ಕಮಲದ
ಹೂವಿಂದಾ
ಕೆನ್ನೆಯ
ಮಾಡಿದನೋ...
ಯಾರವನು?
ಅವನಿಗೇನು
ಬೇರೆ ಕೆಲಸ ಇಲ್ಲವೇ?
ಉತ್ತು
ಬಿತ್ತಿ ಗೋಧಿ ಬತ್ತ
ಬೆಳೆಯಲು
ಹೇಳಿ ಅವನಿಗೆ.
ಹಸು ಮೇಯಿಸಿಕೊಂಡು
ಬಾ ಎನ್ನಿ.
ನೊರೆಹಾಲು
ಕರೆಯೋ ಎನ್ನಿ.
ಚಾಯ್
ಮಾಡೋ ಎನ್ನಿ.
ದೇವಲ
ಮಹರ್ಷಿ
ಗಳ ಬಳಿ
ಹೋಗಲು ಹೇಳಿ,
ನೇಯಲು
ಕಲಿಸುತ್ತಾರೆ.
ರಾಜಕಾರಣಿಗಳೆಡೆ
ಕಳಿಸಬೇಡಿ,
ಮೇಯಲು
ಕಲಿಸಿಬಿಡುತ್ತಾರೆ.
ವಿ
ಜ್ಞಾನಿಗಳನ್ನು
ಜ್ಞಾನಿ
ಗಳನ್ನಾಗಿ
ಮಾಡಲು ಹೇಳಿ.
ಹೊಸ ಬಾಂಬು
ಮಿಸೈಲು ಬುದ್ಧಿ
ಯನ್ನು
ಅವರೆದೆಯಿಂದ ಕಿತ್ತೊಗೆದು
ಬಿಡು
ಮಾರಾಯಾ ಎನ್ನಿ.
ಈಗಿರುವ
ಬಾಂಬು ಎಕೆ ೪೭
ಗಳನ್ನೆಲ್ಲಾ
ಗುಜರಿಗೆ ಸಾಗಿಸಿಬಿಡು ಅನ್ನಿ.
ಕಂಪ್ಯೂಟರು
ಕಾರು ಬೈಕು ಹಡಗು ಪುಷ್ಪಕ
ಮಾಡಿ
ನಮಗೆಲ್ಲರಿಗೂ ಒಂದೊಂದು ಕೊಡಲು ಹೇಳಿ.
ಪೆಟ್ರೋಲು
ಡೀಸೆಲ್ ಬ್ಯಾಡ ಕಣಪ್ಪಾ
ಕಣ್ಣಪ್ಪಾ
ಉಸಿರಾಡುವುದಕ್ಕೇ
ಆಗುವುದಿಲ್ಲ
ಬೇರೇನಾದರೂ
ಮಾಡಪ್ಪಾ ಅನ್ನಿ.
ಮೈತುಂಬಾ
ಕೆಲಸ ಹಚ್ಚಿ.
ಅಪ್ಪಿತಪ್ಪಿಯೂ
ಕಮಲದ ಹೂವನ್ನು ಕೈ
ಗೆ ಕೊಡಬೇಡಿ.
ಇಲ್ಲದಿದ್ದರೆ...
ಹೀಗೆ ಬಿಟ್ಟರೆ...
ಕಮಲದ
ಹೂವಿಂದ ಕೆನ್ನೆ
ಕಬ್ಬಿನಿಂದ
ಹುಬ್ಬು
ಮಣೆಯಿಂದ
ಹಣೆ
ಜೇಡರಬಲೆಯಿಂದ
ಕರಿಗೂದಲ ತಲೆ
ಗನ್ನಿನಿಂದ
ಬೆನ್ನು- ಹೀಗೆ
ಯಾವುಯಾವುದರಿಂದಲೋ
ಏನೇನನ್ನೋ
ಮಾ
ಡು
ತ್ತಾ... ತ್ತಾ... ತ್ತಾ...
ಒಂದುದಿನ
ತಂಬೂರಿಯಿಂದ
ತಿಕ ಮಾಡಿಬಿಡುತ್ತಾನೆ.
ಎಲ್ಲೆಲ್ಲೂ
ಸದ್ದು ನಾತ
ಶಬ್ಧಮಾಲಿನ್ಯ
ಪರಿಸರಮಾಲಿನ್ಯ
ಥುಥುಥೂ
ಈ ಭೂಮಿಯೂ
ಬೇಡ
ಬದುಕೂ
ಬೇಡ ಅನಿಸಿಬಿಡುತ್ತದೆ ಅಷ್ಟೇ.
*** ***
***
ಮೈಸೂರಿನ "ಆಂದೋಳನ" ದಿನಪತ್ರಿಕೆಯಲ್ಲಿ ನಿನ್ನೆ, ಭಾನುವಾರ, ಜೂನ್ ೩, ೨೦೧೨ರಂದು ಪ್ರಕಟವಾದ ಕವನ
ಆಹಾ--!!
ReplyDeleteತಿಕ ಎನ್ನುವ ಶೀರ್ಷಿಕೆಯೇ ನನ್ನ ಗಮನ ಸೆಳೆಯಿತು-
ಮತ್ತು ನೀವು ಗಮನ ಸೆಳೆಯಲೇ ಆ ಶೀರ್ಷಿಕೆ ಕೊಟ್ಟಿರಬೇಕು...!
ಮಜವಾಗಿತ್ತು..ಒಮ್ಮೆ ಹಾಗೆ ಆದ್ರೆ ಹೇಗೆ ಅನಿಸಿತು...!!
ಶುಭವಾಗಲಿ..
\|/