ನಾ ಚಿಕ್ಕವನಾಗಿದ್ದಾಗ
ಕೇಳಿದ
ಅಮ್ಮ ಚಿಕ್ಕವಳಾಗಿದ್ದಾಗಿನ ಕಥೆ.
ಅಮ್ಮನೂ
ಅವಳ ತಮ್ಮನೂ
ಬ್ಯಾಗು ನೇತಾಕಿ
ಕೊಂಡು
ಸ್ಕೂಲಿಗೆ ಹೋಗುತ್ತಿದ್ದರು.
ಕೆಳಗೆ ಮುದಿಮುದುರುಪಂಚೆ
ಮೇಲೆ ಜುಬ್ಬಾ ಮಾಸಲು
ಅದಕ್ಕೂ ಮೇಲೆ ಸಾಲ್ಟುಪೆಪ್ಪರು ಕೂದಲು
ಹಿಂದೊಂದು ಅಳ್ಳಕ ಹೆಣಗಂಟು
ಮುಂದೆ ಒಂದಷ್ಟು ಬಿಳಿಗಡ್ಡಮೀಸೆಯ ಅಂಟು
ಗಳ ಕೆಳಗೆ ನೇತಾಡಿದ
ಎರಡು
ಹೌದು ಎರಡು
ಕಿರುಸೋರೆಕಾಯಿಗಳು.
ಅಷ್ಟೇ ಸಾಕಾಯಿತು ಮಾವನಿಗೆ.
ಕೇಳಿಯೇ
ಬಿಟ್ಟ.
ಅಕ್ಕ ಅಕ್ಕ ಅದೇನು?
ಗಂಡೋ ಹೆಣ್ಣೋ
ಕೇಳಿಸಿಯೇ
ಬಿಟ್ಟಿತು. ಬಾಣ
ದಂತೆ ಉತ್ತರವೂ ಬಂತು:
ಗಂಡೋ ಹೆಣ್ಣೋ ಅಂತಾವ್ನೆ!
ನೋಡು ಬಾ.
ಏನನ್ನು ಅಂತ ಕೇಳಿದರೆ
ಅಮ್ಮ ಈಗಲೂ ಉರುಳುರುಳಾಡಿ
ಕೊಂಡು ನಗುತ್ತಾಳೆ.
***
No comments:
Post a Comment