ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, October 11, 2013

ಉಪಖಂಡದ ಉಪಕಥೆಗಳುಮುನ್ನುಡಿಪ್ರಿಯ ಓದುಗರೇ

ತಮ್ಮ ಅರವತ್ತಾರು ವರ್ಷಗಳ ಸ್ವತಂತ್ರ ಅಸ್ತಿತ್ವದಲ್ಲಿ ಭಾರತ ಮತ್ತು ಪಾಕಿಸ್ತಾನಗಳು ೧೯೪೭-೪೮, ೧೯೬೫, ೧೯೭೧ರಲ್ಲಿ ಮೂರು ಪ್ರಮುಖ ಯುದ್ಧಗಳಲ್ಲಿ ಪರಸ್ಪರ ವಿರುದ್ಧ ಕಾದಾಡಿವೆ.  ಜತೆಗೇ ೧೯೯೯ರ ಕಾರ್ಗಿಲ್ ಕದನ ಮತ್ತು ೧೯೮೪ರ ಸಿಯಾಚಿನ್ ಘರ್ಷಣೆಗಳೂ ಸೇರಿದಂತೆ ನೂರಾರು ಸಣ್ಣಪುಟ್ಟ ಘರ್ಷಣೆಗಳು ಇವೆರಡು ದೇಶಗಳ ನಡುವಿನ ದೀರ್ಘ ಗಡಿಯಲ್ಲಿ ಘಟಿಸಿವೆ.  ದಕ್ಷಿಣ ಏಶಿಯಾದ ಈ ಎರಡು ಪ್ರಮುಖ ದೇಶಗಳ ನಡುವೆ ಅಣ್ವಸ್ತ್ರ ತಂತ್ರಜ್ಞಾನದಿಂದ ಹಿಡಿದು ಕ್ರೀಡೆಯವರೆಗೆ ಸರಿಸುಮಾರು ಎಲ್ಲ ಕ್ಷೇತ್ರಗಳಲ್ಲೂ ವೈಷಮ್ಯಪ್ರೇರಿತ ನಕಾರಾತ್ಮಕ ಸ್ಪರ್ಧೆ ನಡೆಯುತ್ತಿದೆ.

ಎರಡೂ ದೇಶಗಳ ಜನತೆಯ ನಡುವಿನ ಈ ಆಳ ವೈಮನಸ್ಯವನ್ನು ನೋಡಿದರೆ ಈ ದ್ವೇಷ ಸಹಸ್ರಾರು ವರ್ಷಗಳಿಂದ ಬೆಳೆದು ಬಂದಿರಬಹುದೇ ಎಂಬ ಸಂದೇಹ ಉಂಟಾಗುವುದು ಸಹಜ.  ನಮ್ಮೆರಡೂ ಸಮಾಜಗಳ ನಡುವೆ ಮುಚ್ಚಲು ಸಾಧ್ಯವೇ ಇಲ್ಲ ಎನ್ನುವಂತಹ ಆಳ ಸಾಂಸ್ಕೃತಿಕ ಕಂದರವಿದೆಯೇ ಎಂಬ ಪ್ರಶ್ನೆ ಎದುರಾಗುವುದೂ ಸಹಜವೇ.  ಯಾವುದೇ ಪೂರ್ವಾಗ್ರಹವೂ ಇಲ್ಲದೇ ಇತಿಹಾಸವನ್ನು ಅವಲೋಕಿಸಿದರೆ ನಮ್ಮೆರಡು ಸಮಾಜಗಳ ನಡುವಿನ ಈ `ಕಂದರ' ತೀರಾ ಇತ್ತೀಚಿನದು, ಹೆಚ್ಚೆಂದರೆ ಒಂದು ಶತಮಾನದಷ್ಟು ಮಾತ್ರ ಹಳೆಯದು ಎಂಬ ವಿಷಯ ತಿಳಿದುಬರುತ್ತದೆ.  ಅಷ್ಟೇ ಅಲ್ಲ, `ಕಂದರ'ವನ್ನು ಸೃಷ್ಟಿಸಿದವರು ನಾವು ಭಾರತೀಯರೂ ಅಲ್ಲ, ಪಾಕಿಸ್ತಾನೀಯರೂ ಅಲ್ಲ ಎಂಬ ವಿಚಾರವೂ ಸ್ಪಷ್ಟವಾಗುತ್ತದೆ.
ನಮ್ಮೆರಡು ಸಮಾಜಗಳ ನಡುವಿನ ಸಾಂಸ್ಕೃತಿಕ ಸಾಮ್ಯತೆ ವಿಶ್ವದಲ್ಲೇ ಅನನ್ಯ.  ನಿಜ ಹೇಳಬೇಕೆಂದರೆ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಇರುವ ಸಾಂಸ್ಕೃತಿಕ ಕಂದರಗಳ ಮುಂದೆ ಪಾಕಿಸ್ತಾನ ಮತ್ತು ಉತ್ತರ ಭಾರತದ ನಡುವಿನ ಕಂದರ ಏನೇನೂ ಅಲ್ಲ.  ವಾಸ್ತವಗಳು ಹೀಗಿದ್ದೂ ಅಖಂಡ ಭಾರತ ಧರ್ಮದ ಆಧಾರದ ಮೇಲೆ ವಿಭಜನೆಯಾಗಿ ಎರಡು ಶತ್ರು ರಾಷ್ಟ್ರಗಳು ಸೃಷ್ಟಿಯಾದದ್ದು ಆಧುನಿಕ ಇತಿಹಾಸದ ಒಂದು ಕ್ರೂರ ವ್ಯಂಗ.  ಈ ಬೆಳವಣಿಗೆಗೆ ಕಾರಣರಾದದ್ದು ಭಾರತಿಯರೂ ಅಲ್ಲ, ಪಾಕಿಸ್ತಾನೀಯರೂ ಅಲ್ಲ, ಅವರ ಧರ್ಮಗಳೂ ಅಲ್ಲ.

