೇ ಅರಬ್ ವರ್ತಕರು ಕೇರಳದ ಕೋಡಂಗಲ್ಲೂರಿನಲ್ಲಿ ಮಸೀದಿಯೊಂದನ್ನು ನಿರ್ಮಿಸಿದರಂತೆ.  ಪರಧರ್ಮೀಯರಿಂದ ತುಂಬಿದ್ದ, ತಮ್ಮ ರಾಜಕೀಯ ಅಧಿಕಾರ ಹಾಗೂ ಸೇನಾ ಹಿಡಿತದಲ್ಲಿಲ್ಲದ ದೂರದ ನಾಡೊಂದರಲ್ಲಿ ತಮ್ಮ ಧರ್ಮವನ್ನು ಬಹಿರಂಗವಾಗಿ ಆಚರಿಸುವ ಸ್ವಾತಂತ್ರ್ಯ ಮುಸ್ಲಿಂ ಸಮುದಾಯಕ್ಕೆ ಮೊಟ್ಟಮೊದಲು ದೊರೆತದ್ದು ಬಹುಶ: ಭಾರತದಲ್ಲಿ, ಹಿಂದೂ ಭಾರತದಲ್ಲಿ.  ಇದೆಲ್ಲವೂ ಹೇಳುವುದೇನೆಂದರೆ ತನ್ನ ನಡುವೆ ತಲೆಯೆತ್ತಿ ಬೆಳೆದು ಪ್ರತ್ಯೇಕವಾಗಿಯೇ ನಿಲ್ಲುವ ಅವಕಾಶವನ್ನು ಅನ್ಯಧರ್ಮಗಳಿಗೆ ಹಿಂದೂಧರ್ಮ ನೀಡುತ್ತಲೇ ಬಂದಿದೆ.  ಜೆಜಿಯಾ ತೆರಿಗೆ, ಅಮಿಷವೊಡ್ದುವ ಅಥವಾ ಬಲವಂತದ ಮತಾಂತರ ಹಾಗೂ iಟಿquisiioಟಿನಂತಹ ಅನೀತಿಯುತ ಹಾಗೂ ಕ್ರೂರ ನೀತಿಗಳನ್ನು ಇತರರ ವಿರುದ್ಧ ಅದೆಂದೂ ಅನುಸರಿಸಲಿಲ್ಲ.  ಇದಕ್ಕೆ ಪ್ರತಿಯಾಗಿ ಹಿಂದೂಗಳಿಗೆ ಇತರರಿಂದ ಸಿಕ್ಕಿದ್ದೇನು?  ಇತರ ಧರ್ಮೀಯರು ಒಂದು ಪ್ರದೇಶದಲ್ಲಿ ಬಹುಸಂಖ್ಯಾತರಾದೊಡನೆ ಅಲ್ಲಿನ ರಾಜಕೀಯ ಹಾಗೂ ಇನ್ನಿತರ ಅಧಿಕಾರಗಳನ್ನು ಹಿಂದೂಗಳೊಡನೆ ಹಂಚಿಕೊಳ್ಳಲು ನಿರಾಕರಿಸಿದರು!  ತಾವು ಬಹುಸಂಖ್ಯಾತರಾದ ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸಿ ಪಾಕಿಸ್ತಾನ ನಿರ್ಮಿಸಬೇಕೆಂಬ ಬೇಡಿಕೆಯನ್ನಿತ್ತು ಮುಸ್ಲಿಮರು ಅದರಲ್ಲಿ ಯಶಸ್ವಿಯೂ ಆದರು.  ಕಾಶ್ಮೀರ ಕಣಿವೆಯ ಮುಸ್ಲಿಮರೂ ಅದನ್ನೇ ಕೇಳುತ್ತಿದ್ದಾರೆ.  ಪೂರ್ವೋತ್ತರದ ಕೆಲ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವುದರಿಂದ ಅವರಿಗೆ ಭಾರತದ ಜತೆಗಿರುವುದು ಬೇಕಾಗಿಲ್ಲ.  ಅಂತಹ ಭಾವನೆಯನ್ನು ಕೆಲ ಸಿಖ್ಖರು ಹೊಂದಿದ್ದ ಕಾಲದಲ್ಲಿ ಪಂಜಾಬ್ ಪ್ರತ್ಯೇಕತೆಯ ಮಾರ್ಗ ಹಿಡಿದಿತ್ತು.  ದ್ರವಿಡಿಯನ್ ಪಕ್ಷಗಳಲ್ಲಿ ನಾಸ್ತಿಕವಾದ ಉಗ್ರವಾಗಿದ್ದ ಕಾಲದಲ್ಲಿ ತಮಿಳುನಾಡಿನಲ್ಲೂ ಪ್ರತ್ಯೇಕತೆಯ ಕೂಗೆದ್ದಿತ್ತು.  ಅದು ತಣ್ಣಗಾದದ್ದು ಆ ಪಕ್ಷಗಳೆಲ್ಲವೂ ಸದ್ದಿಲ್ಲದೇ ಹಿಂದೂಧರ್ಮಕ್ಕೆ ಮರಳಿದ್ದರಿಂದ.  ಇದರರ್ಥ ಇತರರಿಗೆ ಭಾರತ ಒಂದಾಗಿರುವುದು ಬೇಕಾಗಿಲ್ಲ.
ಆಗೊಮ್ಮೆ ಈಗೊಮ್ಮೆ ಪ್ರವೀಣ್ ತೊಗಾಡಿಯಾರಂಥವರನ್ನು ಸೃಷ್ಟಿಸಿಕೊಳ್ಳುವುದು ಇತರ ಧರ್ಮಗಳಿಂದ ತನಗಾದ ಭ್ರಮನಿರಸನವನ್ನು ಹೊರಹಾಕಲು ಹಿಂದೂಧರ್ಮ ಕಂಡುಕೊಂಡ ಒಂದು ಮಾರ್ಗವಿರಬಹುದು.
೧೪ - ೧೦ - ೨೦೧೩

No comments:

Post a Comment