ಈ ಹಿನ್ನೆಲೆಯೊಂದಿಗೆ, ಉಪಖಂಡದ ರಾಜಕೀಯ ಹಾಗೂ ಧಾರ್ಮಿಕ ಆಯಾಮಗಳನ್ನು ವಿಶ್ಲೇಷಿಸಲು ಇಲ್ಲಿನ ಲೇಖನಗಳು ಪ್ರಯತ್ನಿಸುತ್ತವೆ.  ದೇಶವಿಭಜನೆಗೆ ಹಾಗೂ ಮುಂದುವರಿದ ಭಾರತ - ಪಾಕಿಸ್ತಾನ ವೈಮನಸ್ಯಕ್ಕೆ ಇದುವರೆಗೂ ಮುಂದು ಮಾಡಲಾಗುತ್ತಿರುವ ಕಾರಣಗಳ ನಿರಾಕರಣೆ, ಮುಚ್ಚಿಟ್ಟ ಹಾಗೂ ವಾಸ್ತವಕ್ಕೆ ಹತ್ತಿರವಾದ ಕಾರಣಗಳ ಮಂಡನೆ ಇಲ್ಲಿನ ಲೇಖನಗಳಲ್ಲಿವೆ.  ಭಾರತ - ಪಾಕಿಸ್ತಾನ ವೈಮನಸ್ಯಕ್ಕೆ ಹಾಗೂ ಜ್ವಲಂತ ಸಾಕ್ಷಿಯಾಗಿರುವ ಕಾಶ್ಮೀರ ಸಮಸ್ಯೆಯ ಬಗ್ಗೆ ಐತಿಹಾಸಿಕ ಒಳನೋಟಗಳು ಮತ್ತು ಪಾಕಿಸ್ತಾನೀ ಆಂತರಿಕ ರಾಜಕಾರಣ ಮತ್ತು ವಿದೇಶನೀತಿಗಳ ವಿವರಣಾತ್ಮಕ ವಿಶ್ಲೇಷಣೆಗಳನ್ನೂ ಇಲ್ಲಿನ ಲೇಖನಗಳು ಪ್ರಸ್ತುತಪಡಿಸುತ್ತವೆ.

ಇವು ನಿಮ್ಮ ಚಿಂತನೆಗಳ ಕ್ಷಿತಿಜಗಳನ್ನು ವಿಸ್ತರಿಸುವಲ್ಲಿ ಸಹಕಾರಿಯಾಗಬಹುದು ಎಂದು ನಂಬುತ್ತೇನೆ.

ಪ್ರೇಮಶೇಖರ
cherryprem@gmail.comಪರಿವಿಡಿ

೧.        ಭಾರತೀಯ ಉಪಖಂಡದಲ್ಲಿ ಧರ್ಮಗಳು: ಶಾಂತಿ ಮತ್ತು ಹಿಂಸೆಯ ಮೂಲ
೨.        ಭಾರತ - ಪಾಕಿಸ್ತಾನ ಸಂಬಂಧಗಳು: ಧಾರ್ಮಿಕೇತರ ಆಯಾಮಗಳು
೩.        ಕಾಶ್ಮೀರ ಸಮಸ್ಯೆಯ ಒಳಹೊರಗು
೪.        ಕಾಶ್ಮೀರ ಮತ್ತು ವಾಕ್ ಸ್ವಾತಂತ್ರ್ಯ: ಕೆಲವು ಚಿಂತನೆಗಳು
೫.        ಪಾಕಿಸ್ತಾನ ಹಿಡಿದ ಹಾದಿ: ಪ್ರಜೆಗಳಿಗಿಲ್ಲದ ಪ್ರಭುತ್ವ
೬.        ಪಾಕಿಸ್ತಾನ ಹಿಡಿದ ಹಾದಿ: ಊಳಿಗಮಾನ್ಯ ವಿದೇಶನೀತಿ
ಪುಸ್ತಕದ ವಿವರಗಳು

ಪುಸ್ತಕದ ಶಿರ್ಷಿಕೆ:                    ಉಪಖಂಡದ ಉಪಕಥೆಗಳು
ಲೇಖಕರ ಹೆಸರು:                  ಪ್ರೇಮಶೇಖರ
ಪ್ರಕಾರ:                                ಲೇಖನ ಸಂಕಲನ (ಐತಿಹಾಸಿಕ, ಧಾರ್ಮಿಕ)
ಪ್ರಕಟಣೆಯ ವರ್ಷ:                 ೨೦೧೩
ಪುಟಸಂಖ್ಯೆ:                          ೧೩೫
ರಕ್ಷಾಪುಟ:                            ಎಂ. ಖಾನ್
ಆಕಾರ:                               ೧/೮ ಡೆಮಿ
ಬೆಲೆ:                                  ರೂ. ೧೨೦/-
ಪ್ರಕಾಶಕರು:                        ಪುಸ್ತಕಯಾನ
ಪ್ರಕಾಶಕರ ವಿಳಾಸ:              ನಂ. ೬೫೪, '' ಮತ್ತು 'ಎಫ್' ಬ್ಲಾಕ್,
                                         ಕೂಗುಬಂಡೆ ರಸ್ತೆ, ಕುವೆಂಪುನಗರ,
                                 ಮೈಸೂರು- ೫೭೦ ೦೨೩, ಕರ್ನಾಟಕ

ದೂರವಾಣಿ:  9242340388


e-mail: doreraju@ymail.com, pusthakayaana@gmail.com

No comments:

Post a Comment